ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ರನ್ನು ಸೋಲಿಸಿದ ಕೆ.ಷಡಕ್ಷರಿ: ಮರುಕಳಿಸಿದ ಇತಿಹಾಸ
ತುಮಕೂರು: ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡಿದೆ. 'ಕಲ್ಪತರು ನಾಡು' ತುಮಕೂರು ಜಿಲ್ಲೆಯಲ್ಲಿ ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಷಡಕ್ಷರಿ ಭರ್ಜರಿ ಜಯಗಳಿಸಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಬಿ.ಸಿ.ನಾಗೇಶ್ ಪರಾಭವಗೊಂಡಿದ್ದಾರೆ. ಮತ್ತೆ ಕ್ಷೇತ್ರದಲ್ಲಿ ಒಮ್ಮೆ ಗೆದ್ದ ಅಭ್ಯರ್ಥಿ ಮತ್ತೆ ಗೆಲುವು ಸಾಧಿಸುವುದಿಲ್ಲ ಎಂಬ ಇತಿಹಾಸ ಮರುಕಳಿಸಿದೆ. 2008ರ ಬಿಜೆಪಿಯ ಬಿ.ಸಿ.ನಾಗೇಶ್ ಜಯಗಳಿದ್ದರು. ಕಾಂಗ್ರೆಸ್ನ ಷಡಕ್ಷರಿ ಸೊತ್ತಿದ್ದರು. 2013ರ ಎಲೆಕ್ಷನ್ ನಲ್ಲಿ ಷಡಕ್ಷರಿ ಗೆದಿದ್ರೆ, ಬಿ.ಸಿ.ನಾಗೇಶ್ ಸೋಲು ಕಂಡಿದ್ದರು.

ಇನ್ನುಳಿದಂತೆ ಈ ಬಾರಿಯ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದ ಜಿಲ್ಲೆಯಾಗಿರುವ ತುಮಕೂರಿನಲ್ಲಿ ಜೆಡಿಎಸ್ ಗೆ ಕಾಂಗ್ರೆಸ್ ಸರಿಯಾಗಿಯೇ ಠಕ್ಕರ್ ನೀಡಿದ್ದು, ಕೊರಟಗೆರೆಯಲ್ಲಿ ಡಾ.ಜಿ.ಪರಮೇಶ್ವರ್ ಅವರ ಗೆಲುವಿನೊಂದಿಗೆ ಏಳು ಕ್ಷೇತ್ರದಲ್ಲಿ ಜಯಗಳಿಸಿದೆ. ಹಿರಿಯರಾಗಿರುವ ಕೆ.ಷಡಕ್ಷರಿ ಅವರನ್ನು ಸಚಿವರನ್ನಾಗಿ ಮಾಡಬೇಕೆಂಬ ಕೊಗು ಅವರ ಬೆಂಬಲಿಗರಿಂದ ಕೇಳಿ ಬಂದಿದೆ.












Click it and Unblock the Notifications