ಮಹಾಸಮರಕ್ಕೆ 3.957 ನಾಮಪತ್ರಗಳು

 Anil Kumar Jha
ಬೆಂಗಳೂರು, ಏ. 19 : ನಾಮಪತ್ರಗಳ ಸಲ್ಲಿಕೆ ಕಾರ್ಯ ಮುಗಿದು ಪರಿಶೀಲನೆ ಪ್ರಾರಂಭವಾಗಿದೆ. ರಾಜ್ಯಾದ್ಯಂತ ಒಟ್ಟು ವಿಧಾನಸಭೆಯ 224 ಕ್ಷೇತ್ರಗಳಿಗೆ 3,957 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಕೆಲವು ಕ್ಷೇತ್ರಗಳಲ್ಲಿ ಒಂದೇ ಪಕ್ಷದಿಂದ ಇಬ್ಬರು ನಾಮಪತ್ರ ಸಲ್ಲಿಸಿದ್ದು, ಯಾರಿಗೆ ಬಿ ಫಾರಂ ಅಥವಾ ಸಿ ಫಾರಂ ನೀಡಲಾಗಿರುತ್ತದೋ ಅವರು ಮಾತ್ರ ಕಣದಲ್ಲಿ ಉಳಿಯಲಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ, ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಏ.17ರಂದು 1,910ಕ್ಕೂ ಹೆಚ್ಚು ನಾಮಪತ್ರಗಳು ಸಲ್ಲಿಕೆಯಾಗಿವೆ. ಒಬ್ಬರೇ ಅಭ್ಯರ್ಥಿ 3-4 ನಾಮಪತ್ರ ಸಲ್ಲಿಸಿದ್ದಾರೆ ಎಂದು ಹೇಳಿದರು.

ನಾಮಪತ್ರ ವಾಪಸ್ ಪಡೆಯಲು ಏ.20 ಕೊನೆದಿನವಾಗಿದ್ದು, ಆ ಬಳಿಕವೇ ಪಕ್ಷದ ಅಧಿಕೃತ ಅಭ್ಯರ್ಥಿಗಳ ಯಾರು ಎಂಬ ಪಟ್ಟಿ ಪ್ರಕಟಿಸಲಾಗುವುದು ಎಂದು ತಿಳಿಸಿದರು. ಆರು ವಿಧಾನಸಭೆ ಕ್ಷೇತ್ರಗಳಲ್ಲಿ 30 ಕ್ಕೂ ಹೆಚ್ಚು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಕೆಜಿಎಫ್ ಕ್ಷೇತ್ರದಲ್ಲಿ - 42, ಮುಳಬಾಗಿಲು - 41, ಗುಲ್ಬರ್ಗಾ ದಕ್ಷಿಣ - 41, ಬಳ್ಳಾರಿ ನಗರ - 40, ಮಾಯಕೊಂಡ - 38, ಹುಬ್ಬಳ್ಳಿ - ಧಾರವಾಡ ಕೇಂದ್ರ - 37, ಬಾಗೇಪಲ್ಲಿ - 34, ಕೆ.ಆರ್.ಪುರಂ - 33 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದರು.

28 ಕ್ಷೇತ್ರಗಳಲ್ಲಿ 16ಕ್ಕೂ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ರಾಯಚೂರು ಜಿಲ್ಲೆ ದೇವದುರ್ಗ ಕ್ಷೇತ್ರದಲ್ಲಿ ಅತೀ ಕಡಿಮೆ ಎಂದರೆ 6 ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ವಿಧಾನಸಭೆ ಕ್ಷೇತ್ರದಲ್ಲಿ 7 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ವಿವರಿಸಿದರು.

ಒಟ್ಟು ನಾಮಪತ್ರ ಸಲ್ಲಿಕೆ

ಬಿಜೆಪಿ - 526
ಕಾಂಗ್ರೆಸ್ - 558
ಜೆಡಿಎಸ್ - 464
ಕೆಜೆಪಿ - 356
ಬಿಎಸ್‌ಆರ್ - 265
ಬಿಎಸ್‌ಪಿ - 216
ಜೆಡಿಯು - 123
ಎನ್‌ಸಿಪಿ - 34
ಲೋಕಸತ್ತಾ - 34
ಸಮಾಜವಾದಿ - 31
ಸಿಪಿಎಂ - 22
ಆರ್ ಪಿಐ -18
ಆರ್‌ಪಿಐ (ಎ) -11
ರಾಜ್ಯ ರೈತಸಂಘ - 15
ಸರ್ವೋದಯ ಕರ್ನಾಟಕ - 9
ಸಿಪಿಐ - 8
ಪಕ್ಷೇತರರು - 2209

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+