ಸರಿಯಾಗಿ ಹಿಜಾಬ್ ಹಾಕಿಲ್ಲ ಅಂತಾ ಇಂತಹ ಶಿಕ್ಷೆ ಕೊಡೋದಾ?
ಕರ್ನಾಟಕದಲ್ಲಿ ಹಿಜಾಬ್ ವಿಚಾರ ಪದೇ ಪದೇ ಚರ್ಚೆಗೆ ಬರುತ್ತಿದೆ. ಬಿಜೆಪಿ & ಕಾಂಗ್ರೆಸ್ ಈ ವಿಚಾರವಾಗಿ ದೊಡ್ಡ ಯುದ್ಧವನ್ನೇ ನಡೆಸಿವೆ. ಅದರಲ್ಲೂ 2023ರ ಚುನಾವಣೆ ಸಮಯಕ್ಕೆ ಇದೇ ಹಿಜಾಬ್ ವಿಚಾರ ದೊಡ್ಡ ಹವಾ ಎಬ್ಬಿಸಿತ್ತು. ಕೊನೆಗೆ ಶಾಲೆ & ಕಾಲೇಜುಗಳಲ್ಲಿ ಹೀಗೆ ಹಿಜಾಬ್ ತೊಡುವುದನ್ನೇ ನಿಷೇಧ ಮಾಡಿತ್ತು ಆಗ ಕರ್ನಾಟದಕಲ್ಲಿ ಆಡಳಿತದಲ್ಲಿ ಇದ್ದಂಥ ಬಿಜೆಪಿ ಸರ್ಕಾರ. ಆದರೆ ಇದೀಗ ಸರಿಯಾಗಿ ಹಿಜಾಬ್ ಹಾಕಿಲ್ಲ ಅಂತಾ ಘೋರ ಶಿಕ್ಷೆಯನ್ನೆ ನೀಡಲಾಗಿದೆಯಂತೆ!
ಹೌದು ಇಸ್ಲಾಂ ಧರ್ಮದ ಪ್ರಕಾರ ಮಹಿಳೆಯರು ಹಿಜಾಬ್ ಧರಿಸಬೇಕು ಎನ್ನುವ ನಿಯಮ ಇದೆ. ಅದರಲ್ಲೂ ಭಾರತದಲ್ಲಿ ಈ ವಿಚಾರವನ್ನೇ ಹಿಡಿದು ಗಲಾಟೆಗಳು ನಡೆಯುತ್ತವೆ. ಈ ವಿಚಾರದ ಆಧಾರದಲ್ಲಿ ರಾಜಕೀಯ ಕೂಡ ನಡೆಯುತ್ತದೆ ಎಂಬ ಆರೋಪವು ಕೂಡ ಇದೆ. ಅದರಲ್ಲೂ ಚುನಾವಣೆ ಬಂದ ಸಮಯದಲ್ಲಿ ಇಂತಹ ವಿವಾದಗಳು ದೊಡ್ಡ ಮಟ್ಟಿಗೆ ಸದ್ದು ಮಾಡುತ್ತವೆ. ಹೀಗಿದ್ದಾಗಲೇ ಚಿಕ್ಕ ವಯಸ್ಸಿನ ಬಾಲಕಿಯರು, ಸರಿಯಾಗಿ ಹಿಜಾಬ್ ಹಾಕಿಲ್ಲ ಅನ್ನೋ ಕಾರಣಕ್ಕೆ ಘೋರ ಶಿಕ್ಷೆ & ಹಿಂಸೆ ನೀಡಲಾಗಿದೆಯಂತೆ. ಹಾಗಾದ್ರೆ ಈ ರೀತಿಯಾದ ಘಟನೆ ನಡೆದಿದ್ದು ಎಲ್ಲಿ? ಮುಂದೆ ಓದಿ.

