ಈ ಮಾರುಕಟ್ಟೆಯಲ್ಲಿ ತರಕಾರಿಯಲ್ಲ ಜೀವಂತ ಇಲಿಗಳ ಮಾರಾಟ! ಖರೀದಿಗೂ ನಿಲ್ತಾರೆ ಸಾಲು ಸಾಲು ಜನ
ಮಾರುಕಟ್ಟೆ ಅಂದ ತಕ್ಷಣ ನಮ್ಮ ಮನಸ್ಸಿಗೆ ಬರುವುದು ಹಣ್ಣು, ತರಕಾರಿಗಳಿಂದ ತುಂಬಿದ ಜಾಗ. ಅಲ್ಲಿ ತಮಗೆ ಬೇಕಾದ ತರಕಾರಿಗಳನ್ನು ಆರಿಸುತ್ತಿರುವ ಜನ. ಇನ್ನು ಕೆಲವೊಮ್ಮೆ ಮನೆಯ ಬಳಿಯೂ ಟೆಂಪೋದಲ್ಲಿಯೋ ತಳ್ಳುಗಾಡಿಯಲ್ಲಿಯೋ ತರಕಾರಿಗಳನ್ನು ಮಾರಾಟ ಮಾಡಿಕೊಂಡು ಬರುವುದು ನಮ್ಮಲ್ಲಿ ಸರ್ವೇ ಸಾಮಾನ್ಯ. ಮಾರುಕಟ್ಟೆಗೆ ಹೋಗಲು ಸಾಧ್ಯವಿಲ್ಲ ಎನ್ನುವವರು ಈ ಗಾಡಿಗಳ ವ್ಯಾಪಾರಿಗಳಿಂದ ಟಿಮೊಟೋ, ಈರುಳ್ಳಿ, ಆಲೂಗಡ್ಡೆ.. ಹೀಗೆ ತಮಗೆ ಬೇಕಾದ ತರಕಾರಿಗಳನ್ನು ಖರೀದಿಸುತ್ತಾರೆ. ಆದರೆ ಇಲ್ಲೊಂದು ಮಾರುಕಟ್ಟೆಯಿದೆ. ಇಲ್ಲಿ ಮಾರಾಟವಾಗುವುದು ಹಣ್ಣೂ ಅಲ್ಲ ತರಕಾರಿಯೂ ಅಲ್ಲ.
ಜೀವಂತ ಇಲಿಗಳ ಮಾರಾಟ ವಿಡಿಯೋ ವೈರಲ್
ಪ್ರಪಂಚದ ಬೇರೆ ಬೇರೆ ಕಡೆ ನಾನಾ ರೀತಿಯ ಸಂಸ್ಕೃತಿ, ಆಹಾರ ಪದ್ದತಿ ಇದೆ. ಆದರೆ ಕೆಲವೊಮ್ಮೆ ಕೆಲವೊಂದು ಜಾಗದ ಪದ್ದತಿ, ಆಚಾರ, ವಿಚಾರ, ಸಂಪ್ರದಾಯಗಳು ಆಶ್ಚರ್ಯವನ್ನು ಉಂಟು ಮಾಡುತ್ತವೆ. ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ನೋಡುಗರನ್ನು ಬೆರಗಾಗಿಸಿ ಬಿಡುತ್ತದೆ. ಇದು ರಸ್ತೆ ಬದಿಯ ಮಾರುಕಟ್ಟೆ. ಈ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಟ್ಟಿರುವ ವಸ್ತುವೇ ಎಲ್ಲರ ಗಮನ ಸೆಳೆಯುತ್ತಿರುವುದು.

ಸಾಮಾನ್ಯವಾಗಿ ರಸ್ತೆ ಬದಿಯ ಮಾರುಕಟ್ಟೆಗಳಲ್ಲಿ ತರಕಾರಿಗಳು, ಹಣ್ಣುಗಳು ಮತ್ತು ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ. ಆದರೆ ಈ ವೀಡಿಯೊ ಸಂಪೂರ್ಣವಾಗಿ ವಿಭಿನ್ನವಾಗಿದೆ. ಟೆಂಪೋವೊಂದರಲ್ಲಿ ಜೀವಂತ ಇಲಿಗಳನ್ನು ಮಾರಾಟ ಮಾಡಲಾಗುತ್ತದೆ. ಮಾತ್ರವಲ್ಲ ಜನ ಸಾಲಿನಲ್ಲಿ ನಿಂತು ಇಲಿಗಳನ್ನು ಖರೀದಿಸುತ್ತಾರೆ. ತರಕಾರಿಗಳನ್ನು ಆರಿಸಿ ತೆಗೆದು ಖರೀದಿಸುವಂತೆ ಇಲ್ಲಿ ಜನರು ಇಲಿಗಳನ್ನು ಕೂಡಾ ಹೆಕ್ಕಿ ಹೆಕ್ಕಿ ತೆಗೆಯುತ್ತಾರೆ. ಇವುಗಳ ಗಾತ್ರ, ಬಣ್ಣ, ತೂಕ ಎಲ್ಲವೂ ಇವರಿಗೆ ಮುಖ್ಯವಾಗಿರುತ್ತದೆ.
