'ಎಕಾನಾಮಿ ಎಸಿ ಕೋಚು'- ಭಾರತೀಯ ರೈಲ್ವೆಯ ಹೊಸ ಕೊಡುಗೆ
ನವದೆಹಲಿ, ಜುಲೈ 03: ರೈಲ್ವೆ ಪ್ರಯಾಣಿಕರಿಗೆ ಹೊಚ್ಚ ಹೊಸ ಸೌಲಭ್ಯವನ್ನು ನೀಡಲು ಭಾರತೀಯ ರೈಲ್ವೆ ಮುಂದಾಗಿದೆ. ಹವಾನಿಯಂತ್ರಿತ ಎಕಾನಮಿ ಶ್ರೇಣಿಯ ಕೋಚ್ ಗಳನ್ನು ಪರಿಚಯಿಸಲಾಗುತ್ತಿದೆ. ಪ್ರಯಾಣಿಕರು ಎಸಿ 3-ಟಯರ್ ದರದಲ್ಲೇ ಪ್ರಯಾಣಿಸಬಹುದಾಗಿದೆ.
ಸದ್ಯ ಮೇಲ್, ಎಕ್ಸ್ ಪ್ರೆಸ್ ರೈಲುಗಳಲ್ಲಿ ಸ್ಲೀಪರ್, 3 ಎಸಿ, 2 ಎಸಿ, 1ಎಸಿ ಗಳಿವೆ. ರಾಜಧಾನಿ, ಶತಾಬ್ದಿ, ಹಮ್ಸಫರ್ ತೇಜಸ್ ರೈಲುಗಳು ಸಂಪೂರ್ಣ ಹವಾನಿಯಂತ್ರಣ ಹೊಂದಿವೆ.

ಸರ್ಕಾರದ ಹೊಸ ಪ್ರಸ್ತಾವನೆಯಂತೆ, ಎಸಿ -1, ಎಸಿ-2 ಹಾಗೂ ಎಸಿ 3 ಕೋಚುಗಳ ಜತೆಗೆ ಎಕಾನಮಿ 3 ಎಸಿ ಬೋಗಿ ಕೂಡಾ ಹೊಂದಲಿದೆ. ಈ ಹೊಸ ಬೋಗಿಗಳ ತಾಪಮಾನವನ್ನು 24 ರಿಂದ 25 ಡಿಗ್ರಿ ಸೆಲ್ಸಿಯಸ್ ಗೆ ಹೊಂದಿಸಲಾಗುವುದು ಹಾಗೂ ಪ್ರಯಾಣಿಕರಿಗೆ ಪ್ರತ್ಯೇಕ ಹೊದಿಕೆ ನೀಡುವುದಿಲ್ಲ. ಸ್ವಯಂ ಚಾಲಿತ ಬಾಗಿಲುಗಳಿರಲಿವೆ.
ಇತ್ತೀಚೆಗೆ ಚಾಲನೆಗೆ ಬಂದ ಹಮ್ಸಫರ್ ಎಕ್ಸ್ ಪ್ರೆಸ್ ನ 3ಎಸಿ ಕೋಚುಗಳು ಜನಪ್ರಿಯತೆ ಗಳಿಸಿರುವ ಬೆನ್ನಲ್ಲೇ ಎಕಾನಾಮಿ 3ಎಸಿ ಕೋಚುಗಳಿಗೆ ಬೇಡಿಕೆ ಬಂದಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಸರ್ಕಾರವು ಸದ್ಯದಲ್ಲೇ ನೀಡುವ ಸಾಧ್ಯತೆಯಿದೆ.(ಪಿಟಿಐ)












Click it and Unblock the Notifications