ಈ ಬುಡಕಟ್ಟು ಮಹಿಳೆಯರು ಮೂರೇ ಸಲ ಜೀವನದಲ್ಲಿ ಸ್ನಾನ ಮಾಡೋದು, ಅಷ್ಟಕ್ಕೂ ದೇಹವನ್ನು ಅದ್ಹೇಗೆ ಕ್ಲೀನಾಗಿಟ್ಟುಕೊಳ್ತಾರೆ?

ಈ ಪ್ರಪಂಚದಲ್ಲಿ ನಾನಾ ರೀತಿಯ ಸಂಸ್ಕೃತಿಯ ಸೆಲೆಯಾಗಿದೆ. ಇದು ಸಾವಿರಾರು ಬುಡಕಟ್ಟು ಜನಾಂಗಗಳ ನೆಲೆಯೂ ಹೌದು.ಪ್ರತಿಯೊಂದೂ ಜನಾಂಗವೂ ತನ್ನದೇ ಆದ ಸಮೃದ್ಧ ಸಂಪ್ರದಾಯ ಮತ್ತು ಪರಂಪರೆಯನ್ನು ಹೊಂದಿದೆ.ತಂತ್ರಜ್ಞಾನ ಮತ್ತು ಆಧುನಿಕ ಸಮಾಜದ ವೇಗದ ಬೆಳವಣಿಗೆಯ ಹೊರತಾಗಿಯೂ, ಅನೇಕ ಬುಡಕಟ್ಟು ಸಮಾಜಗಳು ಇಂದಿಗೂ ತನ್ನದೇ ಹಳೆಯ ಪದ್ದತಿಗಳನ್ನು ಮುಂದುವರೆಸಿಕೊಂಡೇ ಬದುಕುತ್ತಿವೆ.ತಮ್ಮ ಪ್ರಾಚೀನ ಜೀವನ ಸಂಪ್ರದಾಯಗಳನ್ನು ಗಟ್ಟಿಯಾಗಿಯೇ ಹಿಡಿದಿಟ್ಟುಕೊಂಡಿವೆ.ಕೆಲವು ಬುಡಕಟ್ಟು ಸಮುದಾಯಗಳು, ತಮ್ಮದೇ ಆದ ವಿಚಿತ್ರ ಪದ್ಧತಿಗಳು ಮತ್ತು ಸಂಪ್ರದಾಯಗಳನ್ನು ತಮ್ಮ ಜೀವನ ವಿಧಾನದಲ್ಲಿ ಆಳವಾಗಿ ಬೇರೂರಿಸಿಕೊಂಡಿವೆ.

ಹಿಂಬಾ ಬುಡಕಟ್ಟು ಜನಾಂಗದಲ್ಲಿ ಸ್ನಾನ ನಿಷೇಧ:

ಅತ್ಯಂತ ಆಸಕ್ತಿದಾಯಕ ಬುಡಕಟ್ಟು ಜನಾಂಗವೆಂದರೆ ಹಿಂಬಾ. ಇದು ಆಫ್ರಿಕಾದ ಉತ್ತರ ನಮೀಬಿಯಾದ ಸ್ಥಳೀಯ ಅರೆ-ಅಲೆಮಾರಿ ಸಮುದಾಯ. ಹಿಂಬಾ ಜನರು ಶತಮಾನಗಳಿಂದಲೂ ಪ್ರತ್ಯೇಕವಾಗಿ ಬದುಕುತ್ತಿದ್ದಾರೆ. ತಮ್ಮ ವಿಶಿಷ್ಟ ಸಂಪ್ರದಾಯ ಮತ್ತು ಜೀವನ ವಿಧಾನವನ್ನು ಅನುಸರಿಸುತ್ತಿದ್ದಾರೆ. ಅವರ ಜೀವನ ವಿಧಾನದ ಅತ್ಯಂತ ಕುತೂಹಲಕಾರಿ ಅಂಶವೆಂದರೆ ನೈರ್ಮಲ್ಯ ಮತ್ತು ಸ್ವಯಂ ಶುಚಿತ್ವದ ಅವರ ವಿಚಿತ್ರ ಪರಿಕಲ್ಪನೆ. ಅವರ ಸಮುದಾಯದಲ್ಲಿ ಸ್ನಾನಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ.ಮಾನವರು ಪ್ರತಿದಿನ ಸ್ನಾನ ಮಾಡುವ ಪ್ರಸ್ತುತ ಪ್ರಪಂಚಕ್ಕಿಂತ ಭಿನ್ನವಾಗಿ, ಹಿಂಬಾ ಸಮುದಾಯದಲ್ಲಿ ಸ್ನಾನಕ್ಕೆ ನಿಷೇಧ. ಮಹಿಳೆಯರು ವಿಶೇಷವಾಗಿ ತಮ್ಮ ಜೀವಿತಾವಧಿಯಲ್ಲಿ ಒಮ್ಮೆ ಸ್ನಾನ ಮಾಡುತ್ತಾರೆ. ಅದು ಅವರ ಮದುವೆಯ ವೇಳೆ. ಈ ವಿಲಕ್ಷಣ ಅಭ್ಯಾಸವು ಇತರರಿಗೆ ಅನಾಗರಿಕವಾಗಿ ಕಂಡರೂ ಅವರ ಸಂಸ್ಕೃತಿಯ ಪ್ರಮುಖ ಭಾಗವಾಗಿದೆ.

Himba Tribe Women

ಸ್ನಾನ ಮಾಡದಿದ್ದರೂ ಶುಚಿಯಾಗಿಯೇ ಇರುತ್ತಾರೆ:

ಹಿಂಬಾಗಳು ಸ್ನಾನ ಮಾಡುವುದಿಲ್ಲ ಎಂದ ಮಾತ್ರಕ್ಕೆ ಶುಚಿಯಾಗಿರುವುದಿಲ್ಲ.ನೈರ್ಮಲ್ಯ ಕಾಪಾಡುವುದಿಲ್ಲ ಎಂದಲ್ಲ. ಇವರು ನೀರಿನ ಸ್ನಾನ ಮಾಡುವುದಿಲ್ಲ. ಬದಲಿಗೆ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಸಲುವಾಗಿ ಹೊಗೆ ಸ್ನಾನಕ್ಕೆ ಇವರಲ್ಲಿ ಆದ್ಯತೆ. ಹೊಗೆ ಸ್ನಾನದ ಮೂಲಕ ಕೀಟಗಳನ್ನು ನಿವಾರಿಸಲು ವಿಶೇಷ ಗಿಡಮೂಲಿಕೆಗಳನ್ನು ಸುಡುತ್ತಾರೆ. ಈ ಗಿಡಮೂಲಕೆಗಳಿಂದ ಹೊರ ಹೊಮ್ಮುವ ಹೊಗೆಯನ್ನು ಸ್ನಾನಕ್ಕೆ ಬಳಸುತ್ತಾರೆ. ಹೊಗೆ ಸ್ನಾನದ ಜೊತೆಗೆ, ಬೇಯಿಸಿದ ಸಸ್ಯಗಳಿಂದ ಮಾಡಿದ ಉಗಿ ಸ್ನಾನವನ್ನು ಹಿಂಬಾ ಮಹಿಳೆಯರು ಶುದ್ಧೀಕರಣ ಆಚರಣೆಯಾಗಿ ಬಳಸುತ್ತಾರೆ. ಇದು ಆರೋಗ್ಯಕರ ಮಾತ್ರವಲ್ಲದೆ ದೇಹದ ವಾಸನೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

ಸೆಲೆಬ್ರಿಟಿಯಾಗಿದ್ದೂ ಫೋನ್, ಸೊಶಿಯಲ್‌ ಮಿಡಿಯಾ ಇಲ್ಲದೆ ಬೆಳೆದ ಆರಾಧ್ಯ:ಐಶ್ವರ್ಯಾ ರೈಯಿಂದ ಕಲಿಯಬೇಕಾದ ಪೇರೆಂಟಿಂಗ್ ಟಿಪ್ಸ್‌ ಇಲ್ಲ
ಸೆಲೆಬ್ರಿಟಿಯಾಗಿದ್ದೂ ಫೋನ್, ಸೊಶಿಯಲ್‌ ಮಿಡಿಯಾ ಇಲ್ಲದೆ ಬೆಳೆದ ಆರಾಧ್ಯ:ಐಶ್ವರ್ಯಾ ರೈಯಿಂದ ಕಲಿಯಬೇಕಾದ ಪೇರೆಂಟಿಂಗ್ ಟಿಪ್ಸ್‌ ಇಲ್ಲ

ಹಿಂಬಾ ಬುಡಕಟ್ಟು ಮಹಿಳೆಯರ ಸೌಂದರ್ಯದ ಗುಟ್ಟು:

ಹಿಂಬಾ ಮಹಿಳೆಯರನ್ನು ಅತ್ಯಂತ ಸುಂದರ ಆಫ್ರಿಕನ್ನರು ಎಂದು ವರ್ಗೀಕರಿಸಲಾಗಿದೆ. ಅವರ ಆಕರ್ಷಣೆಯ ಅತ್ಯಂತ ಅಸಾಂಪ್ರದಾಯಿಕ ಅಂಶವೆಂದರೆ ಕೂದಲು ಮತ್ತು ಚರ್ಮಕ್ಕೆ ವಿಚಿತ್ರವಾದ ಕೆಂಪು ಪೇಸ್ಟ್ ಅನ್ನು ಅನ್ವಯಿಸುವುದು.ಇದು ಬೆಣ್ಣೆ ಕೊಬ್ಬು ಮತ್ತು ಪರಿಮಳಯುಕ್ತ ಗಿಡಮೂಲಿಕೆಗಳ ಮಿಶ್ರಣದಿಂದ ತಯಾರಿಸಿದ ಪೇಸ್ಟ್ ಆಗಿದೆ. ಇದು ಸೌಂದರ್ಯವರ್ಧಕವಾಗಿ ಉಪಯುಕ್ತವಾಗಿದೆ. ಈ ಕೆಂಪು ಬಣ್ಣವು ಅವರ ಚರ್ಮವನ್ನು ಬಲವಾದ ಸೂರ್ಯನಿಂದ ರಕ್ಷಿಸುತ್ತದೆ ಮತ್ತು ಕೀಟಗಳನ್ನು ದೂರವಿಡುತ್ತದೆ. ಹಿಂಬಾ ಮಹಿಳೆಯರು ತಾಮ್ರ, ಸೀಶೆಲ್ ಮತ್ತು ಇತರ ನೈಸರ್ಗಿಕ ವಸ್ತುಗಳ ತುಣುಕುಗಳಿಂದ ಕೂಡಿದ ಸಂಕೀರ್ಣ ಆಭರಣಗಳನ್ನು ಧರಿಸುತ್ತಾರೆ. ಈ ತುಣುಕುಗಳು ಸೌಂದರ್ಯ, ಸ್ಥಾನಮಾನ ಮತ್ತು ಬುಡಕಟ್ಟು ಸದಸ್ಯತ್ವವನ್ನು ಸಂಕೇತಿಸುತ್ತವೆ.

ಹಿಂಬಾ ಬುಡಕಟ್ಟು ಸಂಸ್ಕೃತಿ ಮತ್ತು ಸಂಪ್ರದಾಯಗಳು:

ಹಿಂಬಾ ಜನರು ಪ್ರಕೃತಿಯೊಂದಿಗೆ ಆಳವಾದ ನಂಟು ಹೊಂದಿದ್ದಾರೆ. ಅದು ಅವರ ಅಸ್ತಿತ್ವದ ಮೂಲವಾಗಿದೆ. ಹಿಂಬಾ ಜನರು ಕೃಷಿ, ಜಾನುವಾರು ಸಾಕಣೆ ಮತ್ತು ಬೇಟೆಯಲ್ಲಿ ಪರಿಣಿತರು. ಅವರು ವಿಶ್ವದ ಅತ್ಯಂತ ಒಣ ಪ್ರದೇಶಗಳಲ್ಲಿ ವಾಸಿಸಬೇಕಾಗಿರುವುದರಿಂದ, ತಮ್ಮ ಭೌಗೋಳಿಕ ಜ್ಞಾನವನ್ನು ಬಳಸಿಕೊಳ್ಳುತ್ತಾರೆ. ಅವರ ಮುಖ್ಯ ಆಹಾರವೆಂದರೆ ರಾಗಿ ಅಥವಾ ಜೋಳದಿಂದ ಮಾಡಿದ ಗಂಜಿ. ಇದನ್ನು ಅವರು ಪ್ರತಿ ಊಟದೊಂದಿಗೆ ಸೇವಿಸುತ್ತಾರೆ. ಅವರು ಮದುವೆಯಾದಾಗ, ಆಚರಿಸುವ ಹಬ್ಬದ ವೇಳೆ ಮಾತ್ರ ಮಾಂಸವನ್ನು ತಿನ್ನುತ್ತಾರೆ. ದನಗಳು ಹಿಂಬಾ ಬುಡಕಟ್ಟು ಜನಾಂಗದವರ ಆರ್ಥಿಕ ಮತ್ತು ಸಾಂಸ್ಕೃತಿಕ ಬೆನ್ನೆಲುಬಾಗಿವೆ. ಅವು ಬುಡಕಟ್ಟಿನ ಸಂಪತ್ತು ಮತ್ತು ಸಾಮಾಜಿಕ ಸ್ಥಾನಮಾನದ ಅತಿದೊಡ್ಡ ಮೂಲವಾಗಿದೆ.

ತಪ್ಪು ಮಾಡಿದಾಗ ಕೂಗಾಡುವುದರಿಂದ ಮಕ್ಕಳು ಸರಿದಾರಿಗೆ ಬರುವರೇ? ಮಾತು ಮಗುವಿನ ಮನಮುಟ್ಟುವಂತೆ ಮಾಡುವುದು ಹೇಗೆ?
ತಪ್ಪು ಮಾಡಿದಾಗ ಕೂಗಾಡುವುದರಿಂದ ಮಕ್ಕಳು ಸರಿದಾರಿಗೆ ಬರುವರೇ? ಮಾತು ಮಗುವಿನ ಮನಮುಟ್ಟುವಂತೆ ಮಾಡುವುದು ಹೇಗೆ?

ಹಿಂಬಾ ಸಮುದಾಯದಲ್ಲಿ ಮಹಿಳೆಯರ ಪಾತ್ರ:

ಇಲ್ಲಿ ಹಿಂಬಾ ಮಹಿಳೆಯರು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಾರೆ. ಪ್ರಾಣಿಗಳನ್ನು ನೋಡಿಕೊಳ್ಳುವುದು. ಹಸುಗಳ ಹಾಲು ಕರೆಯುವುದು ಮುಂತಾದ ಕೆಲಸಗಳನ್ನು ಮಹಿಳೆಯರೇ ಮಾಡುತ್ತಾರೆ. ಇದು ಬುಡಕಟ್ಟು ಜನಾಂಗವನ್ನು ಜೀವಂತವಾಗಿಡುವ ಪ್ರಮುಖ ಚಟುವಟಿಕೆಯಾಗಿದೆ. ಸಮಾಜದಲ್ಲಿ ಒಬ್ಬರ ಸ್ಥಾನವನ್ನು ವ್ಯಾಖ್ಯಾನಿಸುವಲ್ಲಿ ಹಸುಗಳು ಮುಖ್ಯ ಪಾತ್ರ ವಹಿಸುತ್ತದೆ. ಹಸುಗಳಿಲ್ಲ ಎಂದಾದರೆ ಅವರಿಗೆ ಸಮಾಜದಲ್ಲಿ ಗೌರವವೂ ಇರುವುದಿಲ್ಲ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+