ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Coronavirus Effect: ಸಾಕಪ್ಪ ಚೀನಾ ಸಹವಾಸ, ಭಾರತದಲ್ಲೇ ಔಷಧಿ ಸಿದ್ಧ

|
Google Oneindia Kannada News

ನವದೆಹಲಿ, ಫೆಬ್ರವರಿ.20: ಕೊರೊನಾ ವೈರಸ್ ನಿಂದ ವಿಶ್ವದಲ್ಲೇ ಭೀತಿ ಹುಟ್ಟಿಸಿರುವ ಚೀನಾ ಸಹವಾಸವೇ ಸಾಕಪ್ಪಾ ಸಾಕು ಎನ್ನುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಚೀನಾಕ್ಕೆ ತೆರಳುವ ವಿಮಾನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ಇದರ ಮಧ್ಯೆ ಭಾರತವು ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.

ಚೀನಾದಿಂದ ಔಷಧಿಗಳ ಆಮದು ಮಾಡಿಕೊಳ್ಳುವುದನ್ನೂ ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಇಂಡಿಯನ್ ಫಾರ್ಮಾಸಿಟಕಲ್ ಅಲಿಯನ್ಸ್ ಚಿಂತನೆ ನಡೆಸಿದೆ. ಕೊರೊನಾ ವೈರಸ್ ಭೀತಿಯಿಂದ ಪ್ಯಾರಾಸಿಟಮೋಲ್ ಔಷಧಿ ಆಮದು ಮಾಡಿಕೊಳ್ಳುವುದಕ್ಕೆ ಈಗಾಗಲೇ ತಡೆ ಹಿಡಿಯಲಾಗಿದೆ. ಇದರಿಂದ ಭಾರತದಲ್ಲಿ ಪ್ಯಾರಾಸಿಟಮೋಲ್ ಬೆಲೆಯಲ್ಲಿ ಶೇ.40ರಷ್ಟು ಏರಿಕೆಯಾಗಿದೆ.

ಕೊರಾನಾವೈರಾಣು ಪರಿಣಾಮ: ಭಾರತದಲ್ಲಿ ಪ್ಯಾರಾಸಿಟಮೋಲ್ ಬೆಲೆ ಏರಿಕೆ ಏಕೆ? ಕೊರಾನಾವೈರಾಣು ಪರಿಣಾಮ: ಭಾರತದಲ್ಲಿ ಪ್ಯಾರಾಸಿಟಮೋಲ್ ಬೆಲೆ ಏರಿಕೆ ಏಕೆ?

ಪ್ಯಾರಾಸಿಟಮೋಲ್ ಬೆಲೆ ಏರಿಕೆಗೆ ಕಡಿವಾಣ ಹಾಕುವುದು ಮತ್ತು ಸಾರ್ವಜನಿಕರಿಗೆ ಔಷಧಿಯನ್ನು ತಲುಪಿಸುವ ಉದ್ದೇಶದಿಂದ ಭಾರತದಲ್ಲೇ ಪ್ಯಾರಾಸಿಟಮೋಲ್ ಉತ್ಪಾದಕ ಘಟಕವನ್ನು ಆರಂಭಿಸಲು ಇಂಡಿಯನ್ ಫಾರ್ಮಾಸಿಟಿಕಲ್ ಅಲಿಯನ್ಸ್ (ಐಪಿಎ) ತಿಳಿಸಿದೆ.

ಭಾರತದಲ್ಲಿ ಪ್ಯಾರಾಸಿಟಮೋಲ್ ಔಷಧಿಯ ಕೊರತೆ

ಭಾರತದಲ್ಲಿ ಪ್ಯಾರಾಸಿಟಮೋಲ್ ಔಷಧಿಯ ಕೊರತೆ

ಭಾರತವು ಈ ಮೊದಲು ಚೀನಾದಿಂದ ಪ್ಯಾರಾಸಿಟಮೋಲ್ ಔಷಧವನ್ನು ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಚೀನಾದಿಂದ ಪ್ಯಾರಾಸಿಟಮೋಲ್ ಔಷಧ ಆಮದು ಮಾಡಿಕೊಳ್ಳುವುದನ್ನು ತಡೆ ಹಿಡಿಯಲಾಗಿದೆ. ಇದರಿಂದ ದೇಶದಲ್ಲಿ ಪ್ಯಾರಾಸಿಟಮೋಲ್ ಔಷಧಗಳ ಕೊರತೆ ಎದ್ದು ಕಾಣುತ್ತಿದೆ. ರೋಗಿಗಳಿಗೆ ಪ್ಯಾರಾಸಿಟಮೋಲ್ ಸಿಗದೇ ಪರದಾಡುವಂತಾ ಪರಿಸ್ಥಿತಿ ಭಾರತದಲ್ಲಿ ನಿರ್ಮಾಣವಾಗಿ ಬಿಟ್ಟಿದೆ.

ಶೇ.40ರಷ್ಟು ಪ್ಯಾರಾಸಿಟಮೋಲ್ ಮಾತ್ರೆಯ ಬೆಲೆ ಏರಿಕೆ

ಶೇ.40ರಷ್ಟು ಪ್ಯಾರಾಸಿಟಮೋಲ್ ಮಾತ್ರೆಯ ಬೆಲೆ ಏರಿಕೆ

ನೋವು ನಿವಾರಕ, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹಾಗೂ ಜ್ವರಕ್ಕೆ ಉಪಯೋಗಿಸುವ ಪ್ಯಾರಾಸಿಟಮೋಲ್ ಮಾತ್ರೆಗಳ ಆಮದು ಸ್ಥಗಿತದಿಂದ ಭಾರತಕ್ಕೆ ಭಾರೀ ಹೊಡೆತ ಬಿದ್ದಂತೆ ಆಗಿದೆ. ಈಗಾಗಲೇ ದೇಶದಲ್ಲಿ ಪ್ಯಾರಾಸಿಟಮೋಲ್ ಔಷಧಿಯ ಬೆಲೆಯಲ್ಲಿ ಶೇ.40ರಷ್ಟು ಏರಿಕೆ ಕಂಡು ಬಂದಿದೆ. ಇದೇ ಪರಿಸ್ಥಿತಿ ಮಾರ್ಚ್ ಏಪ್ರಿಲ್ ವರೆಗೂ ಮುಂದುವರಿದರೆ ಪ್ಯಾರಾಸಿಟಮೋಲ್ ಬೆಲೆಯಲ್ಲಿ ಶೇ.70ರಷ್ಟು ಏರಿಕೆ ಆಗುವ ಆತಂಕವಿದೆ ಎಂದು ಜೈಡಸ್ ಕಾಡಿಲ್ಲಾ ಚೇರ್ಮನ್ ಪಂಕಜ್ ಆರ್ ಪಟೇಲ್ ತಿಳಿಸಿದ್ದಾರೆ.

ಚೀನಾದ ಮೇಲಿನ ಅವಲಂಬನೆಗೆ ಭಾರತದಿಂದ ಕಡಿವಾಣ

ಚೀನಾದ ಮೇಲಿನ ಅವಲಂಬನೆಗೆ ಭಾರತದಿಂದ ಕಡಿವಾಣ

ಪ್ಯಾರಾಸಿಟಮೋಲ್ ಔಷಧಗಳಿಗಾಗಿ ಭಾರತವು ಡ್ರ್ಯಾಗನ್ ರಾಷ್ಟ್ರವನ್ನೇ ನೆಚ್ಚಿಕೊಂಡಿದೆ. 17 ಸಾವಿರ ಕೋಟಿ ರೂಪಾಯಿ ಮೌಲ್ಯದ ಪ್ಯಾರಾಸಿಟಮೋಲ್ ಔಷಧಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಈ ಅವಲಂಬನೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಪ್ಯಾರಾಸಿಟಮೋಲ್ ಔಷಧಗಳಿಗೆ ಹೊಸ ಮೂಲವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ಯಾರಾಸಿಟಮೋಲ್ ಉತ್ಪಾದನಾ ಘಟಕವನ್ನು ಆರಂಭಿಸಲು ಕೇಂದ್ರ ಸರ್ಕಾರಕ್ಕೆ ಇಂಡಿಯನ್ ಫಾರ್ಮಾಸಿಟಿಕಲ್ ಅಲಿಯನ್ಸ್ (ಐಪಿಎ) ಮನವಿ ಸಲ್ಲಿಸಿದೆ.

ಡ್ರ್ಯಾಗನ್ ರಾಷ್ಟ್ರದಲ್ಲಿ ಕೊರೊನಾಗೆ 2,118 ಮಂದಿ ಸಾವು

ಡ್ರ್ಯಾಗನ್ ರಾಷ್ಟ್ರದಲ್ಲಿ ಕೊರೊನಾಗೆ 2,118 ಮಂದಿ ಸಾವು

ಚೀನಾದಲ್ಲಿ ಗುರುವಾರ ಕೂಡಾ ಕೊರೊನಾ ವೈರಸ್ ಅಬ್ಬರ ಮುಂದುವರಿದಿದೆ. ಒಂದೇ ದಿನ 114 ಮಂದಿ ಕೊರೊನಾ ವೈರಸ್ ಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ ಬರೋಬ್ಬರಿ 2,118ಕ್ಕೆ ಏರಿಕೆಯಾಗಿದೆ. ಇದರ ಜೊತೆಗೆ 1,749 ಮಂದಿಯಲ್ಲಿ ಸೋಂಕಿತ ಲಕ್ಷಣಗಳು ಕಂಡು ಬಂದಿದ್ದು, ಈ ಪೈಕಿ 394 ಮಂದಿಗೆ ಸೋಂಕು ತಗಲಿರುವುದು ಖಾತ್ರಿಯಾಗಿದೆ. ಇದರಿಂದ ಸೋಂಕಿತರ ಸಂಖ್ಯೆಯು 74,546ಕ್ಕೆ ಏರಿಕೆ ಆಗಿದೆ.

English summary
Coronavirus Effect: India Pharma Industry Make Medicines For 3 Months. Paracetamol Price Hike By 40% In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X