ಗುಜರಾತ್ ಟೈಟಾನ್ಸ್‌ಗೆ ಶಾಕ್ ನೀಡಿದ 93, 82, 52, 2, 1 ನಂಬರ್ಸ್; ಪ್ಲೇ-ಆಫ್ ರೇಸ್‌ನಲ್ಲಿ ಜೀವಂತವಾಗಿ ಉಳಿದ ಕೆಕೆಆರ್
KKR Vs GT IPL 2026: ಕೋಲ್ಕತ್ತಾದಲ್ಲಿ ಈಡನ್ ಗಾರ್ಡನ್ಸ್‌ನಲ್ಲಿ ಶನಿವಾರ (ಮೇ 16) ನಡೆದ ಐಪಿಎಲ್ 2026ರ 60ನೇ ಹೈವೋಲ್ಟೇಜ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ 29 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ತನ್ನ ಪ್ಲೇ-ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಗುಜರಾತ್ ಪಾಯಿಂಟ್ಸ್ ಟೇಬಲ್‌ನಲ್ಲಿ 16 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲೇ ಮುಂದುವರೆದಿದೆ.
ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್‌ಮನ್ ಗಿಲ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ಅಜಿಂಕ್ಯ ರಹಾನೆ ನಾಯಕತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 247 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು. ಆದರೆ ಕೆಕೆಆರ್ ನೀಡಿದ 248 ಗುರಿ ಮುಟ್ಟಲು ಸಾಧ್ಯವಾಗದೆ ಜಿಟಿ ಸೋಲೊಪ್ಪಿಕೊಂಡಿದೆ.

ಮಿಂಚಿದ ಫಿನ್ ಅಲೆನ್, ಗ್ರೀನ್, ರಘುವಂಶಿ
ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಫಿನ್ ಅಲೆನ್, ಕ್ಯಾಮಾರೊನ್ ಗ್ರೀನ್, ಅಂಗ್‌ಕ್ರಿಶ್ ರಘುವಂಶಿ ಸ್ಪೋಟಕ ಅರ್ಧಶತಕಗಳ ನೆರವಿನಿಂದ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 247 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು. ಆರಂಭಿಕ ಆಟಗಾರ ಫಿನ್ ಅಲೆನ್ ಕೇವಲ 35 ಎಸೆತಗಳಲ್ಲಿ 4 ಬೌಂಡರಿ, 10 ಸಿಕ್ಸ್‌ಗಳೊಂದಿಗೆ 93 ರನ್ ಚಚ್ಚಿದರೆ, ಅಂಗ್ಕ್ರಿಶ್ ರಘುವಂಶಿ 44 ಎಸೆತಗಳಲ್ಲಿ 4 ಬೌಂಡರಿ, 7 ಸಿಕ್ಸರ್‌ಗಳ ಸಹಿತ ಅಜೇಯ 82 ರನ್ ಬಾರಿಸಿದದರು. ಕ್ಯಾಮರೂನ್ ಗ್ರೀನ್ 28 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್‌ಗಳೊಂದಿಗೆ ಅಜೇಯ 52 ರನ್ ಕಲೆಹಾಕಿದರು.
ದುಬಾರಿಯಾದ ಜಿಟಿ ಬೌಲರ್ಸ್
ಗುಜರಾತ್ ಟೈಟಾನ್ಸ್ ಪರ ಬೌಲಿಂಗ್ ಮಾಡಿದ ಮೊಹ್ಮದ್ ಸಿರಾಜ್ ಒಂದು ವಿಕೆಟ್ ಪಡೆದರೂ 50 ರನ್ ನೀಡಿದರು. ಅಲ್ಲದೆ ರಶೀದ್ ಖಾನ್ ಯಾವುದೇ ವಿಕೆಟ್ ಕೀಳದೆ 57 ರನ್ ನೀಡಿದರು. ಉಳಿದಂತೆ ಜೇಸನ್ ಹೋಲ್ಡರ್ 39 ರನ್, ಕಗಿಸೋ ರಬಾಡ 40 ರನ್, ಸಾಯಿ ಕಿಶೋರ್ ಒಂದು ವಿಕೆಟ್ ಕಬಳಿಸಿ 38 ರನ್ ನೀಡಿದರೆ, ಅರ್ಷದ್ ಖಾನ್ 22 ರನ್‌ಗಳನ್ನು ಬಿಟ್ಟುಕೊಟ್ಟು ದುಬಾರಿಯಾದರು.
ಕೆಕೆಆರ್ ವಿರುದ್ಧ ಗುಜರಾತ್ ಟೈಟಾನ್ಸ್ ಸೋಲು
ಕೊಲ್ಕತ್ತಾ ನೈಟ್ ರೈಡರ್ಸ್ ನೀಡಿದ 248 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಪರ ನಾಯಕ ಶುಭ್‌ಮನ್ ಗಿಲ್ 49 ಎಸೆತಗಳಲ್ಲಿ 5 ಬೌಂಡರಿ, 7 ಸಿಕ್ಸರ್‌ಗಳ ಸಹಿತ 85 ರನ್ ಗಳಿಸಿ ಹೋರಾಟ ನಡೆಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಸಾಯಿ ಸುದರ್ಶನ್ ಮಧ್ಯದಲ್ಲೇ ಅವರು ಕೈಗೆ ಪೆಟ್ಟು ಬಿದ್ದು ಹೊರನಡೆದರು. ಬಳಿಕ ಮತ್ತೆ ಬಂದ ಅವರು ಒಟ್ಟು 28 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್‌ಗಳ ಸಹಿತ ಅಜೇಯ 53 ರನ್ ಸಿಡಿಸಿದರು.
