ಬ್ಯೂಟಿ ಪಾರ್ಲರ್ ಬ್ಯಾನ್ ಮಾಡಿದ ಸರ್ಕಾರ: ಬಾಗಿಲು ಮುಚ್ಚಲು ಆದೇಶ!
ಹೆಣ್ಣಿಗೆ ಸೌಂದರ್ಯವೇ ಆಸ್ತಿ, ಸೌಂದರ್ಯವೇ ಸರ್ವಸ್ವ. ಕೆಲವರು ಸಹಜ ಸುಂದರಿಯರು ಬಿಡಿ, ಆದರೆ ಇನ್ನೂ ಕೆಲವರಿಗೆ ಬ್ಯೂಟಿ ಪಾರ್ಲರ್ ಅತ್ಯಗತ್ಯ. ಅಂತಹವರೆಲ್ಲಾ ಬ್ಯೂಟಿ ಪಾರ್ಲರ್‌ಗೆ ಎಂಟ್ರಿ ಹಾಕದಿದ್ರೆ ಊಟ ಸೇರಲ್ಲ, ನಿದ್ದೆ ಕೂಡ ಬರಲ್ಲ. ಹೀಗೆ ಪಾರ್ಲರ್‌ಗಳ ಮೂಲಕ ಲಕ್ಷ ಲಕ್ಷ ಸಂಪಾದನೆ ಮಾಡುತ್ತಾರೆ ಮಾಲೀಕರು. ಆದರೆ ಪಾರ್ಲರ್ ಪ್ರಿಯರಿಗೆ ದಿಢೀರ್ ಆಘಾತ ನೀಡಿರುವ ಸರ್ಕಾರ, ದೇಶದಲ್ಲಿ ಬ್ಯೂಟಿ ಪಾರ್ಲರ್ ಬ್ಯಾನ್ ಮಾಡಿದೆ!
ಹೌದು, ಬ್ಯೂಟಿ ಪಾರ್ಲರ್ ನಿಷೇಧ ಮಾಡಿ ಆದೇಶ ಹೊರಡಿಸಿರುವ ಸರ್ಕಾರ ಆಘಾತಕಾರಿ ಸುದ್ದಿ ಕೊಟ್ಟಿದೆ. ಇಷ್ಟುದಿನ ಬ್ಯೂಟಿ ಪಾರ್ಲರ್‌ಗೆ ಹೋಗಿ ಸಾವಿರಾರು ರೂಪಾಯಿ ಖರ್ಚು ಮಾಡುತ್ತಿದ್ದವರಿಗೆ ಶಾಕ್ ಸಿಕ್ಕಿದೆ. ಇಂತಹ ಸ್ಥಿತಿ ಎದುರಾಗಿದ್ದು ಏಕೆ? ಅಂತಾ ಯೋಚನೆ ಮಾಡ್ತಾ ಇದ್ದೀರಾ. ಅಷ್ಟಕ್ಕೂ ಇದಕ್ಕೆ ಕಾರಣ ಸರ್ಕಾರದ ಸರ್ವಾಧಿಕಾರಿ ನೀತಿ. ಜನರನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಎಂಬ ಅಹಂಕಾರ. ಈ ಕಾರಣಕ್ಕೆ ಈಗ ಬ್ಯೂಟಿ ಪಾರ್ಲರ್‌ಗೆ ಬೀಗ ಹಾಕಲು ಖಡಕ್ ಸೂಚನೆ ನೀಡಲಾಗಿದೆ. ಹಿಂಗಾದ ಮಾತ್ರಕ್ಕೆ, ಇಷ್ಟಕ್ಕೇ ಸುದ್ದಿ ಮುಗಿದಿಲ್ಲ ಇನ್ನೂ ಮುಖ್ಯ ಮಾಹಿತಿ ಮುಂದೆ ಇದೆ ಓದಿ.

ಗಂಡಸರಿಗೆ ಖಷಿ.. ಮಹಿಳೆಯರಿಗೆ ಬೇಸರ!
