ಭಾರತ ಬಿಟ್ಟು ಓಡಿದ ತಾಲಿಬಾನ್, ತಪ್ಪಾಯ್ತು ಕ್ಷಮಿಸಿ ಎಂದ ಉಗ್ರರು!
ಅಫ್ಘಾನಿಸ್ತಾನದ ಆಡಳಿತ ತಾಲಿಬಾನ್ ಕೈಗೆ ಸಿಕ್ಕ ನಂತರ ಏನೇನೋ ಆಗಿದೆ. ತಾಲಿಬಾನ್ ಉಗ್ರರು ಮನಸ್ಸಿಗೆ ಬಂದ ನಿಯಮ ಹೇರುತ್ತಿದ್ದಾರೆ. ಹಾಗೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಷೇಧ ಎದುರಿಸಿದ ಪರಿಣಾಮ, ಅಫ್ಘಾನಿಸ್ತಾನ ಆರ್ಥಿಕತೆ ಪಾತಾಳಕ್ಕೆ ಕುಸಿದು ಹೋಗಿದೆ. ಹೀಗಿದ್ದರೂ ತಗ್ಗಿಬಗ್ಗಿ ನಡೆಯುವುದು ತಾಲಿಬಾನ್ ಸರ್ಕಾರಕ್ಕೆ & ಸರ್ಕಾರ ನಡೆಸುವವರಿಗೆ ಗೊತ್ತೇ ಇಲ್ಲ. ಅದರ ಪರಿಣಾಮವನ್ನು ಇದೀಗ ಅಫ್ಘಾನ್ ಜನರು ಅನುಭವಿಸುತ್ತಿದ್ದಾರೆ.
ಹೌದು, ಅಫ್ಘಾನಿಸ್ತಾನ ಆಡಳಿತ ನೋಡಿಕೊಳ್ಳುತ್ತಿರುವ ತಾಲಿಬಾನ್ ಉಗ್ರರ ಕೈಯಲ್ಲಿ ಈಗ ಕಾಸೇ ಇಲ್ಲ. ಹಣ ಇಲ್ಲದೆ ನರಳಿ ಹೋಗಿರುವ ತಾಲಿಬಾನ್ ಉಗ್ರ ಸಂಘಟನೆ ನಾಯಕರು, ಸರ್ಕಾರ ನಡೆಸಲು ಪರದಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದಾಗಲೇ ಹಲವು ದೇಶಗಳಲ್ಲಿ ಇದ್ದ ಅಫ್ಘಾನಿಸ್ತಾನ ರಾಜತಾಂತ್ರಿಕ ಕಚೇರಿಗಳಿಗೆ ಬೀಗ ಹಾಕುತ್ತಿದ್ದಾರೆ. ಇದೇ ರೀತಿ ಈಗ ಭಾರತ ನೆಲದಲ್ಲಿ ಇದ್ದ ರಾಜತಾಂತ್ರಿಕ ಕಚೇರಿಗೂ ಬೀಗ ಹಾಕಿದ್ದಾರೆ. ಇಷ್ಟೇ ಆಗಿದ್ರೆ ಪರವಾಗಿಲ್ಲ ಅನ್ನಬಹುದಿತ್ತು, ಆದ್ರೆ ಇದನ್ನು ಮೀರಿ ದೊಡ್ಡ ಎಡವಟ್ಟನ್ನು ತಾಲಿಬಾನ್ ಉಗ್ರರು ಈಗ ಮಾಡಿಕೊಂಡಿದ್ದಾರೆ.

ಭಾರತದ ವಿರುದ್ಧ ತಾಲಿಬಾನ್ ಆರೋಪ!
ಅಂದಹಾಗೆ ತನ್ನ ಕೈಯಲ್ಲಿ ರಾಜತಾಂತ್ರಿಕ ಕಚೇರಿ ನಡೆಸಲು ಆಗ್ತಿಲ್ಲ ಅಂತಾ ತಾಲಿಬಾನ್ ಉಗ್ರರು ಭಾರತದ ರಾಜತಾಂತ್ರಿಕ ಕಚೇರಿಗೆ ಬೀಗ ಹಾಕಿದ್ದಾರೆ. ಆದ್ರೆ ಹೇಳ್ತಿರೋ ಕಾರಣವೇ ಮಾತ್ರ ಬೇರೆ. ನಮಗೆ ಭಾರತ ಸರ್ಕಾರದಿಂದ ಎದುರಾಗಿದ್ದ ಸವಾಲುಗಳನ್ನ ನಿಭಾಯಿಸಲು ಆಗಲಿಲ್ಲ. ಇದೇ ಕಾರಣಕ್ಕೆ ನಾವು ಭಾರತದಲ್ಲಿ ಇರುವ ನಮ್ಮ ರಾಜತಾಂತ್ರಿಕ ಕಚೇರಿ ಮುಚ್ಚುತ್ತಿದ್ದೇವೆ ಎಂದಿದ್ದರು. ಈ ಮೂಲಕ ಭಾರತ & ಅಫ್ಘಾನಿಸ್ತಾನ ಮಧ್ಯೆ ಸಂಬಂಧಕ್ಕೆ ತಾಲಿಬಾನ್ ಉಗ್ರರು ಕೊಳ್ಳಿ ಇಟ್ಟಿದ್ದಾರೆ. ನವೆಂಬರ್ 23, 2023 ಕ್ಕೆ ಭಾರತದಲ್ಲಿನ ರಾಜತಾಂತ್ರಿಕ ಕಚೇರಿ ಮುಚ್ಚುವ ಬಗ್ಗೆ ತಾಲಿಬಾನ್ ಉಗ್ರರು ಮಾಹಿತಿ ನೀಡಿದ್ರು. ಅದರಂತೆ ಈಗ ಕಚೇರಿಯನ್ನ ಮುಚ್ಚಿ ಮನೆಗೆ ಹೋಗಿದ್ದಾರೆ ತಾಲಿಬಾನ್ ಉಗ್ರರು.
ತಪ್ಪಾಯ್ತು ಕ್ಷಮಿಸಿ ಎಂದ ಉಗ್ರರು
ಈಗ ತಾಲಿಬಾನ್ ಉಗ್ರರು ಕೈಗೊಂಡಿರುವ ಕ್ರಮದ ಪರಿಣಾಮ ಅಫ್ಘಾನಿಸ್ತಾನದ ಸಾಮಾನ್ಯ ಜನರು ಪರದಾಡುವ ಪರಿಸ್ಥಿತಿ ಬಂದಿದೆ. ಅದರಲ್ಲೂ ನೂರಾರು ನಿರೀಕ್ಷೆ ಇಟ್ಟುಕೊಂಡು, ಭಾರತದಲ್ಲಿ ಉಳಿದುಕೊಂಡಿರುವ ಅಫ್ಘಾನಿಸ್ತಾನದ ಜನರಿಗೆ ದಿಕ್ಕು ತೋಚದ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಒಂದು ಕಡೆ ಅಫ್ಘಾನಿಸ್ತಾನದ ನೆಲದಲ್ಲೂ ತಾಲಿಬಾನ್ ಉಗ್ರರು ಎಲ್ಲಾ ನಾಶ ಮಾಡಿದ್ದಾರೆ. ಹೀಗಾಗಿಯೇ ಬೇರೆ ದೇಶದಲ್ಲಿ ಹೋಗಿ ಬದುಕೋಣ ಅಂತಾ ಆಫ್ಘಾನ್ ಜನರು ಪ್ಲ್ಯಾನ್ ಮಾಡಿದ್ರೆ ಅದನ್ನೂ ಹಾಳು ಮಾಡುತ್ತಿದ್ದಾರೆ. ಈ ಮೂಲಕ, ತಾಲಿಬಾನ್ ಉಗ್ರರ ವಿರುದ್ಧ ಜಗತ್ತಿನಾದ್ಯಂತ ಆಕ್ರೋಶ ಮೊಳಗಿದೆ.

