ಭೀಕರ ಭೂಕಂಪ, 2000ಕ್ಕೂ ಹೆಚ್ಚು ಪ್ರಜೆಗಳ ಸಾವು?

ಪ್ರಕೃತಿ ಮೇಲೆ ಮನುಷ್ಯನ ದೌರ್ಜನ್ಯ ಹೆಚ್ಚಾದಷ್ಟು, ಪ್ರಕೃತಿಯೂ ಕೂಡ ಮನುಷ್ಯನ ವಿರುದ್ಧ ರಿವೇಂಜ್ ತೆಗೆದುಕೊಳ್ಳುತ್ತಿದೆ. ಅದರಲ್ಲೂ ಇತ್ತೀಚೆಗೆ ಭೂಕಂಪದ ಘಟನೆಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಇಲ್ಲೊಂದು ದೇಶದಲ್ಲಿ 6.3 ತೀವ್ರತೆಯ ಭೂಕಂಪನಕ್ಕೆ ಬರೋಬ್ಬರಿ 2000ಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದಾರೆ. ಹಾಗೇ ಸಾವಿರಾರು ಜನ ಇನ್ನೂ ನಾಪತ್ತೆಯಾಗಿದ್ದಾರೆ. ಹಾಗಾದರೆ ಯಾವುದು ಆ ದೇಶ?

ಮೊದಲೇ ತಾಲಿಬಾನಿ ಆಡಳಿತಕ್ಕೆ ಸಿಲುಕಿ ನಲುಗಿರುವ ಅಫ್ಘಾನಿಸ್ತಾನ ಜನರಿಗೆ ಈಗ, ಪ್ರಕೃತಿ ಮಾತೆ ಕೂಡ ಆಘಾತ ನೀಡಿದ್ದು ಭೀಕರ ಭೂಕಂಪಕ್ಕೆ 2000ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಪಶ್ಚಿಮ ಅಫ್ಘಾನಿಸ್ತಾನ ಭಾಗದಲ್ಲಿ ಭೀಕರ ಭೂಕಂಪನ ಸಂಭವಿಸಿ, ಇಡೀ ದೇಶವೇ ಕನಲಿ ಹೋಗಿದೆ. ಘಟನೆಯಲ್ಲಿ ಸುಮಾರು 6ಕ್ಕೂ ಹೆಚ್ಚು ಹಳ್ಳಿಗಳು ಸರ್ವನಾಶವಾಗಿ ಹೋಗಿವೆ. ಎಲ್ಲೆಲ್ಲೂ ನೆಲಕ್ಕೆ ಅಪ್ಪಳಿಸಿದ ಮೆನಗಳು, ಬೀದಿಗೆ ಬಿದ್ದ ಶವಗಳೇ ಗೋಚರಿಸುತ್ತಿವೆ.

afghanistan-earthquake

ಒಂದೇ ಬಾರಿಗೆ 5 ಭೂಕಂಪನ?

ಅಂದಹಾಗೆ 6.3 ತೀವ್ರತೆಯಲ್ಲಿ ಸಂಭವಿಸಿದ ಭೂಕಂಪದ ಕೇಂದ್ರಬಿಂದುವು ಅಫ್ಘಾನ್‌ನ ಅತಿದೊಡ್ಡ ನಗರ ಹೆರಾತ್‌ನ ವಾಯುವ್ಯದ 40 ಕಿಮೀ ದೂರದಲ್ಲಿ ಪತ್ತೆಯಾಗಿದೆ. ಈ ಬಗ್ಗೆ ವಿಶ್ವಸಂಸ್ಥೆಯ ಭೂವೈಜ್ಞಾನಿಕ ಸಮೀಕ್ಷೆ ಮಾಹಿತಿ ನಿಡಿದ್ದು, ಮತ್ತೊಂದು ಕಡೆ ಅಮೆರಿಕದ ವಿಜ್ಞಾನಿಗಳು ಬೇರೆಯದ್ದೇ ಮಾಹಿತಿ ನೀಡಿದ್ದಾರೆ. ಅಮೆರಿಕ ವಿಜ್ಞಾನಿಗಳ ಪ್ರಕಾರ ಮೇಲಿಂದ ಮೇಲೆ ಭೂಕಂಪ ಸಂಭವಿಸಿದ್ದೇ ಇಷ್ಟು ಸಾವು ನೋವಿಗೆ ಕಾರಣ.

ಅಮೆರಿಕ ಭೂಗರ್ಭ ಶಾಸ್ತ್ರ ಇಲಾಖೆ ವಿಜ್ಞಾನಿಗಳು ಹೇಳಿದಂತೆ, ಅಫ್ಘಾನ್‌ನಲ್ಲಿ ಒಟ್ಟು 5 ಬಾರಿ ಭೂಕಂಪ ಸಂಭವಿಸಿದೆ. ಮೇಲಿಂದ ಮೇಲೆ ಹೀಗೆ ಭೂಕಂಪನವಾದ ಹಿನ್ನೆಲೆ ಘೋರ ದುರಂತಕ್ಕೆ ಅಫ್ಘಾನ್ ಸಾಕ್ಷಿಯಾಗಿದೆ. ಇನ್ನು 5 ಭೂಕಂಪನಗಳ ಪೈಕಿ ರಿಕ್ಟರ್ ಮಾಪಕದಲ್ಲಿ 6.3, 5.9, 5.5ಯಷ್ಟು ತೀವ್ರತೆ ದಾಖಲಾಗಿದೆ.

afghanistan-earthquake

ಸಾವಿರಾರು ಮನೆಗಳು ಸರ್ವನಾಶ?

ಒಟ್ಟು 6 ಹಳ್ಳಿಗಳಲ್ಲಿ ಸಾವಿರಾರು ಮನೆಗಳು ನಾಶವಾಗಿವೆ ಎನ್ನಲಾಗಿದ್ದು, ಮೃತಪಟ್ಟ ನಾಗರಿಕ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಅದ್ರಲ್ಲೂ ಅಫ್ಘಾನ್ ತಾಲಿಬಾನಿ ಆಡಳಿತಕ್ಕೆ ಸಿಲುಕಿದ ನಂತರ, ಕೈಯಲ್ಲಿ ಹಣವೇ ಇಲ್ಲದೆ ಉಗ್ರರ ಸರ್ಕಾರವು ನಲುಗಿ ಹೋಗಿದೆ. ಹೀಗಾಗಿ ಕಾರ್ಯಾಚರಣೆ ನಡೆಸೋದಕ್ಕೂ ಪರದಾಡುತ್ತಿದೆ. ಜನರು ಮಾತ್ರ ತಮ್ಮವರ ಕಳೆದುಕೊಂಡು ಕಣ್ಣೀರು ಹಾಕುತ್ತಾ, ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ.

20 ವರ್ಷ ಸುದೀರ್ಘ ಹೋರಾಟದ ಬಳಿಕ 2021ರ ಆಗಸ್ಟ್‌ನಲ್ಲಿ ಅಮೆರಿಕ ಸಂಪೂರ್ಣವಾಗಿ ಅಫ್ಘಾನಿಸ್ತಾನ ತೊರೆದು ಹೊರಬಂದಿತ್ತು. ಅಧ್ಯಕ್ಷ ಬೈಡನ್ ಆಗಿನ ಸಮಯಕ್ಕೆ, 2021ರ ಆಗಸ್ಟ್ 31ನ್ನ ಡೆಡ್‌ಲೈನ್ ಆಗಿ ನೀಡಿ, ಅಮೆರಿಕದ ಸಂಪೂರ್ಣ ಸೇನೆ ಕರೆಸಿಕೊಂಡಿದ್ದರು. ಅಲ್ಲಿಗೆ ಅಫ್ಘಾನಿಸ್ತಾನ ಜನರ ನೆಮ್ಮದಿ ಹಾರಿಹೋಗಿತ್ತು. ಜನಕ್ಕೆ ನೆಮ್ಮದಿಯಾಗಿ ಬದುಕುವ ಹಕ್ಕು ಕೂಡ ಇಲ್ಲ. ಇನ್ನು ದುಡಿಯಲು ಕೆಲಸವೂ ಇಲ್ಲ ಹಾಗೇ ಸರ್ಕಾರಕ್ಕೆ ಆದಾಯ ಕೂಡ ಬರ್ತಿಲ್ಲ. ಹೀಗೆ ಮೊದಲೇ ಹಸಿವಿನಿಂದ ನರಳುತ್ತಿದ್ದ ಅಫ್ಘಾನ್ ಭೂಕಂಪನದ ಹಿನ್ನೆಲೆ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+