ಹಿಜಾಬ್ ವಿಚಾರಕ್ಕೆ ಘೋರ ಶಿಕ್ಷೆ
ಸೂಕ್ತವಾಗಿ ಹಿಜಾಬ್ ಹಾಕಿಲ್ಲ ಅಂತಾ ಶಿಕ್ಷೆ ಕೊಟ್ಟಿರುವುದು ಬೇರೆ ಎಲ್ಲೋ ಅಲ್ಲ, ಉಗ್ರರೇ ಸೇರಿ ಆಡಳಿತ ನಡೆಸುತ್ತಿರುವ ಅಫ್ಘಾನಿಸ್ತಾನ ದೇಶದಲ್ಲಿ. ತಾಲಿಬಾನ್ ಉಗ್ರರ ಆಡಳಿತ ಈ ದೇಶದಲ್ಲಿ ಬಂದ ನಂತರ ಪರಿಸ್ಥಿತಿ ಕೈಮೀರಿ ಹೋಗಿದೆ. ಅಲ್ಲಿನ ಮಹಿಳೆಯರು ನೆಮ್ಮದಿ & ಸುಖವಾಗಿ ತಮ್ಮ ಕುಟುಂಬದ ಸದಸ್ಯರ ಜೊತೆಗೆ ಜೀವನ ನಡೆಸಲು ಆಗುತ್ತಿಲ್ಲ. ಈ ರೀತಿಯ ಆರೋಪಗಳ ನಡುವೆ ಇದೀಗ, ಸರಿಯಾಗಿ ಹಿಜಾಬ್ ಹಾಕಿಲ್ಲ ಅಂತಾ ತಾಲಿಬಾನಿಗಳು ಚಿಕ್ಕ ವಯಸ್ಸಿನ ಹುಡುಗಿಯರಿಗೆ ಅಂದ್ರೆ ಬಾಲಕಿಗೆ ಘೋರ ಶಿಕ್ಷೆ ನೀಡಿದ್ದಾರಂತೆ.
ಹುಡುಗಿಗೆ ಹೊಡೆದರು, ತಂದೆಯನ್ನ ತುಳಿದರು
ಅಂದಹಾಗೆ 20 ವರ್ಷಗಳ ಸುದೀರ್ಘ ಹೋರಾಟದ ಬಳಿಕ 2021ರ ಆಗಸ್ಟ್‌ನಲ್ಲಿ ಅಮೆರಿಕ ಸೇನೆ ಸಂಪೂರ್ಣ ಅಫ್ಘಾನಿಸ್ತಾನ ತೊರೆದು ಹೊರ ಬಂದಿತ್ತು. ಅಧ್ಯಕ್ಷ ಜೋ ಬೈಡನ್ ಆಗ, 2021ರ ಆಗಸ್ಟ್ 31ನ್ನ ಡೆಡ್‌ಲೈನ್ ಆಗಿ ನೀಡಿ, ಅಮೆರಿಕದ ಸಂಪೂರ್ಣ ಸೇನೆ ಹೊರಗೆ ಕರೆಸಿಕೊಂಡರು. ಅಷ್ಟೇ ಅಲ್ಲಿಗೆ ಅಫ್ಘಾನಿಸ್ತಾನ ಜನರ ನೆಮ್ಮದಿ ಹಾರಿಹೋಗಿತ್ತು. ಅಲ್ಲಿ ಜನರಿಗು ನೆಮ್ಮದಿಯಾಗಿ ಬದುಕುವ ಹಕ್ಕು ಇಲ್ಲವಾಗಿತ್ತು. ಹೀಗಿದ್ದಾಗಲೇ ಅಫ್ಘಾನಿಸ್ತಾನದಲ್ಲಿ ಸುಮಾರು 16 ವರ್ಷದ ಬಾಲಕಿ ಸರಿಯಾಗಿ ಮೇಲೆ ಹಿಜಾಬ್ ತೊಟ್ಟಿಲ್ಲ ಅಂತಾ ತಾಲಿಬಾನಿಗಳು ದಾಳಿ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇಂಗ್ಲಿಷ್ ಕಲಿತರೆ ಏನ್ ಮಾಡ್ತಾರೆ?
