ಪೆಟ್ರೋಲ್ 1.69 ರೂ. ಡೀಸೆಲ್ 50 ಪೈಸೆ ಹೆಚ್ಚಳ
ನವದೆಹಲಿ, ಜು.1: ರೈಲ್ವೇ ಪ್ರಯಾಣ ದರ ಏರಿಕೆ ಮಾಡಿ ಪ್ರಯಾಣಿಕರಿಗೆ ಶಾಕ್ ನೀಡಿದ್ದ ಕೇಂದ್ರ ಸರ್ಕಾರ, ಇದೀಗ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿ ವಾಹನ ಸವಾರರ ಜೇಬಿಗೆ ಕತ್ತರಿ ಹಾಕಿದೆ.
ಇರಾಕ್ ಬಿಕ್ಕಟ್ಟಿನಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾದ ಹಿನ್ನಲೆಯಲ್ಲಿ ತೈಲ ಕಂಪನಿಗಳು ಪೆಟ್ರೋಲ್ ಪ್ರತಿ ಲೀಟರ್‌ಗೆ 1.69 ಪೈಸೆ ಹಾಗೂ ಡೀಸೆಲ್ 50 ಪೈಸೆ ಹೆಚ್ಚಿಸಿವೆ. ಪರಿಷ್ಕೃತ ದರಗಳು ಸೋಮವಾರ ಮಧ್ಯರಾತ್ರಿಯಿಂದಲೇ ಜಾರಿಯಾಗಿದೆ. ಈ ಏರಿಕೆಯು ವ್ಯಾಟ್ ಹೊರತು ಪಡಿಸಿದ್ದು, ಪ್ರತಿ ರಾಜ್ಯಕ್ಕೆ ಬೆಲೆ ಬೇರೆಯಾಗಲಿದೆ. [ಇರಾಕಿನಲ್ಲಿ ಬಾಂಬ್ ಬಿದ್ರೆ, ಭಾರತದಲ್ಲೇಕೆ ನಡುಕ]

ಬೆಂಗಳೂರಿನಲ್ಲಿ ಎಷ್ಟು?
ಈ ಹಿಂದೆ ಪ್ರತಿ ಲೀಟರ್‌ಗೆ 78.36 ರೂ ಇದ್ದ ದರ ಈಗ 2.04 ರೂ. ಹೆಚ್ಚಾಗಿ 80.40 ರೂ.ಗೆ ಏರಿಕೆಯಾಗಿದೆ. ಡೀಸೆಲ್ 61 ಪೈಸೆ ಹೆಚ್ಚಾಗಿ 61.93ರಿಂದ 62.54 ರೂ.ಏರಿಕೆಯಾಗಿದೆ.
ಬೇರೆ ನಗರದಲ್ಲಿ ಎಷ್ಟು?
ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ದೆಹಲಿ 73.60 ರೂ., ಕೋಲ್ಕತ್ತಾ 81.43 ರೂ., ಮುಂಬೈ 81.75 ರೂ., ಚೆನ್ನೈ 76.93 ರೂ. ಆಗಿದೆ. ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ದೆಹಲಿ 27.84 ರೂ., ಕೋಲ್ಕತ್ತಾ 62.64 ರೂ., ಮುಂಬೈ 66.01ರೂ., ಚೆನ್ನೈ 61.70 ರೂ. ಆಗಿದೆ.
ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇದೇ ಮೊದಲ ಬಾರಿ ಪೆಟ್ರೋಲ್ ಬೆಲೆ ಏರಿಕೆ ಮಾಡಲಾಗಿದೆ. ಈ ವರ್ಷ ಮಾಡಲಾದ ಅತಿ ಹೆಚ್ಚಿನ ಏರಿಕೆ ಇದಾಗಿದೆ.












Click it and Unblock the Notifications