Commercial LPG: ಹೋಟೆಲ್, ಕೈಗಾರಿಕಾ ಉದ್ಯಮಕ್ಕೆ ಬಿಗ್ ರಿಲೀಫ್ ನೀಡಿದ ಕೇಂದ್ರದ ನಿರ್ಧಾರ

LPG Gas: ಈಗಾಗಲೇ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆಯಿಂದ ದೇಶದ ಜನತೆ ಆಘಾತಕ್ಕೆ ಒಳಗಾಗಿದ್ದಾರೆ. ಈ ನಡುವೆಯೇ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಗ್ರಾಹಕರಿಗೆ ಕೇಂದ್ರ ಸರ್ಕಾರ ನೆಮ್ಮದಿಯ ಸುದ್ದಿಯೊಂದನ್ನ ನೀಡಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಅಂತಾರಾಷ್ಟ್ರೀಯ ರಾಜತಾಂತ್ರಿಕ ವಲಯದಲ್ಲಿ ಕಂಡುಬಂದಿರುವ ಸಕಾರಾತ್ಮಕ ಬೆಳವಣಿಗೆಗಳು ದೇಶೀಯ ಮಾರುಕಟ್ಟೆಯ ಮೇಲೆ ಉತ್ತಮ ಪ್ರಭಾವ ಬೀರಿವೆ. ಪಶ್ಚಿಮ ಏಷ್ಯಾ ಬಿಕ್ಕಟ್ಟು ನಿಧಾನವಾಗಿ ತಿಳಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಸರಬರಾಜಿನ ಮೇಲಿದ್ದ ಎಲ್ಲಾ ಕಠಿಣ ನಿರ್ಬಂಧಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ತೆರವುಗೊಳಿಸಿದೆ.

Commercial LPG Cylinder Supply Restrictions Lifted by Government Amid Improved Gas Availability

ವಾಣಿಜ್ಯ ಎಲ್‌ಪಿಜಿ ಬಳಕೆದಾರರಿಗೆ ಗುಡ್‌ ನ್ಯೂಸ್‌

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಈ ನಿರ್ಧಾರವು ಹೋಟೆಲ್ ಉದ್ಯಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ವಾಣಿಜ್ಯ ಗ್ರಾಹಕರಿಗೆ ದೊಡ್ಡ ಮಟ್ಟದ ಆರ್ಥಿಕ ಪರಿಹಾರವನ್ನು ನೀಡಿದೆ. ಇತ್ತೀಚೆಗೆ ಅಮೆರಿಕ ಮತ್ತು ಇರಾನ್ ದೇಶಗಳ ನಡುವೆ ಏರ್ಪಟ್ಟಿರುವ ಶಾಂತಿ ಒಪ್ಪಂದವು ಜಾಗತಿಕ ತೈಲ ಮತ್ತು ಅನಿಲ ಮಾರುಕಟ್ಟೆಗೆ ಹೊಸ ಚೈತನ್ಯ ತಂದಿದೆ.

ಯುದ್ಧದ ಭೀತಿ ಇಲ್ಲದಿರುವುದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರಬರಾಜು ಜಾಲ ಹಳಿಗೆ ಮರಳುತ್ತಿದೆ. ಇದರ ಬೆನ್ನಲ್ಲೇ ಭಾರತದಲ್ಲಿ ದೇಶೀಯ ಎಲ್‌ಪಿಜಿ ಉತ್ಪಾದನೆಯು ಗಣನೀಯವಾಗಿ ಸುಧಾರಿಸಿದೆ ಮತ್ತು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುವ ಅನಿಲ ಸರಕುಗಳ ಲಭ್ಯತೆಯೂ ಸುಧಾರಿಸಿದೆ. ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿದ ಕೇಂದ್ರ ಸರ್ಕಾರವು ಈ ಹಿಂದೆ ಹೇರಿದ್ದ ತುರ್ತು ನಿಯಮಗಳನ್ನು ಸಡಿಲಗೊಳಿಸಲು ನಿರ್ಧರಿಸಿದೆ. ಸಂಘರ್ಷದ ಕಾರಣದಿಂದ ಕಡಿತಗೊಳಿಸಲಾಗಿದ್ದ ಬೃಹತ್ ಎಲ್‌ಪಿಜಿ ಪೂರೈಕೆಯನ್ನು ಈಗ ಬಳಕೆಯ ಮಟ್ಟದ ಶೇಕಡಾ 50ರಷ್ಟು ಮುಕ್ತಗೊಳಿಸಲಾಗಿದ್ದು, ಇದು ಮಾರುಕಟ್ಟೆಯಲ್ಲಿ ಅನಿಲ ಲಭ್ಯತೆಯನ್ನು ಸುಗಮಗೊಳಿಸಲಿದೆ.

