ಈ ಐದು ಪದಾರ್ಥಗಳನ್ನು ನೇರಳೆ ಹಣ್ಣಿನ ಜೊತೆ ತಿನ್ನಲೇಬಾರದು : ಜೀರ್ಣಕ್ರಿಯೆಯ ಮೇಲಾಗುವುದು ನೇರ ಪರಿಣಾಮ

ಪ್ರಕೃತಿಯು ಪ್ರತಿ ಋತುವಿನಲ್ಲೂ ಬೇರೆ ಬೇರೆ ಬಗೆಯ ಹಣ್ಣುಗಳನ್ನು ನೀಡುತ್ತದೆ. ಆಯಾ ಋತುಮಾನಕ್ಕೆ ತಕ್ಕಂತೆ ಸಿಗುವ ಹಣ್ಣುಗಳನ್ನು ತಿನ್ನುವುದರಿಂದ ದೇಹಕ್ಕೆ ಅಗತ್ಯವಿರುವ ನೈಸರ್ಗಿಕ ಪೋಷಕಾಂಶಗಳು ಸಿಗುತ್ತವೆ. ದೇಹದ ರೋಗನಿರೋಧಕ ಶಕ್ಯೂ ಹೆಚ್ಚಾಗಲು ಇದು ಸಹಾಯ ಮಾಡುತ್ತದೆ. ಇದೇ ಕಾರಣಕ್ಕೆ ಋತುವಿಗೆ ಅನುಸಾರವಾಗಿ ಪ್ರಕೃತಿ ನೀಡುವ ಹಣ್ಣನ್ನು ಶೀತ, ಉಷ್ಣ ಎನ್ನುವ ನೆಪ ಕೊಡದೆ ಸವಿಯಬೇಕು.

ಬೇಸಿಗೆಯ ಋತುವಿನಲ್ಲಿ ನೇರಳೆ ಹಣ್ಣು ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ. ಆರೋಗ್ಯದ ದೃಷ್ಟಿಯಿಂದ ಹೇಳುವುದಾದರೆ ಇದು ಅತ್ಯಂತ ಶ್ರೇಷ್ಠ ಹಣ್ಣು. ನೇರಳೆ ಹಣ್ಣಿನಲ್ಲಿರುವ ಕ್ಯಾಲೋರಿ ಅಂಶ ತೀರಾ ಕಡಿಮೆ. ಇದು ಆ್ಯಂಟಿಆಕ್ಸಿಡೆಂಟ್‌ಗಳ ಆಗರ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಶಕ್ತಿ ಈ ಹಣ್ಣಿಗಿದೆ. ಆದರೆ, ಆರೋಗ್ಯ ತಜ್ಞರ ಪ್ರಕಾರ, ನೇರಳೆ ಹಣ್ಣನ್ನು ಕೆಲವು ನಿರ್ದಿಷ್ಟ ಆಹಾರಗಳೊಂದಿಗೆ ತಿನ್ನಲೇಬಾರದು. ಒಂದು ವೇಳೆ ಸೇವಿಸಿದರೆ ಜೀರ್ಣಕ್ರಿಯೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.

Jamun Fruit

ಗುರುಗ್ರಾಮದ ನಾರಾಯಣ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ (Gastroenterology)ವಿಭಾಗದ ನಿರ್ದೇಶಕ ಡಾ. ಸುಕೃತ್ ಸಿಂಗ್ ಸೇಥಿ ಅವರು, ನೇರಳೆ ಹಣ್ಣಿನೊಂದಿಗೆ ಈ ಕೆಳಗಿನ ಐದು ಆಹಾರಗಳನ್ನು ಯಾವುದೇ ಕಾರಣಕ್ಕೂ ಸೇವಿಸಬಾರದು ಎಂದು ಎಚ್ಚರಿಸಿದ್ದಾರೆ.

