Virat Kohli: ಆರಂಭದಲ್ಲೇ ಆರ್‌ಸಿಬಿ ಟ್ರೋಫಿ ಗೆದ್ದಿದ್ದರೆ ಸಂಭ್ರಮ ಇರುತ್ತಿರಲಿಲ್ಲ: ವಿರಾಟ್‌ ಕೊಹ್ಲಿ ಹೀಗೆ ಹೇಳಿದ್ಯಾಕೆ?

Virat Kohli: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಸುದೀರ್ಘ ವರ್ಷಗಳ ಕಾಯುಕೆಯ ಬಳಿಕ 18ನೇ ಆವೃತ್ತಿಯಲ್ಲಿ ಚೊಚ್ಚಲ ಐಪಿಎಲ್‌ ಟ್ರೋಫಿ ಎತ್ತಿಹಿಯಿತು. ಆ ವೇಳೆಯ ತಮಗೆ ಆದ ಅನುಭವವನ್ನು ವಿರಾಟ್‌ ಕೊಹ್ಲಿ ಅವರು ಹಂಚಿಕೊಂಡಿದ್ದಾರೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಆರ್‌ಸಿಬಿ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ ಅವರು, 18 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ತಂಡ ಚೊಚ್ಚಲ ಐಪಿಎಲ್‌ ಟ್ರೋಫಿಯನ್ನು ಎತ್ತಿ ಹಿಡಿದಾಗ ಉಂಟಾದ ಅನುಭವವನ್ನು ವಿವರಿಸುವುದು ಅಸಾಧ್ಯ ಎಂದು ಹೇಳಿದ್ದಾರೆ. "ಕೊನೆಗೆ ಮೊಣಕಾಲು ಊರಿ ಕುಳಿತು, ಕೈಮುಗಿದು ದೇವರಿಗೆ ಧನ್ಯವಾದಗಳು ಎಂದು ಹೇಳುವ ಮೂಲಕ ಹೊರಬಂದೆವು. ನಾನು ಆಟವನ್ನು ನಿಲ್ಲಿಸುವ ಮೊದಲು ಈ ಸುಂದರ ಕ್ಷಣವನ್ನು ಅನುಭವಿಸಲು ಸಾಧ್ಯವಾಯಿತಲ್ಲ ಎಂಬ ಸಮಾಧಾನ ನನಗಿದೆ," ಎಂದು ಹೇಳಿದರು.

Virat Kohli Gets Emotional Over RCB s First IPL Trophy Win RCB IPL 2025 Viral on Social media

2008ರಿಂದಲೂ ತಂಡದ ಭಾಗವಾಗಿರುವ ಕೊಹ್ಲಿ ಅವರಿಗೆ ಈ ಪ್ರಶಸ್ತಿ ಗೆಲುವು ವೈಯಕ್ತಿಕ ಸಾಧನೆಗಿಂತಲೂ ಮಿಗಿಲಾತ್ತು. ಮೈದಾನದಲ್ಲಿ ಮೊಣಕಾಲು ಊರಿ ಅವರು ಸಂಭ್ರಮಿಸಿದ ರೀತಿ ಅವರ ಸುದೀರ್ಘ ಕಾಯುವಿಕೆ ಮತ್ತು ನಿಷ್ಠೆಯನ್ನು ಎತ್ತಿ ತೋರಿಸಿತ್ತು. ಆರ್‌ಸಿಬಿ ತಂಡಕ್ಕೆ ಮೊದಲ ಟ್ರೋಫಿ ತಂದುಕೊಡುವಲ್ಲಿ ಕೊಹ್ಲಿ ಅವರ ಕೊಡುಗೆ ಮತ್ತು ಅವರ ಮೇಲಿದ್ದ ಒತ್ತಡಕ್ಕೆ ಈ ಗೆಲುವು ಒಂದು ದೊಡ್ಡ ಮೌಲ್ಯ ತಂದುಕೊಟ್ಟಿದೆ.

ಪಂಜಾಬ್ ಕಿಂಗ್ಸ್‌ ವಿರುದ್ಧ ಆರ್‌ಸಿಬಿ ಗೆಲುವು

ಜೂನ್ 3ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ಆರ್‌ಸಿಬಿ ಚೊಚ್ಚಲ ಐಪಿಎಲ್‌ ಪ್ರಶಸ್ತಿಯನ್ನು ಗೆದ್ದ ವೇಳೆ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಭಾವುಕರಾಗಿ ಕಣ್ಣೀರಿಟ್ಟರು. ಈ ಬಗ್ಗೆ ಮಾತನಾಡಿ ಕೊಹ್ಲಿ, "ಹಲವು ಬಾರಿ ಗೆಲುವಿನ ಹತ್ತಿರ ಬಂದು ಸೋತಿದ್ದು ಮತ್ತು ಅನುಭವಿಸಿದ ನೋವುಗಳೇ ಈ ವಿಜಯವನ್ನು ಹೆಚ್ಚು ಅರ್ಥಪೂರ್ಣವಾಗಿಸಿವೆ," ಎಂದು ಹೇಳಿದರು.

"ಆರಂಭದಲ್ಲೇ ಟ್ರೋಫಿ ಗೆದ್ದಿದ್ದರೆ ಸಂಭ್ರಮ ಇರುತ್ತಿರಲಿಲ್ಲ"

"ಒಂದು ವೇಳೆ ಆರ್‌ಸಿಬಿ ತಂಡವು ಆರಂಭಿಕ ವರ್ಷಗಳಲ್ಲೇ ಟ್ರೋಫಿ ಗೆದ್ದಿದ್ದರೆ ಈಗ ಆಗಿರುವ ಸಂತೋಷದ ಶೇಕಡಾ 5ರಷ್ಟು ಸಂಭ್ರಮವೂ ಇರುತ್ತಿರಲಿಲ್ಲ. ವರ್ಷಗಳ ಕಾಲ ಅನುಭವಿಸಿದ ಸೋಲುಗಳು, ಹೀಯಾಳಿಕೆಗಳು ಮತ್ತು ಮಾನಸಿಕ ಒತ್ತಡಗಳ ನಂತರ ಸಿಕ್ಕ ಈ ಯಶಸ್ಸು ನನ್ನ ಕ್ರಿಕೆಟ್ ಜೀವನದ ಅತ್ಯುತ್ತಮ ಅನುಭವವಾಗಿದೆ," ಎಂದು ವಿರಾಟ್‌ ಕೊಹ್ಲಿ ಅವರು ಹೇಳಿದ್ದಾರೆ.

"ಫೈನಲ್ ಪಂದ್ಯದ ಕೊನೆಯ ಓವರ್‌ನ ಕೊನೆಯ 4 ಎಸೆತಗಳಲ್ಲಿ ತಾವು ಅನುಭವಿಸಿದ ಭಾವನೆಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಗೆಲುವು ಖಚಿತವಾದ ಕ್ಷಣದಲ್ಲಿ ಅವರು ಮೊಣಕಾಲೂರಿ ಕುಳಿತು ದೇವರಿಗೆ ಧನ್ಯವಾದ ಅರ್ಪಿಸಿದೆವು. ನಾನು ಕ್ರಿಕೆಟ್ ಜೀವನ ಮುಗಿಸುವ ಮೊದಲೇ ಈ ಅನುಭವ ಸಿಕ್ಕಿದ್ದಕ್ಕೆ ಕೃತಜ್ಞನಾಗಿದ್ದೇನೆ," ಎಂದು ಅವರು ಭಾವನಾತ್ಮಕವಾಗಿ ಹೇಳಿದ್ದಾರೆ.

ಆರ್‌ಸಿಬಿ ಒಂದು ದೊಡ್ಡ ತಂಡವಾಗಿದ್ದರೂ ಎಂದಿಗೂ ಟ್ರೋಫಿ ಗೆದ್ದಿರಲಿಲ್ಲ ಎಂಬ ಕಳಂಕವಿತ್ತು. ಹೊರಗಿನಿಂದ ಅದನ್ನು ನೋಡುವುದಕ್ಕೂ ಮತ್ತು ಆ ತಂಡದ ಒಳಗೆ ಆ ಒತ್ತಡವನ್ನು ಅನುಭವಿಸುವುದಕ್ಕೂ ತುಂಬಾ ವ್ಯತ್ಯಾಸವಿದೆ. 2025ರ ಜಯವು ಆ ಎಲ್ಲಾ ಟೀಕೆಗಳಿಗೆ ಅಂತಿಮ ತೆರೆ ಎಳೆದಿದೆ. "ಒಂದು ವೇಳೆ ಆರ್‌ಸಿಬಿ ಎಂದಿಗೂ ಗೆಲ್ಲದಿದ್ದರೂ ತಾವು ಅದರ ಬಗ್ಗೆ ಪಶ್ಚಾತ್ತಾಪ ಪಡುತ್ತಿರಲಿಲ್ಲ. ಆದರೆ ಆ ಗೆಲುವಿನ ಸಂಭ್ರಮ ಹೇಗಿರುತ್ತದೆ ಎಂಬ ಕುತೂಹಲ ಮಾತ್ರ ಮನಸ್ಸಿನಲ್ಲಿ ಯಾವಾಗಲೂ ಕೊರೆಯುತ್ತಿತ್ತು," ಎಂದು ಹೇಳಿದ್ದಾರೆ. ಸದ್ಯ ಆರ್‌ಸಿಬಿ ತಂಡವು 2026ರ ಐಪಿಎಲ್‌ನಲ್ಲಿಯೂ ಅಮೋಘ ಪ್ರದರ್ಶನ ನೀಡುತ್ತಿದೆ. ವಿರಾಟ್‌ ಕೊಹ್ಲಿ ಅವರು 12 ಪಂದ್ಯಗಳಲ್ಲಿ 484 ರನ್ ಕಲೆಹಾಕಿದ್ದಾರೆ. ಒಟ್ಟಿನಲ್ಲಿ ಇವರು ಭಾವುಕರಾಗಿ ನೀಡಿರುವ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+