ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಜಿಕಲ್ ಸ್ಟ್ರೈಕ್: ಸುಳ್ಳಿನ ಸರಮಾಲೆ ಕಟ್ಟಿ ಕೊನೆಗೆ ಸತ್ಯ ಒಪ್ಪಿಕೊಂಡ ಪಾಕ್

|
Google Oneindia Kannada News

Recommended Video

Surgical Strike 2: ಸುಳ್ಳಿನ ಸರಮಾಲೆ ಕಟ್ಟಿ ಕೊನೆಗೆ ಸತ್ಯ ಒಪ್ಪಿಕೊಂಡ ಪಾಕ್ | Oneindia Kannada

ಇಸ್ಲಾಮಾಬಾದ್, ಫೆ 27: ಭಾರತದ ವಾಯುಸೇನೆ ನಡೆಸಿದ ದಾಳಿಯನ್ನು ಒಪ್ಪಿಕೊಳ್ಳಲಾಗದ ಪಾಕಿಸ್ತಾನದ ಮುಖಂಡರು, ಒಬ್ಬರ ಮೇಲೊಬ್ಬರು ಸುಳ್ಳಿನ ಸರಮಾಲೆಯನ್ನೇ ಕಟ್ಟುತ್ತಿದ್ದಾರೆ.

ವಿಚಿತ್ರವೆಂದರೆ, ಸುಳ್ಳು ಹೇಳಿದರೂ ನಂಬುವಂತಿರಬೇಕು ಎನ್ನುವ ಮಾತಿನಂತೆ ಅಲ್ಲಿನ ಜನತೆಯನ್ನು ನಂಬಿಸಲು ಮುಂದಾಗಿರುವ, ಪಾಕ್ ಪ್ರಧಾನಿ ಒಂದು ಸುಳ್ಳು, ವಿದೇಶಾಂಗ ಸಚಿವರು ಇನ್ನೊಂದು, ಪಾಕಿಸ್ತಾನದ ಆರ್ಮಿ ಮುಖ್ಯಸ್ಥ ಮಗದೊಂದು ಸುಳ್ಳನ್ನು ಹೇಳುತ್ತಿದ್ದಾರೆ.

ಭಾರತೀಯ ಏರ್‌ಸ್ಟ್ರೈಕ್‌ಗೆ ಪಾಕಿಸ್ತಾನ ಹೇಳಿದ್ದೇನು? ಭಾರತೀಯ ಏರ್‌ಸ್ಟ್ರೈಕ್‌ಗೆ ಪಾಕಿಸ್ತಾನ ಹೇಳಿದ್ದೇನು?

ದಾಳಿಯೇ ನಡೆದಿಲ್ಲ, ನಮ್ಮವರು ಭಾರತದ ಯುದ್ದವಿಮಾನವನ್ನು ಹಿಮ್ಮೆಟ್ಟಿಸಿದ್ದರು ಎಂದು ಹೇಳುತ್ತಿದ್ದ ಪಾಕಿಸ್ತಾನದ ರಕ್ಷಣಾ ಸಚಿವ ಪರ್ವೇಜ್ ಖಟ್ಟಕ್, ಮಾಧ್ಯಮದವರ ಪ್ರಶ್ನೆಗೆ ಆಯತಪ್ಪಿ ಸತ್ಯ ಒಪ್ಪಿಕೊಂಡು ಬೆಪ್ಪುತಕಡಿಯಂತಾಗಿದ್ದಾರೆ.

ಸರ್ಜಿಕಲ್ ಸ್ಟ್ರೈಕ್2 ಭಾರತೀಯ ಮಾಧ್ಯಮಗಳ ಭ್ರಮೆ: ಇಮ್ರಾನ್ ಖಾನ್ ಪಕ್ಷ ಸರ್ಜಿಕಲ್ ಸ್ಟ್ರೈಕ್2 ಭಾರತೀಯ ಮಾಧ್ಯಮಗಳ ಭ್ರಮೆ: ಇಮ್ರಾನ್ ಖಾನ್ ಪಕ್ಷ

ಭಾರತ ಸುಳ್ಳು ಹೇಳುತ್ತಿದೆ, ಅಂತರಾಷ್ಟ್ರೀಯ ಮಾಧ್ಯಮಗಳನ್ನು ಭಾರತ ದಾಳಿ ನಡೆಸಿದೆ ಎನ್ನುವ ಸ್ಥಳಕ್ಕೆ ಹೆಲಿಕಾಪ್ಟರ್ ನಲ್ಲಿ ಕರೆದುಕೊಂಡು ಹೋಗುತ್ತೇವೆ ಎಂದು ಪಾಕ್ ಸಚಿವರು ಹೇಳಿದ್ದರು.

