Get Updates
Get notified of breaking news, exclusive insights, and must-see stories!

ತಾಲಿಬಾನ್ ಕ್ರೌರ್ಯ: ವಿಶ್ವವಿದ್ಯಾಲಯಗಳಿಂದ ವಿದ್ಯಾರ್ಥಿನಿಯರು ದೂರ ದೂರ!

ಕಾಬೂಲ್, ಡಿಸೆಂಬರ್ 21: ಅಫ್ಘಾನಿಸ್ತಾನದ ಮಹಿಳೆಯರ ಶಿಕ್ಷಣ ಮತ್ತು ಸ್ವಾತಂತ್ರ್ಯದ ಹಕ್ಕನ್ನು ಕಟುವಾದ ಇಸ್ಲಾಮಿಸ್ಟ್‌ಗಳು ಹತ್ತಿಕ್ಕುವುದನ್ನು ಮುಂದುವರಿಸಿದ್ದಾರೆ. ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿರಿಸಿರುವ ತಾಲಿಬಾನ್ ಸರ್ಕಾರವು ಮಂಗಳವಾರ ಮಹಿಳೆಯರಿಗೆ ವಿಶ್ವವಿದ್ಯಾನಿಲಯ ಶಿಕ್ಷಣವನ್ನು ರಾಷ್ಟ್ರವ್ಯಾಪಿ ನಿಷೇಧಿಸುವಂತೆ ಆದೇಶಿಸಿದೆ.

ಕಳೆದ ವರ್ಷ ಅಧಿಕಾರವನ್ನು ವಶಪಡಿಸಿಕೊಂಡಾಗ ಸರಳ ಹಾಗೂ ಜನಸ್ನೇಹಿ ಆಡಳಿತದ ಭರವಸೆ ನೀಡಿದ್ದರೂ, ತಾಲಿಬಾನ್ ಅಂತರರಾಷ್ಟ್ರೀಯ ಆಕ್ರೋಶವನ್ನು ನಿರ್ಲಕ್ಷಿಸಿ ಮಹಿಳೆಯರ ಜೀವನದ ಎಲ್ಲಾ ಅಂಶಗಳ ಮೇಲೆ ನಿರ್ಬಂಧಗಳನ್ನು ಹೆಚ್ಚಿಸುತ್ತಿದೆ.

ಮುಂದಿನ ಸೂಚನೆ ಬರುವವರೆಗೆ ಮಹಿಳಾ ಶಿಕ್ಷಣವನ್ನು ಅಮಾನತುಗೊಳಿಸುವ ಆದೇಶವನ್ನು ತಕ್ಷಣವೇ ಜಾರಿಗೆ ತರಲು ನಿಮಗೆಲ್ಲರಿಗೂ ತಿಳಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ನೇಡಾ ಮೊಹಮ್ಮದ್ ನದೀಮ್ ಸಹಿ ಮಾಡಿರುವ ಪತ್ರದಲ್ಲಿ ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಿಗೆ ನೀಡಲಾಗಿದೆ. ಈ ಪತ್ರವನ್ನು ಟ್ವೀಟ್ ಮಾಡಿರುವ ಸಚಿವಾಲಯದ ವಕ್ತಾರ ಜಿಯಾವುಲ್ಲಾ ಹಾಶಿಮಿ, ಎಎಫ್‌ಪಿಗೆ ಈ ಸಂದೇಶದ ಮೂಲಕ ಆದೇಶವನ್ನು ಖಚಿತಪಡಿಸಿದ್ದಾರೆ.

ಮೂರು ತಿಂಗಳ ಹಿಂದೆ ನಡೆದ ವಿವಿ ಎಂಟ್ರೆನ್ಸ್ ಎಕ್ಸಾಂ

ಮೂರು ತಿಂಗಳ ಹಿಂದೆ ನಡೆದ ವಿವಿ ಎಂಟ್ರೆನ್ಸ್ ಎಕ್ಸಾಂ

ಕಳೆದ ಮೂರು ತಿಂಗಳ ಹಿಂದೆಯಷ್ಟೇ ಸಾವಿರಾರು ವಿದ್ಯಾರ್ಥಿನಿಯರು ದೇಶಾದ್ಯಂತ ನಡೆದ ವಿಶ್ವವಿದ್ಯಾನಿಲಯ ಪ್ರವೇಶ ಪರೀಕ್ಷೆಗಳಿಗೆ ಹಾಜರಾಗಿದ್ದರು. ಈ ಪೈಕಿ ಹಲವರು ಬೋಧನೆ ಮತ್ತು ವೈದ್ಯಕೀಯ ಶಿಕ್ಷಣದ ಆಯ್ಕೆಯ ನಿರೀಕ್ಷೆಯಲ್ಲಿದ್ದರು. ಈ ವಿವಿ ಎಂಟ್ರೆನ್ಸ್ ಎಕ್ಸಾಂ ನಡೆದು ಮೂರೇ ತಿಂಗಳಿನಲ್ಲಿ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ತಾಲಿಬಾನ್ ಸರ್ಕಾರವು ಬ್ರೇಕ್ ಹಾಕಿದೆ.

ತಾಲಿಬಾನ್‌ಗಳು ದೇಶವನ್ನು ಸ್ವಾಧೀನಪಡಿಸಿಕೊಂಡ ನಂತರ, ವಿಶ್ವವಿದ್ಯಾನಿಲಯಗಳಲ್ಲಿ ಲಿಂಗ ಪ್ರತ್ಯೇಕಿತ ತರಗತಿಗಳು ಮತ್ತು ಪ್ರವೇಶ ದ್ವಾರಗಳು ಸೇರಿದಂತೆ ಹೊಸ ನಿಯಮಗಳನ್ನು ಜಾರಿಗೆ ತರಲಾಯಿತು, ಆದರೆ ಮಹಿಳೆಯರಿಗೆ ಮಹಿಳಾ ಪ್ರಾಧ್ಯಾಪಕರು ಅಥವಾ ವೃದ್ಧರು ಮಾತ್ರ ಕಲಿಸಲು ಅನುಮತಿ ನೀಡಲಾಯಿತು. ದೇಶಾದ್ಯಂತ ಹೆಚ್ಚಿನ ಹದಿಹರೆಯದ ಹುಡುಗಿಯರನ್ನು ಮಾಧ್ಯಮಿಕ ಶಾಲಾ ಶಿಕ್ಷಣದಿಂದ ಈಗಾಗಲೇ ನಿಷೇಧಿಸಲಾಗಿದೆ, ವಿಶ್ವವಿದ್ಯಾನಿಲಯದ ಸೇರ್ಪಡೆಯನ್ನು ಈಗ ಸೀಮಿತಗೊಳಿಸಲಾಗಿದೆ.

ಸರ್ವೋಚ್ಛ ನಾಯಕ ನಿಯಮಗಳಿಗೆ ತಾಲಿಬಾನ್ ಬದ್ಧ

ಸರ್ವೋಚ್ಛ ನಾಯಕ ನಿಯಮಗಳಿಗೆ ತಾಲಿಬಾನ್ ಬದ್ಧ

ಅಪ್ಘಾನಿಸ್ತಾನದಲ್ಲಿ ಆಂತರಿಕ ಭದ್ರತೆ ಮತ್ತು ಹುಡುಗಿಯರ ಶಿಕ್ಷಣದ ವಿಷಯದಲ್ಲಿ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂಡ್ಜಾದಾ ಮತ್ತು ಆಧುನಿಕ ಶಿಕ್ಷಣದ ವಿರುದ್ಧ ಅಫ್ಘಾನ್ ಧರ್ಮಗುರುಗಳ ಕಟ್ಟುನಿಟ್ಟಿನ ಕ್ರಮಗಳಿಗೆ ತಾಲಿಬಾನ್ ಸರ್ಕಾರವು ಬದ್ಧವಾಗಿದೆ. ಆದರೆ ಹುಡುಗಿಯರ ಕಲಿಕೆಯನ್ನು ಮುಂದುವರಿಸಲು ಮೈತ್ರಿ ಮಾಡಿಕೊಳ್ಳುತ್ತಾರೆ ಎಂದು ಆಶಿಸಿದ ಅವರ ಶ್ರೇಣಿಯ ಅಧಿಕಾರಿಗಳೊಂದಿಗೆ ಹಾಗೂ ಕಾಬೂಲ್‌ನಲ್ಲಿರುವ ಅನೇಕ ಅಧಿಕಾರಿಗಳೊಂದಿಗೆ ಅವರು ಭಿನ್ನಾಭಿಪ್ರಾಯವನ್ನು ಹೊಂದಿದ್ದಾರೆ.

ಮಹಿಳೆಯರ ಉದ್ಯೋಗಕ್ಕೂ ತಾಲಿಬಾನ್ ಬ್ರೇಕ್

ಮಹಿಳೆಯರ ಉದ್ಯೋಗಕ್ಕೂ ತಾಲಿಬಾನ್ ಬ್ರೇಕ್

ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಅನೇಕ ಸರ್ಕಾರಿ ಉದ್ಯೋಗಗಳಿಂದ ಹೊರಹಾಕಲ್ಪಟ್ಟಿದ್ದಾರೆ. ಮನೆಯಲ್ಲಿ ಉಳಿಯಲು ಅಂಥವರಿಗೆ ಕಡಿಮೆ ಸಂಬಳವನ್ನು ನೀಡಲಾಗುತ್ತಿದೆ. ಇದರ ಜೊತೆಗೆ ಮಹಿಳೆಯರು ಪುರುಷ ಸಂಬಂಧಿ ಇಲ್ಲದೆ ಪ್ರಯಾಣಿಸುವುದನ್ನು ಸಹ ನಿರ್ಬಂಧಿಸಲಾಗಿದೆ. ಮನೆಯ ಹೊರಗೆ ಹೊರಡುವಾಗ ಕಡ್ಡಾಯವಾಗಿ ಬುರ್ಖಾದೊಂದಿಗೆ ದೇಹವನ್ನು ಸಂಪೂರ್ಣವಾಗಿ ಮುಚ್ಚಿಕೊಂಡಿರಬೇಕು ಎಂಬ ನಿಯಮವನ್ನೂ ಜಾರಿಗೊಳಿಸಲಾಗಿದೆ. ಇದರ ಮಧ್ಯೆ ಕಳೆದ ನವೆಂಬರ್‌ನಲ್ಲಿ ಪಾರ್ಕ್‌ಗಳು, ಫನ್‌ಫೇರ್‌ಗಳು, ಜಿಮ್‌ಗಳು ಮತ್ತು ಸಾರ್ವಜನಿಕ ಸ್ನಾನಗೃಹಗಳಿಗೆ ಹೋಗುವುದನ್ನು ಸಹ ನಿಷೇಧಿಸಲಾಗಿದೆ.

ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಶಿಕ್ಷಣದಿಂದ ದೂರ, ಮದುವೆಗೆ ಹತ್ತಿರ

ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಶಿಕ್ಷಣದಿಂದ ದೂರ, ಮದುವೆಗೆ ಹತ್ತಿರ

ತಾಲಿಬಾನ್‌ಗಳು ಮಾರ್ಚ್‌ನಲ್ಲಿ ಹುಡುಗಿಯರನ್ನು ಮಾಧ್ಯಮಿಕ ಶಾಲೆಗಳಿಂದ ದೂರ ಕಳುಹಿಸಲಾಯಿತು. ತಾಲಿಬಾನ್ ಅಧಿಕಾರಿಗಳು ಮಾಧ್ಯಮಿಕ ಶಿಕ್ಷಣದಲ್ಲಿ ಮಹಿಳೆಯರಿಗೆ ವಿಧಿಸಿದ ನಿಷೇಧವು ಕೇವಲ ತಾತ್ಕಾಲಿಕವಾಗಿದೆ ಎಂದು ಹೇಳಿದರು. ಹಣದ ಕೊರತೆಯಿಂದ ಇಸ್ಲಾಮಿಕ್ ಮಾರ್ಗಗಳಲ್ಲಿ ಪಠ್ಯಕ್ರಮವನ್ನು ಮರುರೂಪಿಸಲು ಸಮಯದ ಅಗತ್ಯವಿದೆ ಎಂದು ಅವರು ಉಲ್ಲೇಖಿಸಿದರು. ಈ ಮಧ್ಯೆ ನಿಷೇಧದ ನಂತರ, ಅನೇಕ ಹುಡುಗಿಯರು ತಮ್ಮ ತಂದೆಯ ಆಯ್ಕೆಯಂತೆ ಬೇಗನೆ ಮದುವೆಯಾಗಿದ್ದಾರೆ.

ಆರ್ಥಿಕ ಒತ್ತಡದ ಜೊತೆಗೆ ಕಳೆದ ತಿಂಗಳು ಎಎಫ್‌ಪಿ ಸಂದರ್ಶಿಸಿದ ಹಲವಾರು ಕುಟುಂಬಗಳು ತಮ್ಮ ಹೆಣ್ಣುಮಕ್ಕಳ ಭವಿಷ್ಯವನ್ನು ಮದುವೆಯ ಮೂಲಕ ಭದ್ರಪಡಿಸುವುದು ಮನೆಯಲ್ಲಿ ಸುಮ್ಮನೆ ಇರುವುದಕ್ಕಿಂತ ಉತ್ತಮವಾಗಿದೆ ಎಂದು ಹೇಳಿದ್ದಾರೆ. ಅಂತರರಾಷ್ಟ್ರೀಯ ಸಮುದಾಯವು ಎಲ್ಲಾ ಮಹಿಳೆಯರಿಗೆ ಶಿಕ್ಷಣದ ಹಕ್ಕನ್ನು ಸಹಾಯ ಮತ್ತು ತಾಲಿಬಾನ್ ಆಡಳಿತದ ಮಾನ್ಯತೆಯ ಮಾತುಕತೆಗಳಲ್ಲಿ ಅಡಗಿದೆ.

"ಅಂತಾರಾಷ್ಟ್ರೀಯ ಸಮುದಾಯವು ಆಫ್ಘನ್ ಮಹಿಳೆಯರು ಮತ್ತು ಹುಡುಗಿಯರನ್ನು ಮರೆಯುವುದಿಲ್ಲ," ಎಂದು ವಿಶ್ವಸಂಸ್ಥೆಯ ಭದ್ರತಾ ಸಮಿತಿಯು ಸೆಪ್ಟೆಂಬರ್‌ನಲ್ಲಿ ನೀಡಿದ ಹೇಳಿಕೆಯಲ್ಲಿ ತಿಳಿಸಿದೆ. ತಾಲಿಬಾನ್‌ನ ಎರಡು ಆಳ್ವಿಕೆಯ ನಡುವಿನ 20 ವರ್ಷಗಳಲ್ಲಿ ಹೆಣ್ಣುಮಕ್ಕಳಿಗೆ ಶಾಲೆಗೆ ಹೋಗಲು ಅವಕಾಶ ನೀಡಲಾಯಿತು. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಉದ್ಯೋಗವನ್ನು ಹುಡುಕಲು ಸಾಧ್ಯವಾಯಿತು, ಆದರೂ ದೇಶವು ಸಾಮಾಜಿಕವಾಗಿ ಸಂಪ್ರದಾಯವಾದಿಯಾಗಿಯೇ ಉಳಿದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+