ತುರ್ತು ನಿಯಮಗಳು ಜಾರಿಯಾಗಿದ್ದು ಯಾಕೆ?

ಪಶ್ಚಿಮ ಏಷ್ಯಾದಲ್ಲಿ ಸಂಭವಿಸಿದ್ದ ಬಿಕ್ಕಟ್ಟಿನ ಸಮಯದಲ್ಲಿ ದೇಶದಲ್ಲಿ ಇಂಧನ ಕೊರತೆ ಉಂಟಾಗುವ ಆತಂಕ ಎದುರಾಗಿತ್ತು. ಆ ಸಂದರ್ಭದಲ್ಲಿ ಕೋಟ್ಯಂತರ ಸಾಮಾನ್ಯ ಕುಟುಂಬಗಳ ದಿನನಿತ್ಯದ ಅಡುಗೆ ಅನಿಲಕ್ಕೆ ತೊಂದರೆ ಆಗಬಾರದು ಮತ್ತು ಗೃಹಬಳಕೆಯ ಸಿಲಿಂಡರ್‌ಗಳ ಕೊರತೆ ಆಗದಂತೆ ತಡೆಯಲು ಸರ್ಕಾರ ಅಗತ್ಯ ವಸ್ತುಗಳ ಕಾಯ್ದೆಯ ಅಡಿಯಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿತ್ತು.

ಪೆಟ್ರೋಕೆಮಿಕಲ್ ವಲಯದಲ್ಲಿ ಪ್ಲಾಸ್ಟಿಕ್ ಹಾಗೂ ವಿವಿಧ ಕೈಗಾರಿಕಾ ಅನಿಲಗಳ ತಯಾರಿಕೆಗೆ ಬಳಸಲಾಗುವ ಮೂಲ ಕಚ್ಚಾ ವಸ್ತುಗಳಾದ C3 ಮತ್ತು C4 ಅನ್ನು ಕೇವಲ ಎಲ್‌ಪಿಜಿ ಉತ್ಪಾದನೆಗೆ ಮಾತ್ರ ಬಳಸಬೇಕು ಎಂದು ಆದೇಶಿಸಲಾಗಿತ್ತು. ಆದರೆ ಈಗ ಜಾಗತಿಕ ಮತ್ತು ಸ್ಥಳೀಯ ಪರಿಸ್ಥಿತಿಗಳು ಸಹಜ ಸ್ಥಿತಿಗೆ ಮರಳಿರುವುದರಿಂದ ಈ ನಿಯಂತ್ರಣಗಳನ್ನು ಹಿಂಪಡೆಯಲು ಸೂಕ್ತ ಸಮಯವೆಂದು ಸರ್ಕಾರ ಭಾವಿಸಿದೆ.

ಗೃಹಬಳಕೆ ಎಲ್‌ಪಿಜಿಗೆ ಧಕ್ಕೆ ಆಗದಂತೆ ಕ್ರಮ

ಪೆಟ್ರೋಕೆಮಿಕಲ್ ಮತ್ತು ಇತರೆ ಕೈಗಾರಿಕಾ ಕ್ಷೇತ್ರಗಳಿಗೆ C3 ಮತ್ತು C4 ಕಚ್ಚಾ ವಸ್ತುಗಳ ಹಂಚಿಕೆಯನ್ನು ಮತ್ತೆ ಹೆಚ್ಚಿಸಲಾಗಿದೆ. ಆದರೂ ಸಾಮಾನ್ಯ ಗ್ರಾಹಕರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಗೃಹಬಳಕೆಯ ಎಲ್‌ಪಿಜಿ ಲಭ್ಯತೆಗೆ ಯಾವುದೇ ರೀತಿಯ ಧಕ್ಕೆ ಆಗದಂತೆ ತೈಲ ಕಂಪನಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ದೇಶದ ಒಟ್ಟು ಎಲ್‌ಪಿಜಿ ಉತ್ಪಾದನೆಯ ಪ್ರಮಾಣವನ್ನು ಪ್ರತಿದಿನ ಕನಿಷ್ಠ 40 ಟಿಎಂಟಿಗಿಂತ ಕಡಿಮೆ ಇಳಿಸದಂತೆ ಸಾರ್ವಜನಿಕ ವಲಯದ ತೈಲ ಮಾರ್ಕೆಟಿಂಗ್ ಕಂಪನಿಗಳಿಗೆ ಕಡ್ಡಾಯ ಮಾರ್ಗಸೂಚಿ ವಿಧಿಸಿದೆ. ಇದು ದೇಶೀಯ ಮಾರುಕಟ್ಟೆಯಲ್ಲಿ ಇಂಧನದ ಸ್ಥಿರತೆಯನ್ನು ಕಾಯ್ದುಕೊಳ್ಳಲು ನೆರವಾಗಲಿದೆ.

ವಾಣಿಜ್ಯ ಎಲ್‌ಪಿಜಿ ಮಾರುಕಟ್ಟೆಯನ್ನು ನಿರ್ಬಂಧ ಮುಕ್ತಗೊಳಿಸಿದ್ದರೂ, ಪರಿಸರಸ್ನೇಹಿ ಇಂಧನವಾದ ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಸಂಪರ್ಕವನ್ನು ದೇಶಾದ್ಯಂತ ವಿಸ್ತರಿಸುವ ತನ್ನ ಮಹತ್ವಾಕಾಂಕ್ಷೆಯ ಯೋಜನೆಯಿಂದ ಸರ್ಕಾರ ಹಿಂದೆ ಸರಿದಿಲ್ಲ. ಈಗಾಗಲೇ ಪಿಎನ್‌ಜಿ ವ್ಯವಸ್ಥೆಗೆ ಬದಲಾಗಿರುವ ಗ್ರಾಹಕರು ಅದೇ ಇಂಧನವನ್ನು ಮುಂದುವರೆಸಲಿದ್ದಾರೆ.

ಉಳಿದ ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರನ್ನು ಸಹ ಮುಂಬರುವ ದಿನಗಳಲ್ಲಿ ಹಂತ ಹಂತವಾಗಿ ಈ ಕೊಳವೆ ಮಾರ್ಗದ ಅನಿಲ ಜಾಲದ ವ್ಯಾಪ್ತಿಗೆ ತರಲು ವ್ಯವಸ್ಥಿತ ಯೋಜನೆಯನ್ನು ರೂಪಿಸಲಾಗಿದೆ. ಈ ನೂತನ ಇಂಧನ ಸರಬರಾಜು ನೀತಿಯನ್ನು ದೇಶಾದ್ಯಂತ ಯಾವುದೇ ಗೊಂದಲಗಳಿಲ್ಲದೆ ಸುಗಮವಾಗಿ ಜಾರಿಗೆ ತರಲು ಅನುಕೂಲ ಆಗುವಂತೆ ಪೆಟ್ರೋಲಿಯಂ ಸಚಿವಾಲಯದ ಕಾರ್ಯದರ್ಶಿಗಳು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಅಧಿಕೃತ ಪತ್ರ ಬರೆದಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಅಗತ್ಯ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಈ ಪತ್ರದ ಮೂಲಕ ಕೋರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+