Taliban: ಐಯೋ ದೇವರೆ.. ಪ್ರತಿದಿನ ಸಾಯುತ್ತಿದ್ದಾರೆ 24 ತಾಯಂದಿರು..
ಪ್ರಜೆಗಳ ರಕ್ಷಣೆ ಅದರಲ್ಲೂ ತಾಯಂದಿರ ರಕ್ಷಣೆ ಸರ್ಕಾರದ ಹೊಣೆ. ಭಾರತದಲ್ಲಿ ಇದಕ್ಕೆ ಅಂತಾ ಸಾಕಷ್ಟು ವ್ಯವಸ್ಥೆ ಇದೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಹಂತ ಹಂತವಾಗಿ ಮಹಿಳೆಯರಿಗೆ ಸಾಕಷ್ಟು ಸೌಲಭ್ಯ & ಆರೋಗ್ಯ ಸೇವೆ ಒದಗಿಸುತ್ತಿದೆ. ಆದರೆ ಇಲ್ಲೊಂದು ದೇಶ ಇದೆ. ಆ ದೇಶದಲ್ಲಿ ಮಹಿಳೆಯರು ಅಕ್ಷರಶಃ ನರಕ ನೋಡುತ್ತಿದ್ದಾರೆ. ಪ್ರತಿದಿನವು 24 ತಾಯಂದಿರುವ ಮೃತಪಡುತ್ತಿದ್ದಾರಂತೆ. ಹಾಗಾದರೆ ಯಾವುದು ಆದೇಶ?
ಇಷ್ಟೊತ್ತು ಹೇಳಿದ ದೇಶ ಬೇರೆ ಯಾವುದೂ ಅಲ್ಲ, ಅದುವೇ ಅಫ್ಘಾನಿಸ್ತಾನ. ಅಂದಹಾಗೆ ಉಗ್ರರ ಬಲೆಯಲ್ಲಿ ಸಿಲುಕಿ ನಲುಗಿದ ಅಫ್ಘಾನಿಸ್ತಾನ ಜನಕ್ಕೆ ತಾಲಿಬಾನ್ ಶಾಕ್ ಮೇಲೆ ಶಾಕ್ ನೀಡುತ್ತಿದೆ. ಹೀಗೆ ಬರೀ ಟಾರ್ಚರ್ ಕೊಡುವುದರಲ್ಲೇ ಸಮಯ ಕಳೆಯುತ್ತಿರುವ ತಾಲಿಬಾನಿ ಸರ್ಕಾರ, ಜನರ ಯೋಗಕ್ಷೇಮ ವಿಚಾರಿಸುತ್ತಿಲ್ಲ ಎಂಬ ಆರೋಪವಿದೆ. ಇದಕ್ಕೆ ಹೊಂದಿಕೆ ಆಗುವಂತೆ ಇದೀಗ ವಿಶ್ವ ಆರೋಗ್ಯ ಸಂಸ್ಥೆ ವರದಿಯೊಂದು ಹೊರಬಿದ್ದಿದೆ. ಆ ವರದಿಯ ಪ್ರಕಾರ ಪ್ರತಿದಿನ ತಾಲಿಬಾನ್ ಆಡಳಿತ ಇರುವ ಅಫ್ಘಾನಿಸ್ತಾನದಲ್ಲಿ 24 ತಾಯಂದಿರು ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರಂತೆ. ಹಾಗಾದರೆ ಈ ಭೀಕರ ಸಮಸ್ಯೆಗೆ ಕಾರಣ ಏನು?

ತಾಲಿಬಾನ್ ನಾಡಲ್ಲಿ ಭಯಾನಕ ಪರಿಸ್ಥಿತಿ!
