40 ಸಾವಿರ ಕೋಟಿ ಅವ್ಯವಹಾರ ಆಗಿದ್ದರ ರಾಜಕೀಯ ನಿವೃತ್ತಿ ಎಂದ ಬಿ ಎಸ್‌ ಯಡಿಯೂರಪ್ಪ ಆಪ್ತ

ದಾವಣಗೆರೆ,ಜನವರಿ 01: ಕೋರೊನಾದಲ್ಲಿ 40 ಸಾವಿರ ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆರೋಪದಲ್ಲಿ ಯಾವುದೇ ಹುರಳಿಲ್ಲ. ಅಷ್ಟೊಂದು ಪ್ರಮಾಣದಲ್ಲಿ ಅವ್ಯವಹಾರ ಆಗಿದ್ದರೆ ನಾನೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಸವಾಲನ್ನ ಹಾಕಿದ್ದಾರೆ.

ದಾವಣಗೆರೆಯಲ್ಲಿ ಮಾಜಿ ಶಾಸಕ ರೇಣುಕಾಚಾರ್ಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳಗೆ ಆರೋಪ ಸಾಬೀತು ಮಾಡುವಂತೆ ಸವಾಲು ಹಾಕಿದ್ದಾರೆ. ಕೋವಿಡ್ ನಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ 40 ಸಾವಿರ ಕೋಟಿ ಹಗರಣ ನಡೆದಿದೆ ಎಂದಿದ್ದಾರೆ. ಆಗ ಇವರು ಶಾಸಕರಾಗಿದ್ದರು. ನಾವು ಕೂಡ ಮಾಸ್ಕ್, ಆಕ್ಸಿಜೆನ್ ಸೇರಿ ಯಾವುದಕ್ಕೆ ಎಷ್ಟೆಷ್ಟು ಖರ್ಚಾಗಿದೆ ಎಂದು ಸದನದಲ್ಲಿಯೇ ದಾಖಲೆ ತೋರಿಸಿದ್ದೇವೆ. ಯತ್ನಾಳ ಕೂಡ ಆಗ ಶಾಸಕರಾಗಿದ್ದರು, ಯಾಕೆ ಮಾತನಾಢಲಿಲ್ಲ, ಈಗ ಆರೋಪ ಮಾಡುತ್ತಿದ್ದಾರೆ. ಇವರು ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಬಿಡಬೇಕು.

Ready To Resign If 40 Thousand Crores Was Wasted During Bjps Tenure Says MP Renukacharya

ವಿಜಯಪುರದಲ್ಲಿ ಪ್ರಭಾವಿ ಸಚಿವರ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಈ ಸರ್ಕಾರದಲ್ಲಿ ಕೆಲಸ ಮಾಡಿಕೊಂಡು ಆರೋಪ ಮಾಡೋದು ಬಿಡಬೇಕು. ದಾಖಲೆ ಸಮೇತ ಚರ್ಚೆಗೆ ಬನ್ನಿ ನಾನು ಬರ್ತೀನಿ ಎಂದು ಯತ್ನಾಳಗೆ ಸವಾಲು ಹಾಕಿದ್ದಾರೆ.

ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿನ ಸಮಾವೇಶದಲ್ಲಿ ಹತ್ತು ಸಾವಿರ ಕೋಟಿ ಬಿಡುಗಡೆ ಮಾಡುತ್ತೇವೆ ಅಂತ ಹೇಳಿದ್ದರು. ಅಧಿವೇಶನ ವೇಳೆ ಬಹಿರಂಗವಾಗಿ ಯಾವುದನ್ನು ಮಾತನಾಡುವಂತಿಲ್ಲ. ರೈತರಿಗೆ ಪರಿಹಾರ ಕೇಳಿದ್ರೆ ಕೇಂದ್ರದತ್ತ ಕೈ ಮಾಡುತ್ತಾರೆ. ರೈತರಿಗೆ ಬಿಡುಗಾಸು ಬಿಡುಗಡೆ ಮಾಡಲಿಲ್ಲ. ಅಲ್ಪಸಂಖ್ಯಾತರ ಇಲಾಖೆ ಪರಿಶೀಲನಾ ಸಭೆ ವೇಳೆ ಭಾಗ 2 ಎಂಬಂತೆ ಒಂದು ಸಾವಿರ ಕೋಟಿ ಬಿಡುಗಡೆಗೆ ಆದೇಶ ಮಾಡಿದ್ದಾರೆ.

