ಜೆಡಿಎಸ್ ಭದ್ರಕೋಟೆ ಕೆಡವಿದ ಸಿಮೆಂಟ್ ಮಂಜು... ಸಕಲೇಶಪುರದಲ್ಲಿ ಅರಳಿದ ಕಮಲ
ಬೆಂಗಳೂರು: ಜೆಡಿಎಸ್ ಭದ್ರಕೋಟೆಗಳು ಒಂದೊಂದಾಗಿ ಕೈ ಜಾರುತ್ತಿವೆ. ಸಕಲೇಶಪುರದಲ್ಲಿ ಜೆಡಿಎಸ್‌ಗೆ ಈ ಬಾರಿ ಸೆಡ್ಡು ಹೊಡೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಕಳೆದ ಮೂರು ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣೆ ಹಿಡಿದ ಜೆಡಿಎಸ್‌ಗೆ ಇದು ದೊಡ್ಡ ಆಘಾತವೆಂದೇ ಹೇಳಬಹುದು.
ಜೆಡಿಎಸ್‌ನ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಚ್.ಕೆ ಕುಮಾರಸ್ವಾಮಿ ಅವರ ವಿರುದ್ಧ ಬಿಜೆಪಿಯ ಸಿಮೆಂಟ್ ಮಂಜು ಭರ್ಜರಿ ಗೆಲುವು ಸಾಧಿಸಿದ್ದಾರೆ. ಚುನಾವಣೆಗೂ ಮುನ್ನ ಕ್ಷೇತ್ರದಲ್ಲಿ ಜೆಡಿಎಸ್ ವಿರುದ್ಧ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿದ್ದವು. ಅಭಿವೃದ್ಧಿಯನ್ನೇ ಕಾರಣವಾಗಿ ಇಟ್ಟುಕೊಂಡೇ ಜೆಡಿಎಸ್ ಅನ್ನು ಸೋಲಿಸಲು ಮಾಡಿದ ತಂತ್ರಗಳು ಈಗ ಬಿಜೆಪಿಗೆ ಫಲ ನೀಡಿವೆ.

ಭರ್ಜರಿ ಗೆಲುವಿಗೆ ಸಂಭ್ರಾಮಾಚರಣೆ ಮಾಡುತ್ತಿರುವ ಸಿಮೆಂಟ್ ಮಂಜು, ಈ ಗೆಲುವು ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಜನತೆಯ ಪಾದಕ್ಕೆ ಅರ್ಪಣೆ. ಇಂತಿ ನಿಮ್ಮ ಮನೆ ಮಗ ಸಿಮೆಂಟ್ ಮಂಜು ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಒಟ್ಟಾರೆ ಕಳೆದ 2018 ರ ಚುನಾವಣೆಯಲ್ಲಿ ಸೋತರೂ ಈಗ ಬಿಜೆಪಿ ಸಕಲೇಶಪುರವನ್ನು ತನ್ನದಾಗಿಸಿಕೊಂಡಿದೆ.
ಕಳೆದ ಚುನಾವಣೆಯಲ್ಲಿ ಬಿಜೆಪಿಯ ಸೋಮಶೇಖರ್ ನಾರ್ವೇ ಅವರು ಸೋತಿದ್ದರು. ಜೆಡಿಎಸ್‌ನ ಎಚ್.ಕೆ ಕುಮಾರಸ್ವಾಮಿ ಅವರು 62,262 ಬಹುಮತಗಳಿಂದ ಗೆದ್ದಿದ್ದರು. 2008 ರಿಂದ ಮೂರು ಬಾರಿ ಜೆಡಿಎಸ್ ಅನ್ನು ಅಧಿಕಾರಕ್ಕೆ ತರುವಲ್ಲಿ ಎಚ್.ಕೆ ಕುಮಾರಸ್ವಾಮಿ ಪಾತ್ರ ಮಹತ್ವದ್ದು. ಅವರ ಈ ವರ್ಚಸ್ಸೆ ಈ ಬಾರಿಯು ಕೈ ಹಿಡಿಯಲಿದೆ ಎಂದು ಜೆಡಿಎಸ್ ನಂಬಲಾಗಿತ್ತು. ಆದರೆ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿವೆ.












Click it and Unblock the Notifications