ಜೋಸ್ ಬಟ್ಲರ್ ಸಹ 35 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 57 ರನ್‌ಗಳ ಕೊಡುಗೆ ನೀಡಿದು. ಕೊನೆಯಲ್ಲಿ ಸಾಯಿ ಸುದರ್ಶನ್ ಆಕ್ರಮಣಕಾರಿ ಆಟ ಮುಂದುವರೆಸಿದರು. ಆದರೂ ಅಂತಿಮವಾಗಿ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 29 ರನ್‌ಗಳಿಂದ ಸೋಲನುಭವಿಸಿತು. ಈ ಸೋಲಿನಿಂದಾಗಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಅಧಿಕೃತವಾಗಿ ಪ್ಲೇ-ಆಫ್ ಪ್ರವೇಶವನ್ನು ಖಚಿತಪಡಿಸಿಕೊಳ್ಳುವ ಅವಕಾಶ ಸದ್ಯಕ್ಕೆ ಕೈತಪ್ಪಿದೆ.
ಬೌಲಿಂಗ್‌ಲ್ಲಿ ಮಿಂಚಿದ ದುಬೆ, ನರೈನ್, ಗ್ರೀನ್
ಕೊಲ್ಕತ್ತಾ ನೈಟ್ ರೈಡರ್ಸ್ ಪರ ಅಂತಿಮ 19ನೇ ಓವರ್ ಬೌಲಿಂಗ್ ಅನ್ನು ಸೌರಭ್ ದುಬೆ ಉತ್ತಮವಾಗಿ ನಿಭಾಯಿಸಿದರು. ಈ ವೇಳೆ ಪಂದ್ಯ ಸಂಪೂರ್ಣವಾಗಿ ಕೊಲ್ಕತ್ತಾ ಪರ ತಿರುಗಿತು. ಕೆಕೆಆರ್ ಪರ ಬೌಲಿಂಗ್ ಮಾಡಿದ ಸುನೀಲ್ ನರೈನ್ ನಾಲ್ಕು ಓವರ್ ಬೌಲಿಂಗ್ ಎಸೆದು ಕೇವಲ 29 ರನ್ ನೀಡಿ 2 ವಿಕೆಟ್ ಕಿತ್ತು ಮಿಂಚಿದರೆ, ಸೌರಬ್ ದುಬೆ ಹಾಗೂ ಕ್ಯಾಮರೊನ್ ಗ್ರೀನ್ ತಲಾ ಒಂದು ವಿಕೆಟ್ ಪಡೆದರು
93, 82, 52, 2, 1 ನಂಬರ್ಸ್ ಅರ್ಥವೇನು?
ಗುಜರಾತ್ ಟೈಟಾನ್ಸ್ ವಿರುದ್ಧ ಕೆಕೆಆರ್‌ಗೆ ಗೆಲುವು ತಂದುಕೊಟ್ಟಿದ್ದು ಇದೇ ನಂಬರ್‌ಗಳು. ಇವುಗಳ ಅರ್ಥವನ್ನು ನೋಡುವುದಾದರೆ, ಕೆಕೆಆರ್ ಪರ ಫಿನ್ ಅಲೆನ್ 93 ರನ್, ಅಂಗ್‌ಕ್ರಿಶ್ ಅಜೇಯ 82 ರನ್, ಕ್ಯಾಮೆರೊನ್ ಗ್ರೀನ್ 52 ರನ್ ಸಿಡಿಸಿ ತಂಡ ಮೊತ್ತವನ್ನು 247ಕ್ಕೆ ತಲುಪಿಸಿದರು. ಬೌಲಿಂಗ್‌ನಲ್ಲಿ ಸುನೀಲ್ ನರೈನ್ 2 ವಿಕೆಟ್ ಪಡೆದು ಮಿಂಚಿದರೆ, ಕ್ಯಾಮೆರೊನ್ ಗ್ರೀನ್ ಹಾಗೂ ಸೌರಭ್ ಸುಬೆ ಆಪದ್ಭಾಂದವರಂತೆ ಬಂದು ಮಾರಕ ಬೌಲಿಂಗ್ ದಾಳಿ ನಡೆಸಿ ಜಿಟಿ ಬ್ಯಾಟರ್‌ಗಳ ರನ್ ವೇಗಕ್ಕೆ ಕಡಿವಾಣ ಹಾಕುವುದಲ್ಲದೆ ತಲಾ 1 ವಿಕೆಟ್ ಕಬಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.












Click it and Unblock the Notifications