₹2,000 ಬಾಡಿಗೆ ಬಾಕಿ ಬದಲು ಹೆಂಡತಿ, ಮಗಳನ್ನೇ ಕಾಮುಕ ಮಾಲೀಕನಿಗೆ ಒಪ್ಪಿಸಿದ ಪತಿ

ಗುಜರಾತ್: ಬಡತನ ಮತ್ತು ಆರ್ಥಿಕ ಸಂಕಷ್ಟದ ನೆಪವೊಡ್ಡಿ ಸ್ವಂತ ಪತ್ನಿ ಮತ್ತು ಅಪ್ರಾಪ್ತ ಮಗಳನ್ನೇ ಮಾಲೀಕನ ಕಾಮದ ಕಣ್ಣಿಗೆ ಬಲಿಗೊಟ್ಟ ಆಘಾತಕಾರಿ ಘಟನೆ ಗುಜರಾತ್‌ನ ಮೊರ್ಬಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕೇವಲ 2,000 ರೂಪಾಯಿ ಮನೆ ಬಾಡಿಗೆ ಹಣವನ್ನು ಪಾವತಿಸಲು ಸಾಧ್ಯವಾಗದ ಕಾರಣಕ್ಕೆ ಪತಿಯೇ ಮಾಲೀಕನೊಂದಿಗೆ ಒಪ್ಪಂದ ಮಾಡಿಕೊಂಡು ಈ ಅಮಾನವೀಯ ಕೃತ್ಯ ಎಸಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಸಂತ್ರಸ್ತೆಯ ಪತಿ ಹಾಗೂ ಮನೆ ಮಾಲೀಕನನ್ನು ಬಂಧಿಸಿದ್ದಾರೆ.

4 ತಿಂಗಳ ಬಾಡಿಗೆಗಾಗಿ ಹೆಂಡತಿ, ಮಗಳ ಮಾರಾಟ

ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ, ಮೂಲತಃ ಗುಜರಾತ್‌ನ ಸುರೇಂದ್ರನಗರ ಜಿಲ್ಲೆಯವರಾದ ಈ ಕುಟುಂಬವು ಜೀವನೋಪಾಯಕ್ಕಾಗಿ ಆರು ತಿಂಗಳ ಹಿಂದೆಯಷ್ಟೇ ಮೊರ್ಬಿ ನಗರಕ್ಕೆ ವಲಸೆ ಬಂದಿತ್ತು. ತಿಂಗಳಿಗೆ ₹2,000 ಬಾಡಿಗೆ ನಿಗದಿಯಿದ್ದ ಮನೆಯೊಂದರಲ್ಲಿ ಈ ಕುಟುಂಬ ವಾಸವಾಗಿತ್ತು. ಆದರೆ ತೀವ್ರ ಆರ್ಥಿಕ ಸಂಕಷ್ಟದಿಂದಾಗಿ ಕಳೆದ ನಾಲ್ಕು ತಿಂಗಳಿನಿಂದ ಒಟ್ಟು ₹8,000 ಬಾಡಿಗೆ ಹಣ ಬಾಕಿ ಉಳಿದಿತ್ತು.

Gujarat

ಬಾಡಿಗೆ ಹಣವನ್ನು ವಸೂಲಿ ಮಾಡಲು ಮನೆ ಮಾಲೀಕನು ಪೀಡಿಸಲು ಆರಂಭಿಸಿದಾಗ, ಆ ಪತಿಯು ಹಣದ ಬದಲಾಗಿ ತನ್ನ ಪತ್ನಿ ಮತ್ತು ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಮನೆ ಮಾಲೀಕನಿಗೆ ಮುಕ್ತ ಅವಕಾಶ ಮಾಡಿಕೊಡುವ ಒಪ್ಪಂದಕ್ಕೆ ಮುಂದಾಗಿದ್ದಾನೆ. ಈ ಒಪ್ಪಂದದ ಅನ್ವಯ ಆರೋಪಿ ಮನೆ ಮಾಲೀಕನು ತಾಯಿ ಮತ್ತು ಮಗಳ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.

