Bridal Beauty Tips: ಮದುವೆ ಸಮಯದಲ್ಲಿ ವಧುವಿನ ತ್ವಚೆ ಆರೈಕೆಗೆ ಏನು ಮಾಡಬೇಕು?
ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಸಿಹಿಯಾದ ಕ್ಷಣ. ಜೀವನದ ಪ್ರಮುಖ ಘಟ್ಟವಾದ ಮದುವೆಯು ಜೀವಮಾನದವರೆಗೂ ಸ್ಮರಣೀಯವಾಗಿ ಉಳಿಯುತ್ತದೆ. ಹೀಗಾಗಿ ಅಂದು ಅಂದವಾಗಿ ಕಾಣಬೇಕು ಎನ್ನುವುದು ಎಲ್ಲರ ಬಯಕೆಯಾಗಿರುತ್ತದೆ. ಗಂಡಾಗಲಿ, ಹೆಣ್ಣಾಗಲಿ ಮದುವೆಯ ದಿನ ಅಂದವಾಗಿ ಕಾಣಬೇಕು ಎನ್ನುವ ಆಸೆ ಸಹಜ.
ಅದರಲ್ಲೂ ವಧುವಂತೂ ಮದುವೆಗೆಯ ದಿನದ ಲುಕ್‌ಗಾಗಿ ತಿಂಗಳು ಗಟ್ಟಲೆ ತಯಾರಿ ನಡೆಸಿರುತ್ತಾರೆ. ಅನೇಕರು ಅಂದವಾಗಿ ಕಾಣಬೇಕು ಎಂದು ಮೇಕಪ್ ಮೊರೆ ಹೊಗುತ್ತಾರೆ. ಮದುವೆಯ ದಿನ ಮೇಕಪ್ ಮಾಡಿಕೊಳ್ಳುವುದು ಸಹಜ. ಆದರೆ ಮದುವೆಗೆ ಮೇಕಪ್ ಮಾಡುವ ಮೊದಲು ತ್ವಚೆಯ ಆರೈಕೆಯತ್ತ ಗಮನ ಕೊಡಿ. ಮದುವೆಗೆ ಇನ್ನೇನು ಒಂದೆರಡು ವಾರವಿದೆ ಎಂದಾಗ ತ್ವಚೆ ಆರೈಕೆ ಕಡೆ ತುಂಬಾನೇ ಮುಖ್ಯವಾಗಿರುತ್ತದೆ. ಹೀಗಾಗಿ ಈ ಕೆಳಗಿನ ಕೆಲವು ಸರಳ ಸಲಹೆಗಳನ್ನು ಫಾಲೋ ಮಾಡಿ.

ಆಹಾರ ಕ್ರಮ
ಮದುವೆ ಸಮಯ ಹತ್ತಿರವಾಗುತ್ತಂತೆ ಆಹಾರದ ಕ್ರಮದ ಬಗ್ಗೆ ಗಮನವಿರಲಿ. ಅತಿಯಾದ ತಂಪು, ಅತಿಯಾದ ಬಿಸಿ ಆಹಾರಗಳನ್ನು ಸೇವಿಸಬೇಡಿ. ಅಧಿಕ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿನ್ನಬೇಡಿ, ಅತಿ ಹೆಚ್ಚು ನಾನ್‌ವೆಜ್ ತಿನಿಸುಗಳನ್ನು ತಿನ್ನಬೇಡಿ. ಹೆಚ್ಚಾಗಿ ನೀರು ಕುಡಿಯಿರಿ, ಜ್ಯೂಸ್, ಹಣ್ಣು, ತರಕಾರಿ ಹಾಗೂ ಕಾಳುಗಳನ್ನು ಹೆಚ್ಚಾಗಿ ಸೇವಿಸಿ. ಅತಿಯಾದ ಡಯಟ್ ಬೇಡ. ನೀವು ತಿನ್ನುವ ಆಹಾರ ನಿಮ್ಮ ತ್ವಚೆಯ ಮೇಲೆ ಪರಿಣಾಮ ಇರುತ್ತದೆ. ಹೀಗಾಗಿ ಎಚ್ಚರಿಕೆಯಿಂದ ಆಹಾರ ಸೇವಿಸಿ.
ಹೊಸ ಕ್ರೀಮ್ & ಫೇಷಲ್ ಟ್ರೈ ಮಾಡಬೇಡಿ
ಮದುವೆಯ ದಿನ ಸಮೀಪಿಸುತ್ತಿರುವ ಸಮಯದಲ್ಲಿ ಯಾರೋ ಹೇಳಿದರು ಎಂದು ಹೊಸ ಕ್ರೀಮ್‌ಗಳನ್ನು ಬಳಸಬೇಡಿ. ಬೆಳ್ಳಗಾಗಲು, ಮೊಡವೆ ಹೋಗಲು, ಕಲೆಗಳು ಮಾಸಲು ಹೀಗೆ ವಿವಿಧ ರೀತಿಯ ತ್ವಚೆಯ ಸಮಸ್ಯೆಗೆ ಯಾವುದೇ ರೀತಿಯ ಹೊಸ ಕ್ರೀಮ್‌ಗಳನ್ನು ಬಳಸಬೇಡಿ. ಮುಖಕ್ಕೆ ಯಾವುದೇ ರೀತಿಯ ಕ್ರೀಮ್‌ಗಳನ್ನು ಹಚ್ಚಬೇಡಿ. ಹಾಗೂ ಹೊಸ ಫೇಷಲ್‌ಗಳನ್ನು ಸಹ ಟ್ರೈ ಮಾಡಬೇಡಿ. ಮೊದಲು ನೀವು ಯಾವ ಫೇಷಲ್ ಬಳಸಿದ್ದೀರಿ, ನಿಮ್ಮ ತ್ವಚೆಗೆ ಯಾವ ಫೇಷಲ್ ಹೊಂದಿಕೊಂಡಿರುತ್ತದೆ ಮದುವೆಗೂ ಸಹ ಅದೇ ಫೇಷಲ್ ಮಾಡಿಕೊಳ್ಳಿ.

ಸನ್ ಸ್ಕ್ರೀಮ್ ಬಳಸಿ
ಮದುವೆಯ ಸಮಯದಲ್ಲಿ ಹೊರಗಿನ ಓಡಾಟ ಹೆಚ್ಚಿರುತ್ತದೆ. ಮದುವೆಗೆ ವಸ್ತುಗಳನ್ನು ಖರೀದಿಸುವುದು, ಮದುವೆ ಆಮಂತ್ರಣ ಕೊಡಲು ತಿರುಗಾಟ ಹೀಗೆ ಮದುವೆಯ ಸಮಯದಲ್ಲಿ ಹೊರಗಡೆ ತಿರುಗಾಟದ ವೇಳೆ ಸನ್ ಸ್ಕ್ರೀಮ್ ಬಳಸಿ. ಇದರಿಂದ ನಿಮ್ಮ ತ್ವಚೆಯನ್ನು ಟ್ಯಾನ್ ಆಗುವುದರಿಂದ ಕಾಪಾಡಿಕೊಳ್ಳಬಹುದು. ಎಚ್ಚರ ನಿಮ್ಮ ತ್ವಚೆಗೆ ಸರಿ ಹೊಂದುವ ಸನ್ ಸ್ಕ್ರೀಮ್ ಬಳಸಿ.












Click it and Unblock the Notifications