NEET UG 2026: ಮರುಪರೀಕ್ಷೆ ಫಲಿತಾಂಶ ಬಿಡುಗಡೆ: 11 ಲಕ್ಷ ಅಭ್ಯರ್ಥಿಗಳು ಅರ್ಹ, ಪರಿಶೀಲನೆ ಹೇಗೆ?
ನವದೆಹಲಿ: ವೈದ್ಯಕೀಯ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ 'ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ -ಪದವಿಪೂರ್ವ (NEET-UG 2026)' ಮರು ಪರೀಕ್ಷೆ ಬರೆದ 20 ಲಕ್ಷ ಅಭ್ಯರ್ಥಿಗಳ ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಗುರುವಾರ ರಾತ್ರಿ ಪ್ರಕಟಿಸಿದೆ. ಇದರಲ್ಲಿ ಒಟ್ಟು 11.21 ಲಕ್ಷ ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. ಕೀ ಉತ್ತರಗಳನ್ನು ಪ್ರಕಟಿಸಿದ ಬೆನ್ನಲ್ಲೆ ಫಲಿತಾಂಶ ಸಹ ಪ್ರಕಟವಾಗಿದ್ದು, ವಿದ್ಯಾರ್ಥಿಗಳು ಮುಂದಿನ ಶೈಕ್ಷಣಿಕ ಪ್ರಕ್ರಿಯೆಗೆ ಅನುಕೂಲವಾಗಲಿದೆ.
ನೀಟ್ ಸಂಬಂಧಿಸಿದಂತೆ ಪದವಿಪೂರ್ವ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಮತ್ತು ವೈದ್ಯಕೀಯ ಸಂಬಂಧಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಮೇ 3ರಂದು ನಡೆದ ಪರೀಕ್ಷೆ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಕೇಳಿ ಬಂದಿತ್ತು. ನಂತರ ಜೂನ್ 21ರಂದು ಮರು ಪರೀಕ್ಷೆ ನಡೆಸಲಾಗಿತ್ತು. ಇದೀಗ ಮರು ಪರೀಕ್ಷೆಗಳ ಫಲಿತಾಂಶ ಬಿಡುಗಡೆ ಆಗಿದೆ.

715 ಅಂಕಗಳೊಂದಿಗೆ ಆರ್ಯನ್ ಗುಪ್ತಾ, ಪನ್ಶುಲ್ ಬನ್ಸಾಲ್ ಗೆ ಅಗ್ರಸ್ಥಾನದಲ್ಲಿದ್ದಾರೆ. 19 ಅಭ್ಯರ್ಥಿಗಳು 700ಕ್ಕೂ ಅಧಿಕ ಅಂಕ ಪಡೆದರೆ, 138 ಮಂದಿಗೆ 690ಕ್ಕೂ ಹೆಚ್ಚು ಅಂಕ ಪಡೆದಿದ್ಆರೆ. ಒಟ್ಟಾರೆ 11 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಮೇಲಿನ ವೃತ್ತಿಪರ ಕೋರ್ಸ್‌ಗಳಿಗೆ ಅರ್ಹತೆ ಪಡೆದಿದ್ದಾರೆ ಎಂದು ಸಂಸ್ಥೆ ಖಚಿತಪಡಿಸಿದೆ. ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ವೈದ್ಯಕೀಯ ಪ್ರವೇಶ ಮತ್ತು ಕೌನ್ಸೆಲಿಂಗ್ ದಿನಾಂಕಗಳಿಗೆ ಸರಿಯಾಗುವಂತೆ ಫಲಿತಾಂಶವನ್ನು ಸಕಾಲದಲ್ಲಿ ಘೋಷಿಸಲಾಗಿದೆ.
5,440 ಕೇಂದ್ರಗಳಲ್ಲಿ ಪರೀಕ್ಷೆ
ಭಾರತದ 551 ನಗರಗಳು ಮತ್ತು ವಿದೇಶಗಳಲ್ಲಿ 14 ನಗರಗಳ 5,440 ಕೇಂದ್ರಗಳಲ್ಲಿ ಒಟ್ಟು 20 ಲಕ್ಷ ಅಭ್ಯರ್ಥಿಗಳು ನೀಟ್ ಯುಜಿ 2026 ಪರೀಕ್ಷೆಗೆ ಹಾಜರಾಗಿದ್ದರು. ದೇಶದ ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಿಂದ 13 ಭಾಷೆಗಳಲ್ಲಿ ಅಭ್ಯರ್ಥಿಗಳು ಹಾಜರಾಗಿದ್ದರು. ಅರ್ಹತೆ ಪಡೆದ ಅಭ್ಯರ್ಥಿಗಳಲ್ಲಿ ಶೇಕಡಾ 58 ಕ್ಕಿಂತ ಹೆಚ್ಚು ಮಹಿಳೆಯರು. ಅತ್ಯುತ್ತಮ ಪ್ರದರ್ಶನ ನೀಡುವ ಅಭ್ಯರ್ಥಿಗಳಲ್ಲಿ ಹೆಚ್ಚಿನವರು 17 ರಿಂದ 19 ವರ್ಷ ವಯಸ್ಸಿನವರಿದ್ದಾರೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ವಿವರಿಸಿದೆ.
ಫಲಿತಾಂಶ ಪರಿಶೀಲಿಸುವುದು ಹೇಗೆ? ಈ ವಿಧಾನ ಅನುಸರಿಸಿ..
* ನೀಟ್ ಯುಜಿ ಅಭ್ಯರ್ಥಿಗಳು ಮೊದಲಿಗೆ ಅಧಿಕೃತ ವೆಬ್‌ಸೈಟ್‌ಗೆ neet.nta.nic.in ಭೇಟಿ ನೀಡಬೇಕು.
* ನಂತರ ಅಭ್ಯರ್ಥಿಗಳು ನಿಮ್ಮ ವೈಯಕ್ತಿಕ ವಿವರಗಳನ್ನು ನಮೂದಿಸಿ ಸೈಟ್‌ಗೆ ಲಾಗಿನ್ ಆಗಬೇಕು.
* ಸೈಟ್ ಮುಖಪುಟದಲ್ಲಿ ಲಭ್ಯವಿರುವ 'NEET UG 2026 ಫಲಿತಾಂಶದ' ಲಿಂಕ್ ಅನ್ನು ಆಯ್ಕೆ ಮಾಡಿಕೊಳ್ಳಿ.
* ಮುಂದೆ ಫಲಿತಾಂಶ ಅಪ್ಡೇಟ್ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು.
* ಬಳಿಕ ತೆರೆಯುವ ಫಲಿತಾಂಶವನ್ನು ಪರಿಶೀಲಿಸಿಕೊಂಡು ಭವಿಷ್ಯ ಅನುಕೂಲಕ್ಕಾಗಿ ಡೌನ್‌ಲೋಡ್ ಮಾಡಿಕೊಂಡು ಪ್ರತಿ ಪಡೆಯಬಹುದು.
The National Testing Agency (NTA) today declared the result of the National Eligibility cum Entrance Test (Undergraduate), NEET (UG) 2026. The result has been declared in time so that the medical-admission and counselling calendar for candidates stays on track.
— ANI (@ANI) July 16, 2026
A total of close… pic.twitter.com/ER4btyZWOR













Click it and Unblock the Notifications