ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ ಗಣಿಗಾರಿಕೆ, ಎಚ್ಡಿಕೆ ವಿರುದ್ಧವೂ ಹೋರಾಟ

By Mahesh
|
Google Oneindia Kannada News

SR Hiemath
ಬೆಂಗಳೂರು, ಮೇ.28: 'ನಾನು ಸುಮಾರು 32 ವರ್ಷಗಳಿಂದ ಸಾರ್ವಜನಿಕ ಹೋರಾಟದಲ್ಲಿ ತೊಡಗಿಕೊಂಡಿದ್ದೇನೆ. ಈ ಅವಧಿ ಯಲ್ಲಿ ಯಾವುದೇ ವ್ಯಕ್ತಿ, ಸಂಘಟನೆ ಅಥವಾ ಪಕ್ಷದ ಏಜೆಂಟನಾಗಿ ಕೆಲಸ ಮಾಡಿಲ್ಲ' ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್ ಆರ್ ಹಿರೇಮಠ್ ಅವರು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ನಾಯಕ, ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಸಾಮಾಜಿಕ ಕಾರ್ಯಕರ್ತ ಎಸ್ ಆರ್ ಹಿರೇಮಠ್ ಅವರನ್ನು ಜೆಡಿಎಸ್ ಏಜೆಂಟ್ ಎಂದು ಕರೆದ್ದಿದ್ದರು. ಇದಕ್ಕೆ ಉತ್ತರ ನೀಡಲು ಹಿರೇಮಠ್ ಅವರು ಭಾನುವಾರ(ಮೇ.28)ಸುದ್ದಿಗೋಷ್ಠಿ ಕರೆದಿದ್ದರು.

ಡಿಕೆಶಿಗೆ ಎಚ್ಚರಿಕೆ: ಕಾಂಗ್ರೆಸ್ ನಾಯಕ ಶಿವಕುಮಾರ್ ಅವರು ಅಸಂವಿಧಾನಿಕ ಶಬ್ದ ಬಳಕೆ ಮಾಡಿದ್ದಾರೆ. ಈ ವಿಷಯವನ್ನು ಜುಲೈನಲ್ಲಿ ಸುಪ್ರೀಂ ಕೋರ್ಟ್ ಎದುರು ತರಲಿದ್ದೇನೆ ಎಂದು ಹಿರೇಮಠ್ ಹೇಳಿದರು.

ಎಸ್ ಆರ್ ಹಿರೇಮಠ್ ಅವರು ಜೆಡಿಎಸ್ ನೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಂಡಿದ್ದಾರೆ. ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಲು ಆರ್ ಟಿಐ ಮೂಲಕ ಮಾಹಿತಿ ಸಂಗ್ರಹಿಸಲಾಗಿದೆ. ನನ್ನ ವಿರುದ್ಧ ಸಿಬಿಐ ಏಕೆ, ಇಂಟರ್ ಪೋಲ್ ಕರೆಸಿ ತನಿಖೆ ನಡೆಸಿ ಎಂದು ಡಿಕೆ ಶಿವಕುಮಾರ್ ಸವಾಲು ಎಸೆದಿದ್ದರು.

ಎಚ್ಡಿಕೆ ವಿರುದ್ಧ ತೀವ್ರ ಹೋರಾಟ: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಎಸ್ ಎಂ ಕೃಷ್ಣ, ಧರ್ಮಸಿಂಗ್ ಹಾಗೂ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಅವರ ಅಕ್ರಮಗಳ ವಿರುದ್ಧ ನಡೆಸಿರುವ ಹೋರಾಟಕ್ಕಿಂತಲೂ ತೀಕ್ಷ್ಣವಾದ ಹೋರಟವನ್ನು ಎಚ್ ಡಿ ಕುಮಾರಸ್ವಾಮಿ ಎದುರಿಸಲಿದ್ದಾರೆ ಎಂದು ಹಿರೇಮಠ್ ಹೇಳಿದ್ದಾರೆ.

ರಾಷ್ಟ್ರೀಯ ಸಂಪತ್ತಿನ ವಿಷಯದಲ್ಲಿ ತಪ್ಪು ಮಾಡಿದ ಯಾವುದೇ ವ್ಯಕ್ತಿಯ ವಿರುದ್ಧ ಕಾನೂನು ಚೌಕಟ್ಟಿನಲ್ಲಿ ಹೋರಾಟ ಮಾಡಲು ನಾನು ಸಿದ್ಧ. ಕುಮಾರಸ್ವಾಮಿ ಅವರ ಅಧಿಕಾರ ಅವಧಿಯಲ್ಲಿ ಮಾಡಿರುವ ಅಕ್ರಮಗಳು, ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ ಕುರಿತು ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಸಂಗ್ರಹ ಕಾರ್ಯ ಪೂರ್ಣಗೊಂಡ ನಂತರ ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ ಎಂದು ಹಿರೇಮಠ್ ಹೇಳಿದರು.

ಆಜಾದ್ ಸೇ ಸ್ವರಾಜ್ ಅಭಿಯಾನ : ಎನ್‌ಸಿಪಿಎನ್‌ಆರ್‌ ಜೊತೆ ಗುಜರಾತಿನ ಲೋಕ ಸ್ವರಾಜ್ಸಮಿತಿ, ರಾಜ್ಯದ ಜನಸಂಗ್ರಾಮ ಪರಿಷತ್, ರಾಜಸ್ಥಾನದ ಎಂಜಿಎನ್‌ಆರ್ ಇಜಿಪಿ ಕಾರ್ಮಿಕರ ಯೂನಿಯನ್, ಗ್ರಾಮ ಗಣರಾಜ್ಯ ವೇದಿಕೆ ಹಾಗೂ ಸಮಾನ ಮನಸ್ಕ ಸಂಘಟನೆಗಳು ಕೈಜೋಡಿಸಿದೆ.

ಗುಜರಾತ್, ರಾಜಸ್ಥಾನ, ಕರ್ನಾಟಕ, ಉತ್ತರಾಖಂಡ್ ಹಾಗೂ ಮತ್ತು ಒಡಿಶಾ ರಾಜ್ಯಗಳಲ್ಲಿ ಈ ಆಂದೋಲನವನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಹಿರೇಮಠ್ ಅವರು ತಮ್ಮ ಮುಂದಿನ ಯೋಜನೆ ಬಗ್ಗೆ ವಿವರಿಸಿದರು.

English summary
Advocate, Samaj Parivartana Samudaya NGO chief SR Hiremath hits out at congress leader DK Shivakumar's allegation. SR Hiremath says his fight is against corruption and illegal mining not on any individuals. HD Kumaraswamy will also face same treatment, nobody will be spared he added
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X