ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆಗೆ ಬರಲಿದೆː ಬಾರ್ ಕೊಡೆಡ್ ಟಿಕೆಟ್, ಸ್ವಯಂ ಚಾಲಿತ ಗೇಟ್

By Mahesh
|
Google Oneindia Kannada News

ನವದೆಹಲಿ, ಜುಲೈ 10: ಬಾರ್‌ ಕೋಡ್‌ ಸ್ಕ್ಯಾನರ್‌ಗಳನ್ನು ಒಳಗೊಂಡ ಸ್ವಯಂಚಾಲಿತ ಏಕಮುಖ ಪ್ರವೇಶದ್ವಾರಗಳನ್ನು ರೈಲು ನಿಲ್ದಾಣಗಳಲ್ಲಿ ಅಳವಡಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಸದ್ಯ ದೆಹಲಿ ಹಾಗೂ ಕೋಲ್ಕತ್ತಾ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಈ ಬಗೆಯ ಪ್ರವೇಶದ್ವಾರಗಳಿವೆ.

'ಎಕಾನಾಮಿ ಎಸಿ ಕೋಚು'- ಭಾರತೀಯ ರೈಲ್ವೆಯ ಹೊಸ ಕೊಡುಗೆ'ಎಕಾನಾಮಿ ಎಸಿ ಕೋಚು'- ಭಾರತೀಯ ರೈಲ್ವೆಯ ಹೊಸ ಕೊಡುಗೆ

ಪ್ರಾಯೋಗಿಕವಾಗಿ ದೆಹಲಿ ವಲಯದ ಬ್ರಾರ್ ಚೌಕದಲ್ಲಿ ಮುಂದಿನ ಮೂರು ತಿಂಗಳೊಳಗೆ ಹೊಸ ಪ್ರವೇಶ ವ್ಯವಸ್ಥೆ ಜಾರಿಗೆ ಬರಲಿದೆ. ನಂತರ ಉಳಿದ ನಿಲ್ದಾಣಗಳಲ್ಲಿ ಅಳವಡಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಪ್ರಕಟಿಸಿದೆ.

Railways to install bar-coded flap gates at stations

ಕಾಯ್ಡಿರಿಸದ ಟಿಕೆಟ್ ಗಳ ಮೇಲೆ QR ಕೋಡ್ ಪ್ರಿಂಟ್ ಆಗಿರುತ್ತದೆ. ಪ್ರಯಾಣಿಕರು ನಿಲ್ದಾಣಕ್ಕೆ ಎಂಟ್ರಿ ಅಥವಾ ಎಕ್ಸಿಟ್ ಸಂದರ್ಭದಲ್ಲಿ ಈ ಗೇಟ್ ಗಳ ಮೂಲಕ ಸಾಗುವಾಗ ಟಿಕೆಟ್ ಫಲಕದ ಮುಂದೆ ಹಿಡಿದು ಸುಲಭವಾಗಿ ಸಾಗಬಹುದು. ಕೊಡೆಡ್ ಟಿಕೆಟ್ ಹಾಗೂ ಸ್ವಯಂಚಾಲಿತ ಗೇಟುಗಳ ಅಳವಡಿಕೆಗೆ ನಾಲ್ಕು ಲಕ್ಷ ರು ವೆಚ್ಚವಾಗಲಿದೆ. ಬೆಂಗಳೂರಿನ ಮೆಟ್ರೋದಲ್ಲಿ ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯಿದ್ದು, ಪ್ರಯಾಣಿಕರ ದಟ್ಟಣೆ ಅಧಿಕವಾಗಿದ್ದರೂ ಸುಲಭವಾಗಿ ಆಗಮನ, ನಿರ್ಗಮನ ಸಾಧ್ಯವಾಗಿದೆ.

English summary
The Railways will go the Metro way and install automatic flap gates with bar code scanners at stations to facilitate faster ticket checking and ease the pressure on ticket examiners and collectors. To begin with, the access control system, already operational in Kolkata and Delhi Metro services, will be implemented at non-metropolitan stations where traffic rush is very less.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X