ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಒಕೆ ದೌರ್ಜನ್ಯಘಟನೆಗಳಿಗೆ ಪಾಕಿಸ್ತಾನವೇ ಹೊಣೆ ಎಂದ ರಾಜನಾಥ್ ಸಿಂಗ್

|
Google Oneindia Kannada News

ಶ್ರೀನಗರ, ಅಕ್ಟೋಬರ್ 27: ಜಮ್ಮು ಮತ್ತು ಕಾಶ್ಮೀರದ ಪಿಒಕೆಯಲ್ಲಿನ ದೌರ್ಜನ್ಯದ ಭಾರವನ್ನು ಪಾಕಿಸ್ತಾನ ಭರಿಸಲಿದೆ' ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶೌರ್ಯ ದಿವಸ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮಾತನಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, "ಪಿಒಕೆಯಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ಭಾರವನ್ನು ಪಾಕಿಸ್ತಾನ ಭರಿಸಲಿದೆ. ಅಲ್ಲಿ ನಡೆಯುವ ಎಲ್ಲಾ ರೀತಿಯ ಅಮಾನವೀಯ ಘಟನೆಗಳಿಗೆ ಪಾಕಿಸ್ತಾನವೇ ಸಂಪೂರ್ಣ ಹೊಣೆಯಾಗಿದೆ" ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಅಲ್ಲಿ ಶೌರ್ಯ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಯೋತ್ಪಾದನೆ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಸಾಮಾನ್ಯ ಜನರ ಮೇಲಿನ ದೌರ್ಜನ್ಯ ಮತ್ತು ಇತರ ವಿಷಯಗಳನ್ನು ಉಲ್ಲೇಖಿಸಿ ಪಾಕಿಸ್ತಾನವನ್ನು ಬಲವಾಗಿ ಗುರಿಯಾಗಿಸಿದರು. ಇಂದು ವೀರ ಯೋಧರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸುವ ದಿನವಾಗಿದೆ ಎಂದರು. ಇಂದು ನಾವು ಕಾಣುತ್ತಿರುವ ಭಾರತದ ಬೃಹತ್ ಕಟ್ಟಡವು ವೀರ ಯೋಧರ ತ್ಯಾಗದ ತಳಹದಿಯ ಮೇಲೆ ನಿಂತಿದೆ. ಇದರೊಂದಿಗೆ ರಾಜನಾಥ್ ಸಿಂಗ್ ಅವರು "ಭಾರತ ಮತ್ತು ಪಾಕಿಸ್ತಾನದ ನಡುವೆ 1947ರಲ್ಲಿ ವಿಭಜನೆಯ ಸ್ಕ್ರಿಪ್ಟ್ ಬರೆಯಲಾಗಿದೆ ಎಂದು ಹೇಳಿದರು.

ಪಿಒಕೆಯಲ್ಲಿನ ದೌರ್ಜನ್ಯದ ಭಾರ ಪಾಕಿಸ್ತಾನವೇ ಭರಿಸಲಿದೆ
ಪಾಕಿಸ್ತಾನವು ಅನಧಿಕೃತವಾಗಿ ಆಕ್ರಮಿಸಿಕೊಂಡಿರುವ ನಮ್ಮ ಪ್ರದೇಶದ ಜನರಿಗೆ ಎಷ್ಟು ಹಕ್ಕುಗಳನ್ನು ನೀಡಿದೆ ಎಂದು ನಾನು ಪಾಕಿಸ್ತಾನವನ್ನು ಕೇಳಲು ಬಯಸುತ್ತೇನೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಇಂದು ಪಿಒಕೆಯಲ್ಲಿ ನಡೆಯುತ್ತಿರುವ ಅಮಾನವೀಯ ಘಟನೆಗಳಿಗೆ ಪಾಕಿಸ್ತಾನವೇ ಸಂಪೂರ್ಣ ಹೊಣೆಯಾಗಿದೆ ಎಂದು ಹೇಳಿದ್ದಾರೆ. ಇಂದು ಪಿಒಕೆಯಲ್ಲಿ ದೌರ್ಜನ್ಯದ ಬೀಜ ಬಿತ್ತುತ್ತಿರುವ ಪಾಕಿಸ್ತಾನಕ್ಕೆ ಮುಂಬರುವ ದಿನಗಳಲ್ಲಿ ಕಂಟಕ ಎದುರಾಗಲಿದೆ ಎಂದು ಹೇಳಿದರು.

Rajnath Singh says Pakistan committing atrocities against people in PoK, will have to bear consequences

ಭಯೋತ್ಪಾದನೆಗೆ ಧರ್ಮವಿಲ್ಲ
"ಕಾಶ್ಮೀರಿಯತ್ ಹೆಸರಿನಲ್ಲಿ ಈ ರಾಜ್ಯವು ಕಂಡ ಭಯೋತ್ಪಾದನೆಯ ಉಗ್ರವಾದವನ್ನು ವಿವರಿಸಲು ಸಾಧ್ಯವಿಲ್ಲ" ಎಂದು ರಾಜನಾಥ್ ಸಿಂಗ್ ಹೇಳಿದರು. ಇದರೊಂದಿಗೆ ಅನೇಕರು ಭಯೋತ್ಪಾದನೆಯನ್ನು ಧರ್ಮದೊಂದಿಗೆ ಜೋಡಿಸಲು ಪ್ರಯತ್ನಿಸಿದರು. ಆದರೆ, ಭಯೋತ್ಪಾದನೆಯ ಬಲಿಪಶುಗಳು ಯಾವುದಾದರೂ ಒಂದು ಧರ್ಮಕ್ಕೆ ಸೀಮಿತರಾಗಿದ್ದಾರೆಯೇ ಎಂಬ ಪ್ರಶ್ನೆಯನ್ನು ಅವರು ಕೇಳಿದರು. ಒಬ್ಬ ಭಯೋತ್ಪಾದಕನು ಹಿಂದೂ ಅಥವಾ ಮುಸಲ್ಮಾನನನ್ನು ನೋಡಿದ ನಂತರ ವರ್ತಿಸುತ್ತಾನೆಯೇ? ಭಯೋತ್ಪಾದಕರಿಗೆ ಭಾರತವನ್ನು ಗುರಿಯಾಗಿಸಿಕೊಂಡು ತಮ್ಮ ಯೋಜನೆಗಳನ್ನು ಹೇಗೆ ಕಾರ್ಯಗತಗೊಳಿಸಬೇಕೆಂದು ಮಾತ್ರ ತಿಳಿದಿದೆ ಆದರೆ, ಭಯೋತ್ಪಾದನೆಗೆ ಧರ್ಮವಿಲ್ಲ ಕಾಶ್ಮೀರಿಯತ್ ಹೆಸರಲ್ಲಿ ಭಯೋತ್ಪಾದನೆಗೆ ಅವಕಾಶವಿಲ್ಲವೆಂದು ರಕ್ಷಣಾ ಸಚಿವರು ಹೇಳಿದರು.
Rajnath Singh says Pakistan committing atrocities against people in PoK, will have to bear consequences

ಜಮ್ಮು-ಕಾಶ್ಮೀರವನ್ನು ಬಹುಕಾಲ ಕತ್ತಲಲ್ಲಿಡಲು ಸ್ವಾರ್ಥ ರಾಜಕಾರಣವೇ ಕಾರಣ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ. ಸ್ವಾತಂತ್ರ್ಯದ ನಂತರ, ಕೆಲವು ಸ್ವಾರ್ಥಿಗಳು ಕಾಶ್ಮೀರಿ ಸಮಾಜವನ್ನು ಅನೇಕ ಭಾಗಗಳಾಗಿ ವಿಭಜಿಸಿದರು, ಇದರಿಂದಾಗಿ ಜನರು ಕಾಶ್ಮೀರಿಯತ್‌ನ್ನು ಮರೆತು ಕಾಶ್ಮೀರಿ ಸಮಾಜವು ಹಿಂದೂಗಳು, ಮುಸ್ಲಿಮರು, ರಜಪೂತರು ಮತ್ತು ಸಿಖ್ಖರೆಂದು ವಿಭಜನೆಯಾಯಿತು ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

English summary
Rajnath Singh says Pakistan committing atrocities against people in PoK, will have to bear consequences Read more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X