ಬಾಳೆ ಎಲೆ ಊಟದ ಪ್ರಯೋಜನ ತಿಳಿದರೆ ಅಪ್ಪಿತಪ್ಪಿಯೂ ತಟ್ಟೆಯಲ್ಲಿ ಅನ್ನ ತಿನ್ನುವುದಿಲ್ಲ ನೀವು:ಇದು ಸಂಪ್ರದಾಯವಲ್ಲ, ವಿಜ್ಞಾನ!

ನಮ್ಮ ಹಿರಿಯರು ಆಚರಿಸಿಕೊಂಡು ಬಂದಿರುವ ಎಲ್ಲಾ ಆಚರಣೆ, ಸಂಪ್ರದಾಯಗಳ ಹಿಂದೆ ವಿಜ್ಞಾನ ಅಡಗಿದೆ. ಕಾಲ ಕಳೆದಂತೆ ನಾವುಗಳು ಆಧುನಿಕತೆ, ಫ್ಯಾಶನ್‌ ಹೆಸರಿನಲ್ಲಿ ಆ ಸಂಪ್ರದಾಯಗಳನ್ನು ಬದಿಗಿಟ್ಟಿದ್ದೇವೆ. ಇತ್ತೀಚಿನ ದಿನಗಳಲ್ಲಿ ಕಾಡುತ್ತಿರುವ ಆರೋಗ್ಯ ಸಮಸ್ಯೆಗಳು, ಕಾಯಿಲೆಗಳಿಂದ ಬೇಸತ್ತು ಮತ್ತೆ ನಮ್ಮ ಹಿರಿಯರು ನಡೆದುಕೊಂಡು ಬಂದ ಹಾದಿಯತ್ತ ಹಿಂತಿರುಗಿ ನೋಡುತ್ತಿದ್ದೇವೆ.

ಆತಿಥ್ಯ ಮತ್ತು ಸಮೃದ್ಧಿಯ ಸಂಕೇತ:

ಹಿಂದಿನ ಕಾಲದಿಂದ ನಡೆದುಕೊಂಡು ಬಂದಿರುವ ಒಂದು ಪದ್ದತಿ ಎಂದರೆ ಬಾಳೆ ಎಲೆ ಊಟ. ಕಾಲ ಕ್ರಮೇಣ ಬಾಳೆ ಎಲೆ ಹೋಗಿ ತಟ್ಟೆಗೆ ಬಂದು ತಲುಪಿದೆ. ಆದರೆ ಇಂದಿಗೂ ಹಬ್ಬ ಹರಿದಿನಗಳಂದು, ಮದುವೆ, ಪೂಜೆ ಮುಂತಾದ ಸಮಯಗಳಲ್ಲಿ ಬಾಳೆ ಎಲೆ ಊಟದ ಪದ್ದತಿ ಆಚರಣೆಯಲ್ಲಿದೆ. ನಮ್ಮ ದೇಶದ ದಕ್ಷಿಣ ರಾಜ್ಯಗಳ ಅನೇಕ ಮನೆಗಳು ಮತ್ತು ದೇವಾಲಯಗಳಲ್ಲಿ ಬಾಳೆ ಎಲೆ ಊಟದ ಸಂಪ್ರದಾಯ ಇಂದಿಗೂ ಜೀವಂತವಾಗಿದೆ. ರಾಸಾಯನಿಕ ಮುಕ್ತ ಮತ್ತು ಪರಿಸರ ಸ್ನೇಹಿಯಗಿರುವ ಈ ಸಂಪ್ರದಾಯ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡುತ್ತದೆ. ಇದರೊಂದಿಗೆ, ಇದು ಆತಿಥ್ಯ ಮತ್ತು ಸಮೃದ್ಧಿಯ ಸಂಕೇತವಾಗಿದೆ. ಎಲೆಗಳನ್ನು ಹರಡುವ, ತೊಳೆಯುವ ಮತ್ತು ಮಡಿಸುವ ಪ್ರಕ್ರಿಯೆಯೊಂದಿಗೆ ಸಾಂಸ್ಕೃತಿಕ ಶಿಷ್ಟಾಚಾರವೂ ಸೇರಿಕೊಂಡಿದೆ.

