ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಜೋರು... ರಾಜ್ಯದಲ್ಲಿ 'ಕೈ' ನಾಯಕರ ಸಂಭ್ರಮಾಚರಣೆ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದರೇ ಕಮಲ ಅರಳುವಲ್ಲಿ ಹಿನ್ನಡೆಯಾಗಿದೆ. ಈಗಾಗಲೇ ಕಾಂಗ್ರೆಸ್ ಗೆಲುವನ್ನು ಭವಿಷ್ಯ ನುಡಿದು ಕಾರ್ಯಕರ್ತರು ಸಂಭ್ರಮಾಚರಣೆಗೆ ಸಜ್ಜಾಗಿದ್ದಾರೆ. ಪಕ್ಷದ ದಿಗ್ಗಜರು ಕೂಡ ಸರ್ಕಾರ ರಚನೆಗೆ ಪಕ್ಕಾ ಪ್ರಣಾಳಿಕೆಗಳನ್ನು ರೂಪಿಸಿಕೊಳ್ಳುವಲ್ಲಿ ಬಿಸಿಯಾಗಿಬಿಟ್ಟಿದ್ದಾರೆ.

ಕರ್ನಾಟಕ ಚುನಾವಣೆ 2023 ರ ಮತ ಎಣಿಕೆ ಇಂದು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಿದ್ದು, ಎಲ್ಲಾ ಕ್ಷೇತ್ರಗಳ ಎಲ್ಲಾ ವಿಧಾನಸಭಾ ಸದಸ್ಯರನ್ನು ಘೋಷಿಸುವವರೆಗೆ ಮುಂದುವರಿಯುತ್ತದೆ. ಈಗಾಗಲೇ ಬಹುತೇಕ ಕ್ಷೇತ್ರಗಳ ಫಲಿತಾಂಶ ಘೋಷಣೆಯಾಗಿದೆ. ಗೆದ್ದ ಕಾಂಗ್ರೆಸ್ ಶಾಸಕರಿಗೆ ರಾಜ ಮರ್ಯಾದೆಗಳನ್ನು ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

karnataka-election-results-2023

ಪ್ರಸ್ತುತದ ಕಾಂಗ್ರೆಸ್‌ 123 ಸ್ಥಾನಗಳೊಂದಿಗೆ ಲೀಡಿಂಗ್ ಕಾಯ್ದುಕೊಂಡಿದ್ದರೇ, ಬಿಜೆಪಿ 71 ಜೆಡಿಎಸ್ 26 ಹಾಗೂ 6 ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಈ ಮೂಲಕ ಬಹುತೇಕ ಕಾಂಗ್ರೆಸ್ ಗೆಲುವು ಖಚತವಾಗಿದೆ ಎಂದೇ ಹೇಳಬಹುದು. ಈಗ ಕಾಂಗ್ರೆಸ್ ನಾಯಕರು ತಮ್ಮ ಗೆದ್ದ ಶಾಸಕರ ಭದ್ರತೆಗೆ ಸಜ್ಜಾಗಿದ್ದಾರೆ.

ಮಾಹಿತಿಯ ಪ್ರಕಾರ ಕಾಂಗ್ರಸ್ ಶಾಸಕರನ್ನು ತಮ್ಮ ಭದ್ರಕೋಟೆಯಲ್ಲಿ ಹೊರಬರದಂತೆ ಲಾಕ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಂಪೂರ್ಣ ಫಲಿತಾಂಶದ ಬಳಿಕ ಹೆಚ್ಚಿನ ಬೆಳವಣಿಗಗಳು ನಡೆಯಲಿದ್ದು, ಶಾಸಕರನ್ನು ನಿಭಾಯಿಸುವ ಜವಾಬ್ದಾರಿಯನ್ನು ಕನಕಪುರ ಬಂಡೆ ಡಿಕೆ ಶಿವಕುಮಾರ್ ವಹಿಸಿಕೊಂಡಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+