• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಕಿಸ್ತಾನದಿಂದ ಗಡಿನಿಯಂತ್ರಣ ರೇಖೆ ಉಲ್ಲಂಘನೆ, ಯುದ್ಧದ ಸೂಚನೆ?

|
   Surgical Strike 2: ಪಾಕಿಸ್ತಾನದಿಂದ ಗಡಿನಿಯಂತ್ರಣ ರೇಖೆ ಉಲ್ಲಂಘನೆ, ಯುದ್ಧದ ಸೂಚನೆ? | Oneindia Kannada

   ಇಸ್ಲಾಮಾಬಾದ್, ಫೆಬ್ರವರಿ 27: ಜಮ್ಮು ಮತ್ತು ಕಾಶ್ಮೀರದ ಹಲವೆಡೆ ಪಾಕಿಸ್ತಾನ ಗಡಿನಯಂತ್ರಣ ರೇಖೆಯನ್ನು ಉಲ್ಲಂಘಿಸಿ ಭಾರತೀಯ ಸೇನೆಯ ಮೇಲೆ ದಾಳಿ ಮಾಡಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

   ಪುಲ್ವಾಮಾ ಘಟನೆಯ ನಂತರ ಭಾರತ ಫೆಬ್ರವರಿ 26 ರಂದು ಉಗ್ರ ಶಿಬಿರಗಳ ಮೇಲೆ ದಾಳಿ ನಡೆಸಿದ ಕಾರಣ ಪಾಕಿಸ್ತಾನ ಭಾರತದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ತವಕದಲ್ಲಿದೆ.

   ಸರ್ಜಿಕಲ್ ಸ್ಟ್ರೈಕ್: ಸುಳ್ಳಿನ ಸರಮಾಲೆ ಕಟ್ಟಿ ಕೊನೆಗೆ ಸತ್ಯ ಒಪ್ಪಿಕೊಂಡ ಪಾಕ್

   ಪಾಕ್ ಸೇನೆಯೊಂದಿಗೆ ನಡೆದ ಕಾದಾಟದಲ್ಲಿ ಭಾರತದ ಕೆಲವು ಯೋಧರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

   ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಜೈಷ್ ಉಗ್ರ ಆದಿಲ್ ದಾರ್ ನಡೆಸಿದ ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ 44 ಭಾರತೀಯ ಯೋಧರು ಹುತಾತ್ಮರಾಗಿದ್ದರು.

   'ಈಗ ನಿಮ್ಮ ಸರದಿ, ನಮ್ಮ ಅಚ್ಚರಿ ಎದುರಿಸಲು ಸಿದ್ಧರಾಗಿ' : ಪಾಕಿಸ್ತಾನ

   ಈ ಘಟನೆಯಿಂದ ಆಕ್ರೋಶಗೊಂದಿದ್ದ ಭಾರತದ ಬೆಂಬಲಕ್ಕೆ ವಿಶ್ವವೇ ನಿಂತಿತ್ತು. ಘಟನೆಯ ಹೊಣೆಯನ್ನು ಹೊತ್ತುಕೊಂಡ ಜೈಷ್ ಉಗ್ರ ಸಂಘಟನೆ ಪಾಕಿಸ್ತಾನ ಮೂಲದ್ದಾಗಿದ್ದು, ಮತ್ತು ಜೈಷ್ ಉಗ್ರರಿಗೆ ಅದೇ ನೆಲೆ ನೀಡುತ್ತಿರುವುದರಿಂದ ಘತನೆಯಲ್ಲಿ ಪಾಕ್ ಕೈವಾಡವೂ ಇದೆ ಎನ್ನಲಾಗಿತ್ತು. ಸ್ಫೋಟಕ್ಕೆ ಕಾರಣವಾದ ಆರ್ ಡಿಎಕ್ಸ್ ಅನ್ನು ಪಾಕ್ ಸೇನೆಯಿಂದಲೇ ಪೂರೈಸಲಾದ ಮಾಹಿತಿಯೂ ಲಭ್ಯವಾಗಿತ್ತು.

   ಇಷ್ಟೆಲ್ಲ ಆದರೂ ಭಾರತ ಪಾಕ್ ಸೇನೆಯ ಮೇಲೆ ಆಕ್ರಮಣ ಮಾಡದೆ, ನೇರವಾಗಿ ಜೈಷ್ ನೆಲೆಯ ಮೇಲೆ ದಾಳಿ ನಡೆಸಿ, ಉಗ್ರನೆಲೆಯನ್ನು ದ್ವಂಸಗೊಳಿಸಿತ್ತು. ಇದೀಗ ಪಾಕಿಸ್ತಾನ ಪ್ರತಿದಾಳಿ ನಡೆಸಲು ಮುಂದಾಗಿದ್ದು, ಗಡಿನಿಯಂತ್ರಣ ರೇಖೆಯನ್ನು ಉಲ್ಲಂಘಿಸಿ, ಭಾರತದೊಂದಿಗೆ ಕಾದಾಡುವ ಸೂಚನೆ ನೀಡಿದೆ.

   English summary
   After Indian Air Force's Air Strike on terror camps in Pakistan, Pakistani troops fired mortar shells and small arms across the Line of Control at several areas in Jammu and Kashmir on Tuesday
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X