ಅಷ್ಟಕ್ಕೂ ಸರ್ಕಾರದ ಆದೇಶ ಗಂಡಸರಿಗೆ ಒಳಗೊಳಗೆ ಖಷಿ ಕೊಟ್ಟಿದ್ದರೂ, ಮಹಿಳೆಯರಿಗೆ ಭಾರಿ ಬೇಸರ ತರಿಸಿದೆ. ಆದರೆ ಆದೇಶ ನೀಡಿದ್ದು ಯಾವ ಸರ್ಕಾರ? ಕೇಂದ್ರ ಸರ್ಕಾರನಾ ಅಥವಾ ರಾಜ್ಯ ಸರ್ಕಾರನಾ? ಅಂತಾ ಯೋಜನೆ ಮಡ್ತಿದ್ದೀರಾ. ಅಷ್ಟಕ್ಕೂ ಇಂಥ ಆದೇಶ ಕೊಟ್ಟಿದ್ದು ಕೇಂದ್ರ ಸರ್ಕಾರ. ಆದರೆ ಭಾರತದ ಕೇಂದ್ರ ಸರ್ಕಾರವಲ್ಲ, ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ತಾಲಿಬಾನಿಗಳ ಕೇಂದ್ರ ಸರ್ಕಾರ! ಹೌದು, ತನ್ನ ತಿಕ್ಕಲು ತಿಕ್ಕಲು ಆದೇಶ ಮತ್ತು ನಿರ್ಧಾರಗಳಿಗೆ ಫೇಮಸ್ ಆಗಿರುವ ತಾಲಿಬಾನಿಗಳು ಈಗ ಮತ್ತೆ ಅಂತಹದ್ದೇ ಸೂಚನೆ ನೀಡಿದ್ದಾರೆ. ಈ ಆದೇಶ ಜಗತ್ತಿನಾದ್ಯಂತ ಸದ್ದು ಮಾಡುತ್ತಿದ್ದು ಆಕ್ರೋಶ ಕೂಡ ಭುಗಿಲೆದ್ದಿದೆ.
ಮೇಕಪ್ ಮಾಡಿ ಜೀವ ಸಾಗಿಸುತ್ತಿದ್ದರು..
ತಾಲಿಬಾನಿ ಸರ್ಕಾರ ಮಾಡುತ್ತಿರುವ ರೂಲ್ಸ್ ಒಂದಲ್ಲ.. ಎರಡಲ್ಲ.. ಇವರ ನಿರ್ಧಾರವೇ ಅಲ್ಲಿನ ಜನರ ಜೀವ ಹಿಂಡುತ್ತಿದೆ. ಈ ಹಿಂದೆ ಮಹಿಳೆಯರು ರೆಸ್ಟೋರೆಂಟ್‌ಗಳಲ್ಲಿ ಒಟ್ಟಿಗೆ ಕುಳಿತು ಊಟ ಮಾಡುವುದನ್ನು ನಿಷೇಧ ಮಾಡಿತ್ತು. ಹಾಗೇ ಯುವತಿಯರು ಶಾಲೆ ಅಥವಾ ಕಾಲೇಜುಗಳಿಗೆ ಹೋಗುವದನ್ನೂ ಬ್ಯಾನ್ ಮಾಡಿತ್ತು. ಇದನ್ನು ಬಿಡಿ ಹೆಣ್ಣುಮಕ್ಕಳು ಇಲ್ಲಿ ನೆಮ್ಮದಿಯಾಗಿ ಪಾರ್ಕ್ ಕಡೆಗೂ ಹೋಗುವಂತೆ ಇರಲಿಲ್ಲ. ಈಗ ನೋಡಿದರೆ ಮತ್ತೊಂದು ದರಿದ್ರ ಕಾನೂನು ತಂದಿದೆ ತಾಲಿಬಾನಿಗಳ ಸರ್ಕಾರ. ಮಹಿಳೆಯರು ಬ್ಯೂಟಿ ಪಾರ್ಲರ್‌ಗೆ ಹೋಗುವಂತಿಲ್ಲ ಎಂಬ ತಾಲಿಬಾನಿಗಳ ಆದೇಶದಿಂದ ಮೇಕಪ್ ಕಲಾವಿದರು ನಲುಗಿದ್ದು, ನಮ್ಮ ಕುಟುಂಬಗಳನ್ನು ನೋಡಿಕೊಳ್ಳುವವರು ಯಾರು? ಅಂತಾ ಪ್ರಶ್ನೆ ಮಾಡುತ್ತಿದ್ದಾರೆ.

ತಾಲಿಬಾನಿಗಳ ತಿಕ್ಕಲು ತಿಕ್ಕಲು ನಿರ್ಧಾರ!
