Bengaluru Metro: ಚುನಾವಣೆಗಾಗಿ ಮೆಟ್ರೋ ಸೇವೆ ವಿಸ್ತರಣೆ, ಗಮನಿಸಿ
ಬೆಂಗಳೂರು, ಏಪ್ರಿಲ್ 24: ಕರ್ನಾಟಕ ರಾಜ್ಯದಲ್ಲಿ ಮೊದಲ ಹಂತದಲ್ಲಿ ಒಟ್ಟು 14 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಈ ಸಂಬಂಧ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮೆಟ್ರೋ ಸೇವೆಯ ಸಮಯ ವಿಸ್ತರಣೆ ಮಾಡಿದೆ.
ಇದೇ ಏಪ್ರಿಲ್ 26ರಂದು ಲೋಕಸಭಾ ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಅಂದು ನಮ್ಮ ಮೆಟ್ರೋ ಸೇವೆಯನ್ನು ವಿಸ್ತರಣೆ ಮಾಡಿದೆ. ನಗರದ ಎಲ್ಲಾ ನಾಲ್ಕು ಟರ್ಮಿನಲ್ ಅಂದರೆ, ನಾಗಸಂದ್ರ, ರೇಷ್ಮೆ ಸಂಸ್ಥೆ, ಚಲ್ಲಘಟ್ಟ, ವೈಟ್ ಫೀಲ್ಡ್ (ಕಾಡುಗೋಡಿ) ನಿಲ್ದಾಣಗಳಿಂದ ಕೊನೆಯ ರೈಲು ಸೇವೆಯನ್ನು ರಾತ್ರಿ 23.55ರವರೆಗೆ (11.55pm) ವಿಸ್ತರಣೆ ಮಾಡಲಾಗಿದೆ.

ಕೊನೆಯ ಮೆಟ್ರೋ ತಲುಪುವ ಸಮಯ
ಈ ಕುರಿತು ನಮ್ಮ ಮೆಟ್ರೋ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾಹಿತಿ ನೀಡಿದ್ದಾರೆ. ನಗರದ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಿಂದ ಎಲ್ಲಾ ನಾಲ್ಕು ದಿಕ್ಕುಗಳಿಗೆ ಕೊನೆಯ ರೈಲು ದಿನಾಂಕ ಏಪ್ರಿಲ್ 27 ರಂದು ಬೆಳಗ್ಗೆ ಮಧ್ಯರಾತ್ರಿ 00.35 ಗಂಟೆಗೆ (ಮಧ್ಯರಾತ್ರಿ 12.35) ತಲುಪಲಿವೆ ಎಂದು ತಿಳಿಸಲಾಗಿದೆ.
ಈ ಮೂಲಕ ಚುನಾವಣೆ ವೇಳೆ ಬರುವವರಿಗೆ, ಹೋಗುವವರಿಗೆ, ಅಧಿಕಾರಿಗಳಿಗೆ ಅನುಕೂಲ ಆಗುವಂತೆ ನಮ್ಮ ಮೆಟ್ರೋ ಸೇವೆಯನ್ನು ವಿಸ್ತರಣೆ ಮಾಡಿದೆ. ಈ ಹಿಂದೆ ಬೆಂಗಳೂರಿನಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಾವಳಿಗಾಗಿ ಮೆಟ್ರೋ ಸೇವೆ ವಿಸ್ತರಣೆ ಮಾಡಿತ್ತು.

ವಿಶೇಷ ದಿನಗಳಲ್ಲಿ ಮೆಟ್ರೋ ವಿಸ್ತರಣೆ
ಏಪ್ರಿಲ್ ಕೊನೆ ವಾರದಿಂದ ಮೇ ಎರಡನೇ ವಾರದಲ್ಲಿ ಐಪಿಎಲ್ ಪಂದ್ಯಾವಳಿ ಇರುವ ದಿನದಂದು ರಾತ್ರಿ ಮೆಟ್ರೋ ಸೇವೆಯಲ್ಲಿ ವಿಸ್ತರಣೆ ಮಾಡಿತ್ತು. ಅಲ್ಲದೇ ಎಂಜಿ ರಸ್ತೆಯ ನಿಲ್ದಾಣ ಭಾಗದಲ್ಲಿ ಪೇಪರ್ ಟಿಕೆಟ್ ಸೌಲಭ್ಯ ಕಲ್ಪಿಸಿರುವುದಾಗಿ BMRCL ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದರು.
ಬೆಂಗಳೂರಿನಲ್ಲಿ ಗಣರಾಜ್ಯೋತ್ಸವ, ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ ಸೇರಿದಂತೆ ಇನ್ನಿತರ ಮಹತ್ವದ ದಿನಗಳಲ್ಲಿ ನಮ್ಮ ಮೆಟ್ರೋ ಸೇವೆಯನ್ನು ಬೆಳಗ್ಗೆ ಬೇಗೆ ಆರಂಭಿಸಿರುತ್ತದೆ. ಇಲ್ಲವೇ ರಾತ್ರಿ ವೇಳೆ ಹೆಚ್ಚು ಹೊತ್ತು ಸೇವೆ ಲಭ್ಯವಾಗುವಂತೆ ಮೆಟ್ರೋ ಸಂಚಾರದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.
ಈ ಮೇಲಿನ ಹೇಳಿಕೆ ಮುಂದುವರಿದು ಸಾರ್ವಜನಿಕರ ಬೇಡಿಕೆಯ ಮೇರೆಗೆ ನಾಗಸಂದ್ರ, ರೇಷ್ಮೆ ಸಂಸ್ಥೆ, ಚಲಘಟ್ಟ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ನಾಲ್ಕು ಟರ್ಮಿನಲ್‌ಗಳಿಂದ ಕೊನೆಯ ರೈಲನ್ನು ನಾಳೆ ಶನಿವಾರ (ಏ.27) ರಂದು ಮಧ್ಯ ರಾತ್ರಿ 00.15 ಗಂಟೆಯವರೆಗೆ ಮತ್ತು ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಿಂದ ಮಧ್ಯರಾತ್ರಿ 01 ಗಂಟೆವರೆಗೆ ವಿಸ್ತರಿಸಲಾಗಿದೆ.












Click it and Unblock the Notifications