ಅಮೆರಿಕ ಬಿಟ್ಟು ಹೋದ ನಂತರ ಸಮಸ್ಯೆ
20 ವರ್ಷ ಸುದೀರ್ಘ ಹೋರಾಟ ಬಳಿಕ 2021ರ ಆಗಸ್ಟ್‌ನಲ್ಲಿ ಅಮೆರಿಕ ಸೇನೆ ಸಂಪೂರ್ಣವಾಗಿ ಅಫ್ಘಾನಿಸ್ತಾನ ತೊರೆದು ಹೊರಬಂದಿತ್ತು. ಅಧ್ಯಕ್ಷ ಜೋ ಬೈಡನ್ ಆಗಿನ ಸಮಯಕ್ಕೆ 2021ರ ಆಗಸ್ಟ್ 31ನ್ನ ಡೆಡ್‌ಲೈನ್ ಆಗಿ ನೀಡಿ, ಅಮೆರಿಕದ ಸಂಪೂರ್ಣ ಸೇನೆ ಹೊರಗೆ ಕರೆಸಿಕೊಂಡರು. ಅಲ್ಲಿಗೆ ಅಫ್ಘಾನಿಸ್ತಾನ ಜನರ ನೆಮ್ಮದಿ ಹಾರಿಹೋಗಿತ್ತು. ಅಲ್ಲಿ ಜನಕ್ಕೆ ನೆಮ್ಮದಿಯಾಗಿ ಬದುಕು ಹಕ್ಕು ಕೂಡ ಇಲ್ಲ ಮಹಿಳೆಯರು ಹೊರಗೆ ಬರುವ ಹಕ್ಕು ಕೂಡ ಇಲ್ಲ. ಇದು ಸಾಲದೆಂಬಂತೆ, ಈಗ ಹೊರ ದೇಶದಲ್ಲೂ ನೆಮ್ಮದಿಯಾಗಿ ಬದುಕಲು ಆಗ್ತಿಲ್ಲ. ಕೈಯಲ್ಲಿ ಹಣ ಇಲ್ಲದೆಯೇ ತಾಲಿಬಾನ್ ಉಗ್ರರು ಎಲ್ಲವನ್ನೂ ಹಾಳು ಮಾಡುತ್ತಿದ್ದಾರೆ.
ಒಟ್ನಲ್ಲಿ ತಾಲಿಬಾನ್ ಉಗ್ರರ ಆಡಳಿತದಲ್ಲಿ ಏನೂ ಸರಿ ಇಲ್ಲ, ಅಲ್ಲಿ ಜನರಿಗೆ ನೆಮ್ಮದಿಯೇ ಇಲ್ಲವಾಗಿದೆ. ಅದರಲ್ಲೂ ಅಫ್ಘಾನ್ ನೆಲದಲ್ಲಿ ತಾಲಿಬಾನ್ ಹೇರುತ್ತಿರುವ ಕಠಿಣ ನಿಯಮ ಆಗಾಗ ಜಗತ್ತಿನಾದ್ಯಂತ ಸದ್ದು ಮಾಡುತ್ತೆ. ಆದರೆ ಆ ಕ್ಷಣಕ್ಕೆ ಜನರು ಅಯ್ಯೋ ಅಂತಾರೆ, ಆ ನಂತರ ಅದನ್ನು ಮರೆತು ಹೋಗುತ್ತಾರೆ. ಹೀಗಾಗಿ ತಾಲಿಬಾನ್ ಪ್ರಜೆಗಳು ಅದೇ ನರಕ ಅನುಭವಿಸುತ್ತಾ ಬದುಕಬೇಕಾಗಿ ಬಂದಿದೆ.












Click it and Unblock the Notifications