ಇದು ಭಯಾನಕ ಎನಿಸಿದರೂ ಸತ್ಯ, ಗರ್ಭಾವಸ್ಥೆಯ ತೊಂದರೆಗಳಿಂದ ಅಫ್ಗಾನಿಸ್ತಾನದಲ್ಲಿ ಪ್ರತಿದಿನ 24 ತಾಯಂದಿರು ಮೃತಪಡುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಕೆ ಸಂದೇಶ ರವಾನಿಸಿದೆ. ಗರ್ಭಾವಸ್ಥೆಗೆ ಸಂಬಂಧಿಸಿದ ಗುಣಪಡಿಸಬಹುದಾದ ಆರೋಗ್ಯ ಸಮಸ್ಯೆ ಕಾರಣಕ್ಕೆ ಈ ರೀತಿ ಮಹಿಳೆಯರು ಮೃತಪಡುತ್ತಿದ್ದಾರೆ. ಅಪೌಷ್ಟಿಕತೆ, ಆರ್ಥಿಕ ಸಂಕಷ್ಟವು, ಆರೋಗ್ಯ ಸೌಕರ್ಯ ಕೊರತೆ, ಒತ್ತಡ ಹೆಚ್ಚಾಗಿರುವುದು ಗರ್ಭಿಣಿಯರ ಆರೋಗ್ಯವನ್ನ ಮತ್ತೆ ಮತ್ತೆ ಹದಗೆಡಿಸುತ್ತಿದೆ. ಇದರಿಂದ ತಾಯಂದಿರ ಮರಣ ಪ್ರಮಾಣವು ಹೆಚ್ಚಿದೆ ಎಂದು ಮಾಹಿತಿ ನೀಡಲಾಗಿದೆ.
Estimated 24 mothers die each day of preventable maternal mortality causes under the current funding, and this number is projected to rise dramatically.
— WHO Afghanistan (@WHOAfghanistan) August 28, 2023
Read more about @WHO’s Alert on the #Afghanistan’s Humanitarian Health Emergency
➡️ https://t.co/AHx0zrl6S1@WHOEMRO pic.twitter.com/hgV9eXC75I
ಇಷ್ಟೇ ಅಲ್ಲ, ಅಫ್ಘಾನಿಸ್ತಾನ ತಾಯಂದಿರ ಪರಿಸ್ಥಿತಿ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಟ್ವೀಟ್ ಮಾಡಿದೆ. ಇದೇ ಟ್ವೀಟ್‌ನಲ್ಲಿ ಅಫ್ಘಾನಿಸ್ತಾನದ ಮಹಿಳೆಯರ ಪರಿಸ್ಥಿತಿಯನ್ನ ವಿಶ್ವಸಂಸ್ಥೆ ಬಿಡಿಸಿಟ್ಟಿದೆ. ಈಗ ಇರುವ ನಿಧಿ ಅಡಿಯಲ್ಲಿ ಸಮಸ್ಯೆ ಬಗೆಹರಿಯಬಹುದು. ನಿಧಿ ಪ್ರಮಾಣ ಕಡಿಮೆಯಾದ್ರೆ ಸಾವಿನ ಸಂಖ್ಯೆ ಕ್ರಮೇಣ ಹೆಚ್ಚಾಗಬಹುದು. ಕಡಿಮೆ ನಿಧಿ ಸಂಗ್ರಹದಿಂದಾಗಿ ಇಂತಹ ಸಮಸ್ಯೆ ಎದುರಾಗಿದೆ. ತ್ವರಿತವಾಗಿ ನಿಧಿ ಸಂಗ್ರಹದ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಸಲಹೆ ಕೂಡ ನೀಡಿದೆ. ಇದು ತಾಲಿಬಾನ್ ಆಡಳಿತದ ಮತ್ತೊಂದು ಕರಾಳ ಮುಖವನ್ನು ಬಿಡಿಸಿ ಇಟ್ಟಿದೆ.

ತಾಲಿಬಾನಿಗಳಿಗೆ ಮಹಿಳೆಯರೇ ಟಾರ್ಗೆಟ್!
