LPG Cylinder Subsidy: 12 ಸಿಲಿಂಡರ್‌ಗಳ ಮೇಲೆ ಸಿಗುವ 300 ರೂ. ಸಬ್ಸಿಡಿ ಪಡೆಯುವುದು ಹೇಗೆ?
ನವದೆಹಲಿ, ಏಪ್ರಿಲ್. 14: ಪ್ರಸಕ್ತ ಹಣಕಾಸು ವರ್ಷದಿಂದ ಅಂದರೆ ಏಪ್ರಿಲ್ 2024 ರಿಂದ ಮಾರ್ಚ್ 2025 ರವರೆಗೆ ಕೋಟಿಗಟ್ಟಲೆ ಜನರು ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ ಸಬ್ಸಿಡಿ ಪಡೆಯುತ್ತಾರೆ. ಈ ಸಬ್ಸಿಡಿ 300 ರೂಪಾಯಿ ಆಗಿದ್ದು, ಈ ಸಬ್ಸಿಡಿ ಪ್ರಯೋಜನ 12 ಸಿಲಿಂಡರ್‌ಗಳಿಗೆ ಮಾತ್ರ ಲಭ್ಯವಿರುತ್ತದೆ.
ಈ 12 ಸಿಲಿಂಡರ್‌ಗಳ ಸಬ್ಸಿಡಿ ಪ್ರಯೋಜನಗಳನ್ನು ಪಡೆಯಲು, ಉಜ್ವಲಾ ಯೋಜನೆಗೆ ಎಲ್‌ಪಿಜಿ ಗ್ರಾಹಕರು ಸಂಪರ್ಕಿಸುವುದು ಕಡ್ಡಾಯವಾಗಿದೆ. ಸರ್ಕಾರದ ಉಜ್ವಲ ಯೋಜನೆಯಡಿ ಈಗಾಗಲೇ 9 ಕೋಟಿಗೂ ಹೆಚ್ಚು ಜನರು ಸಂಪರ್ಕ ಹೊಂದಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಎಲ್‌ಪಿಜಿ ಸಿಲಿಂಡರ್ ಸಬ್ಸಿಡಿ ಪಡೆಯುವುದು ಹೇಗೆ?
ಕಳೆದ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರವು ಉಜ್ವಲ ಯೋಜನೆಯಡಿ ಬಡ ಮಹಿಳೆಯರಿಗೆ ಪ್ರತಿ ಸಿಲಿಂಡರ್‌ಗೆ 300 ರೂಪಾಯಿಗಳ ಸಬ್ಸಿಡಿಯನ್ನು ಹೆಚ್ಚಿಸುವುದಾಗಿ ಘೋಷಿಸಿತ್ತು. ಈ ಸಬ್ಸಿಡಿಯು ಮೊದಲು ಮಾರ್ಚ್ 2024 ರವರೆಗೆ ಮಾತ್ರ ಇತ್ತು. ಈಗ ಈ ಯೋಜನೆಯನ್ನು ಮಾರ್ಚ್ 31, 2025 ರವರೆಗೆ ವಿಸ್ತರಿಸಲಾಗಿದೆ. ಸಹಾಯಧನವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತದೆ.
ಸಬ್ಸಿಡಿ ಯಾವಾಗಿನಿಂದ ಸಿಗುತ್ತಿದೆ?
ಇಂಧನ ಬೆಲೆ ಏರಿಕೆಯಿಂದಾಗಿ ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ 2022 ರ ಮೇ ತಿಂಗಳಲ್ಲಿ ಕೇಂದ್ರ ಸರ್ಕಾರವು ಪ್ರತಿ ಸಿಲಿಂಡರ್‌ಗೆ 200 ರೂ ಸಬ್ಸಿಡಿ ನೀಡಿ ಆದೇಶ ಹೊರಡಿಸಿತ್ತು. ಆಗಿನಿಂದ 200 ರೂಪಾಯಿ ಸಬ್ಸಿಡಿ ಸಿಗುತ್ತಿತ್ತು. ಬಳಿಕ ಅಕ್ಟೋಬರ್, 2023 ರಲ್ಲಿ ಇದನ್ನು 300 ರೂಪಾಯಿಗೆ ಹೆಚ್ಚಿಸಲಾಯಿತು.
