ತಾಲಿಬಾನ್ ನಾಡಲ್ಲಿ ಮತ್ತೊಮ್ಮೆ ಭೀಕರವಾಗಿ ಕಂಪಿಸಿದ ಭೂಮಿ

ಚಾಹಕ್: ಮೊದಲೇ ತಾಲಿಬಾನಿ ಆಡಳಿತಕ್ಕೆ ಸಿಲುಕಿ ನಲುಗಿರುವ ಅಫ್ಘಾನಿಸ್ತಾನ ಜನರಿಗೆ ಈಗ, ಪ್ರಕೃತಿ ಮಾತೆಯೂ ಆಘಾತ ನೀಡುತ್ತಿದ್ದಾಳೆ. ಒಂದೇ ವಾರದಲ್ಲಿ ಅಫ್ಘಾನ್ 3 ಬಾರಿ ಭೀಕರ ಭೂಕಂಪನ ಕಂಡಿದ್ದು, ಇಂದು ಕೂಡ ಪಶ್ಚಿಮ ಅಫ್ಘಾನ್‌ನ ಭಾಗದಲ್ಲಿ ಭೀಕರ ಭೂಕಂಪನ ಸಂಭವಿಸಿ ಇಡೀ ದೇಶವೇ ಕನಲಿ ಹೋಗಿದೆ. ಹಾಗಾದ್ರೆ ಈ ಘಟನೆಯಲ್ಲಿ ಸಾವು & ನೋವಿನ ಪ್ರಮಾಣ ಎಷ್ಟಿದೆ?

ಅಷ್ಟಕ್ಕೂ ರಜೆಯ ದಿನವಾದ ಭಾನುವಾರ ಜಗತ್ತಿಗೆ ಭೂಕಂಪನ ಶಾಕ್ ಕೊಟ್ಟಿದ್ದು ಪಶ್ಚಿಮ ಅಫ್ಘಾನ್‌ನಲ್ಲಿ, ಇಂದು ಬೆಳಗ್ಗೆ ಹಲವು ಭಾರಿ ಭೂಮಿ ಕಂಪಿಸಿದೆ ಎನ್ನಲಾಗಿದೆ. ಈ ಮೂಲಕ ಒಂದೇ ವಾರದಲ್ಲಿ 3 ಬಾರಿ ಪ್ರಾಕೃತಿಕ ವಿಕೋಪ ಸಂಷಕ್ಟ ಅನುಭವಿಸಿದ್ದಾರೆ ಇಲ್ಲಿನ ಜನ. ಈಗಿನ ಮಾಹಿತಿ ಪ್ರಕಾರ ಒಬ್ಬರ ಶವ ಸಿಕ್ಕಿದ್ದು, 35ಕ್ಕೂ ಹೆಚ್ಚು ಜನ ಭೂಮಿ ಕಂಪನಿಸಿದ ನಂತರ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತಾಗಿ ಹೆರಾತ್ ಗವರ್ನರ್ ಕಚೇರಿ ಮಾಹಿತಿ ನೀಡಿದ್ದಾರೆ. ಹಾಗೇ ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ.

Afghanistan faced 3 Earthquake In Just 1 Week

6.5ರ ತೀವ್ರತೆಯಲ್ಲಿ ಕಂಪಿಸಿದ ಭೂಮಿ

ಮತ್ತೊಂದು ಕಡೆ ಹಲವು ಕಟ್ಟಡಗಳು ಭೂಕಂಪನದ ತೀವ್ರತೆಗೆ ನೆಲಸಮವಾಗಿವೆ. ಇದೇ ಕಾರಣಕ್ಕೆ ಕಟ್ಟಡಗಳ ಅವಶೇಷದ ಅಡಿಯಲ್ಲಿ ಹಲವರು ಸಿಲುಕಿರುವ ಕಾರಣ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. ಇನ್ನು ಭೂಕಂಪದ ತೀವ್ರತೆ ರಿಕ್ಟರ್‌ ಮಾಪಕದಲ್ಲಿ 6.5ರಷ್ಟು ದಾಖಲಾಗಿದೆ. ಹೆರಾತ್‌ ಹೊರವಲಯದಲ್ಲಿ ಭೂಮಿಯಿಂದ 10 ಕಿಲೋ ಮೀಟರ್ ಆಳದಲ್ಲಿ ಈ ಕಂಪನದ ಕೇಂದ್ರಬಿಂದು ಗುರುತಿಸಲಾಗಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದೆ.

