ಗುಡ್‌ನ್ಯೂಸ್‌‌‌: ಕರ್ನಾಟಕದಲ್ಲಿ ಎಲ್‌ಪಿಜಿ ಬೆಲೆ ಇಳಿಕೆ

ನವದೆಹಲಿ, ಜು.3: ರೈಲು ಪ್ರಯಾಣ ದರ ಏರಿಕೆ, ಪೆಟ್ರೋಲ್‌ ಡೀಸೆಲ್, ಸಿಲಿಂಡರ್‌ ಬೆಲೆ ಏರಿಕೆಯಿಂದ ಹೈರಾಣಾಗಿದ್ದ ಕರ್ನಾಟಕದ ಜನತೆಗೆ ಕೇಂದ್ರ ಸರ್ಕಾರ ತಾತ್ಕಾಲಿಕ ಸಿಹಿ ಸುದ್ದಿಯನ್ನು ನೀಡಿದೆ. ಕೆಲ ದಿನಗಳ ಕಾಲ ಕರ್ನಾಟಕದಲ್ಲಿ ಅಡುಗೆ ಅನಿಲ ಸಿಲಿಂಡರ್‌ ದರ 3 ರೂ.ಇಳಿಯಲಿದೆ.[ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ]

ಮೂರು ತಿಂಗಳ ಹಿಂದೆ ಲೆವಿ ಮೊತ್ತವನ್ನು ಹೆಚ್ಚಿಸಿದ್ದರಿಂದ ಎಲ್‌ಪಿಜಿ ಬೆಲೆ ಕರ್ನಾಟಕದಲ್ಲಿ 3 ರೂ. ಏರಿತ್ತು. ಈ ಏರಿಕೆಗೆ ಕೇಂದ್ರ ಸರ್ಕಾರ ತಾತ್ಕಾಲಿಕ ತಡೆ ಒಡ್ಡಿದೆ.

lpg
ಲೆವಿ ಪರಿಷ್ಕ್ರರಣೆ ಮೂರು ತಿಂಗಳಿಗೊಮ್ಮೆ ನಡೆಯುತ್ತಿದ್ದು , ಪ್ರವೇಶ ತೆರಿಗೆ ,ಆಕ್ಟ್ರಾಯ್‌ ನಂತ ಲೆವಿಗಳನ್ನು ಪರಿಷ್ಕರಿಸಿದ್ದರಿಂದ ಅಡುಗೆ ಅನಿಲ ದರ ಉಳಿದ ರಾಜ್ಯಗಳಲ್ಲಿ ನಾನಾ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಕರ್ನಾಟಕದಲ್ಲಿ 3 ರೂ ಏರಿಕೆಯಾಗಿದ್ದರೆ, ಕೇರಳದಲ್ಲಿ 4.50 ರೂ., ಮಧ್ಯಪ್ರದೇಶದಲ್ಲಿ 5.50 ರೂ.ಗೆ ಏರಿತ್ತು.[ಬೆಂಗಳೂರಿನಲ್ಲಿ ಪೆಟ್ರೋಲ್‌ ಬೆಲೆ ಎಷ್ಟು?]

ಜುಲೈ ತಿಂಗಳಿನಲ್ಲಿ ಮತ್ತೊಮ್ಮೆ ಪರಿಷ್ಕರಣೆ ನಡೆಯಬೇಕಿದೆ. ಲೆವಿ ಹೇರಿಕೆ ವಿಚಾರದಲ್ಲಿ ಗೊಂದಲಗಳಿರುವುದರಿಂದ ಸದ್ಯಕ್ಕೆ ಬೆಲೆ ಏರಿಕೆಯನ್ನು ತಡೆ ಹಿಡಿಯಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+