Smartphone: ಸ್ಮಾರ್ಟ್‌ಫೋನ್, ಮೊಬೈಲ್, ಎಲೆಕ್ಟ್ರಾನಿಕ್ ಗ್ಯಾಜೆಟ್ ಬೆಲೆ ದುಬಾರಿ ಆಗುವ ಸಾಧ್ಯತೆ
ಹೊಸ ಮೊಬೈಲ್ ತೆಗೆದುಕೊಳ್ಳುವ ಪ್ಲ್ಯಾನ್ ಇದೆಯಾ ಬೇಗ ಆ ಕೆಲಸ ಫಸ್ಟ್ ಮಾಡಿ. ಇಲ್ಲ ವಾದಲ್ಲಿ ನಿಮ್ಮ ಜೇಬಿಗೆ ಇನ್ನಷ್ಟು ಕತ್ತರಿ ಬೀಳಬಹುದು. ಹೀಗೆ ಹೇಳಲು ಕಾರಣ ಇನ್ನೇನು ಕೆಲವೇ ದಿನಗಳಲ್ಲಿ ಸ್ಮಾರ್ಟ್‌ಫೋನ್, ಎಲೆಕ್ಟ್ರಾನಿಕ್ ಗ್ಯಾಜೆಟ್ ದುಬಾರಿಯಾಗುವ ಸಂಭವ ಇದೆ. ಹಾಗಿದ್ದರೆ ಎಲೆಕ್ಟ್ರಾನಿಕ್ ಉಪಕರಣಗಳು ಏರಲು ಕಾರಣಗಳು ಇಲ್ಲಿವೆ.
ಸ್ಮಾರ್ಟ್‌ಫೋನ್‌ಗಳು, ಪಿಸಿಗಳು ಮತ್ತು ಕಂಪ್ಯೂಟರ್‌ಗಳಂತಹ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ದುಬಾರಿಯಾಗುವ ಸಾಧ್ಯತೆ ದಟ್ಟವಾಗಿದೆ. ಇತ್ತೀಚಿಗೆ ತೈವಾನ್‌ನಲ್ಲಿ ಸಂಭವಿಸಿದ ಭೂಕಂಪನದಿಂದಾಗಿ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

ಇತ್ತೀಚಿಗೆ ತೈವಾನಲ್ಲಿ ಕಳೆದ 25 ವರ್ಷಗಳಲ್ಲಿ ಸಂಭವಿಸದ ಭಾರೀ ಭೂಕಂಪ ಸಂಭವಿಸಿದೆ. 7.5 ತೀವ್ರವತೆಯಲ್ಲಿ ಭೂಮಿ ಕಂಪಿಸಿದ್ದು, ಹಲವು ಕಟ್ಟಡಗಳು ಧರಾಶಾಹಿಯಾಗಿವೆ. ಇದರಿಂದ ತೈವಾನ್‌ನಲ್ಲಿ ತಲೆ ಎತ್ತಿದ್ದ ಕಾರ್ಖಾನೆಗಳಿಗೂ ಬಿದ್ದಿದೆ. ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಮತ್ತೆ ಯಾವಾಗ ಆರಂಭವಾಗುತ್ತದೆ ಎಂಬ ಬಗ್ಗೆ ಇನ್ನು ಸ್ಪಷ್ಟ ಮಾಹಿತಿ ಇಲ್ಲ.
ಏಪ್ರಿಲ್ 3 ರಂದು ತೈವಾನ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಭೂಕಂಪದ ನಂತರ, ರಕ್ಷಣಾ ಕಾರ್ಯಕರ್ತರು ನಾಪತ್ತೆಯಾದವರ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಬುಧವಾರ ತೈವಾನ್‌ನಲ್ಲಿ ಸಂಭವಿಸಿದ ಭೂಕಂಪವನ್ನು ಕಳೆದ 25 ವರ್ಷಗಳಲ್ಲಿ ಅತ್ಯಂತ ಶಕ್ತಿಶಾಲಿ ಭೂಕಂಪ ಎಂದು ಪರಿಗಣಿಸಲಾಗಿದೆ. ರಕ್ಷಣಾ ಕಾರ್ಯಕರ್ತರು ಡ್ರೋನ್ ಮತ್ತು ಹೆಲಿಕಾಪ್ಟರ್‌ಗಳ ಮೂಲಕ ಜನರನ್ನು ಹುಡುಕುತ್ತಿದ್ದಾರೆ.

ಭೂಕಂಪನದಿಂದ ಈ ಕಾರ್ಖಾನೆಗೆ ಎಷ್ಟು ನಷ್ಟವಾಗಿದೆ ಎಂದು ಇನ್ನು ಬಹಿರಂಗವಾಗಿಲ್ಲ. ಒಂದು ವೇಳೆ ಈ ಕಂಪನಿ ದೀರ್ಘಕಾಲದವರೆಗೆ ಉತ್ಪಾದನೆ ಮಾಡದಿದ್ದರೆ, ಮುಂದಿನ ತಿಂಗಳುಗಳಲ್ಲಿ ಕಂಪ್ಯೂಟರ್ ಮತ್ತು ಮೊಬೈಲ್‌ಗಳ ಬೆಲೆಗಳು ಹೆಚ್ಚಾಗಬಹುದು ಎಂದು ನಂಬಲಾಗಿದೆ.
TSMC ಕಂಪನಿಯು ಚಿಪ್ ತಯಾರಿಕೆಯಲ್ಲಿ ಸುಮಾರು 61 ಪ್ರತಿಶತ ಪಾಲನ್ನು ಹೊಂದಿದೆ. ಇದರರ್ಥ TSMC ವಿಶ್ವ ಮಾರುಕಟ್ಟೆಯ ಅರ್ಧಕ್ಕಿಂತ ಹೆಚ್ಚು ನಿಯಂತ್ರಣವನ್ನು ಹೊಂದಿದೆ.
ಹೆಚ್ಚಿದ ಬೇಡಿಕೆ
ವರದಿಯ ಪ್ರಕಾರ, ಸ್ಯಾಮ್‌ಸಂಗ್ ಮತ್ತು ಮ್ಯಾಕ್ರಾನ್‌ನಂತಹ ರ್ಯಾಮ್ ಮೆಮೊರಿ ಚಿಪ್ ಉತ್ಪಾದನಾ ಕಂಪನಿಗಳು ಮಾರ್ಚ್ ತ್ರೈಮಾಸಿಕದಲ್ಲಿ ಚಿಪ್‌ಗಳ ಬೆಲೆಯನ್ನು ಶೇಕಡಾ 15 ರಿಂದ 20 ರಷ್ಟು ಹೆಚ್ಚಿಸಬಹುದು. ಅತ್ಯುತ್ತಮ AI ಚಿಪ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಸ್ಮಾರ್ಟ್‌ಫೋನ್‌ಗಳ ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳದಿಂದಾಗಿ, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಕಂಪ್ಯೂಟರ್‌ಗಳ ಬೆಲೆ ಹೆಚ್ಚಾಗಬಹುದು.
ಚೀನಾ ಕರೆನ್ಸಿ ಪ್ರಾಭಲ್ಯ
ಇಟಿ ವರದಿಯ ಪ್ರಕಾರ ಮೊಬೈಲ್, ಟ್ಯಾಬ್ಲೆಟ್, ಪಿಸಿ ಮತ್ತು ಕಂಪ್ಯೂಟರ್ ದುಬಾರಿಯಾಗಲು ಎರಡನೇ ಕಾರಣ ಚೀನಾ ಕರೆನ್ಸಿ. ಕಳೆದ ಕೆಲವು ತಿಂಗಳುಗಳಲ್ಲಿ ಚೀನಾದ ಕರೆನ್ಸಿ ಯುವಾನ್ ಬಲಗೊಳ್ಳುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಮೆಮೊರಿ ಚಿಪ್‌ಗಳ ಬೆಲೆ ಹೆಚ್ಚಾಗುವ ನಿರೀಕ್ಷೆಯಿದೆ. ಈಗ ಸ್ಮಾರ್ಟ್ ಫೋನ್ ತಯಾರಿಕೆಗೆ ಬೇಕಾದ ಮೆಮೊರಿ ಮತ್ತು ಚಿಪ್ ಗಳ ಬೇಡಿಕೆ ಹೆಚ್ಚಾದಾಗ ಅದರ ಬೆಲೆಯೂ ಹೆಚ್ಚಾಗುವುದು ಸಹಜ.












Click it and Unblock the Notifications