ಮಹಿಳೆಯರ ಮೇಲೆ ದಿನಕ್ಕೊಂದು ನಿಷೇಧ ಹೇರುತ್ತಿರುವ ತಾಲಿಬಾನ್ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಟೀಕೆಗೂ ಗುರಿಯಾಗಿದೆ. ಆದರೆ ಇದಕ್ಕೆಲ್ಲ ಅವರು ಕೇರ್ ಮಾಡುತ್ತಿಲ್ಲ. ಈ ಕಾರಣಕ್ಕೆ ಸ್ಥಿತಿ ಇನ್ನಷ್ಟು ಕೈಮೀರಿ ಹೋಗುತ್ತಿದೆ. ಅಮೆರಿಕ ಯಾವಾಗ ತಾಲಿಬಾನಿ ಕೈಯಲ್ಲಿ ಅಫ್ಘಾನಿಸ್ತಾನವನ್ನು ಬಿಟ್ಟು ಹೋಯ್ತೋ ಆಗಿನಿಂದಲೇ ಶುರುವಾಗಿದ್ದು ಕಿತ್ತಾಟ. ಅಂದಿನಿಂದ ಇಂದಿನ ತನಕ ಅಲ್ಲಿನ ಜನರಿಗೆ ನೆಮ್ಮದಿ ಇಲ್ಲ, ನೆಮ್ಮದಿಯಾಗಿ ಜೀವನ ಮಾಡಲು ಆಗುತ್ತಿಲ್ಲ. ಹೀಗಾಗಿ ದಿನದಿಂದ ದಿನಕ್ಕೆ ಅಫ್ಘಾನಿಸ್ತಾನದ ಜನರು ಪರದಾಡುತ್ತಿದ್ದಾರೆ.
2021ರಲ್ಲಿ ಹೊರಬಂದಿದ್ದ ಅಮೆರಿಕ ಸೇನೆ
ಅಷ್ಟಕ್ಕೂ ಸುಮಾರು 20 ವರ್ಷ ಸುದೀರ್ಘ ಹೋರಾಟದ ಬಳಿಕ 2021ರ ಆಗಸ್ಟ್‌ನಲ್ಲಿ ಅಮೆರಿಕ ಸೇನೆ ಸಂಪೂರ್ಣವಾಗಿ ಅಫ್ಘಾನಿಸ್ತಾನ ತೊರೆದು ಹೊರಬಂದಿತ್ತು. ಅಧ್ಯಕ್ಷ ಜೋ ಬೈಡನ್ ಆಗಿನ ಸಮಯಕ್ಕೆ 2021ರ ಆಗಸ್ಟ್ 31ನ್ನು ಡೆಡ್‌ಲೈನ್ ಆಗಿ ನೀಡಿ, ಅಮೆರಿಕದ ಸಂಪೂರ್ಣ ಸೇನೆ ಹೊರಗೆ ಕರೆಸಿಕೊಂಡ್ರು. ಅಷ್ಟೆ ಅಲ್ಲಿಗೆ ಅಫ್ಘಾನಿಸ್ತಾನ ಜನರ ನೆಮ್ಮದಿ ಹಾರಿಹೋಗಿತ್ತು. ಅಲ್ಲಿ ಜನಕ್ಕೆ ನೆಮ್ಮದಿಯಾಗಿ ಬದುಕು ಹಕ್ಕು ಕೂಡ ಇಲ್ಲ ಮಹಿಳೆಯರು ಹೊರಗೆ ಬರುವ ಹಕ್ಕು ಕೂಡ ಇಲ್ಲ. ಹೀಗೆ ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ಆಡಳಿತಕ್ಕೆ ಸಿಲುಕಿ ನರಳುತ್ತಿದ್ದು, ಆ ದೇಶವೇ ಅಕ್ಷರಶಃ ಜೈಲಿನ ರೂಪ ಪಡೆದಿದೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications