BMTC: 3 ನಿಲ್ದಾಣಗಳಿಂದ ಮೆಟ್ರೋ ಫೀಡರ್ ಬಸ್ ಸೇವೆ ಆರಂಭ: ಸಂಚಾರ ಮಾರ್ಗ, ಸಮಯ

ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೋ ಜಾಲವು ವಿಸ್ತರಣೆ ಆಗುತ್ತಿದೆ. ದಿನೇ ದಿನೇ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಅವರ ಸಂಚಾರಕ್ಕೆ ಅನುಕೂಲವಾಗುಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) ಮೆಟ್ರೋ ಫೀಡರ್ ಬಸ್‌ ಸೇವೆಗಳನ್ನು ಹೊಸ ಮಾರ್ಗ, ಮೆಟ್ರೋ ನಿಲ್ದಾಣಗಳ ವ್ಯಾಪ್ತಿಯಲ್ಲಿ ಆರಂಭಿಸಿದೆ. ಇದೀಗ ನಮ್ಮ ಮೆಟ್ರೋ ಹಳದಿ ಮಾರ್ಗದ 03 ನಿಲ್ದಾಣಗಳ ಸವಾರರಿಗೆ ನೆರವಾಗುವಂತೆ ಬಿಎಂಟಿಸಿ ಬಸ್ ಸೇವೆ ಶುರುವಾಗಿದೆ. ಬಸ್ ಮಾರ್ಗ, ಸಮಯ ವಿವರ ಇಲ್ಲಿದೆ.

ನಮ್ಮ ಮೆಟ್ರೋ ಹೊಸ ರಸ್ತೆ, ಸಿಂಗಸಂದ್ರ ಹಾಗೂ ಕುಡ್ಲು ಗೇಟ್ ಮೆಟ್ರೋ ನಿಲ್ದಾಣಗಳಿಗೆ ಬಿಎಂಟಿಸಿ ಮೆಟ್ರೋ ಫೀಡ‌ರ್ ಬಸ್ ಸೇವೆಗಳು ಆರಂಭವಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ವತಿಯಿಂದ ರಾಷ್ಟ್ರೀಯ ವಿದ್ಯಾಲಯ ರಸ್ತೆ-ಬೊಮ್ಮಸಂದ್ರ ವರೆಗಿನ ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚಾರ ಈಗಾಗಲೇ ಆರಂಭವಾಗಿದೆ. ಇಲ್ಲಿ ಮೆಟ್ರೋ ರೈಲುಗಳ ಸಂಖ್ಯೆ ಹೆಚ್ಚಾಗಿದ್ದು, ಪ್ರಯಾಣಿಕರ ಸಂಚಾರ ಸಹ ಏರಿಕೆ ಆಗುತ್ತಿದೆ.

BMTC Launches Metro Feeder Bus

ಮೆಟ್ರೋ ಪ್ರಯಾಣಿಕರಿಗೆ ಸುಗಮವಾದ ಮೊದಲ ಹಾಗೂ ಕೊನೆಯ ಮೈಲಿ ಸಂಪರ್ಕ ಕಲ್ಪಿಸುವ ಸದುದ್ದೇಶದಿಂದ ಬಿಎಂಟಿಸಿ ಮೆಟ್ರೋ ಫೀಡರ್‌ ಬಸ್‌ಗಳ ಸೇವೆ ಆರಂಭಿಸಿದೆ. ಈ ಹಿಂದೆ ಒಂದಷ್ಟು ಮಾರ್ಗಗಳಲ್ಲಿ ಬಸ್‌ ಸಂಚಾರ ಶುರುವಾಗಿತ್ತು. ಇದೀಗ ಹೊಸ ರಸ್ತೆ, ಸಿಂಗಸಂದ್ರ ಹಾಗೂ ಕುಡ್ಲು ಗೇಟ್ ಮೆಟ್ರೋ ನಿಲ್ದಾಣಗಳನ್ನು ಸುತ್ತಮುತ್ತಲಿನ ವಸತಿ ಮತ್ತು ವಾಣಿಜ್ಯ ಪ್ರದೇಶಗಳಿಗೆ ಬಸ್ ಸಂಪರ್ಕ ಸಾಧ್ಯವಾಗಲಿದೆ. ಜನಸಂದಣಿಯನ್ನು ಕಡಿಮೆ ಮಾಡಲು ಹಾಗೂ ಮೆಟ್ರೋ ಪ್ರಯಾಣವನ್ನು ಇನ್ನಷ್ಟು ಸುಲಭಗೊಳಿಸಲಿವೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ಸೋಮವಾರ ಮಾಹಿತಿ ನೀಡಿದ್ದಾರೆ. ಯಾವೆಲ್ಲ ಮಾರ್ಗದಲ್ಲಿ ಸೇವೆ ಲಭ್ಯವಿದೆ ಎಂಬ ಮಾಹಿತಿ ಇಲ್ಲಿದೆ.

ಬಿಎಂಟಿಸಿ ಮೆಟ್ರೋ ಫೀಡರ್ ಬಸ್ ಸೇವೆಗಳ ವಿವರ

1) ಹೊಸ ರಸ್ತೆ ಮೆಟ್ರೋ ನಿಲ್ದಾಣ- ಸಿಂಗಸಂದ್ರವರೆಗಿನ ಬಸ್‌ ಮಾರ್ಗ, ಸಮಯ

ಹೊಸ ರಸ್ತೆ-ಸೆಂಟ್ರಲ್ ಜೈಲ್ - ನ್ಯಾಷನಲ್ ಪಬ್ಲಿಕ್ ಸ್ಕೂಲ್ - ಹರಳೂರು - ಹರಳೂರು ಕ್ರಾಸ್ ಆಗರ - ಪರಂಗಿಪಾಳ್ಯ - ಸೋಮಸುಂದರಪಾಳ್ಯ- ಕುಡ್ಡು ಗೇಟ್ ಮೂಲಕ ಸಿಂಗಸಂದ್ರವರೆಗೆ ಬಿಎಂಟಿಸಿ ಮೆಟ್ರೋ ಫಿಡರ್‌ ಬಸ್‌ ಸೇವೆ ಆರಂಭವಾಗಿದೆ.

ಬಸ್‌ ಸಂಚಾರ ಸಮಯ: ಬೆಳಗ್ಗೆ 6:00, 7:00, 8:15, 08:45, 09:15, 09:30, 10:00, 10:30, 11:00, 11:30 ಮಧ್ಯಾಹ್ನ 12:00, 12:40, 13:10, 14:30, 15:00, 15:30 ಸಂಜೆ 16:00, 16:20, 16:50, 17:10, 17:30 ರಾತ್ರಿ 18:00, 19:10, 20:20, 21:40 ಗಂಟೆಗೆ ಸಂಚರಿಸಲಿವೆ.

2) ಹೊಸ ರಸ್ತೆ ಮೆಟ್ರೋ ನಿಲ್ದಾಣ-ಸೆಂಟ್ರಲ್ ಜೈಲ್‌ವರೆಗಿನ ಬಸ್‌ ಮಾರ್ಗ, ಸಮಯ

ಹೊಸ ರಸ್ತೆ, ಸಿಂಗಸಂದ್ರದಿಂದ ಕುಡ್ಲು ಗೇಟ್ - ಸೋಮಸುಂದರಪಾಳ್ಯ - ಪರಂಗಿಪಾಳ್ಯ - ಆಗರ ಬೆಳ್ಳಂದೂರು ಗೇಟ್/ಹರಳೂರು ಕ್ರಾಸ್- ಹರಳೂರು ಮತ್ತು ನ್ಯಾಷನಲ್ ಪಬ್ಲಿಕ್ ಸ್ಕೂಲ್ ಮಾರ್ಗವಾಗಿ ಸೆಂಟ್ರಲ್ ಜೈಲ್ ವರೆಗೆ ಫಿಡರ್‌ ಬಸ್ ಸೇವೆ ಲಭ್ಯವಾಗಿದೆ.

ಬಸ್‌ ಸಂಚಾರ ಸಮಯ: ಬೆಳಗ್ಗೆ 06:15, 07:15, 08:30, 09:00, 09:30, 09:45, 10:15, 10:45, 11:15, 11:45 ಮಧ್ಯಾಹ್ನ 12:15, 12:55, 13:25, 14:05, 14:35, 15:10, 15:30, 15:55 ಸಂಜೆ 16:25, 16:45, 17:10 ರಾತ್ರಿ 17:30, 18:45, 19:55, 21:20 ಗಂಟೆಗೆ ಸಂಚರಿಸಲಿವೆ.

3 ) ಹೊಸ ರಸ್ತೆ ಮೆಟ್ರೋ ನಿಲ್ದಾಣ-ಕಾರ್ಮೆಲರಾಮ್ ಬಸ್‌ ನಿಲ್ದಾಣವರೆಗೆ ಬಸ್ ಮಾರ್ಗ, ಸಮಯ

ಹೊಸ ರಸ್ತೆ ಮೆಟ್ರೋ ನಿಲ್ದಾಣ- ಸೆಂಟ್ರಲ್ ಜೈಲ್ - ದೊಡ್ಡಮಾರ - ಚಿಕ್ಕನಾಯಕನಹಳ್ಳಿ - ದೊಡ್ಡಕನ್ನಳ್ಳಿ ಮಾರ್ಗವಾಗಿ ಕಾಮೇಲ್‌ರಾಮ್ ಬ ಸ್‌ ನಿಲ್ದಾಣವರೆಗೆ ಬಸ್‌ ಸಂಚರಿಸುತ್ತವೆ.

ಸಂಚಾರ ಸಮಯ: ಹೊಸ ರಸ್ತೆಯಿಂದ ಬಸ್‌ಗಳು ಬೆಳಗ್ಗೆ 06:00, 06:35, 07:10, 07:55, 08:35, 09:15, 09:55, 10:45, 11:20, 11:55 ಮಧ್ಯಾಹ್ನ 12:30, 14:30, 15:05, 15:40 ಸಂಝೆ 16:25, 17:00, 17:35, 18:15, 18:55 ರಾತ್ರಿ 19:35, 20:10, 21:00 ಗಂಟೆಗೆ ಹೊರಡುತ್ತವೆ.

ಸಂಚಾರ ಸಮಯ: ಕಾರ್ಮೆಲರಾಮ್ ಬಸ್ ನಿಲ್ದಾಣ ಬೆಳಗ್ಗೆ 06:00, 06:35, 07:10, 07:55, 08:35, 09:15, 09:55, 10:45, 11:20, 11:55 ಮಧ್ಯಾಹ್ನ 13:55, 14:30, 15:05, 15:40 ಸಂಜೆ 16:25, 17:00, 17:35, 18:15, 18:55 ರಾತ್ರಿ 19:35, 20:10, 21:00 ಗಂಟೆಗೆ ಹೊರಡುತ್ತವೆ.

ಮೆಟ್ರೋ ಪ್ರಯಾಣಿಕರು ಮೆಟ್ರೋ ನಿಲ್ದಾಣಗಳಿಗೆ ಸುಲಭ ಮತ್ತು ನಿರಂತರ ಸಂಪರ್ಕಕ್ಕಾಗಿ ಈ ಫೀಡರ್ ಬಸ್‌ ಸೇವೆಗಳ ಸೇವೆ ಸದುಪಯೋಗ ಮಾಡಿಕೊಳ್ಳುವಂತೆ ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ಕೋರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+