ವೀಕ್‌ ಆಫ್‌ ಇಲ್ಲದೆ ಕೆಲಸ! ಪರ್ಸನಲ್‌ ಲೈಫ್‌ಗೆ ಜಾಗವೇ ಇಲ್ಲ, ಟೆಸ್ಲಾ ಉದ್ಯೋಗಿಯ ವರ್ಕ್‌ ಶೆಡ್ಯೂಲ್‌ ಬಗ್ಗೆ ಎದ್ದಿದೆ ಚರ್ಚೆ

ಯಾವ ಕಂಪನಿಯೇ ಆಗಲಿ, ಕಚೇರಿಯೇ ಆಗಲಿ ಉದ್ಯೋಗಿಗಳು ದಿನಕ್ಕೆ ಎಂಟು ಅಥವಾ ಒಂಭತ್ತು ಗಂಟೆ ಕೆಲಸ ಮಾಡುತ್ತಾರೆ. ಇಷ್ಟು ಕೆಲಸ ಮಾಡುವಾಗ ವಾರಕ್ಕೆ ಒಂದು ಅಥವಾ ಎರಡು ವೀಕ್‌ ಆಫ್‌ಗಳನ್ನು ಕೂಡಾ ತೆಗೆದುಕೊಳ್ಳತ್ತಾರೆ. ವಾರ ಪೂರ್ತಿ ಬಿಡುವಿಲ್ಲದೆ ದುಡಿಯುವುದರಿಂದ ವ್ಯಕ್ತಿಯ ಮಾನಸಿಕ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ನಡುವೆ, ಟೆಸ್ಲಾ ಕಂಪನಿಯ ಉದ್ಯೋಗಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಇದೀಗ ಐಟಿ ವಲಯದ ಕೆಲಸದ ಸಂಸ್ಕೃತಿ ಮತ್ತು ಒತ್ತಡದ ಬಗ್ಗೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಚರ್ಚೆ ಹುಟ್ಟು ಹಾಕಿದ ಪೋಸ್ಟ್‌ :

ಮೊಹಮ್ಮದ್ ಸಲ್ಮಾನ್ ಎನ್ನುವವರು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಶೇರ್‌ ಮಾಡಿದ್ದಾರೆ. ಈ ವಿಡಿಯೋದಲ್ಲಿ, ತಾವು ವಾರದಲ್ಲಿ ಎಷ್ಟು ಗಂಟೆಗಳ ಕಾಲ ಕೆಲಸ ಮಾಡುತ್ತೇನೆ ಎನ್ನುವುದನ್ನು ವಿವರಿಸಿದ್ದಾರೆ. ಇದೀಗ ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೆಚ್ಚು ಗಂಟೆವರೆಗೆ ಅಥವಾ ಅವಧಿ ಮೀರಿ ಕೆಲಸ ಮಾಡುವುದು ಕೆಲಸದ ಬದ್ಧತೆಯೇ ಅಥವಾ ಅನಾರೋಗ್ಯಕರ ಕೆಲಸದ ಸಂಸ್ಕೃತಿಯೇ ಎನ್ನುವ ಬಗ್ಗೆ ಇವರ ಪೋಸ್ಟ್‌ ಚರ್ಚೆ ಹುಟ್ಟು ಹಾಕಿದೆ. ಈ ಬಗ್ಗೆ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

Tesla

ಉದ್ಯೋಗಿ ಹಂಚಿಕೊಂಡ ಕೆಲಸದ ಸಮಯದ ವಿವರ ಹೀಗಿದೆ:

ಸೋಮವಾರ: 11 ಗಂಟೆಗಳು
ಮಂಗಳವಾರ: 9 ಗಂಟೆಗಳು
ಬುಧವಾರ: 10 ಗಂಟೆಗಳು
ಗುರುವಾರ: 11 ಗಂಟೆಗಳು
ಶುಕ್ರವಾರ: 7 ಗಂಟೆಗಳು
ಶನಿವಾರ: 2 ಗಂಟೆಗಳು
ಭಾನುವಾರ: 4 ಗಂಟೆಗಳು

ಒಟ್ಟಾರೆಯಾಗಿ, ಈ ಉದ್ಯೋಗಿ ವಾರಕ್ಕೆ 54 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಇವರ ಕೆಲಸದ ಪಟ್ಟಿ ನೋಡಿದರೆ ವೀಕ್‌ ಆಫ್‌ ಕೂಡಾ ಇಲ್ಲದೆ ದುಡಿಯುತ್ತಿದ್ದಾರೆ ಎನ್ನುವುದು ಸ್ಪಷ್ಟ. ಯಾಕೆಂದರೆ ಇಲ್ಲಿ ಇವರು ವಾರಾಂತ್ಯದಲ್ಲೂ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಇವರ ಪಟ್ಟಿಯ ಪ್ರಕಾರ ಶನಿವಾರ ೨ ಗಂಟೆ ಕೆಲಸ ಮಾಡಿದರೆ ಭಾನುವಾರ ೪ ಗಂಟೆ ದುಡಿಯುತ್ತಾರೆ. ಅಲ್ಲಿಗೆ ವಾರದ ಎಲ್ಲಾ ಏಳು ದಿನಗಳೂ ಕೆಲಸ ಮಾಡುತ್ತಿದ್ದಾರೆ ಎಂದಾಯಿತು.