1. ಹಾಲು ಮತ್ತು ಹಾಲಿನ ಉತ್ಪನ್ನಗಳು:

ನೇರಳೆ ಹಣ್ಣನ್ನು ಹಾಲು, ಮೊಸರು ಅಥವಾ ಚೀಸ್‌ನೊಂದಿಗೆ ತಿನ್ನುವುದರಿಂದ ಗ್ಯಾಸ್ ಮತ್ತು ಅಸಿಡಿಟಿ ಸಮಸ್ಯೆ ಉಂಟಾಗಬಹುದು. ನೇರಳೆ ಹಣ್ಣಿನಲ್ಲಿರುವ ಆಸಿಡ್‌ ಹಾಲಿನ ಪ್ರೋಟೀನ್‌ಗಳೊಂದಿಗೆ ವರ್ತಿಸಿ ಜೀರ್ಣಕ್ರಿಯೆಗೆ ಅಡ್ಡಿಯುಂಟು ಮಾಡಬಹುದು. ವಿಶೇಷವಾಗಿ ಅಸಿಡಿಟಿ ಇರುವವರು ಈ ಎರಡೂ ಪದಾರ್ಥಗಳನ್ನು ಒಟ್ಟಿಗೆ ಸೇವಿಸಲೇ ಬಾರದು.

ನೇರಳೆ ಇಳುವರಿ ಬರಗಾಲದ ಸೂಚನೆ, ಜಾನಪದದಲ್ಲಿ ಬಿಚ್ಚಿಟ್ಟ ಹವಾಮಾನದ ವೈಜ್ಞಾನಿಕ ಸತ್ಯ!
ನೇರಳೆ ಇಳುವರಿ ಬರಗಾಲದ ಸೂಚನೆ, ಜಾನಪದದಲ್ಲಿ ಬಿಚ್ಚಿಟ್ಟ ಹವಾಮಾನದ ವೈಜ್ಞಾನಿಕ ಸತ್ಯ!

2. ಹುಳಿ ಪದಾರ್ಥಗಳು ಮತ್ತು ಉಪ್ಪಿನಕಾಯಿ:

ನೇರಳೆ ಹಣ್ಣು ಸಿಹಿ ಹುಳಿ ಮಿಶ್ರಿತ ರುಚಿಯನ್ನು ಹೊಂದಿರುತ್ತದೆ. ಇದರೊಂದಿಗೆ ಮತ್ತೆ ನಿಂಬೆಹಣ್ಣು, ಹುಣಸೆಹಣ್ಣು ಅಥವಾ ಉಪ್ಪಿನಕಾಯಿಯನ್ನು ಸೇವಿಸುವುದರಿಂದ ದೇಹದಲ್ಲಿ ಆಸಿಡ್‌ ಪ್ರಮಾಣ ಹೆಚ್ಚಾಗಿ ಅಸಿಡಿಟಿ ಅಥವಾ ಗ್ಯಾಸ್ಟ್ರೈಟಿಸ್ ಸಮಸ್ಯೆ ಹೆಚ್ಚಾಗುತ್ತದೆ. ಮೊದಲೇ ಆಸಿಡಿಟಿ ಇದ್ದವರಿಗಂತೂ ಇದು ಹೊಟ್ಟೆ ನೋವಿಗೆ ಕಾರಣವಾಗಬಹುದು.

3. ಕರಿದ ತಿನಿಸುಗಳು:

ಎಣ್ಣೆಯುಕ್ತ ಅಥವಾ ಕರಿದ ಪದಾರ್ಥಗಳು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಇವುಗಳನ್ನು ನೇರಳೆ ಹಣ್ಣಿನೊಂದಿಗೆ ಸೇವಿಸಿದಾಗ ಜೀರ್ಣಕ್ರಿಯೆಯ ವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಇದು ಎದೆಯುರಿ ಸಮಸ್ಯೆಗಳನ್ನು ಮತ್ತಷ್ಟು ಹದಗೆಡಿಸಬಹುದು.

ಹಣ್ಣು-ತರಕಾರಿಯನ್ನು ತಾಜಾ ಇಡೋ ಮಣ್ಣಿನ ಫ್ರಿಡ್ಜ್ ಇದು, ಕರೆಂಟ್ ಬಿಲ್ಲೂ ಇಲ್ಲ, ಆರೋಗ್ಯಕ್ಕೂ ಒಳ್ಳೇದು
ಹಣ್ಣು-ತರಕಾರಿಯನ್ನು ತಾಜಾ ಇಡೋ ಮಣ್ಣಿನ ಫ್ರಿಡ್ಜ್ ಇದು, ಕರೆಂಟ್ ಬಿಲ್ಲೂ ಇಲ್ಲ, ಆರೋಗ್ಯಕ್ಕೂ ಒಳ್ಳೇದು

4. ಅತಿಯಾದ ಉಪ್ಪಿನ ಅಂಶವುಳ್ಳ ತಿಂಡಿ:

ಅತಿಯಾದ ಉಪ್ಪು ಆರೋಗ್ಯಕ್ಕೆ ಒಳ್ಳೆಯದಲ್ಲ. ನೇರಳೆ ಹಣ್ಣಿನೊಂದಿಗೆ ಉಪ್ಪು ಜಾಸ್ತಿಯಿರುವ ತಿಂಡಿಗಳನ್ನು ಸೇವಿಸುವುದರಿಂದ ಅದು ಸಮತೋಲನವನ್ನು ತಪ್ಪಿಸುತ್ತದೆ. ಆರೋಗ್ಯದ ದೃಷ್ಟಿಯಿಂದ ಉಪ್ಪಿನ ಅಂಶ ಕಡಿಮೆ ಇದ್ದಷ್ಟು ಒಳ್ಳೆಯದು.

5. ಸಿಹಿ ಪದಾರ್ಥಗಳು:

ನೇರಳೆ ಹಣ್ಣು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಿದೆ. ಇದರೊಂದಿಗೆ ಸಿಹಿ, ಬೆಲ್ಲ ಅಥವಾ ಸಂಸ್ಕರಿಸಿದ ಸಕ್ಕರೆಯುಳ್ಳ ಪದಾರ್ಥಗಳನ್ನು ಸೇವಿಸಿದರೆ, ಆ ಹಣ್ಣಿನ ನೈಸರ್ಗಿಕ ಗುಣಗಳು ಮರೆಯಾಗುತ್ತವೆ. ನೇರಳೆ ಹಣ್ಣನ್ನು ಪ್ರತ್ಯೇಕವಾಗಿ ಸೇವಿಸುವುದೇ ಆರೋಗ್ಯಕರ.

ನೇರಳೆ ಹಣ್ಣು ಸೇವಿಸಲು ಸೂಕ್ತ ವಿಧಾನ:

ಈ ಸಮಯಕ್ಕೆ ತಿಂದರೆ ಒಳ್ಳೆಯದು: ನೇರಳೆ ಹಣ್ಣನ್ನು ಬೆಳಗ್ಗೆ ಅಥವಾ ಮಧ್ಯಾಹ್ನ ಸ್ನಾಕ್ಸ್‌ ರೂಪದಲ್ಲಿ ಸೇವಿಸುವುದು ಸೂಕ್ತ. ರಾತ್ರಿಯ ಹೊತ್ತು ಇದನ್ನು ಸೇವಿಸಿದರೆ ಆಸಿಡಿಟಿ ಸಮಸ್ಯೆ ಹೆಚ್ಚಾಗಬಹುದು.

ದಿನಕ್ಕೆ ಎಷ್ಟು ತಿನ್ನಬಹುದು: ವಯಸ್ಕರು ದಿನಕ್ಕೆ 10-12 ನೇರಳೆ ಹಣ್ಣುಗಳನ್ನು ಸೇವಿಸುವುದು ಉತ್ತಮ.

ನೀರು ಕುಡಿಯಬಹುದೇ: ಹಣ್ಣು ತಿಂದ ತಕ್ಷಣ ನೀರು ಕುಡಿಯಬೇಡಿ. ಸುಮಾರು 15-20 ನಿಮಿಷಗಳ ಅಂತರದಲ್ಲಿ ನೀರು ಕುಡಿಯುವುದು ಜೀರ್ಣಕ್ರಿಯೆಗೆ ಸಹಕಾರಿ.

ಯಾವುದರ ಜೊತೆ ತಿಂದರೆ ಒಳ್ಳೆಯದು: ನೇರಳೆ ಹಣ್ಣಿನೊಂದಿಗೆ ನಟ್ಸ್ ಅಥವಾ ಧಾನ್ಯಗಳನ್ನು ಸೇವಿಸುವುದು ಹೆಚ್ಚು ಪ್ರಯೋಜನಕಾರಿ.

ಆದರೆ ನೆನಪಿರಲಿ ಆಸಿಡಿಟಿ ಅಥವಾ ಜೀರ್ಣಕ್ರಿಯೆಯ ಸಮಸ್ಯೆ ಇರುವವರು ಹಣ್ಣುಗಳನ್ನು ಸೇವಿಸುವಾಗ ವೈದ್ಯಕೀಯ ಸಲಹೆಯನ್ನು ಪಡೆಯುವುದು ಸೂಕ್ತ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+