ಮೊದಲ ನೋಟದಲ್ಲಿ ನೋಡುವಾಗ ಇಲ್ಲಿ ಜನ ತರಕಾರಿ ಖರೀದಿ ಮಾಡಲೆಂದೇ ಸೇರಿರುವ ಹಾಗೆ ಕಾಣುತ್ತದೆ. ಕೈಯ್ಯಲ್ಲಿ ಚೀಲಗಳನ್ನು ಹಿಡಿದುಕೊಂಡು ಒಂದೊಂದೇ ಇಲಿಗಳನ್ನು ಆರಿಸಿ ತೆಗೆದು ತಮ್ಮ ತಮ್ಮ ಚೀಲಗಳಿಗೆ ತುಂಬಿ ಕೊಳ್ಳುತ್ತಾರೆ. ನಂತರ ತಮಗೆ ಎಷ್ಟು ಬೇಕೋ ಅಷ್ಟು ಇಲಿಗಳನ್ನು ತೂಕಕ್ಕೆ ಹಾಕಿ ಖರೀದಿಸುತ್ತಾರೆ.
ಅಷ್ಟಕ್ಕೂ ಇಲಿಗಳ ಖರೀದಿ ಯಾಕೆ
ಆಹಾರ ಮತ್ತು ಜೀವನಶೈಲಿಗಳು ಪ್ರಪಂಚದಾದ್ಯಂತ ಬೇರೆ ಬೇರೆಯಾಗಿವೆ. ಒಂದು ದೇಶದಲ್ಲಿ ವಿಚಿತ್ರವೆನಿಸುವ ವಿಷಯಗಳು ಇನ್ನೊಂದು ದೇಶದಲ್ಲಿ ಸಾಮಾನ್ಯವಾಗಿರಬಹುದು. ಏಷ್ಯಾದ ಅನೇಕ ದೇಶಗಳಲ್ಲಿ, ಆಹಾರ ಪದ್ಧತಿಗಳು ಮತ್ತು ಮಾರುಕಟ್ಟೆ ಪದ್ಧತಿಗಳು ಭಾರತಕ್ಕಿಂತ ಭಿನ್ನವಾಗಿವೆ. ಇಲ್ಲಿಯವರಿಗೆ ಇಲಿಗಳು ಕೂಡಾ ಆಹಾರದ ಒಂದು ಭಾಗವೇ. ಹಾಗಾಗಿಯೇ ಇಲ್ಲಿ ಜೋರಾಗಿರುವುದು ಇಲಿಗಳ ಖರೀದಿ ಭರಾಟೆ.
चीन में प्याज की बिक्री
— 🇮🇳Jitendra pratap singh🇮🇳 (@jpsin1) May 15, 2026
जैसे हमारे यहां भारत में लारियों पर गली में प्याज बेचने वाले आते हैं और महिलाएं अच्छा प्याज छाँट कर खरीदती हैं वैसे ही चाइना वाले अपना प्याज खरीद रहे हैं
😂😂 pic.twitter.com/dx3WR2KCY3
ಪ್ರಸ್ತುತ, ಈ ವೀಡಿಯೊ ಆನ್‌ಲೈನ್‌ನಲ್ಲಿ ಚರ್ಚೆಯ ವಿಷಯವಾಗಿದೆ. ಕೆಲವರು ಇದರ ಬಗ್ಗೆ ಆಶ್ಚರ್ಯವ್ಯಕ್ತಪಡಿಸಿದರೆ ಇನ್ನು ಕೆಲವರು ಅದನ್ನು ಆನಂದಿಸುತ್ತಿದ್ದಾರೆ. ಈ ವಿಡಿಯೋಗೆ ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್‌ಗಳ ಮಹಾಪೂರವೇ ಹರಿದಿದೆ. ಅನೇಕ ಬಳಕೆದಾರರು, ಇದನ್ನು ಪದೇ ಪದೇ ನೋಡಿದ ನಂತರವೂ, ನಿಜಕ್ಕೂ ಹೀಗಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ಕೆಲವರು ಬಹಳ ತಮಾಷೆಯಾಗಿ ಪ್ರತಿಕ್ರಯಿಸದರೆ ಇನ್ನು ಕೆಲವರು ವಿಶ್ವದ ವಿಚಿತ್ರ ಮಾರುಕಟ್ಟೆಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.
(ಬರಹ: ರಂಜಿತಾ ಆರ್.ಕೆ)













Click it and Unblock the Notifications