Banana Leaf Meals

ಆಚರಣೆಯ ಹಿಂದಿದೆ ಆಧುನಿಕ ವಿಜ್ಞಾನ:

ಬಿಸಿಬಿಸಿ ಊಟವನ್ನು ಬಾಳೆ ಎಲೆಯಲ್ಲಿ ಬಡಿಸುವುದು ಶತಮಾನಗಳಿಂದ ನಡೆದು ಬಂದಿರುವ ಸಂಪ್ರದಾಯ. ಈ ಪದ್ಧತಿಯನ್ನು ಕೇವಲ ಸಂಪ್ರದಾಯ ಅಥವಾ ಆಚರಣೆ ಎಂದರೆ ತಪ್ಪಾದೀತು. ಆ ಆಚರಣೆಯ ಹಿಂದೆ ಆಧುನಿಕ ವಿಜ್ಞಾನವಿದೆ. ಈ ಪ್ರಾಚೀನ ಪದ್ಧತಿಯ ಹಿಂದೆ ಒಂದು ಶಕ್ತಿಯುತವಾದ ರಸಾಯನಶಾಸ್ತ್ರ ಅಡಗಿದೆ.

ಬಾಳೆ ಎಲೆಗಳ ಮೇಲ್ಭಾಗದಲ್ಲಿ ನೈಸರ್ಗಿಕವಾಗಿ ತೆಳುವಾದ ಮೇಣದ ಪದರವಿರುತ್ತದೆ. ಅನ್ನ, ಸಾಂಬಾರ್ ಅಥವಾ ಬಿಸಿ ಆಹಾರವನ್ನು ಈ ಎಲೆಗಳ ಮೇಲೆ ಬಡಿಸಿದಾಗ, ಆಹಾರಕ್ಕೆ ವಿಶಿಷ್ಟವಾದ ಪರಿಮಳ ಮತ್ತು ರುಚಿಯನ್ನು ನೀಡುತ್ತದೆ. ಇದು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಈ ನೈಸರ್ಗಿಕ ಪ್ರಕ್ರಿಯೆಯು ಆಹಾರಕ್ಕೆ ಹಗುರವಾದ, ಕಾಯಿ ಪರಿಮಳವನ್ನು ನೀಡುತ್ತದೆ. ಅದು ಇಂದ್ರಿಯಗಳಿಗೆ ಇಷ್ಟವಾಗುತ್ತದೆ.

ಆಫೀಸ್‌ನಲ್ಲಿ ನಾನ್‌ವೆಜ್‌ ಊಟಕ್ಕೆ ನೋ ಎಂದ ಹೊಸ CEO: ಪೋಸ್ಟ್‌ ವೈರಲ್‌, ನೆಟ್ಟಿಗರಲ್ಲಿ ಹೆಚ್ಚಿದ ಆಕ್ರೋಶ
ಆಫೀಸ್‌ನಲ್ಲಿ ನಾನ್‌ವೆಜ್‌ ಊಟಕ್ಕೆ ನೋ ಎಂದ ಹೊಸ CEO: ಪೋಸ್ಟ್‌ ವೈರಲ್‌, ನೆಟ್ಟಿಗರಲ್ಲಿ ಹೆಚ್ಚಿದ ಆಕ್ರೋಶ

ಬಾಳೆ ಎಲೆಯಲ್ಲಿದೆ ಆರೋಗ್ಯದ ಗುಟ್ಟು:

ಬಾಳೆ ಎಲೆಗಳು ಪಾಲಿಫಿನಾಲ್ಸ್‌ಗಳಿಂದ ಸಮೃದ್ಧವಾಗಿವೆ. ಇದರಲ್ಲಿ ಪ್ರಮುಖವಾಗಿ 'ಎಪಿಗ್ಯಾಲೋಕ್ಯಾಟೆಚಿನ್ ಗ್ಯಾಲೇಟ್' (EGCG) ಎಂಬ ಅಂಶವಿದೆ. ಇದು ಗ್ರೀನ್ ಟೀಯಲ್ಲಿ ಕಂಡುಬರುವ ಪ್ರಬಲವಾದ ಆಂಟಿ ಆಕ್ಸಿಡೆಂಟ್‌ ಆಗಿದೆ. ಬಿಸಿ ಆಹಾರವನ್ನು ಬಾಳೆ ಎಲೆಯ ಮೇಲೆ ಬಡಿಸಿದಾಗ, ಈ ಪಾಲಿಫಿನಾಲ್‌ಗಳು ಆಹಾರದೊಂದಿಗೆ ಬೆರೆತು, ಅದರ ಪೌಷ್ಟಿಕಾಂಶದ ಮೌಲ್ಯವನ್ನು ಹೆಚ್ಚಿಸುತ್ತವೆ. ಅಲ್ಲದೆ, ಬಾಳೆ ಎಲೆಯಲ್ಲಿರುವ ಫ್ಲೇವನಾಯ್ಡ್‌ಗಳು, ಕ್ಲೋರೊಫಿಲ್ ಮತ್ತು ಅಲ್ಲಾಂಟೊಯಿನ್ ಅಂಶಗಳು ಉರಿಯೂತದ ವಿರುದ್ಧ ಹೋರಾಡುವ ಗುಣಗಳನ್ನು ಹೊಂದಿವೆ. ಆಹಾರ ಪ್ಯಾಕೇಜಿಂಗ್ ಕುರಿತ ಅಧ್ಯಯನವೊಂದು, ಪ್ಲಾಸ್ಟಿಕ್ ತಟ್ಟೆಗಳಿಗೆ ಹೋಲಿಸಿದರೆ ಬಾಳೆ ಎಲೆಗಳಲ್ಲಿ ಸೂಕ್ಷ್ಮಜೀವಿಗಳ ಸೋಂಕು ಅತ್ಯಂತ ಕಡಿಮೆ ಇರುತ್ತದೆ ಎನ್ನುವುದನ್ನು ದೃಢಪಡಿಸಿದೆ.

ಪ್ಲಾಸ್ಟಿಕ್ v/s ಬಾಳೆ ಎಲೆ:

ಪರಿಸರದ ಮೇಲಿನ ಪ್ರಭಾವ ಇಂದಿನ ಆಧುನಿಕ ಯುಗದಲ್ಲಿ ನಾವು ಬಳಸುತ್ತಿರುವ ಥರ್ಮೋಕೋಲ್ ಮತ್ತು ಪ್ಲಾಸ್ಟಿಕ್ ತಟ್ಟೆಗಳು ಪರಿಸರಕ್ಕೆ ಮಾರಕವಾಗಿ ಪರಿಣಮಿಸಿವೆ.

ಕೇವಲ 15 ನಿಮಿಷದಲ್ಲಿ ರುಚಿಕರ ಎಗ್ ಫ್ರೈಡ್ ರೈಸ್ ತಯಾರಿಸುವ ವಿಧಾನ
ಕೇವಲ 15 ನಿಮಿಷದಲ್ಲಿ ರುಚಿಕರ ಎಗ್ ಫ್ರೈಡ್ ರೈಸ್ ತಯಾರಿಸುವ ವಿಧಾನ

ರಾಸಾಯನಿಕ ವಿಷ:

ಹೋಟೆಲ್‌ಗಳು ಅಥವಾ ಮದುವೆಗಳಲ್ಲಿ, ಪ್ಲಾಸ್ಟಿಕ್ ಅಥವಾ ಲೋಹದ ತಟ್ಟೆಗಳನ್ನು ಸ್ವಚ್ಛಗೊಳಿಸಲು ಡಿಟರ್ಜೆಂಟ್‌ಗಳು ಮತ್ತು ರಾಸಾಯನಿಕಗಳನ್ನು ಹೊಂದಿರುವ ಡಿಶ್‌ವಾಶರ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದು ತಟ್ಟೆಯ ಮೇಲ್ಮೈಯಲ್ಲಿ ಸೂಕ್ಷ್ಮ ಕಣಗಳನ್ನು ಬಿಡಬಹುದು. ಇದಕ್ಕೆ ವಿರುದ್ಧವಾಗಿ, ಬಾಳೆ ಎಲೆಗಳು ನೈಸರ್ಗಿಕವಾಗಿ ಶುದ್ಧ ಮತ್ತು ರಾಸಾಯನಿಕ ಮುಕ್ತವಾಗಿವೆ. ಅವುಗಳನ್ನು ಬಳಸುವ ಮೊದಲು ಅವುಗಳನ್ನು ಶುದ್ಧ ನೀರಿನಿಂದ ತೊಳೆದರೆ ಸಾಕಾಗುತ್ತದೆ. ಈ ಎಲೆಗಳು ಯಾವುದೇ ಕೃತಕ ಲೇಪನವನ್ನು ಹೊಂದಿಲ್ಲ. ಇದು ಆರೋಗ್ಯಕ್ಕೆ ಸುರಕ್ಷಿತ ಮಾತ್ರವಲ್ಲ, ಪರಿಸರಕ್ಕೆ ಸುಸ್ಥಿರ ಮತ್ತು ಪರಿಸರ ಸ್ನೇಹಿ ಆಯ್ಕೆಯಾಗಿದೆ.

ಪ್ಲಾಸ್ಟಿಕ್ ತಟ್ಟೆಗಳಲ್ಲಿ ಬಿಸಿ ಆಹಾರ ಬಡಿಸಿದಾಗ ಅದರಿಂದ ವಿಷಕಾರಿ ರಾಸಾಯನಿಕಗಳು ಆಹಾರದೊಂದಿಗೆ ಬೆರೆತು ಮನುಷ್ಯನ ರಕ್ತ, ಪ್ಲಾಸೆಂಟಾ ಮತ್ತು ಶ್ವಾಸಕೋಶದಲ್ಲಿ ಮೈಕ್ರೋಪ್ಲಾಸ್ಟಿಕ್ ರೂಪದಲ್ಲಿ ಪತ್ತೆಯಾಗುತ್ತಿವೆ.

ಮರುಬಳಕೆಯ ಕೊರತೆ:

ಜಗತ್ತಿನಲ್ಲಿ ಉತ್ಪಾದನೆಯಾದ ಪ್ಲಾಸ್ಟಿಕ್‌ನಲ್ಲಿ ಕೇವಲ 9% ಮಾತ್ರ ಮರುಬಳಕೆಯಾಗಿದೆ.

ಪರಿಸರ ಮಾಲಿನ್ಯ:

ಒಂದು ಸ್ಟೈರೋಫೋಮ್ (ಥರ್ಮೋಕೋಲ್) ತಟ್ಟೆ ವಿಭಜನೆಯಾಗಲು 500 ವರ್ಷಗಳಿಗೂ ಹೆಚ್ಚು ಕಾಲ ಬೇಕಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಬಾಳೆ ಎಲೆ ಕೇವಲ 28 ರಿಂದ 60 ದಿನಗಳಲ್ಲಿ ನೈಸರ್ಗಿಕವಾಗಿ ಕೊಳೆತು ಮಣ್ಣಿನಲ್ಲಿ ಬೆರೆತುಹೋಗುತ್ತದೆ. ಇದು ಪ್ರಾಣಿಗಳಿಗೆ ಮೇವಾಗಿ ಬಳಕೆಯಾಗುತ್ತದೆ. ಅತ್ಯಂತ ಮುಖ್ಯವಾಗಿ, ಬಾಳೆ ಎಲೆಯನ್ನು ಬೆಳೆಯಲು ಯಾವುದೇ ರಾಸಾಯನಿಕಗಳ ಅಗತ್ಯವಿಲ್ಲ ಮತ್ತು ಉತ್ಪಾದನಾ ಪ್ರಕ್ರಿಯೆಯಲ್ಲಿ ಶೂನ್ಯ ಇಂಧನ ಖರ್ಚಾಗುತ್ತದೆ.

ಕೆಲವೊಮ್ಮೆ ಅತ್ಯಾಧುನಿಕ ತಂತ್ರಜ್ಞಾನವೆಂದು ನಾವು ಕಂಡುಕೊಳ್ಳುವ ವಿಸಯಗಳು ಸಾವಿರಾರು ವರ್ಷಗಳಿಂದ ನಮ್ಮ ಹಿತ್ತಲಲ್ಲೇ ಬೆಳೆಯುತ್ತಿರುವ ನಿಸರ್ಗದ ಕೊಡುಗೆಗಳಾಗಿರುತ್ತವೆ. ನಮ್ಮ ಸಂಪ್ರದಾಯಗಳು ಕೇವಲ ನಂಬಿಕೆಗಳಲ್ಲ, ಅವು ನಮ್ಮ ಆರೋಗ್ಯ ಮತ್ತು ಪರಿಸರದ ರಕ್ಷಣೆಗಾಗಿ ರೂಪಿಸಲಾದ ಜೀವನಶೈಲಿಯಾಗಿದೆ ಎಂಬುದಕ್ಕೆ ಬಾಳೆ ಎಲೆಯೇ ಸಾಕ್ಷಿ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+