ಪಾಕಿಸ್ತಾನ ದಾಳಿ ನಡೆದ ಬಗ್ಗೆ ಟ್ವಿಟ್ಟರ್ ಮೂಲಕ ಹೇಳಿತ್ತು

ಭಾರತ ಸರಕಾರ ಅಥವಾ ಸೇನೆ, ಸರ್ಜಿಕಲ್ ಸ್ಟ್ರೈಕ್ ನಡೆದ ಬಗ್ಗೆ ಹೇಳುವ ಮುನ್ನವೇ, ಪಾಕಿಸ್ತಾನ ದಾಳಿ ನಡೆದ ಬಗ್ಗೆ ಟ್ವಿಟ್ಟರ್ ಮೂಲಕ ಹೇಳಿತ್ತು. ಭಾರತ ಗಡಿರೇಖೆಯನ್ನು ದಾಟಿ ಬಂದಿತ್ತು, ಆದರೆ ನಮ್ಮ ವಾಯುಸೇನೆ ಅವರನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿತ್ತು ಎಂದು ಮೇಜರ್ ಜನರಲ್ ಆಸಿಫ್ ಗಫೂರ್ ಹೇಳಿದ್ದರು.

ಬಾಯಿತಪ್ಪಿ ಸತ್ಯ ಹೇಳಿ, ಬೆಪ್ಪುತಕಡಿಯಂತಾದ ಸಚಿವ

ಬಾಯಿತಪ್ಪಿ ಸತ್ಯ ಹೇಳಿ, ಬೆಪ್ಪುತಕಡಿಯಂತಾದ ಸಚಿವ

ಪಾಕಿಸ್ತಾನದ ಆರ್ಮಿ ಮುಖ್ಯಸ್ಥರ ಮಾತನ್ನೇ ಪುನರುಚ್ಚಿಸುತ್ತಾ ಬರುತ್ತಿದ್ದ ಪಾಕಿಸ್ತಾನದ ರಕ್ಷಣಾ ಸಚಿವ ಪರ್ವೇಜ್ ಖಟ್ಟಕ್ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಬಾಯಿತಪ್ಪಿ ಸತ್ಯ ಹೇಳಿ, ಬೆಪ್ಪುತಕಡಿಯಂತಾಗಿದ್ದಾರೆ. ಕತ್ತಲು ಇದ್ದಿದ್ದರಿಂದ ನಮ್ಮವರಿಗೆ ಗೊತ್ತಾಗಲಿಲ್ಲ ಎಂದು ಹೇಳಿದ್ದಾರೆ.

ಒಂದೂವರೆ ನಿಮಿಷದಲ್ಲಿ ಮುಗಿದ ಆ ಆಪರೇಷನ್ ಬಗ್ಗೆ ತಿಳಿಯಬೇಕಾದ 10 ಸಂಗತಿ ಒಂದೂವರೆ ನಿಮಿಷದಲ್ಲಿ ಮುಗಿದ ಆ ಆಪರೇಷನ್ ಬಗ್ಗೆ ತಿಳಿಯಬೇಕಾದ 10 ಸಂಗತಿ

ನಾಲ್ಕೈದು ಕಿಲೋಮೀಟರ್ ಒಳಗೆ ಬಂದ, ಭಾರತದ ವಾಯುಪಡೆ

ನಾಲ್ಕೈದು ಕಿಲೋಮೀಟರ್ ಒಳಗೆ ಬಂದ, ಭಾರತದ ವಾಯುಪಡೆ

ಬೆಳ್ಳಂಬೆಳಗ್ಗೆ, ನಸುಕಿನ ಕತ್ತಲಲ್ಲಿ, ನಮ್ಮ ಗಡಿರೇಖೆಯೊಳಗೆ ಸುಮಾರು ನಾಲ್ಕೈದು ಕಿಲೋಮೀಟರ್ ಒಳಗೆ ಬಂದ, ಭಾರತದ ವಾಯುಪಡೆ ಬಾಂಬ್ ದಾಳಿ ನಡೆಸಿತ್ತು. ನಮ್ಮ ಮಿಲಿಟರಿಯವರೂ ತಯಾರಾಗಿದ್ದರು, ಆದರೆ ಕತ್ತಲು ಇದ್ದಿದ್ದರಿಂದ ಅವರು ಸುಮ್ಮನಾದರು ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.