Ready To Resign If 40 Thousand Crores Was Wasted During Bjps Tenure Says MP Renukacharya

ಹುಬ್ಬಳ್ಳಿಯಲ್ಲಿ ಭಾಗ 1ನ್ನು ಅನೌನ್ಸ್ ಮಾಡಿದ್ದರು. ನೀವು ಒಂದೇ ಧರ್ಮಕ್ಕೆ ಸೀಮಿತವಾದ ಸಿಎಂ...? ಅಲ್ಪ ಸಂಖ್ಯಾತರ ಓಲೈಕೆಗೆ ಏನೆಲ್ಲಾ ಮಾಡ್ತಾ ಇದ್ದೀರಾ. ಅಲ್ಪಸಂಖ್ಯಾತರ ಹೇಳಿದ್ದಕ್ಕೆಲ್ಲ ಸಿಎಂ ತಥಾಸ್ತು ಅಂತಾರೆ. ಆದರೆ, ರೈತರಿಗೆ ಬಿಡುಗಡೆ ಮಾಡಲು ಹಣವಿಲ್ಲ. ಭಗವಾನ್ ಧ್ವಜ ಹಾರಿಸಿದರೆ ಕಠಿಣ ಕ್ರಮ ಅಂತೀರಿ. ಇದೆ ರೀತಿ ಕಾಂಗ್ರೆಸ್ ಮುಂದುವರೆದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ.

ಇನ್ನು, ಸಚಿವ ಡಿ.ಸುಧಾಕರ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ರೇಣುಕಾಚಾರ್ಯ, ಸುಧಾಕರ್ ಗೆ ತಲೆ ಸರಿ ಇಲ್ಲ. ಶಿಕ್ಷಣ ಸಚಿವ ಆಗಿದ್ದಕ್ಕೆ ಅವರಿಗೆ ತಲೆ ತಿರುಗಿದೆ. ಜೀವನದಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲಾ ಅಂತಾ ಗೊತ್ತಾಗಿದೆ. ಅದಕ್ಕೆ ಈ ರೀತಿ ಮಾತನಾಡುತ್ತಿದ್ದಾರೆ. ತಾಯಿ ಯಾರು ಅಂತ ತೋರಿಸು ಅಂದ್ರೆ ಅಪಮಾನ ಆಗಲ್ವಾ..? ಪುಲ್ವಾಮಾ ದಾಳಿ ಮತ್ತು ಸೈನಿಕರ ಕುರಿತು ಸಾಕ್ಷಿ ಕೇಳಿದರೆ ಹೇಗೆ..? ಎಂದು ಪ್ರಶ್ನಿಸಿದರು.

ಭಯೋತ್ಪಾದಕರನ್ನು ಬೆಳೆಸಿದ್ದು ಕಾಂಗ್ರೆಸ್, ಅದನ್ನು ನಿರ್ಣಾಮ ಮಾಡಿದ್ದು ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರ. ನಮ್ಮ ಮಂದಿರಗಳನ್ನು ಎಲ್ಲ ದೋಚಿಕೊಂಡು ಹೋದರು, ಮಂದಿರವನ್ನು ಮಸೀದಿಯಾಗಿ ನಿರ್ಮಾಣ ಮಾಡಿದರು. ಕೋರ್ಟ್ ನಲ್ಲಿ ನ್ಯಾಯ ಸಿಕ್ಕ ಮೇಲೆ ರಾಮಮಂದಿರ ಆಗಿದೆ. ರಾಮ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಬಿಡಿಗಾಸು ಕೊಟ್ಟಿಲ್ಲ. ಎಲ್ಲರೂ ಸ್ವಯಂ ಪ್ರೇರಿತವಾಗಿ ದೇಣಿಗೆ ನೀಡಿ ರಾಮ ಮಂದಿರ ನಿರ್ಮಾಣ ಮಾಡಲಾಗಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+