2 ಸಾವಿರಕ್ಕೂ ಹೆಚ್ಚು ಜನ ಬಲಿಯಾಗಿದ್ದರು

ಅಂಹದಾಗೆ ಕೆಲವು ದಿನದ ಹಿಂದಷ್ಟೇ ಪಶ್ಚಿಮ ಅಫ್ಘಾನಿಸ್ತಾನ ಭೀಕರ ಭೂಕಂಪನ ಕಂಡು ಬೆಚ್ಚಿಬಿದ್ದಿತ್ತು. ಪಶ್ಚಿಮ ಅಫ್ಗಾನ್‌ನಲ್ಲಿ ಸರಣಿ ಭೂಕಂಪನ ಎದುರಾಗುತ್ತಿದ್ದು, ಕೆಲ ದಿನಗಳ ಹಿಂದೆ 2 ಸಾವಿರಕ್ಕೂ ಹೆಚ್ಚು ಜನ ಜೀವ ಬಿಟ್ಟಿದ್ದರು. ಈಗ ಮತ್ತೊಮ್ಮೆ ಅದೆ ರೀತಿ ಭೂಮಿ ಕಂಪಿಸಿದೆ. ಕಳೆದ ಬಾರಿ 6.3 ತೀವ್ರತೆಯಲ್ಲಿ ಸಂಭವಿಸಿದ್ದ ಭೂಕಂಪನದ ಕೇಂದ್ರ ಬಿಂದುವು ಅಫ್ಘಾನ್‌ ಅತಿದೊಡ್ಡ ನಗರ ಹೆರಾತ್‌ ವಾಯುವ್ಯದಲ್ಲಿ 40 ಕಿಮೀ ದೂರದಲ್ಲಿ ಪತ್ತೆಯಾಗಿತ್ತು. ಇದೀಗ ಮತ್ತೊಮ್ಮೆ ಭೂಮಿ ಕಂಪಿಸಿದ್ದು, ಅಫ್ಘಾನ್ ಜನ ನೆಮ್ಮದಿಯಾಗಿ ನಿದ್ದೆ ಮಾಡಲು ಆಗದ ಪರಿಸ್ಥಿತಿ ಎದುರಾಗಿದೆ.

Afghanistan faced 3 Earthquake In Just 1 Week

ಒಟ್ನಲ್ಲಿ ಮೊದಲೇ ತಾಲಿಬಾನ್ ಆಡಳಿತಕ್ಕೆ ಸಿಲುಕಿ ಅಫ್ಘಾನ್ ನಲುಗಿ ಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಾಕೃತಿಕ ವಿಕೋಪಗಳು ಕೂಡ ಅಫ್ಘಾನಿಸ್ತಾನದ ಜನರನ್ನ ಕಾಡುತ್ತಿವೆ. ಈ ಹಿನ್ನೆಲೆಯಲ್ಲಿ ಬಡವರಿಗೆ ಏನು ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಈಗಾಗಲೇ ಹಣ ಇರುವವರು ಬೇರೆ ಕಡೆ ಗುಳೆ ಹೋಗಿದ್ದರೆ, ಬಡವರು ಮಾತ್ರ ಪರದಾಡುತ್ತಿದ್ದಾರೆ. ಇಷ್ಟೆಲ್ಲ ಸಮಸ್ಯೆ ಎದುರಾಗಿದ್ದರೂ ತಾಲಿಬಾನ್ ಸರ್ಕಾರ ಜನರಿಗೆ ಸೂಕ್ತ ಬೆಂಬಲವನ್ನೂ ನೀಡ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+