ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking News: ಕಾಬೂಲ್‌ನಲ್ಲಿ ಯುಎಸ್ ಎಚ್ಚರಿಕೆ ನಡುವೆ ಮತ್ತೊಂದು ಸ್ಫೋಟ

|
Google Oneindia Kannada News

ಕಾಬೂಲ್, ಆಗಸ್ಟ್ 29: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಮತ್ತೊಂದು ಉಗ್ರರ ದಾಳಿ ನಡೆಸುವ ಅಪಾಯವಿದೆ ಎಂದು ಯುನೈಟೆಡ್ ಸ್ಟೇಟ್ಸ್ ನೀಡಿದ ಎಚ್ಚರಿಕೆ ನಡುವೆಯೂ ಭಾನುವಾರ ಭಾರಿ ಸ್ಫೋಟದ ಸದ್ದು ಕೇಳಿ ಬಂದಿದೆ ಎಂದು ಎಎಫ್ ಪಿ ವರದಿ ಮಾಡಿದೆ.

"ರಾಕೆಟ್ ಒಂದು ಮನೆಯ ಕಟ್ಟಡಕ್ಕೆ ಹೊಡೆದಿರುವುದರಿಂದ ಈ ಸದ್ದು ಕೇಳಿ ಬಂದಿದೆ," ಎಂದು ಇತ್ತೀಚಿಗೆ ಸರ್ಕಾರ ಪದಚ್ಯುತಿಗೊಳಿಸಿದ ಭದ್ರತಾ ಅಧಿಕಾರಿಯೊಬ್ಬರು ನೀಡಿದ ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ರಾಕೆಟ್ ದಾಳಿಯಲ್ಲಿ ಒಂದು ಮಗು ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ಗುರುವಾರ ನಡೆದ ಆತ್ಮಾಹುತಿ ಬಾಂಬ್ ದಾಳಿ ಮರುದಿನವಾದ ಶುಕ್ರವಾರವೇ ಯುಎಸ್ ಸೇನೆಯು ತನ್ನ ಪ್ರಜೆಗಳ ಸ್ಥಳಾಂತರ ಚಟುವಟಿಕೆಗಳನ್ನು ಮತ್ತಷ್ಟು ಚುರುಕುಗೊಳಿಸಿತ್ತು. ಆಗಸ್ಟ್ 31ರೊಳಗೆ ಯುಎಸ್ ಸೇನೆಯು ಅಫ್ಘಾನಿಸ್ತಾನದಿಂದ ಜಾಗ ಖಾಲಿ ಮಾಡುವಂತೆ ತಾಲಿಬಾನ್ ಉಗ್ರರು ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯೆ ಆಗಸ್ಟ್ 31ರೊಳಗೆ ಮತ್ತೊಂದು ಬಾರಿ ಸ್ಫೋಟ ಅಥವಾ ಗುಂಡಿನ ದಾಳಿ ನಡೆಯುವ ಅಪಾಯವಿದೆ ಎಂದು ಯುಎಸ್ ಅನುಮಾನ ವ್ಯಕ್ತಪಡಿಸಿದೆ.

Afghanistan: Blast Sound heard Near Kabul Airport Amid Another Attack Alert: Reports

ಕಾಬೂಲ್ ಏರ್‌ಪೋರ್ಟ್‌ನಲ್ಲಿ ಬಾಂಬ್ ಸ್ಫೋಟ:

ಹಮೀದ್ ಕರ್ಜಾಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಗೇಟ್ ಬಳಿ ಗುರುವಾರ ನಡೆದ ಸರಣಿ ಬಾಂಬ್ ಸ್ಫೋಟದ ಮರುದಿನವೇ ಪರಿಸ್ಥಿತಿಯ ಮೊದಲಿನಂತೆ ಆಗಿದೆ. ಸಾವಿರಾರು ಸಂಖ್ಯೆ ಜನರು ಏರ್‌ಪೋರ್ಟ್‌ ಗೇಟ್ ಬಳಿ ಸ್ಥಳಾಂತರದ ನಿರೀಕ್ಷೆಯಲ್ಲಿ ಸೇನಾ ವಿಮಾನಗಳತ್ತ ಮುಖ ಮಾಡಿ ನಿಂತಿದ್ದಾರೆ. ಗುರುವಾರ ರಾತ್ರಿ 9 ಗಂಟೆ ವೇಳೆಗೆ ಸಂಭವಿಸಿದ ಎರಡು ಸರಣಿ ಬಾಂಬ್ ಸ್ಫೋಟದ ಕರಿಛಾಯೆ ಮರೆಯಾಗುವ ಹೊತ್ತಿಗೆ ಏರ್‌ಪೋರ್ಟ್‌ನಲ್ಲಿ ನೂರಾರು ಜನರ ನೆತ್ತರು ಹರಿದಿತ್ತು. ಎರಡು ಸ್ಫೋಟದಲ್ಲಿ ಈವರೆಗೂ ಮೃತಪಟ್ಟವರ ಸಂಖ್ಯೆ 100 ಗಡಿ ದಾಟಿದ್ದು, 150ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸ್ಥಳಾಂತರ ಕಾರ್ಯಾಚರಣೆ ನಡೆಸುತ್ತಿದ್ದ 13 ಯುಎಸ್ ಸೇನಾ ಸಿಬ್ಬಂದಿ ಸಹ ಪ್ರಾಣ ಬಿಟ್ಟಿರುವುದು ಗೊತ್ತಾಗಿದೆ.

English summary
Afghanistan: Blast Sound heard Near Kabul Airport Amid Another Attack Alert: Reports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X