ಪೋಷಕರೊಂದಿಗೆ ಪ್ರವಾಸಕ್ಕೆ ಹೋಗಲು ಆಫೀಸ್‌ನಿಂದಲೇ ಸಿಗಲಿದೆ 10 ಸಾವಿರದ ಜೊತೆಗೆ 3 ದಿನಗಳ ಪೇಯ್ಡ್ ಲೀವ್
ಪೋಷಕರೊಂದಿಗೆ ಪ್ರವಾಸಕ್ಕೆ ಹೋಗಲು ಆಫೀಸ್‌ನಿಂದಲೇ ಸಿಗಲಿದೆ 10 ಸಾವಿರದ ಜೊತೆಗೆ 3 ದಿನಗಳ ಪೇಯ್ಡ್ ಲೀವ್

ಸಾಮಾಜಿಕ ಜಾಲತಾಣದಲ್ಲಿ ಭಿನ್ನಾಭಿಪ್ರಾಯ:

ಈ ವಿಡಿಯೋ ನೋಡಿದ ಹಲವರು, "ಇದು ಕೆಲಸ ಮತ್ತು ವೈಯಕ್ತಿಕ ಜೀವನದ ಸಮತೋಲನವನ್ನು (Work-life balance) ಸಂಪೂರ್ಣವಾಗಿ ಹಾಳುಮಾಡುತ್ತದೆ" ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು, ಅಮೆರಿಕದಲ್ಲಿ ನೆಲೆಸಿರುವ ವಿದೇಶಿ ಉದ್ಯೋಗಿಗಳ ಮೇಲಿರುವ ಒತ್ತಡದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ, ಇದು ವೃತ್ತಿಪರ ಬದ್ಧತೆ ಮತ್ತು ಮಹತ್ವಾಕಾಂಕ್ಷೆಯ ಸಂಕೇತ ಎಂದು ಬೆಂಬಲಿಸಿದವರೂ ಇದ್ದಾರೆ.

ಟೆಸ್ಲಾದಂತಹ ಪ್ರತಿಷ್ಠಿತ ಕಂಪನಿಗಳಲ್ಲಿನ ಕೆಲಸದ ಒತ್ತಡದ ಬಗ್ಗೆ ಈ ಪೋಸ್ಟ್ ಹೊಸದಾಗಿ ಚರ್ಚೆಯನ್ನು ಹುಟ್ಟುಹಾಕಿದೆ. ಹೆಚ್ಚಿನ ಕೆಲಸದ ಅವಧಿಯು ಉದ್ಯೋಗಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಆತಂಕ ವ್ಯಕ್ತವಾಗಿದೆ.

WFH ತೆಗೆದುಹಾಕಿದ ಐಟಿ ಕಂಪನಿ ವಿರುದ್ಧ ಟೆಕ್ಕಿಯ ಪೋಸ್ಟ್ ವೈರಲ್: ಬೆಂಗಳೂರು ಟ್ರಾಫಿಕ್, ದುಬಾರಿ ಬಾಡಿಗೆ ಎಂದ ಐಟಿ ಉದ್ಯೋಗಿ
WFH ತೆಗೆದುಹಾಕಿದ ಐಟಿ ಕಂಪನಿ ವಿರುದ್ಧ ಟೆಕ್ಕಿಯ ಪೋಸ್ಟ್ ವೈರಲ್: ಬೆಂಗಳೂರು ಟ್ರಾಫಿಕ್, ದುಬಾರಿ ಬಾಡಿಗೆ ಎಂದ ಐಟಿ ಉದ್ಯೋಗಿ

ಸದ್ಯ ಈ ವಿಡಿಯೋ ಟೆಸ್ಲಾದ ಯಾವ ವಿಭಾಗ ಅಥವಾ ಯಾವ ಸ್ಥಳದ ಉದ್ಯೋಗಿಯದ್ದು ಎಂಬುದು ಸ್ಪಷ್ಟವಾಗಿಲ್ಲ. ಆದರೂ, ದೊಡ್ಡ ಕಂಪನಿಗಳಲ್ಲಿನ ಕೆಲಸದ ಸಮಯದ ಮಿತಿಗಳ ಬಗ್ಗೆ ಈಗ ಪ್ರಶ್ನೆಗಳು ಏಳುತ್ತಿವೆ.

ಈ ಹಿಂದೆ ಇನ್ಫೋಸಿಸ್ ಸಹ-ಸಂಸ್ಥಾಪಕ ಮತ್ತು ಮಾಜಿ ಸಿಇಒ ನಾರಾಯಣ ಮೂರ್ತಿ ಅವರು ಪಾಡ್‌ಕ್ಯಾಸ್ಟ್‌ನಲ್ಲಿ ದೇಶದ ಕೆಲಸದ ಉತ್ಪಾದಕತೆಯ ಕುರಿತು ಹೇಳಿಕೆ ನೀಡುತ್ತಾ ಕೆಲಸ-ಜೀವನದ ಸಮತೋಲನದ ಕುರಿತು ಚರ್ಚೆಯನ್ನು ಹುಟ್ಟುಹಾಕಿದ್ದರು. ಉತ್ಪಾದಕತೆಯನ್ನು ಹೆಚ್ಚಿಸಲು ಯುವಕರು ವಾರಕ್ಕೆ ಕನಿಷ್ಠ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ನಾರಾಯಣ ಮೂರ್ತಿ ಹೇಳಿಕೆ ನೀಡಿದ್ದರು. ಚೀನಾ ಮತ್ತು ಜಪಾನ್‌ನಂತಹ ರಾಷ್ಟ್ರಗಳೊಂದಿಗೆ ದೇಶವು ಸ್ಪರ್ಧಾತ್ಮಕವಾಗಿ ಉಳಿಯಲು ಇದು ಅಗತ್ಯವಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದರು. ಈ ಹೇಳಿಕೆಗೂ ಪರ ವಿರೋಧ ವ್ಯಕ್ತವಾಗಿತ್ತು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+