ಯಾವ ಮಟ್ಟಿಗೆ ನಷ್ಟವಾಗಿದೆ ಎನ್ನುವುದರ ಬಗ್ಗೆ ಗೊತ್ತಾಗಲಿಲ್ಲ

ಯಾವ ಮಟ್ಟಿಗೆ ನಷ್ಟವಾಗಿದೆ ಎನ್ನುವುದರ ಬಗ್ಗೆ ಗೊತ್ತಾಗಲಿಲ್ಲ

ಭಾರತ ದಾಳಿ ನಡೆಸಿದ ವೇಳೆ ಕತ್ತಲು ಕವಿದಿದ್ದರಿಂದ ಯಾವ ಮಟ್ಟಿಗೆ ನಷ್ಟವಾಗಿದೆ ಎನ್ನುವುದರ ಬಗ್ಗೆ ಗೊತ್ತಾಗಲಿಲ್ಲ. ಈಗ ನಮಗೆ ಸರಿಯಾದ ಮಾಹಿತಿ ಸಿಕ್ಕಿದೆ, ಸರಿಯಾದ ದಾರಿಯಲ್ಲಿ ಸಾಗಲು ಡೈರೆಕ್ಸನ್ ಕೂಡಾ ಸಿಕ್ಕಿದೆ ಎಂದು ಪಾಕ್ ರಕ್ಷಣಾ ಸಚಿವ ಪರ್ವೇಜ್ ಖಟ್ಟಕ್ ಸತ್ಯವನ್ನು ಒಪ್ಪಿಕೊಂಡಿದ್ದಾರೆ.

ಉಗ್ರರ ನೆಲೆಗಳನ್ನು ಸೇನೆ ಧ್ವಂಸ ಮಾಡಿದ್ದು ಹೇಗೆ? ರೋಚಕ ಮಾಹಿತಿಉಗ್ರರ ನೆಲೆಗಳನ್ನು ಸೇನೆ ಧ್ವಂಸ ಮಾಡಿದ್ದು ಹೇಗೆ? ರೋಚಕ ಮಾಹಿತಿ

ಸರ್ಜಿಕಲ್ ಸ್ಟ್ರೈಕ್ 2 ಬಾಲಿವುಡ್‌ನ ಅಡ್ಡಪರಿಣಾಮ

ಸರ್ಜಿಕಲ್ ಸ್ಟ್ರೈಕ್ 2 ಬಾಲಿವುಡ್‌ನ ಅಡ್ಡಪರಿಣಾಮ

ಪಾಕಿಸ್ತಾನದಲ್ಲಿ ಭಾರತ ಇಂದು ಮಾಡಿರುವ ಸರ್ಜಿಕಲ್ ಸ್ಟ್ರೈಕ್ 2 ಅನ್ನು ಬಾಲಿವುಡ್‌ನ ಅಡ್ಡಪರಿಣಾಮ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಲೇವಡಿ ಮಾಡಿದ್ದರು. ಪಾಕಿಸ್ತಾನದ ಮೇಲೆ ಭಾರತ ದಾಳಿ ನಡೆಸಿರುವುದನ್ನೇ ಸುಳ್ಳು ಎಂದು ಇಮ್ರಾನ್ ಹೇಳಿದ್ದರು.

ದಿನದ ಮುಖ್ಯ ಸುದ್ದಿ: ಭಾರತದ ಪ್ರತೀಕಾರ ಹೇಗಿತ್ತು? ಪಾಕ್ ಪ್ರತಿಕ್ರಿಯೆ ಹೇಗಿತ್ತು? ದಿನದ ಮುಖ್ಯ ಸುದ್ದಿ: ಭಾರತದ ಪ್ರತೀಕಾರ ಹೇಗಿತ್ತು? ಪಾಕ್ ಪ್ರತಿಕ್ರಿಯೆ ಹೇಗಿತ್ತು?

English summary
This attack took place in the morning. They came about 4-5 kms inside the border and threw a bomb. Our force was ready but because it was night we didn’t know the extent of damage, Pakistan Defence Minister Pervez Khattak.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X