ಢಂ.. ಢಮಾರ್.. ಕೊಲೆ ಮಾಡಿದ್ದ ಆರೋಪಿಗಳಿಗೆ ಗುಂಡಿಟ್ಟು ಕೊಂದ ತಾಲಿಬಾನಿ ಸರ್ಕಾರ!
ಭಾರತ ಪ್ರಜಾಪ್ರಭುತ್ವ ಇರುವ ದೇಶ. ಇಲ್ಲಿ ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಸರ್ಕಾರಗಳು ನಡೆಯುತ್ತವೆ. ಜನಗಳಿಗೂ ಸಿಕ್ಕಾಪಟ್ಟೆ ಸ್ವಾತಂತ್ರ್ಯ ಇರುತ್ತೆ, ಹಾಗೇ ಯಾರಿಗೂ ಸುಖಾಸುಮ್ಮನೆ ಹೆದರುವ ಅಗತ್ಯತೆ ಇರುವುದಿಲ್ಲ. ಆದರೆ ಇಲ್ಲೊಂದು ದೇಶವಿದೆ, ಈ ದೇಶ ಆಳುತ್ತಿರುವುದು ಉಗ್ರರು. ಹೀಗಾಗಿ ಎಂತೆಂತಹ ರೂಲ್ಸ್ ಮಾಡ್ತಾರೆ ಗೊತ್ತಾ? ಇದೀಗ ಕೊಲೆ ಆರೋಪಿಗಳಿಗೆ ಸಾವಿರಾರು ಜನರ ಎದುರಲ್ಲೇ ಗುಂಡು ಹಾರಿಸಿ ಸಾಯಿಸಿದ್ದಾರೆ!
ಮೊದಲೇ ಹೇಳಿದಂತೆ ಇದು ಉಗ್ರರ ಸರ್ಕಾರ, ಈ ಸರ್ಕಾರದ ಹೆಸರು ತಾಲಿಬಾನಿ ಸರ್ಕಾರ ಅಂತಾ. ಈ ಸರ್ಕಾರ ಅಸ್ತಿತ್ವದಲ್ಲಿ ಇರುವುದು ಅಫ್ಘಾನಿಸ್ತಾನದಲ್ಲಿ. ಈ ದೇಶ ಇದೀಗ ಉಗ್ರ ರಾಕ್ಷಸರ ಕೈಯಲ್ಲಿ ಸಿಲುಕಿ ನಲುಗಿ ಹೋಗಿದೆ. ಅದ್ರಲ್ಲೂ ಕಳೆದ 2-3 ವರ್ಷದಿಂದ ಇಲ್ಲಿನ ಜನರಿಗೆ ನೆಮ್ಮದಿಯೇ ಇಲ್ಲ.

ಜೀವನ ಮಾಡಲು ಪರದಾಡುವ ಅಫ್ಘಾನಿಸ್ತಾನ ಜನರಿಗೆ ಈಗ ತಮ್ಮ ಜೀವದ ಮೇಲೆ ತಮಗೆ ಗ್ಯಾರಂಟಿ ಇಲ್ಲವಾಗಿದೆ. ಯಾಕಂದ್ರೆ ಉಗ್ರರ ಸರ್ಕಾರವು ಯಾವಾಗ ಬೇಕಾದ್ರೂ ಯಾರ ಜೀವವನ್ನಾದರೂ ತೆಗೆಯುತ್ತಿದ್ದಾರೆ. ಇದೀಗ ಸಾವಿರಾರು ಜನರ ಎದುರು ಕೊಲೆ ಆರೋಪಿಯನ್ನೇ ಕೊಂದು ಹಾಕಿದ್ದಾರೆ.
ಪತ್ರಕರ್ತರು & ಜನರ ಎದುರಲ್ಲೇ ಗುಂಡೇಟು!
ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತದ ಉಗ್ರರು ಘಜ್ನಿ ಬಳಿಯ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಕೊಲೆ ಪ್ರಕರಣದಲ್ಲಿ ಅಪರಾಧಿ ಆಗಿದ್ದ ಇಬ್ಬರು ಕ್ರಿಮಿಗಳನ್ನ ಗುಂಡಿಟ್ಟು ಕೊಂದಿದ್ದಾರೆ. ಈ ಮೂಲಕ ತಾಲಿಬಾನ್ ಆಡಳಿತ ಕಂಡು ಜನರು ಬೆಚ್ಚಿಬಿದ್ದಿದ್ದಾರೆ. ಬಹಿರಂಗವಾಗಿ ಗುಂಡಿಕ್ಕಿ ಭೀಕರ ಹತ್ಯೆ ಮಾಡಿ ಮರಣದಂಡನೆ ವಿಧಿಸಿದೆ ತಾಲಿಬಾನ್ ಸರ್ಕಾರ. ಘಜ್ನಿ ನಗರದ, ಅಲಿ ಲಾಲ್ ಪ್ರದೇಶದಲ್ಲಿ ಪತ್ರಕರ್ತರು ಸೇರಿದಂತೆ ಸಾವಿರಾರು ಜನ ಈ ಘಟನೆಗೆ ಸಾಕ್ಷಿಯಾಗಿದ್ದರು.
15 ಗುಂಡುಗಳು ಫೈಯರ್!
ಈಗ ಗುಂಡಿನ ಏಟು ತಿಂದು ಮರಣ ದಂಡನೆ ಶಿಕ್ಷೆ ಅನುಭವಿಸಿರುವ ಅಪರಾಧಿಗಳ ವಿರುದ್ಧ ಹಲವು ಕೇಸ್ ಇದ್ದವು ಎನ್ನಲಾಗಿದೆ. ಹೀಗೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಈ ಇಬ್ಬರ ವಿರುದ್ಧ ಕೋರ್ಟ್ & ತಾಲಿಬಾನ್ ಪರಮೋಚ್ಚ ನಾಯಕ ಹಿಬತುಲ್ಲಾ ಅಖುಂದ್‌ಝದಾ ಮರಣ ದಂಡನೆ ಶಿಕ್ಷೆ ನೀಡಿದ್ದರು. ಹೀಗಾಗಿ ಇದೀಗ ಅಪರಾಧಿಗಳನ್ನ ಮರಣ ದಂಡನೆಗೆ ಗುರಿಪಡಿಸಿ ಜೀವ ತೆಗೆಯಲಾಗಿದೆ.

ಮರಣ ದಂಡನೆ ನೀಡಿದ ಕ್ರೀಡಾಂಗಣದ ಹೊರಗೆ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಅಪರಾಧಿಗಳನ್ನು ಕ್ಷಮಿಸುವಂತೆ ಧಾರ್ಮಿಕ ಮುಖಂಡರು ಪ್ರಾರ್ಥಿಸಿದರಂತೆ. ಆರೋಪಿಗಳ ದೇಹದ ಮೇಲೆ 15 ಗುಂಡುಗಳನ್ನು ಹಾರಿಸಲಾಯಿತು ಎನ್ನಲಾಗಿದೆ.
ಅಂದಹಾಗೆ 1990ರ ಆರಂಭದಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಸರ್ಕಾರವೇ ಆಡಳಿತ ನಡೆಸುತ್ತಿತ್ತು. ಕೊಲೆ ಆರೋಪಿಗಳು, ಕಳ್ಳತನ ಆರೋಪಿಗಳ ವಿರುದ್ಧವೂ ಸಾರ್ವಜನಿಕವಾಗಿ ಮರಣ ದಂಡನೆ & ಥಳಿಸುವ ಶಿಕ್ಷೆ ನೀಡುತ್ತಿತ್ತು.
ಹಾಗೇ, ಕಲ್ಲಿನಲ್ಲಿ ಹೊಡೆಯುವ ಶಿಕ್ಷೆಗಳನ್ನೂ ಜಾರಿಗೊಳಿಸುತ್ತಿತ್ತು ತಾಲಿಬಾನ್ ಸರ್ಕಾರ. ಆದರೆ ಆ ನಂತರ ತಾಲಿಬಾನ್ ಸರ್ಕಾರ ಬಿದ್ದು ಹೋಗಿ, ಅಮೆರಿಕ ಬೆಂಬಲಿತ ಸರ್ಕಾರ ಆಡಳಿತಕ್ಕೆ ಬಂತು. 2021ರಲ್ಲಿ ಅಮೆರಿಕ ಸೇನೆಯು ಅಫ್ಘಾನಿಸ್ತಾನ ಬಿಟ್ಟು ಹೋದ ನಂತರ ಪರಿಸ್ಥಿತಿ ಮತ್ತೆ ಕೈಮೀರಿ ಹೋಗಿದೆ.












Click it and Unblock the Notifications