ಕಾಂಗ್ರೆಸ್ ನೀಡಿದ್ದ ಗ್ಯಾರೆಂಟಿಗಳ ಜಾರಿ ಯಾವಾಗ? ಈ ಐದು ಮಿಸ್‌ ಆದ್ರೆ ಜನ ತಿರುಗಿ ಬೀಳ್ತಾರೆ!

ಬೆಂಗಳೂರು: ರಾಜ್ಯದಲ್ಲಿ ಅಧಿಕಾರ ಸಾಧಿಸಲು ಮಾಡಿದ ಶತ ಪ್ರಯತ್ನಗಳ ಬಳಿಕ ಕಾಂಗ್ರಸ್‌ಗೆ ಸ್ಪಷ್ಟ ಬಹುಮತವೀಗ ಸಿಕ್ಕಾಗಿದೆ. ಬಿಜೆಪಿ, ಜೆಡಿಎಸ್ ಪಕ್ಷಗಳು ಮಕಾಡೆ ಮಲಗಿವೆ. ಸರ್ಕಾರ ರಚನೆಗೂ 'ಕೈ' ಕಲಿಗಳು ಸಜ್ಜಾಗಿದ್ದಾರೆ. ಎಲ್ಲವೂ ಸರಿಯೇ ಆದ್ರೆ ಕಾಂಗ್ರೆಸ್ ನಾಯಕರು ಕೊಟ್ಟ ಗ್ಯಾರೆಂಟಿಗಳು ಯಾವಾಗ ಎಂಬ ಪ್ರಶ್ನೆ ಕಾಡತೊಡಗಿದೆ.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಅತಿ ಮುಖ್ಯವಾದ ಈ ಐದು ಗ್ಯಾರಂಟಿಗಳನ್ನು ಪೂರೈಸುವುದು ಕಷ್ಟವಾದ್ರೂ ಕೈ ನಾಯಕರು ಯಾವಮಟ್ಟಿಗೆ ಮುಂದಕ್ಕೆ ಕೊಮಡೊಯ್ಯುತ್ತಾರೆ ನೋಡಬೇಕಿದೆ. ಅವರು ಹೇಳಿರುವಂತೆ ಬಿಪಿಎಲ್ ಕುಟುಂಬಕ್ಕೆ 10 ಕೆ.ಜಿ ಅಕ್ಕಿ, ಗೃಹಲಕ್ಷ್ಮಿ ಯೋಜನೆಯಡಿ ಗೃಹಿಣಿಯರಿಗೆ ಮಾಸಿಕ 2000 ರೂ., ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ವಿದ್ಯುತ್, ನಿರುದ್ಯೋಗ ಪದವೀದರರಿಗೆ 3000 ರೂ., ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ. ಇವು ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳಾಗಿವೆ.

congress-implementing-manifesto

ಇವು ಕಾಂಗ್ರೆಸ್‌ ಪಕ್ಷದ 'ಹೈಲಿ ರಿಸ್ಕಿ' ಮ್ಯಾನಿಫೆಸ್ಟೋ ಎಂದೇ ಹೇಳಬಹುದು. ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ಕ್ಯಾಬಿನೆಟ್‌ನಲ್ಲೇ ಜಾರಿಗೆ ತರುವುದಾಗಿ ಕಾಂಗ್ರೆಸ್‌ ನಾಯಕರು ಹೇಳಿದ್ದರು. ಇದರ ಜೊತೆಗೆ ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂಧಿ ಅಧಿಕಾರಕ್ಕೆ ಬಂದ ಒಂದು ಗಂಟೆಯೊಳಗೆ ನಾವು ಘೋಷಿಸಿದ ನಾಲ್ಕು ಗ್ಯಾರಂಟಿಗಳ ಜಾರಿ ಮಾಡುವುದಾಗಿ ಭರವಸೆ ನೀಡಿದ್ದರು. ಜನರಿಗೆ ಕೊಟ್ಟ ಭರವಸೆಯನ್ನು ಈಡೇರಿಸಲೇಬೇಕು ಎಂದು ಪದೆ ಪದೇ ಹೇಳಿದ್ದರು.

ಈ ಮೂಲಕ ಜನರು ಕೂಡ ಕಾಂಗ್ರೆಸ್ ಗ್ಯಾರೆಂಟಿಗಳ ಮೇಲೆ ಅಪಾರ ನಿರೀಕ್ಷೆಗಳನ್ನು ಹೊಂದಿದ್ದಾರೆ. ಒಂದು ಲೆಕ್ಕದಲ್ಲಿ ಈ ಗ್ಯಾರೆಮಟಿಗಳಿಂದಲೇ ಇಂದು ಸರ್ಕಾರಕ್ಕೆ ಬಹುಮತ ಬಂದಿದೆ ಎಂದರೂ ತಪ್ಪಾಗುವುದಿಲ್ಲ. ಇವನ್ನು ಬಿಟ್ಟಿ ಭಾಗ್ಯ ಎನ್ನುತ್ತಿದ್ದ ಬಿಜೆಪಿಗರು ಇದೀಗ ರಾಜ್ಯ ಆಡಳಿತವನ್ನು ಕಾಂಗ್ರೆಸ್‌ಗೆ ಒಪ್ಪಿಸಿ ಮನೆಗೆ ಮರಳಿದ್ದಾರೆ. ಆದ್ರೆ ಒಟ್ಟಾರೆ ಮ್ಯಾನಿಫೆಸ್ಟೋನಲ್ಲಿ ಈ ಐದು ಗ್ಯಾರಿಂಟಿಗಳು ಮಿಸ್‌ ಆದ್ರೆ ಸಾರ್ವಜನಿಕರು ತಿರುಗಿ ಬೀಳುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+