ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಡಿಹೋಗಿದ್ದಕ್ಕೆ ಕಲ್ಲೆಸೆಯುವ ಶಿಕ್ಷೆ: ತಾಲಿಬಾನಿಗಳ ಶಿಕ್ಷೆಗೆ ಹೆದರಿ ಅಫ್ಘಾನ್ ಮಹಿಳೆ ಆತ್ಮಹತ್ಯೆ

|
Google Oneindia Kannada News

ಕಾಬೂಲ್ ಅಕ್ಟೋಬರ್ 17: ಅಫ್ಘಾನಿಸ್ತಾನದ ಘೋರ್ ಪ್ರಾಂತ್ಯದಲ್ಲಿ ಮಹಿಳೆಯೊಬ್ಬರು ಮನೆಯಿಂದ ಓಡಿಹೋಗಿದ್ದಕ್ಕಾಗಿ ತಾಲಿಬಾನ್ ಪಡೆಗಳು ಅವಳನ್ನು ಕೊಲ್ಲುವ ಮೊದಲು ಆಕೆಯೇ ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ. ಖಾಮಾ ಪ್ರೆಸ್ ಪ್ರಕಾರ, ವಿವಾಹಿತ ಪುರುಷನೊಂದಿಗೆ ಮನೆಯಿಂದ ಓಡಿಹೋದ ಮಹಿಳೆಗೆ ಶುಕ್ರವಾರ ಕಲ್ಲು ಹೊಡೆದು ಕೊಲ್ಲಲು ತಾಲಿಬಾನಿಗಳು ಯೋಜಿಸಿದ್ದರು. ಆದರೆ, ಅದಕ್ಕೂ ಮೊದಲು, ಸಾರ್ವಜನಿಕ ಅವಮಾನವನ್ನು ತಪ್ಪಿಸಲು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮಹಿಳೆ ಮನೆಯಿಂದ ಓಡಿಹೋದ ವ್ಯಕ್ತಿಯನ್ನು ಗುರುವಾರ (ಅಕ್ಟೋಬರ್ 13)ದಂದು ಗಲ್ಲಿಗೇರಿಸಲಾಯಿತು. ಮಹಿಳಾ ಕಾರಾಗೃಹದ ಕೊರತೆಯಿಂದಾಗಿ ಮಹಿಳೆಗೆ ಸಾರ್ವಜನಿಕವಾಗಿ ಕಲ್ಲೆಸೆಯುವ ಶಿಕ್ಷೆ ವಿಧಿಸಲಾಗಿತ್ತು ಎಂದು ತಾಲಿಬಾನ್ ಪ್ರಾಂತೀಯ ಪೊಲೀಸ್ ಮುಖ್ಯಸ್ಥರ ಹಂಗಾಮಿ ವಕ್ತಾರ ಅಬ್ದುಲ್ ರಹಮಾನ್ ಹೇಳಿದ್ದಾರೆ ಎಂದು ಖಾಮಾ ಪ್ರೆಸ್ ವರದಿ ಮಾಡಿದೆ. ತಾಲಿಬಾನ್ ಭದ್ರತಾ ಅಧಿಕಾರಿಯ ಪ್ರಕಾರ, ಮಹಿಳೆ ಸ್ಕಾರ್ಫ್‌ನಿಂದ ಕತ್ತನ್ನು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ. ಸಾರ್ವಜನಿಕವಾಗಿ ಶಿಕ್ಷೆಯನ್ನು ಪಡೆಯುವ ಮೊದಲು ತನ್ನ ಜೀವನವನ್ನು ಕೊನೆಗೊಳಿಸಿದ್ದಾಳೆ.

ಶಿಕ್ಷೆ ತಪ್ಪಿಸಲು ಮಹಿಳೆ ಆತ್ಮಹತ್ಯೆ

ಶಿಕ್ಷೆ ತಪ್ಪಿಸಲು ಮಹಿಳೆ ಆತ್ಮಹತ್ಯೆ

ಮಹಿಳೆಯರು ಮನೆಯಿಂದ ಓಡಿಹೋಗುವ ವರದಿಗಳು ಇತ್ತೀಚೆಗೆ ದೇಶದ ವಿವಿಧ ಪ್ರಾಂತ್ಯಗಳಲ್ಲಿ ಹೆಚ್ಚುತ್ತಿವೆ. ಶಿಕ್ಷಣದ ಮೇಲೆ ನಿರ್ಬಂಧಗಳನ್ನು ಇರಿಸುವುದರೊಂದಿಗೆ ಪ್ರಾರಂಭಿಸಿ ತಾಲಿಬಾನ್ ಮಹಿಳೆಯರ ಮೇಲೆ ಹಲವಾರು ನಿರ್ಬಂಧಗಳನ್ನು ಹೇರಿದ ನಂತರ ಇಂತಹ ವರದಿಗಳು ಹೆಚ್ಚಾಗಿ ಕಂಡುಬರುತ್ತಿವೆ. ಖಾಮಾ ಪ್ರೆಸ್ ಪ್ರಕಾರ, ಆರನೇ ತರಗತಿಗಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು ಶಾಲೆಗೆ ಹೋಗುವುದನ್ನು ಅಫ್ಘಾನಿಸ್ತಾನದಲ್ಲಿ ನಿಷೇಧಿಸಲಾಗಿದೆ.

