ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರಾನಾವೈರಾಣು ಪರಿಣಾಮ: ಭಾರತದಲ್ಲಿ ಪ್ಯಾರಾಸಿಟಮೋಲ್ ಬೆಲೆ ಏರಿಕೆ ಏಕೆ?

|
Google Oneindia Kannada News

ನವದೆಹಲಿ, ಫೆಬ್ರವರಿ 18: ಚೀನಾದಲ್ಲಿ ಕೊರೊನಾದಿಂದ (covid19) ಮೃತಪಟ್ಟವರ ಸಂಖ್ಯೆ 1800 ಗಡಿ ದಾಟಿದೆ. ಸುಮಾರು 80 ಸಾವಿರ ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಈ ನಡುವೆ ಕೊರಾನಾ ದೆಸೆಯಿಂದ ಚೀನಾದ ಫಾರ್ಮಾ ಕಂಪನಿಗಳು ಉತ್ಪಾದನೆ ಸ್ಥಗಿತಗೊಳಿಸಿವೆ.

ಚೀನಾದಲ್ಲಿ ಉತ್ಪಾದನೆ ಕುಂಠಿತವಾಗಿರುವ ಪರಿಣಾಮ ಭಾರತದ ಅತ್ಯಂತ ಜನಪ್ರಿಯ ಔಷಧಿ ಪ್ಯಾರಾಸಿಟಮೋಲ್ ಬೆಲೆ ಏರಿಕೆಯಾಗಿದೆ. ಭಾರತದಲ್ಲಿ ಈ ನೋವು ನಿವಾರಕ ಮಾತ್ರೆ ಬೆಲೆ ಶೇ 40ರಷ್ಟು ಏರಿಕೆಯಾಗಿರುವ ಸುದ್ದಿ ಬಂದಿದೆ.

ಜೈಡಸ್ ಕಾಡಿಲ್ಲಾ ಚೇರ್ಮನ್ ಪಂಕಜ್ ಆರ್ ಪಟೇಲ್ ಅವರ ಪ್ರಕಾರ, ಚೀನಾದಿಂದ ಔಷಧ, ಮಾತ್ರೆ ಪೂರೈಕೆ ಸ್ಥಗಿತವಾಗಿದ್ದು, ಆಂಟಿಬಯೋಟಿಕ್, ಅಜಿಥ್ರೋಮೈಸಿನ್ ಮುಂತಾದ ಬ್ಯಾಕ್ಟೀರಿಯಾ ಸೋಂಕು ನಿವಾರಕ ಮಾತ್ರೆಗಳ ಬೆಲೆ ಶೇ 70ರಷ್ಟು ಏರಿಕೆ ಕಂಡಿದೆ.

Coronavirus: Paracetamol Price Rises by 40% in India Due to Shut Down in China

ಮಾರ್ಚ್ ತಿಂಗಳ ಮೊದಲ ವಾರದ ವೇಳೆಗೆ ಔಷಧಗಳ ಪೂರೈಕೆ ಸರಿಯಾಗಿ ಆಗದಿದ್ದರೆ ಏಪ್ರಿಲ್ ನಿಂದ ಮಾತ್ರೆ, ಔಷಧಗಳ ಕೊರತೆ ಭಾರಿ ಪರಿಣಾಮ ಬೀರಲಿದೆ ಎಂದು ಪಟೇಲ್ ಹೇಳಿದ್ದಾರೆ.

ಚೀನಾ ಹಾಗೂ ಅಮೆರಿಕ ಮಾರುಕಟ್ಟೆಗೆ ಅನುಗುಣವಾಗಿ ಭಾರತದ ಫಾರ್ಮಾ ಕೈಗಾರಿಕೆ ನಡೆಯುತ್ತಿದ್ದು, ಕೊರಾನಾ ವೈರಾಣು ನಂತರ ಮಾರುಕಟ್ಟೆ ಸಮತೋಲನ ಕಳೆದುಕೊಂಡಿದೆ.

English summary
In the wake of the deadly Coronavirus outbreak, India is facing the ripple effects of total shutdowns in China with production of medicines to mobile phones.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X