• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಅಫ್ಘಾನ್ ಶಾಲೆಯಲ್ಲಿ ಆತ್ಮಹತ್ಯಾ ಬಾಂಬ್ ದಾಳಿ: 19 ಬಲಿ

|
Google Oneindia Kannada News

ಕಾಬೂಲ್, ಸೆ. 30: ಅಫ್ಘಾನಿಸ್ತಾನ ರಾಜಧಾನಿ ನಗರಿಯಲ್ಲಿ ಶುಕ್ರವಾರ ಆತ್ಮಹತ್ಯಾ ಬಾಂಬ್ ದಾಳಿ ಘಟನೆ ಸಂಭವಿಸಿದ್ದು, ಈ ದುರಂತದಲ್ಲಿ 19 ಮಂದಿ ಬಲಿಯಾಗಿದ್ದಾರೆ ಎಂದು ಕಾಬೂಲ್ ನಗರದ ಪೊಲೀಸ್ ಇಲಾಖೆಯ ವಕ್ತಾರರೊಬ್ಬರು ಮಾಹಿತಿ ನೀಡಿದ್ಧಾರೆ.

ಕಾಬೂಲ್‌ನ ಶಿಯಾ ಸಮುದಾಯದವರು ಹೆಚ್ಚು ಇರುವ ದಶ್ತಿ ಬಾರ್ಚಿ ಎಂಬ ಸ್ಥಳದ ಶಾಲೆಯೊಂದರ ಬಳಿ ಶುಕ್ರವಾರ ಬೆಳಗ್ಗೆ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ತಾಲಿಬಾನ್ ಪೊಲೀಸ್ ವಕ್ತಾರ ಖಾಲಿದ್ ಜದ್ರಾನ್ ಹೇಳಿದ್ದಾರೆ.

'ಭಾರತದೊಂದಿಗೆ ಉದ್ವಿಗ್ನ ಸ್ಥಿತಿ ಸಮಾಪ್ತಿ'- ತಿಪ್ಪೆ ಸಾರಿಸುತ್ತಿದೆಯಾ ಚೀನಾ?'ಭಾರತದೊಂದಿಗೆ ಉದ್ವಿಗ್ನ ಸ್ಥಿತಿ ಸಮಾಪ್ತಿ'- ತಿಪ್ಪೆ ಸಾರಿಸುತ್ತಿದೆಯಾ ಚೀನಾ?

ಈ ದಾಳಿ ಘಟನೆಗೆ ಯಾರು ಕಾರಣ ಎಂಬುದು ಗೊತ್ತಾಗಿಲ್ಲ. ಯಾವ ಸಂಘಟನೆಯೂ ದಾಳಿಯ ಹೊಣೆ ಹೊತ್ತಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯಲ್ಲಿ 27 ಮಂದಿ ಕೂಡ ಗಾಯಗೊಂಡಿದ್ದಾರೆ. ಸತ್ತವರಲ್ಲಿ ಬಹುತೇಕರು ವಿದ್ಯಾರ್ಥಿಗಳೇ ಆಗಿದ್ದಾರೆ.

ದಶ್ತಿ ಬಾರ್ಚಿಯಲ್ಲಿ ಈ ಹಿಂದೆಯೂ ಇಂಥ ಬಾಂಬ್ ದಾಳಿ ಘಟನೆಗಳಾಗಿದ್ದವು. ತಾಲಿಬಾನ್ ಆಡಳಿತಕ್ಕೆ ಬಂದ ಬಳಿಕ ಆಫ್ಘಾನಿಸ್ತಾನದ ವಿವಿಧೆಡೆ ಆಗಾಗ್ಗೆ ದಾಳಿಗಳಾಗುತ್ತಿವೆ. ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯವರು ಹೆಚ್ಚಿನ ದಾಳಿ ಮಾಡಿದ್ದಾರೆ.

ದಶ್ತಿ ಬಾರ್ಚಿಯಲ್ಲಿ ಶಿಯಾ ಮುಸ್ಲಿಂ ಪಂಥಕ್ಕೆ ಸೇರಿದ ಹಜಾರ ಸಮುದಾಯದವರು ಹೆಚ್ಚಿದ್ದಾರೆ. ಇದೇ ಸಮುದಾಯವನ್ನು ಗುರಿಯಾಗಿಸಿ ಐಸಿಸ್ ಹಿಂದೆ ಕೆಲ ಬಾಂಬ್ ದಾಳಿಗಳನ್ನು ಮಾಡಿದ್ದುಂಟು.

17 ವರ್ಷದ ನಂತರ ಹಾಜಿ ಬಷೀರ್ ಬಿಡುಗಡೆ: ಭಾರತಕ್ಕೆ ತಲೆನೋವು17 ವರ್ಷದ ನಂತರ ಹಾಜಿ ಬಷೀರ್ ಬಿಡುಗಡೆ: ಭಾರತಕ್ಕೆ ತಲೆನೋವು

ಅಫ್ಘಾನಿಸ್ತಾನದಲ್ಲಿ ಹಜಾರ ಸಮುದಾಯದ ಮೇಲೆ ಐಸಿಸ್ ಮಾತ್ರವಲ್ಲ, ತಾಲಿಬಾನ್ ಸಂಘಟನೆ ಕೂಡ ಗುರಿಯಾಗಿಸಿ ದಾಳಿ ಮಾಡಿದ್ದಿದೆ. ಅದರಲ್ಲೂ ದಶ್ತ್-ಎ-ಬಾರ್ಚಿ ಪ್ರದೇಶದಲ್ಲಂತೂ ಇತ್ತೀಚಿನ ವರ್ಷಗಳಲ್ಲಿ ಬಹಳ ಭೀಕರ ರಕ್ತಪಾತಗಳಾಗಿವೆ.

Suicide Bomb Attack On Kabul School; 19 Killed

ತಾಲಿಬಾನ್ ಆಡಳಿತಕ್ಕೆ ಬರುವ ಮುನ್ನ ಇದೇ ದಶ್ತ್ ಎ ಬಾರ್ಚಿಯಲ್ಲಿನ ಇನ್ನೊಂದು ಶಾಲೆಯ ಮೇಲೆ ಉಗ್ರರು ದಾಳಿ ಮಾಡಿದ್ದರು. ಆ ಘಟನೆಯಲ್ಲಿ ೮೫ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದರು. ಅವರಲ್ಲಿ ಹೆಚ್ಚಿನವರು ವಿದ್ಯಾರ್ಥಿನಿಯರೇ ಆಗಿದ್ದರು. ಮೂರು ಬಾಂಬ್‌ಗಳು ಸ್ಫೋಟಗೊಂಡು ಸಂಭವಿಸಿದ ಆ ದುರಂತದಲ್ಲಿ 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

2020ರಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯು ಇದೇ ಪ್ರದೇಶದ ಬೇರೊಂದು ಶಾಲೆ ಮೇಲೆ ದಾಳಿ ಮಾಡಿ 24 ಮಕ್ಕಳನ್ನು ಕೊಂದು ಹಾಕಿತ್ತು. ಕಳೆದ ಮೂರ್ನಾಲ್ಕು ವರ್ಷದಲ್ಲಿ ದಶ್ತ್-ಎ-ಬಾರ್ಚಿಯಲ್ಲಿ ಶಾಲೆಗಳನ್ನು ಗುರಿಯಾಗಿಸಿ ಏಳೆಂಟು ಬಾರಿ ಬಾಂಬ್ ದಾಳಿಗಳಾಗಿರುವುದು ತಿಳಿದುಬಂದಿದೆ.

ಶಾಲೆಗಳೇ ಯಾಕೆ ಟಾರ್ಗೆಟ್?
ಹಿಂದೆ ಪಾಕಿಸ್ತಾನದ ಪೇಶಾವರದ ಮಿಲಿಟರಿ ಶಾಲೆಯೊಂದರಲ್ಲಿ ತಾಲಿಬಾನ್ ಉಗ್ರ ಸಂಘಟನೆಯವರು ದಾಳಿ ಮಾಡಿ ನೂರಾರು ಮಕ್ಕಳನ್ನು ಕೊಂದು ಹಾಕಿದ್ದರು. ಹೆಣ್ಮಕ್ಕಳು ಶಾಲೆಗೆ ಹೋಗಿ ಕಲಿಯುವುದನ್ನು ತಾಲಿಬಾನ್ ಹಾಗೂ ಇತರ ಉಗ್ರ ಸಂಘಟನೆಗಳು ವಿರೋಧಿಸುತ್ತವೆ. ಅಫ್ಘಾನಿಸ್ತಾನದಲ್ಲಿ ಹೆಣ್ಮಕ್ಕಳ ವಿದ್ಯಾಭ್ಯಾಸಕ್ಕೆ ಅಡಚಣೆ ಇದೆ. ಆದರೆ ಹಜಾರ ಸಮುದಾಯದವರಿರುವ ಪ್ರದೇಶಗಳಲ್ಲಿನ ಶಾಲೆಗಳಲ್ಲಿ ಹೆಣ್ಮಕ್ಕಳ ಶಿಕ್ಷಣಕ್ಕೆ ಅವಕಾಶ ಇದೆ. ಹೀಗಾಗಿ, ಅಲ್ಲಿನ ಶಾಲೆಗಳ ಮೇಲೆ ಉಗ್ರರು ಪದೇ ಪದೇ ದಾಳಿ ನಡೆಸುತ್ತಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಡಳಿತಾರೂಢ ತಾಲಿಬಾನ್ ಸಂಘಟನೆಯೇ ಹಜಾರಾ ಸಮುದಾಯವನ್ನು ಗುರಿಯಾಗಿಸಿ ದಾಳಿಗಳಿಗೆ ನೆರವು ಮಾಡುತ್ತಿದೆ ಎಂಬ ಆರೋಪಗಳಿವೆ.

(ಒನ್ಇಂಡಿಯಾ ಸುದ್ದಿ)

English summary
Terrorist have conducted suicide bomb blast at a school in Kabul, killing 19 students and injuring more than 29 people. This happened at Dasht-e-Barchi area which suffered several blasts in recent years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X