BMTC: ಕ್ಯೂಆರ್ ಟಿಕೆಟ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ; ಹಣ ಕಡಿತವಾದ್ರೂ ಸಿಗದ ಟಿಕೆಟ್, ಅಧಿಕಾರಿಗಳ ಸ್ಪಷ್ಟನೆ

ಬೆಂಗಳೂರು: ಬೆಂಗಳೂರು ನಗರದ ಪ್ರಯಾಣಿಕರಿಗೆ ಇತ್ತೀಚಿನ ದಿನಗಳಲ್ಲಿ ಮೇಲಿಂದ ಮೇಲೆ ಸಂಚಾರ ತೊಂದರೆ ಎದುರಾಗುತ್ತಿದೆ. ನಮ್ಮ ಮೆಟ್ರೋ ರೈಲುಗಳಲ್ಲಿ ಮತ್ತು ಮಾರ್ಗದಲ್ಲಿ ತಾಂತ್ರಿಕ ತೊಂದರೆ ಆಗಿತ್ತು. ಅದರ ಬೆನ್ನಲ್ಲೇ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಯುಪಿಐ ಕ್ಯೂಆರ್ ಕೋಡ್‌ ಆಧಾರಿತ ಟಿಕೆಟ್ (ಡೈನಾಮಿಕ್ ಕ್ಯೂಆರ್ ಕೋಡ್) ವಿತರಣೆ ವ್ಯವಸ್ಥೆಯಲ್ಲಿ ತಾಂತ್ರಿಕ ಅಡಚಣೆ ಉಂಟಾಗಿತ್ತು. ಪ್ರಯಾಣಿಕರಿಗೆ ಟಿಕೆಟ್ ಸಿಗದೇ ಸಮಸ್ಯೆ ಆಯಿತು. ಈ ಬಗ್ಗೆ ಕುರಿತು ಬಿಎಂಟಿಸಿ ಸ್ಪಷ್ಟನೆ ನೀಡಿದೆ.

ಜುಲೈ 15 ರಂದು ಬುಧವಾರ ಈ ತಾತ್ಕಾಲಿಕ ಪಾವತಿ ಗೇಟ್‌ವೇ ಅಡಚಣೆ ಉಂಟಾಗಿದ್ದು, ಟಿಕೆಟ್ ವಿತರಣೆಗಳ ಮೇಲೆ ಪರಿಣಾಮ ಬೀರಿದೆ. ಟಿಕೆಟ್‌ಗಳು ಜನರೇಟ್ ಆಗಲಿಲ್ಲ. ಆದರೆ ಕೆಲವು ಪ್ರಯಾಣಿಕರ ಬ್ಯಾಂಕ್ ಖಾತೆಗಳಿಂದ ಹಣ ಮಾತ್ರ ಕಡಿತಗೊಂಡಿತು. ಇದರಿಂದ ಪ್ರಯಾಣಿಕರು ಆತಂಕಗೊಂಡರು. ಸದರಿ ತಾಂತ್ರಿಕ ದೋಷವನ್ನು ಅಂದೇ ರಾತ್ರಿ ಪರಿಹರಿಸಲಾಯಿತು. ನಂತರ ಯುಪಿಐ ಆಧಾರಿತ ಇಟಿಎಂ ಮಷಿನ್ ಮೂಲಕವೇ ಟಿಕೆಟ್ ವಿತರಿಸಲಾಯಿತು ಎಂದು ಬಿಎಂಟಿಸಿ ತಿಳಿಸಿದೆ. ಯಾರಿಗೆಲ್ಲ ಹಣ ಕಡಿತವಾಗಿದೆಯೋ ಆ ಪ್ರಯಾಣಿಕರಿಗೆ ಸ್ವಯಂಚಾಲಿತ ಮರುಪಾವತಿ ಆಗಲಿದೆ. ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದೆ.

BMTC

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಎಲ್ಲಾ 11,000 ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳು (ETMಗಳು) ಅಸ್ತಿತ್ವದಲ್ಲಿದ್ದು, ಕಾರ್ಯ ನಿರ್ವಹಣೆಯಲ್ಲಿ ಆದ ದೋಷದ ಕುರಿತು ಬಿಎಂಟಿಸಿ ವಿವರಿಸಿಲ್ಲ. ಇಂತಹ ಟಿಕೆಟ್ ವಿತರಣೆಯಲ್ಲಿನ ತಾಂತ್ರಿಕ ದೋಷ ಇದೇ ಮೊದಲೇನಲ್ಲ. ಹಿಂದೆಯು ಕೆಲವು ಬಾರಿ ಇಟಿಎಂನಲ್ಲಿ ದೋಷ ಉಂಟಾಗಿತ್ತು.

Beyond Bengaluru: ರಾಜ್ಯದ ನಗರ ಸಂಚಾರಕ್ಕೆ ಹೊಸ ರೂಪುರೇಷೆ; ಮೈಸೂರಿಗೆ ಮಾಸ್ ಟ್ರಾನ್ಸಿಟ್ ಪ್ರಸ್ತಾವನೆ
Beyond Bengaluru: ರಾಜ್ಯದ ನಗರ ಸಂಚಾರಕ್ಕೆ ಹೊಸ ರೂಪುರೇಷೆ; ಮೈಸೂರಿಗೆ ಮಾಸ್ ಟ್ರಾನ್ಸಿಟ್ ಪ್ರಸ್ತಾವನೆ

50 ಬಿಎಂಟಿಸಿ ಡಿಪೋಗಳಲ್ಲಿ ಇಟಿಎಂ ಬಳಕೆ

ಬಿಎಂಟಿಸಿ ಕೆಲವು ತಿಂಗಳಿಂದ ಡಿಜಿಟಲ್ ಮತ್ತು ನಗದು ರಹಿತ ಟಿಕೆಟ್ ಸೇವೆಯನ್ನು ಉತ್ತೇಜಿಸುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ 2023ರಲ್ಲಿ ಯುಪಿಐ ಆಧಾರಿತ ಟಿಕೆಟ್ ಪಾವತಿ ಪರಿಚಯಿಸಲಾಯಿತು. ಫೆಬ್ರವರಿ 2026 ರಿಂದ, ನಿಗಮವು ಎಲ್ಲಾ 50 ಬಿಎಂಟಿಸಿ ಡಿಪೋಗಳಲ್ಲಿ ತನ್ನ ಹೊಸದಾಗಿ ಪರಿಚಯಿಸಲಾದ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳ (ETM) ಮೂಲಕ ಡೈನಾಮಿಕ್ ಕ್ಯೂಆರ್ ಕೋಡ್ ಆಧಾರಿತ ಟಿಕೆಟಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದಿತು. ಈ ಸುಧಾರಿತ ಟಿಕೆಟಿಂಗ್ ವ್ಯವಸ್ಥೆಯು ಡಿಜಿಟಲ್ ದರ ಸಂಗ್ರಹದ ವೇಗ, ಭದ್ರತೆ ಮತ್ತು ಅನುಕೂಲತೆ ಇದೆ. ಆದರೆ ಹೀಗೆ ಟಿಕೆಟ್ ಜನರೇಟ್ ಆಗದಿದ್ದಾಗ ಜನರಿಗೆ ಸಂಚಾರ ಸಮಸ್ಯೆ ಉಂಟಾಗುತ್ತಿದೆ.

ಡಿಜಿಟಲ್ ವ್ಯವಸ್ಥೆಯಿಂದ ಶೇ. 53 ಆದಾಯ

ಬಿಎಂಟಿಸಿಯ ನಿತ್ಯ ಡಿಜಿಟಲ್ ವ್ಯವಸ್ಥೆ ಮೂಲಕ ಶೇ.53ರಷ್ಟು ಆದಾಯವನ್ನು ಯುಪಿಐ ಆಧಾರಿತ ಡಿಜಿಟಲ್ ಪಾವತಿಗಳ ಮೂಲಕ ಸಂಗ್ರಹಿಸಲ್ಪಡುತ್ತಿದೆ. ಇದು ಬಿಎಂಟಿಸಿಯ ಡಿಜಿಟಲ್ ಟಿಕೆಟಿಂಗ್ ವ್ಯವಸ್ಥೆಯ ಮೇಲೆ ಪ್ರಯಾಣಿಕರ ವಿಶ್ವಾಸ ಹೊಂದಿದ್ದಾರೆ. 2026ರ ರಾತ್ರಿ ತಾಂತ್ರಿಕ ಸಮಸ್ಯೆಯನ್ನು ಸಂಪೂರ್ಣವಾಗಿ ಸರಿಪಡಿಸಲಾಯಿತು. ಅಂದು ರಾತ್ರಿಯಿಂದಲೇ ಯಾವುದೇ ಅಡಚಣೆಯಿಲ್ಲದೆ ಎಲ್ಲಾ ಬಿಎಂಟಿಸಿ ಬಸ್‌ಗಳಲ್ಲಿ ಯುಪಿಐ ಟಿಕೆಟಿಂಗ್ ಸೌಲಭ್ಯವನ್ನು ಜನರು ಬಳಸಿದ್ದಾರೆ ಎಂದು ಬಿಎಂಟಿಸಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಂದು ವೇಳೆ ಕಡಿತಗೊಂಡ ಹಣವು ಬ್ಯಾಂಕಿಂಗ್ ಕೆಲಸದ ಮುಂದಿನ 2-3ದಿನಗಳಲ್ಲಿ ಮರಳಿ ನಿಮ್ಮ ಖಾತೆಗೆ ಬರುತ್ತದೆ. ಈ ಕುರಿತು ಸಮಸ್ಯೆಗಳು ಕಂಡು ಬಂದಲ್ಲಿ ಪ್ರಯಾಣಿಕರು ಸಹಾಯವಾಣಿ 080 22483777 ಗೆ ಕರೆ ಮಾಡಿ ಮಾಇತಿ ಪಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+