ಚಾಮರಾಜಪೇಟೆ ಮನೆಮಗನನ್ನು ಗೆಲ್ಲಿಸೋಕೆ ಪ್ರಚಾರವೇ ಬೇಡ: ಜಮೀರ್ ಅಹ್ಮದ್ ಖಾನ್
ಚಾಮರಾಜನಗರ: ಜಮೀರ್ ಅಹ್ಮದ್ ಖಾನ್ ಅಂದ್ರೆ ಚಾಮರಾಜಪೇಟೆ ಮನೆ ಮಗ ಅಂತ ಇಂದು ಜನ ಮತ್ತೊಮ್ಮೆ ಸಾಭೀತು ಪಡಿಸಿದ್ದಾರೆ. ನಾನು ರಾಜ್ಯದ ಹಲವಡೆ ಪಕ್ಷದ ಪರವಾಗಿ ಪ್ರಚಾರ ಮಾಡಿದ್ದೆ, ಆದ್ರೆ ನನ್ನ ಕ್ಷೇತ್ರದಲ್ಲಿ ಪ್ರಚಾರ ಮಾಡಲಿಲ್ಲ. ಆದ್ರೂ ನನ್ನನ್ನು ಗೆಲ್ಲಿಸಿದ್ದಾರೆ ಎಂದು ಚಾಮರಾಜಪೇಟೆ ಕಾಂಗ್ರೆಸ್ ವಿಜೇತ ಅಭ್ಯರ್ಥಿ ಜಮೀರ್ ಅಹ್ಮದ್ ಖಾನ್ ಹೇಳಿದರು.
ನನ್ನ ಕ್ಷೇತ್ರಕ್ಕಾಗಿ ನಾನು ಪ್ರಚಾರ ಮಾಡಿದ್ದು ಕೇವಲ ಮೂರು ಗಂಟೆ ಅಷ್ಟೇ. ನಮ್ಮೆಲ್ಲಾ ಪಕ್ಷದ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರ ಅಭಿಮಾನವೇ ನನ್ನ ಗೆಲುವಿಗೆ ಕಾರಣವಾಗಿದೆ. ನಾನು ರಾಜ್ಯದಲ್ಲಿ 49 ಕ್ಷೇತ್ರಗಳಿಗೆ ಭೇಟಿ ನೀಡಿ ಸಿದ್ದರಾಮಯ್ಯ ಅವರೊಂದಿಗೆ ಪ್ರಜಾಧ್ವನಿ ಯಾತ್ರೆ ಮಾಡಿದ್ದೆ. ಇದರ ಜೊತೆಗೆ 102 ಕ್ಷೇತ್ರಗಳ ಪ್ರಚಾರದಲ್ಲಿ ಭಾಗಿಯಾಗಿದ್ದೆ. ಈ ವೇಳೆ ಜನರು ಬದಲಾವಣೆಗೆ ಕಾಯುತ್ತಿರುವುದ ತಿಳಿದಿದೆ ಎಂದರು.

ನಮ್ಮ ಪ್ರಚಾರದ ಸಮಯದಲ್ಲಿ ಜನರು ನಮ್ಮ ಮೇಲಿಟ್ಟಿರುವ ನಿರೀಕ್ಷೆಗಳನ್ನು ನಾವು ಕಂಡುಕೊಂಡಿದ್ದೇವೆ. ಜೊತೆಗೆ ಈ ಹಿಂದೆ ಕಾಂಗ್ರೆಸ್ ಅಧಿಕಾರವಿದ್ದಾಗ ಇದ್ದ ಸವಲತ್ತುಗಳನ್ನು ನಮಗೇ ಜನರು ನೆನಪಿಸಿದರು. ಈ ಹಿಂದೆಯು ಇಂತಹ ಭಾಗ್ಯಗಳನ್ನು ಕೊಟ್ಟಿರಲಿಲ್ಲ, ಇನ್ನುಮುಂದೆಯೂ ಯಾರೂ ಕೊಡುವುದಿಲ್ಲ ಎಂದು ಹೇಳುವ ಮೂಲಕ ಜನರು ಸರ್ಕಾರ ಬದಲಾವಣೆಗೆ ಕಾಯುತ್ತಿರುವುದಾಗಿ ಹೇಳಿದರು.
ಎಲ್ಲಾ ಧರ್ಮ, ಜಾತಿಗಳಿಗೆ ಉತ್ತಮ ಸವಲತ್ತುಗಳು ಸಿಗಬೇಕೆಂದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ಸಾಧ್ಯ. ರಾಜ್ಯಕ್ಕೆ ಒಳ್ಳೆಯದಾಗಬೇಕಾದರೆ, ಎಲ್ಲಾ ಸಮಾಜದವರಿಗೆ ಒಳ್ಳೆಯದಾಗಬೇಕಾದರೆ ಕಾಂಗ್ರೆಸ್ ಸರ್ಕಾರ ಬರಲೇಬೆಕು ಎಂದು ಈ ಹಿಂದೆಯೇ ಮತದಾದರರು ನಮಗೆ ಹೇಳಿದ್ದರು. ಅದೇ ವಿಶ್ವಾಸವನ್ನು ನಾವು ಉಳಿಸಿಕೊಂಡಿದ್ದು, ನನ್ನ ನಿರೀಕ್ಷೆಯಂತೆ ಇಂದು ನಮ್ಮ ಪಕ್ಷ ಬಹುಮತ ಪಡೆದಿದೆ ಎಂದರು.
Image Source: Twitter












Click it and Unblock the Notifications