ಓಟಿನ ಮಹತ್ವ: 1 ಮತದಿಂದ ಸೋತು 50 ಸಾವಿರ ಅಂತರದಲ್ಲಿ ಗೆದ್ದ ಎ.ಆರ್.ಕೃಷ್ಣಮೂರ್ತಿ
ಚಾಮರಾಜನಗರ: ಈ ಹಿಂದೆ ಕೇವಲ ಒಂದು ಮತದಿಂದ ಸೋತು ಇಂದು ಭಾರೀ ಅಂತರದಲ್ಲಿ ಗೆದ್ದಿರುವ ಕುರಿತು ಮನದಾಳದ ಮಾತನ್ನು ಹಂಚಿಕೊಂಡ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭರ್ಜರಿ ಗೆಲುವನ್ನು ದಾಖಲಿಸಿದ್ದಾರೆ.
ಈ ಹಿಂದೆ ಕೇವಲ ಒಂದೇ ಒಂದು ಮತದ ಅಂತರದಿಂದ ಸೋತಿದ್ದೆ. ಆಗಲೂ ಅಷ್ಟೇ ಈಗಲೂ ಅಷ್ಟೇ ನನಗೆ ಅಂತರ ಮುಖ್ಯವಲ್ಲ, ಗೆಲುವು ಮುಖ್ಯ ಎಂದು ಕೊಳ್ಳೇಗಾಲದ ವಿಜೇತ ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಹೇಳಿದರು. ಜನರ ವಿಶ್ವಾಸವೇ ನನ್ನನ್ನು ಗೆಲ್ಲಿಸಿದೆ, ಇದು ನನ್ನ ಕ್ಷೇತ್ರದ ಜನರ ವಿಜಯ ಎಂದರು.

ಅಂದು 1 ಮತದ ಅಂತರದಿಂದ ಸೋತು, ಇಂದು 50 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದೇನೆ. ಕಾಲ ಒಂದೇ ರೀತಿ ಇರುವುದಿಲ್ಲ, ಬದಲಾಗುತ್ತದೆ. ಇಂದು ಬದಲಾಗಿದೆ, ನನ್ನ ಕ್ಷೇತ್ರದ ಬದಲಾವಣೆಗೂ ಸಮಯ ಬಂದಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿಯೇ ಮುಖ್ಯ ಧ್ಯೇಯವಾಗಿಟ್ಟುಕೊಂಡು ಕೆಲಸ ಮಾಡುವುದಾಗಿ ಹೇಳಿದರು.
ಸಿದ್ದರಾಮಯ್ಯರ ಸರ್ಕಾರದ ಬಗ್ಗೆ ಜನರಿಗೆ ನಂಬಿಕೆಯಿದೆ, ಅಂದು ಅವರ ಸಾಧನೆಗಳು ಹಾಗೂ ನನ್ನ ಮೇಲಿದ್ದ ಜನರ ವಿಶ್ವಾಸ, ಪಕ್ಷದ ಸಂಘಟನೆಯಿಂದ ಈ ಬಾರಿ ಭರ್ಜರಿ ಗೆಲುವನ್ನು ಸಾಧಿಸಿದದ್ದೇನೆ. ನನ್ನ ಗೆಲುವಿಗೆ ಕಾರಣರಾದ ನನ್ನ ಕ್ಷೇತ್ರದ ಎಲ್ಲಾ ಜನರಿಗೂ ಧನ್ಯವಾದಗಳು ಎಂದು ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಹೇಳಿದರು.












Click it and Unblock the Notifications