ಕೊಳ್ಳೇಗಾಲ ಶಾಸಕರ ಕಾರು ಅಪಘಾತ

ಚಾಮರಾಜನಗರ, ಏಪ್ರಿಲ್‌, 25: ಕೊಳ್ಳೇಗಾಲ ಶಾಸಕರ ಕಾರಿನ ಟೈಯರ್‌ ಬ್ಲಾಸ್ಟ್ ಆಗಿ ಅಪಘಾತ ಸಂಭವಿಸಿದ ಘಟನೆ ಮೈಸೂರಿನ ನಾಡನಹಳ್ಳಿ ಬಳಿ ನಡೆದಿದೆ.

ಬುಧವಾರ (ಏಪ್ರಿಲ್‌ 24) ರಾತ್ರಿ ಸುಮಾರು 11.50ರ ವೇಳೆಗೆ ಕೊಳ್ಳೇಗಾಲದಿಂದ ಮೈಸೂರಿನತ್ತ ತೆರಳುತ್ತಿರುವಾಗ ನಾಡನಹಳ್ಳಿ ಬಳಿ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ಕಾರು ಅಪಘಾತವಾಗಿದೆ. ಈ ವೇಳೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನು ಘಟನೆಯಲ್ಲಿ ಶಾಸಕರು ಅದೃಷ್ಟವಶಾತ್ ಶಾಸಕ ಎ.ಆರ್.ಕೃಷ್ಣಮೂರ್ತಿ, ಶಾಸಕರ ಆಪ್ತ ಸಹಾಯಕ ಹೊಂಗನೂರು ಚೇತನ್ ಮತ್ತು ವಾಹನ ಚಾಲಕ ಸತೀಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Kollegala MLA s car accident near Nadanahalli

ಮೈಸೂರಿನತ್ತ ತೆರಳುತ್ತಿದ್ದಾಗ ಕಾರಿನ ಟೈರ್ ಬ್ಲಾಸ್ಟ್ ಆದ ಪರಿಣಾಮ ಕಾರು ಚಾಲಕನ ನಿಯಂತ್ರಣ ತಪ್ಪಿ, ರಸ್ತೆಬದಿ ಹಳ್ಳಕೆ ಇಳಿದು ನಿಂತಿದೆ. ಯಾವುದೇ ಬೇರೆ ವಾಹನಗಳು ಆ ವೇಳೆ ಇಲ್ಲದಿದ್ದು, ಜೊತೆಗೆ ಕಾರು ರಸ್ತೆಬದಿಯ ಹಳ್ಳಕ್ಕೆ ಬಂದು ನಿಂತಿದ್ದರಿಂದ ಎಲ್ಲರೂ ಪ್ರಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಆಟೋ ಪಲ್ಟಿ: ರಾಷ್ಟ್ರೀಯ ಹೆದ್ದಾರಿ ನಾಲ್ಕರ ರಸ್ತೆಯಲ್ಲಿ ಎನ್‌ಹೆಚ್‌ಎಐ ಅಧಿಕಾರಿಗಳು ರಸ್ತೆಯಲ್ಲಿ ಹಂಪ್ಸ್ ಹಾಕಿ ಯಡವಟ್ಟು ಮಾಡಿದ್ದು, ಇದರಿಂದ ಒಂದೇ ದಿನ ನಾಲ್ಕೈದು ಅಪಘಾತ ಸಂಭವಿಸಿರುವ ಘಟನೆ ನಡೆದಿದೆ. ಇನ್ನು ನಿನ್ನೆ (ಏಪ್ರಿಲ್‌ 18) ರಾತ್ರಿ ವೇಳೆಗೆ ವೇಗವಾಗಿ ಬಂದ ಆಟೋ ಪಲ್ಟಿಯಾದ ಘಟನೆ ಚಿತ್ರದುರ್ಗದ ಬಳಿ ನಡೆದಿದೆ.

ಚಿತ್ರದುರ್ಗ ಉಪಾಧ್ಯ ಹೋಟೆಲ್ ಮುಂಭಾಗದ ರಸ್ತೆಯಲ್ಲಿ ಹಂಪ್ಸ್ ಹಾಕಿದ್ದು, ಈ ಹಿನ್ನೆಲೆ ಮೂರ್ನಾಲ್ಕು ಜನರನ್ನು ಕೂರಿಸಿಕೊಂಡು ವೇಗವಾಗಿ ಬಂದ ಆಟೋವೊಂದು ಪಲ್ಟಿಯಾಗಿದೆ. ಇನ್ನು ಆಟೋದಲ್ಲಿ ಕೊಲಿಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಹಂಪ್ಸ್ ಇದೆ ನಿಧಾನವಾಗಿ ಹೋಗಿ ಎಂದು ಚಾಲಕನಿಗೆ ಸೂಚನೆ ನೀಡಿದ್ದಾರೆ.

ಆದರೆ ಕೂಡ ಆಟೋ ಚಾಲಕ ಕೂಲಿ ಕಾರ್ಮಿಕನ ಮಾತನ್ನೂ ಪರಿಗಣಿಸದೇ ಆಟೋವನ್ನು ಕಂಟ್ರೋಲ್ ಮಾಡದೇ ಹಂಪ್ಸ್ ಮೇಲೆ ಜೋರಾಗಿ ಹತ್ತಿಸಿದ್ದು, ಪರಿಣಾಮವಾಗಿ ಆಟೋ ಪಲ್ಟಿಯಾಗಿದೆ. ಈ ವೇಳೆ ಆಟೋದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಟೋ ಸಂಪೂರ್ಣ ಜಖಂ ಗೊಂಡಿದೆ ಎಂದು ತಿಳಿದುಬಂದಿದೆ.

ಬೆಂಗಳೂರು-ಪುಣೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಬೆಂಗಳೂರು, ತುಮಕೂರು, ಶಿರಾ, ಹಿರಿಯೂರು ಚಿತ್ರದುರ್ಗ, ದಾವಣಗೆರೆ, ಹರಿಹರ ಹಾವೇರಿ ಗದಗ ಮೂಲಕ ಪುಣೆ ತಲುಪಲಿದೆ. ಇಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ಹೈವೇ ರಸ್ತೆಯಾಗಿರುವುದರಿಂದ ವಾಹನಗಳು ಅತೀ ವೇಗವಾಗಿ ಸಂಚಾರ ಮಾಡುತ್ತವೆ.

ಆದರೆ ಇಷ್ಟು ದಿನ ಇಲ್ಲದ ಹಂಪ್ಸ್ ಈಗ ಯಾಕೆ ಹಳವಡಿಸಿದ್ದಾರೆ ಏನು ಎಂಬುದು ಗೊತ್ತಿಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ಜನಸಂದಣಿ ಇಲ್ಲದ ಕಡೆ ಹಂಪ್ಸ್ ಹಾಕಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಹಂಪ್ಸ್ ತೆರವುಗೊಳಿಸುವಂತೆ ವಾಹನ ಸವಾರರು ಆಗ್ರಹಿಸಿದ್ದಾರೆ. ಇನ್ನು ಆಟೋ ಅಪಘಾತ ಘಟನೆ ಐಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+