ಈ ಸಬ್ಸಿಡಿ ವರ್ಷಕ್ಕೆ 12 ಎಲ್‌ಪಿಜಿ ಸಿಲಿಂಡರ್‌ಗಳಲ್ಲಿ ಲಭ್ಯವಿದೆ. ಈ ಕ್ರಮದಿಂದ ಸುಮಾರು 10 ಕೋಟಿ ಕುಟುಂಬಗಳಿಗೆ ಅನುಕೂಲವಾಗಲಿದೆ. ಇದಕ್ಕೆ 12,000 ಕೋಟಿ ರೂಪಾಯಿ ವೆಚ್ಚವಾಗಲಿದೆ. ಕಳೆದ ವರ್ಷ 100 ರೂಪಾಯಿ ಹೆಚ್ಚಿಸಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.

ಪ್ರಧಾನ ಮಂತ್ರಿ ಉಜ್ವಲ ಯೋಜನೆ
ಗ್ರಾಮೀಣ ಮತ್ತು ಬಡ ಕುಟುಂಬಗಳಿಗೆ ಶುದ್ಧ ಅಡುಗೆ ಇಂಧನ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (ಎಲ್‌ಪಿಜಿ) ಒದಗಿಸಲು, ವಯಸ್ಕ ಮಹಿಳೆಯರಿಗೆ ಯಾವುದೇ ಠೇವಣಿ ಇಲ್ಲದೆ ಎಲ್‌ಪಿಜಿ ಸಂಪರ್ಕಗಳನ್ನು ಒದಗಿಸಲು ಸರ್ಕಾರವು ಮೇ, 2016 ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಅನ್ನು ಪ್ರಾರಂಭಿಸಿದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಗ್ಯಾಸ್ ಸಂಪರ್ಕಗಳನ್ನು ಉಚಿತವಾಗಿ ನೀಡಲಾಗಿದ್ದರೂ ಅವರು ಮಾರುಕಟ್ಟೆ ಬೆಲೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ತುಂಬಿಸಬೇಕಾಗಿತ್ತು. ಬಳಿಕ ಸಬ್ಸಿಡಿ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಎಲ್ಲರ ಖಾತೆಗೆ ಸಬ್ಸಿಡಿ ಜಮಾ ಮಾಡುವುದಾಗಿ ತಿಳಿಸಲಾಯಿತು. ಆದರೆ, ಈಗಲೂ ಕೂಡ ಸಬ್ಸಿಡಿ ಹಣ ಬಂದಿಲ್ಲ ಎಂದು ಹಲವು ಮಂಡಿ ಆರೋಪಿಸುತ್ತಿದ್ದಾರೆ.
ರಾಜ್ಯಾವಾರು ಇಂದಿನ ಎಲ್‌ಪಿಜಿ ಸಿಲಿಂಡರ್ ಬೆಲೆ
| ಕ್ರಮ ಸಂಖ್ಯೆ | ನಗರ | ಡೊಮೆಸ್ಟಿಕ್ (14.2 ಕೆ.ಜಿ.) | ವಾಣಿಜ್ಯ (19 ಕೆ.ಜಿ) |
| 1 | ಬೆಂಗಳೂರು | 805.5 | 1844.50 |
| 2 | ನವದೆಹಲಿ | 803 | 1764.5 |
| 3 | ಕೋಲ್ಕತ್ತಾ | 829 | 1879 |
| 4 | ಮುಂಬೈ | 802.5 | 1717.5 |
| 5 | ಚೆನ್ನೈ | 818.5 | 1930 |
| 6 | ಹೈದರಾಬಾದ್ | 855 | 1994.5 |
| 7 | ತಿರುವನಂತಪುರಂ | 812 | 1796 |
| 8 | ಪಾಟ್ನಾ | 892.5 | 2024 |
| 9 | ಲಕ್ನೋ | 840.5 | 1877.5 |
| 10 | ಚಂಡೀಗಢ | 812.5 | 1785.5 |












Click it and Unblock the Notifications