ಬಾಲಕಿ ಹಿಜಾಬ್ ಸರಿಯಾಗಿ ಹಾಕಿಲ್ಲ ಮತ್ತು ಆಕೆ ಮೇಕಪ್ ಮಾಡಿದ್ದಾಳೆ ಅಂತಾ ಹೀಗೆಲ್ಲಾ ಹಲ್ಲೆ ಮಾಡಿದ್ದಾರಂತೆ. ಅಲ್ಲದೆ ಆ 16 ವರ್ಷದ ಬಾಲಕಿಯ ತಂದೆ ಮೇಲೂ ಘೋರವಾಗಿ ಹಲ್ಲೆ ನಡೆದಿದ್ದು, ಕೆಳಗೆ ಬೀಳಿಸಿ ಆತನನ್ನ ತುಳಿದು ಹಲ್ಲೆ ಮಾಡಿದ್ದಾರೆ ಎನ್ನುವ, ಗಂಭೀರ ಆರೋಪ ಈಗ ಕೇಳಿಬಂದಿದೆ. ಅಲ್ಲದೆ ಅಫ್ಘಾನ್ ನೆಲದ ಈ ಘಟನೆ ಎಲ್ಲೆಲ್ಲೂ ಸಂಚಲನ ಸೃಷ್ಟಿ ಮಾಡಿದೆ. ಅಲ್ಲದೆ ಬಾಲಕಿ ಇಂಗ್ಲಿಷ್ ಕಲಿಯುತ್ತಿದ್ದಾಳೆ, ಆಕೆ ದೇಶ ಬಿಟ್ಟು ಹೊರಗೆ ಹೋಗುತ್ತಾಳೆ ಅನ್ನೋ ಆರೋಪವನ್ನು ಕೂಡ ಹೊರಿಸಿರುವ ತಾಲಿಬಾನ್ ಬಾಲಕಿಯನ್ನೀಗ 2 ದಿನಗಳ ಕಾಲ ಜೈಲಿಗೆ ಕೂಡ ಹಾಕಿತ್ತು ಎನ್ನಲಾಗಿದೆ.

ಇದೇ ಮೊದಲೇನಲ್ಲ ಬಿಡಿ...
ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಮೇಲೆ ದಿನಕ್ಕೊಂದು ನಿಷೇಧವನ್ನ ಹೇರುತ್ತಿರುವ ತಾಲಿಬಾನಿ ಉಗ್ರರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೂ ಗುರಿಯಾಗಿದ್ದಾರೆ. ಆದ್ರೂ ಇದಕ್ಕೆಲ್ಲ ಅವರು ಕೇರ್ ಮಾಡುತ್ತಿಲ್ಲ. ಈ ಕಾರಣಕ್ಕೆ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಅಮೆರಿಕ ಸೇನೆ ಯಾವಾಗ ತಾಲಿಬಾನಿಗಳ ಕೈಯಲ್ಲಿ ಅಫ್ಘಾನಿಸ್ತಾನ ಬಿಟ್ಟು ಹೋಯ್ತೊ ಆಗಿನಿಂದ ಶುರುವಾಗಿದ್ದೆ ಕಿತ್ತಾಟ. ಅಂದಿನಿಂದ ಈ ತನಕ ಅಲ್ಲಿನ ಜನರಿಗೆ ನೆಮ್ಮದಿ ಇಲ್ಲ ನೆಮ್ಮದಿಯಾಗಿ ಜೀವನವನ್ನು ಮಾಡಲು ಆಗುತ್ತಿಲ್ಲ. ಹೀಗಾಗಿಯೇ ದಿನದಿಂದ ದಿನಕ್ಕೆ ಜನರು ಪರದಾಡುತ್ತಿದ್ದಾರೆ, ದೇಶ ಬಿಟ್ಟು ಹೊರ ಹೋಗಲು ಪರದಾಡುತ್ತಿದ್ದಾರೆ.












Click it and Unblock the Notifications