Jwala Gutta: ಹೆರಿಗೆಯಾದ ಮೊದಲ ವರ್ಷದಲ್ಲೇ 60 ಲೀಟರ್ ಎದೆಹಾಲು ದಾನ ಮಾಡಿದ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ
Jwala Gutta: ಹೆರಿಗೆಯಾದ ಮೊದಲ ವರ್ಷದಲ್ಲೇ 60 ಲೀಟರ್ ಎದೆಹಾಲು ದಾನ ಮಾಡಿದ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ

ಅಜ್ಜಿಯ ದೂರಿನಿಂದ ಬಯಲಾದ ರಹಸ್ಯ

ನೊಂದ ಮಹಿಳೆ ತನಗಾಗುತ್ತಿದ್ದ ಅನ್ಯಾಯದ ಬಗ್ಗೆ ತನ್ನ ತಾಯಿಗೆ ವಿಷಯ ತಿಳಿಸಿದ್ದಾರೆ. ಇದರಿಂದ ಆಘಾತಕ್ಕೊಳಗಾದ ಆಕೆಯ ತಾಯಿ ತಕ್ಷಣವೇ ಮೊರ್ಬಿ ಪೊಲೀಸ್ ಠಾಣೆಗೆ ಧಾವಿಸಿ ದೂರು ದಾಖಲಿಸಿದ್ದಾರೆ. ಸಂತ್ರಸ್ತರಲ್ಲಿ ಒಬ್ಬರು ಅಪ್ರಾಪ್ತ ಬಾಲಕಿಯಾಗಿರುವುದರಿಂದ ಪೊಲೀಸರು ಕಠಿಣವಾದ 'ಪೋಕ್ಸೋ' ಕೇಸ್‌ ಹಾಗೂ ಭಾರತೀಯ ನ್ಯಾಯ ಸಂಹಿತೆಯ (BNS) ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ತಕ್ಷಣವೇ ಬಾಲಕಿಯ ತಂದೆ ಮತ್ತು ಮನೆ ಮಾಲೀಕನನ್ನು ಬಂಧಿಸಿದ್ದಾರೆ.

"ಅಪ್ರಾಪ್ತ ಬಾಲಕಿ ಮತ್ತು ಆಕೆಯ ತಾಯಿಯ ಮೇಲಿನ ಲೈಂಗಿಕ ದೌರ್ಜನ್ಯದ ಹಿಂದೆ ಆಕೆಯ ತಂದೆ ಮತ್ತು ಮಾಲೀಕ ಇಬ್ಬರೂ ಸೇರಿ ಸಂಚು ರೂಪಿಸಿದ್ದರು. ಇಬ್ಬರನ್ನೂ ಬಂಧಿಸಲಾಗಿದೆ. ಜೊತೆಗೆ ಈ ಅಪರಾಧ ಕೃತ್ಯದಲ್ಲಿ ಮೂರನೇ ವ್ಯಕ್ತಿ ಕೂಡ ಭಾಗಿಯಾಗಿರುವ ಶಂಕೆ ಇದ್ದು, ಆತನ ಪತ್ತೆಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ" ಎಂದು ಮೊರ್ಬಿ ಉಪ ಪೊಲೀಸ್ ವರಿಷ್ಠಾಧಿಕಾರಿ ಜೆ.ಎಂ.ಲಾಲ್ ತಿಳಿಸಿದ್ದಾರೆ. ಪ್ರಸ್ತುತ ನೊಂದ ತಾಯಿ ಮತ್ತು ಮಗಳಿಗೆ ಸೂಕ್ತ ಪೊಲೀಸ್ ರಕ್ಷಣೆ ಹಾಗೂ ವೈದ್ಯಕೀಯ ನೆರವು ನೀಡಲಾಗಿದ್ದು, ಮಾನವ ಕುಲವೇ ತಲೆತಗ್ಗಿಸುವಂತೆ ಮಾಡಿದ ಈ ಕೃತ್ಯದ ಕುರಿತು ಪೊಲೀಸರು ಉನ್ನತ ಮಟ್ಟದ ತನಿಖೆ ಮುಂದುವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+