ಅಂದಹಾಗೆ ಅಫ್ಘಾನಿಸ್ತಾನದ (Afghanistan) ತಾಲಿಬಾನ್ ಸರ್ಕಾರ ಕಾಬೂಲ್ ಸೇರಿ ಇತರ ಪ್ರಾಂತ್ಯಗಳಲ್ಲಿ ಮಹಿಳೆಯರ ಬ್ಯೂಟಿ ಸಲೂನ್ (Women Beauty Salons) ನಿಷೇಧಿಸುವಂತೆ ಖಡಕ್ ಸೂಚನೆ ಕೊಟ್ಟಿದೆ. ತಾಲಿಬಾನ್ (Taliban) ಸರ್ಕಾರದ ಸಚಿವಾಲಯದ ವಕ್ತಾರ ಮೊಹಮ್ಮದ್ ಅಕಿಫ್ ಈ ಆದೇಶ ಹೊರಡಿಸಿದ್ದಾನೆ. ತಕ್ಷಣ ಜಾರಿಗೆ ಬರುವಂತೆ ಮಹಿಳೆಯರ ಬ್ಯೂಟಿ ಸಲೂನ್ ನಿಷೇಧಿಸಲು ಆದೇಶ ಹೊರಡಿಸಿದ್ದಾನೆ. ಅಲ್ಲದೆ ಈ ಬಗ್ಗೆ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಪಾಲಿಕೆಗೆ ಸೂಚನೆ ನೀಡಿದ್ದಾನೆ. ಇದರ ಜೊತೆಗೆ ಅಫ್ಘಾನಿಸ್ತಾನದಲ್ಲಿ ಇರುವ ಇತರ ಪ್ರಾಂತ್ಯಗಳಲ್ಲೂ ಈ ಕಾನೂನು ಕಟ್ಟುನಿಟ್ಟಾಗಿ ಜಾರಿಗೆ ಬರುವಂತೆ ಸೂಚನೆ ನೀಡಲಾಗಿದೆ. ಅಲ್ಲಿನ ಜನ ಏನಪ್ಪಾ ಇದು ತಿಕ್ಕಲು ನಿರ್ಧಾರ? ಅಂತಾ ರೊಚ್ಚಿಗೆದ್ದಿದ್ದಾರೆ.
ತಾಲಿಬಾನಿಗಳಿಗೆ ಮಹಿಳೆಯರೇ ಟಾರ್ಗೆಟ್!
ಮಹಿಳೆಯರ ಮೇಲೆ ದಿನಕ್ಕೊಂದು ನಿಷೇಧ ಹೇರುತ್ತಿರುವ ತಾಲಿಬಾನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಟೀಕೆಗೂ ಗುರಿಯಾಗಿದೆ. ಆದರೆ ಇದಕ್ಕೆಲ್ಲ ಅವರು ಕೇರ್ ಮಾಡುತ್ತಿಲ್ಲ. ಈ ಕಾರಣಕ್ಕೆ ಪರಿಸ್ಥಿತಿ ಇನ್ನಷ್ಟು ಕೈಮೀರಿ ಹೋಗುತ್ತಿದೆ. ಅಮೆರಿಕ ಯಾವಾಗ ತಾಲಿಬಾನಿ ಕೈಯಲ್ಲಿ ಅಫ್ಘಾನಿಸ್ತಾನವನ್ನು ಬಿಟ್ಟು ಹೋಯ್ತೋ ಆಗಿನಿಂದಲೇ ಶುರುವಾಗಿದ್ದು ಕಿತ್ತಾಟ. ಅಂದಿನಿಂದ ಇಂದಿನ ತನಕ ಅಲ್ಲಿನ ಜನರಿಗೆ ನೆಮ್ಮದಿ ಇಲ್ಲ, ನೆಮ್ಮದಿಯಾಗಿ ಜೀವನವನ್ನು ಮಾಡಲು ಆಗುತ್ತಿಲ್ಲ. ಹೀಗಾಗಿಯೇ ದಿನದಿಂದ ದಿನಕ್ಕೆ ಜನರು ಪರದಾಡುತ್ತಿದ್ದಾರೆ. ಅಲ್ಲದೆ ತಾಲಿಬಾನಿಗಳ ನಿರ್ಧಾರದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾರಾದರೂ ಧ್ವನಿ ಎತ್ತುತ್ತಾರಾ? ಎಂದು ಕಾಯುತ್ತಿದ್ದಾರೆ.

2021ರಲ್ಲಿ ಹೊರಬಂದಿದ್ದ ಅಮೆರಿಕ ಸೇನೆ
ಅಷ್ಟಕ್ಕೂ ಸುಮಾರು 20 ವರ್ಷಗಳ ಸುದೀರ್ಘ ಹೋರಾಟದ ನಂತರ 2021ರ ಆಗಸ್ಟ್‌ನಲ್ಲಿ ಅಮೆರಿಕ ಸೇನೆ ಸಂಪೂರ್ಣವಾಗಿ ಅಫ್ಘಾನಿಸ್ತಾನ ತೊರೆದು ಹೊರಬಂದಿತ್ತು. ಅಧ್ಯಕ್ಷ ಜೋ ಬೈಡನ್ ಆಗಿನ ಸಮಯಕ್ಕೆ 2021ರ ಆಗಸ್ಟ್ 31ನ್ನು ಡೆಡ್‌ಲೈನ್ ಆಗಿ ನೀಡಿ, ಅಮೆರಿಕದ ಸಂಪೂರ್ಣ ಸೇನೆ ಹೊರಗೆ ಕರೆಸಿಕೊಂಡರು. ಅಷ್ಟೇ ಅಲ್ಲಿಗೆ ಅಫ್ಘಾನಿಸ್ತಾನ ಜನರ ನೆಮ್ಮದಿ ಹಾರಿಹೋಗಿತ್ತು. ಅಲ್ಲಿ ಜನಕ್ಕೆ ನೆಮ್ಮದಿಯಾಗಿ ಬದುಕು ಹಕ್ಕು ಕೂಡ ಇಲ್ಲ ಮಹಿಳೆಯರು ಹೊರಗೆ ಬರುವ ಹಕ್ಕು ಕೂಡ ಇಲ್ಲ. ಹೀಗೆ ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ಆಡಳಿತಕ್ಕೆ ಸಿಲುಕಿ ನರಳುತ್ತಿದ್ದು, ಇಡೀ ದೇಶವೇ ಅಕ್ಷರಶಃ ಜೈಲಿನ ರೂಪ ಪಡೆದಿದೆ.