ಮಹಿಳೆಯರನ್ನು ಉದ್ಯೋಗಗದಿಂದ ಹೊರಗಿಟ್ಟ ತಾಲಿಬಾನ್

ಮಹಿಳೆಯರನ್ನು ಉದ್ಯೋಗಗದಿಂದ ಹೊರಗಿಟ್ಟ ತಾಲಿಬಾನ್

ಕಳೆದ ವರ್ಷ ಆಗಸ್ಟ್‌ನಲ್ಲಿ ಕಾಬೂಲ್ ಅನ್ನು ವಶಪಡಿಸಿಕೊಂಡ ತಾಲಿಬಾನ್ ಆಡಳಿತವು ಮಹಿಳೆಯರ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಮೊಟಕುಗೊಳಿಸಿದೆ. ಮಾತ್ರವಲ್ಲದೆ ಮಹಿಳೆಯರನ್ನು ಹೆಚ್ಚಾಗಿ ಉದ್ಯೋಗಗಳಿಂದ ಹೊರಗಿಡಲಾಗಿದೆ. ಇದರ ಪರಿಣಾಮವಾಗಿ, ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮತ್ತು ಹುಡುಗಿಯರು ಮಾನವ ಹಕ್ಕುಗಳ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ತಾರತಮ್ಯ, ಶಿಕ್ಷಣ, ಕೆಲಸ, ಸಾರ್ವಜನಿಕ ಭಾಗವಹಿಸುವಿಕೆ ಜೊತೆಗೆ ಇತರ ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದಾರೆ.

ಡ್ರೆಸ್ ಕೋಡ್ ವಿರುದ್ಧ ತೀರ್ಪು

ಡ್ರೆಸ್ ಕೋಡ್ ವಿರುದ್ಧ ತೀರ್ಪು

ಟ್ಯಾಕ್ಸಿ ಡ್ರೈವರ್‌ಗಳು ಮತ್ತು ಇತರ ನಗರ ಸಾರಿಗೆ ಸೇವೆಗಳು ಸಹ ತಾಲಿಬಾನ್‌ನಿಂದ ಅನುಮತಿ ಇಲ್ಲದೆ ಮಹಿಳೆಯರನ್ನು ಪ್ರಯಾಣಿಸಲು ಅವಕಾಶ ನೀಡಲು ನಿಷೇಧಿಸಲಾಗಿದೆ. ಒಂದು ತಿಂಗಳ ನಂತರ ಮಹಿಳೆಯರ ಡ್ರೆಸ್ ಕೋಡ್ ವಿರುದ್ಧ ತೀರ್ಪು ನೀಡಲಾಯಿತು.

ತಾಲಿಬಾನ್ ಆಫ್ಘಾನ್‌ನನ್ನು ವಶಪಡಿಸಿಕೊಂಡ ನಂತರ ಮಾಧ್ಯಮದಲ್ಲಿ ಕೆಲಸ ಮಾಡುವ ಸುಮಾರು 80 ಪ್ರತಿಶತ ಮಹಿಳೆಯರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಈ ದೇಶದಲ್ಲಿ ಸುಮಾರು 18 ಮಿಲಿಯನ್ ಮಹಿಳೆಯರು ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಇಸ್ಲಾಮಿಕ್ ಎಮಿರೇಟ್ ಅನ್ನು ಮರುಸ್ಥಾಪಿಸಿದ ನಂತರ ಅನೇಕ ಮಹಿಳೆಯರು, ವಿಶೇಷವಾಗಿ ಭದ್ರತಾ ಏಜೆನ್ಸಿಗಳಲ್ಲಿ ಕೆಲಸ ಮಾಡುವವರು ತಮ್ಮ ಉದ್ಯೋಗವನ್ನು ಕಳೆದುಕೊಂಡರು.

ಹದಗೆಟ್ಟ ಮಾನವ ಹಕ್ಕುಗಳ ಸ್ಥಿತಿ

ಹದಗೆಟ್ಟ ಮಾನವ ಹಕ್ಕುಗಳ ಸ್ಥಿತಿ

ಅಫ್ಘಾನಿಸ್ತಾನದಲ್ಲಿ ಯುನೈಟೆಡ್ ನೇಷನ್ಸ್ ಅಸಿಸ್ಟೆನ್ಸ್ ಮಿಷನ್ (UNAMA) ಆಗಸ್ಟ್‌ನಲ್ಲಿ ವರದಿಯನ್ನು ಬಿಡುಗಡೆ ಮಾಡಿತು. ತಾಲಿಬಾನ್ ವಶಪಡಿಸಿಕೊಂಡ ನಂತರ ಆಫ್ಘಾನಿಸ್ತಾನದಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿ ಹೇಳತೀರದ್ದಾಗಿದೆ.

ನಾಗರಿಕರ ರಕ್ಷಣೆ, ಕಾನೂನುಬಾಹಿರ ಹತ್ಯೆಗಳು, ಚಿತ್ರಹಿಂಸೆ ಮತ್ತು ಕೆಟ್ಟ ಚಿಕಿತ್ಸೆ, ಅನಿಯಂತ್ರಿತ ಬಂಧನಗಳು, ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮತ್ತು ಹುಡುಗಿಯರ ಹಕ್ಕುಗಳು, ಮೂಲಭೂತ ಸ್ವಾತಂತ್ರ್ಯಗಳು ಮತ್ತು ಬಂಧನದ ಸ್ಥಳಗಳಲ್ಲಿನ ಪರಿಸ್ಥಿತಿ ತೀರಾ ಹದಗೆಟ್ಟು ಹೋಗಿದೆ.


COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]

English summary
A woman in Afghanistan's Ghor province reportedly committed suicide before being killed by Taliban forces for running away from home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X