ಅಮಾಯಕರ ರಕ್ತಪಾತ ನಡೆದಿತ್ತು
ಒಟ್ನಲ್ಲಿ ಥೇಟ್ ನರಕವಾಗಿ ಬದಲಾಗಿರುವ ಅಫ್ಘಾನಿಸ್ತಾನವು ಉಗ್ರರ ಕೈಯಲ್ಲಿ ಸಿಲುಕಿದೆ. ಅಮೆರಿಕ ಅಫ್ಘಾನ್ ಬಿಟ್ಟು ಹೋಗುವಾಗ ಸಾಕಷ್ಟು ಅಫ್ಘಾನಿಸ್ತಾನ ಪ್ರಜೆಗಳು ದೇಶ ಬಿಟ್ಟು ಓಡಿ ಹೋಗಲು ಯತ್ನಿಸಿದ್ದರು. ಆದ್ರೆ ಈ ಸಂದರ್ಭದಲ್ಲಿ ವಿಮಾನದಿಂದ ಬಿದ್ದು ಹಲವರು ಜೀವ ಕಳೆದುಕೊಂಡರು. ಈ ನಡುವೆ ಐಸಿಸ್ ಉಗ್ರರು (ISIS Terrorist) ಕೂಡ ಜೀವ ಉಳಿಸಿಕೊಳ್ಳಲು ಓಡುತ್ತಿದ್ದ ಅಫ್ಘಾನಿಸ್ತಾನ ಜನರ ಮೇಲೆ ಗುಂಡು ಹಾರಿಸಿ ಕೊಲೆಗೈದರು. ಈ ಘಟನೆ ಬಳಿಕ ಮತ್ತೆ ಅಫ್ಘಾನಿಸ್ತಾನದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಇಷ್ಟೆಲ್ಲಾ ಸಮಸ್ಯೆ ಬಳಿಕ ಇದೀಗ ಮತ್ತೊಮ್ಮೆ ತಾಲಿಬಾನಿಗಳ ಉಪಟಳ ಜೋರಾಗುತ್ತಿದ್ದು, ಅಲ್ಲಿನ ಜನ ಪರದಾಡುತ್ತಿದ್ದಾರೆ. ಆದರೆ ಇದರ ಬಗ್ಗೆ ಧ್ವನಿ ಎತ್ತಬೇಕಿದ್ದ ಜಗತ್ತು ಸುಮ್ಮನೆ ಇರುವುದು ವಿಪರ್ಯಾಸ. ಈಗಲಾದರೂ ವಿಶ್ವಸಂಸ್ಥೆ ಅಥವಾ ಒಂದಾನೊಂದು ಕಾಲದಲ್ಲಿ ಅಫ್ಘಾನಿಸ್ತಾನ ಮೇಲೆ ಹಿಡಿತ ಸಾಧಿಸಿದ್ದ ಅಮೆರಿಕ ಮಧ್ಯ ಪ್ರವೇಶಿಸಬೇಕಿದೆ. ಈ ಮೂಲಕ ನಮ್ಮನ್ನು ಕಾಪಾಡಬೇಕಿದೆ ಅನ್ನೋದು ಸ್ಥಳೀಯರ ಒತ್ತಾಯ. ಆದರೆ ಈ ಮನವಿಗೆ ಬೇರೆ ದೇಶಗಳು ಬೆಂಬಲ ನೀಡುತ್ತವಾ? ಇಲ್ಲ ತಾಲಿಬಾನಿಗಳಿಗೆ ಹೆದರಿ ಸೈಲೆಂಟ್ ಆಗಿರ್ತವಾ? ಅನ್ನೋದನ್ನ ಕಾದು ನೋಡಬೇಕು.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications