Get Updates
Get notified of breaking news, exclusive insights, and must-see stories!

Janardhan Reddy: ಚುನಾವಣೆ ಹೊತ್ತಲ್ಲಿ ರೆಡ್ಡಿಗೆ ಸಂಕಷ್ಟ: ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕೋರ್ಟ್ ಆದೇಶ

ಬೆಂಗಳೂರು, ಏಪ್ರಿಲ್ 18: ಕರ್ನಾಟಕ ರಾಜ್ಯ ವಿಧಾನಸಭಾ ಚುನವಣೆ ಹೊಸ್ತಿಲಲ್ಲಿ 'ಕಲ್ಯಾಣ ರಾಜ್ಯ ಪ್ರಗತಿ ಪಕ್ಷ'ದ ಸಂಸ್ಥಾಪಕರಾದ ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರಿಗೆ ಸಂಕಷ್ಟ ಎದುರಾಗಿದೆ.

ದಶಕಗಳಷ್ಟು ಹಳೆಯದಾದ ಬಹುಕೋಟಿ ಅಕ್ರಮ ಗಣಿಗಾರಿಕೆ ಪ್ರಕರಣವೊಂದರಲ್ಲಿ ಮಾಜಿ ಪ್ರವಾಸೋದ್ಯಮದ ಕರ್ನಾಟಕ ರಾಜ್ಯ ಸಚಿವ ಜನಾರ್ದನ ರೆಡ್ಡಿ ಮತ್ತಿತರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಇತ್ತೀಚೆಗಷ್ಟೇ ಕರ್ನಾಟಕದ ಪೊಲೀಸರಿಗೆ ಆದೇಶ ಹೊರಡಿಸಿದೆ.

Bengaluru Court Order Issue To Filed Criminal Case On Janardhan Reddy In Illegal Mining Case

ಗಣಿದಣಿ ಎಂದೆ ಖ್ಯಾತರಾದ ಜಿ.ಜನಾರ್ಧನ ಮತ್ತು ಅವರ ಸೋದರ ಮಾವ ಬಿ.ವಿ.ಶ್ರೀನಿವಾಸ ರೆಡ್ಡಿ ಅವರನ್ನು ಈ ಪ್ರಕರಣದಲ್ಲಿ ಸೆಪ್ಟೆಂಬರ್ 2011 ರಲ್ಲಿ ಬಂಧಿಸಲಾಗಿತ್ತು. ಪ್ರಕರಣ ಸಂಬಂಧ ಅಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಜನವರಿ 2015 ರಲ್ಲಿ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಅಂದಿನ ಸಮಯದಲ್ಲಿ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ)ದ ನೇತೃತ್ವದಲ್ಲಿ ತನಿಖೆ ನಡೆದಿತ್ತು.

ಲೋಕಾಯುಕ್ತ ತನಿಖಾ ದಂಡದಿಂದ ದೂರು: ಆದೇಶ

ಸದ್ಯದ ಸನ್ನಿವೇಶದಲ್ಲಿ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ಧನ ರೆಡ್ಡಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ವಿಶೇಷ ನ್ಯಾಯಾಧೀಶ ಜೆ.ಪ್ರೀತ್ ಪೊಲೀಸರಿಗೆ ಸೂಚಿಸಿದ್ದಾರೆ. ಆದರೆ, ಈ ಬಾರಿ ಲೋಕಾಯುಕ್ತರ ವಿಶೇಷ ತನಿಖಾ ತಂಡ ದೂರು ನೀಡಿದೆ.

Bengaluru Court Order Issue To Filed Criminal Case On Janardhan Reddy In Illegal Mining Case

ಕೇವಲ ಜನಾರ್ಧನ ರೆಡ್ಡಿ ಮತ್ತು ಅವರ ಸೋದರ ಮಾವ ಅಲ್ಲದೆ, ಅವರ ಆಪ್ತ ಮೆಹಫೌಜ್ ಅಲಿ ಖಾನ್ ಮತ್ತು ಮಾಜಿ ಶಾಸಕ (ಎಂಎಲ್‌ಎ) ಬಿ ನಾಗೇಂದ್ರ ವಿರುದ್ಧವೂ ಪ್ರಕರಣ ಸಂಬಂಧ ತನಿಖೆಗೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ. ಹಿರಿಯ ಐಎಎಸ್ ಮತ್ತು ಐಆರ್‌ಎಸ್ ಅಧಿಕಾರಿಗಳು ಹಾಗೂ ನಾಲ್ಕು ಗಣಿ ಕಂಪನಿಗಳ ಹೆಸರನ್ನೂ ದೂರಿನಲ್ಲಿ ಲೋಕಾಯುಕ್ತ ತಂಡ ಉಲ್ಲೇಖವಾಗಿದೆ.

2009ರಲ್ಲಿ ಸಂಚು ರೂಪಿಸಿದ್ದು ಉಲ್ಲೇಖ

ಸಲ್ಲಿಕೆಯಾದ ದೂರಿನ ಪ್ರಕಾರ, ಶ್ರೀ ಮಿನರಲ್ಸ್ ಮತ್ತು ಶ್ರೀ ಬಸವೇಶ್ವರ ಮಿನರಲ್ಸ್ ಮಾಲೀಕರು ಮತ್ತು ಟ್ರೈಡೆಂಟ್ ಮಿನರಲ್ಸ್‌ನ ಪಾಲುದಾರರಾದ ಹೋತೂರ್ ನೂರ್ ಅಹಮದ್, ಮಧುಕುಮಾರ್ ವರ್ಮಾ - ಹೋತೂರು ಅಬ್ದುಲ್ ವಹಾಬ್ ಹಾಗೂ ಹೋತೂರು ಮಹಮ್ಮದ್ ಇಕ್ಬಾಲ್ ಏಪ್ರಿಲ್‌ನಿಂದ ಕೆಲವು ಸರ್ಕಾರಿ ಅಧಿಕಾರಿಗಳು ಮತ್ತು ಗಣಿ ಮಾಲೀಕರೊಂದಿಗೆ 2009ರ ಆರಂಭದಿಂದ 2009ರ ಡಿಸೆಂಬರ್ ರೆಗೆ ಕ್ರಿಮಿನಲ್ ಸಂಚು ರೂಪಿಸಿದ್ದಾರೆ ಎಂದು ಹೇಳಲಾಗಿದೆ.

ಪ್ರಕರಣ ಸಂಬಂಧ ಆರೋಪಿಗಳು 2011ರಲ್ಲಿಯೂ ಅಕ್ರಮ ಕಬ್ಬಿಣದ ಅದಿರು ಗಣಿಗಾರಿಕೆ ನಡೆಸಿದ್ದರು. ಇದರಿಂದ ರಾಜ್ಯಕ್ಕೆ ಸುಮಾರು ₹211 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂಬ ಆರೋಪವು ಅವರೆಲ್ಲರ ಮೇಲಿದೆ.

ಸಲ್ಲಿಕೆಯಾದ ದೂರು ಮತ್ತು ದಾಖಲಾದ ಪ್ರಕರಣದಲ್ಲಿ ಎಲ್ಲ ಅಂಶಗಳನ್ನು ಪರಿಶೀಲಿಸಿದ ನಂತರ, ಆರೋಪಗಳು ಪ್ರಾಥಮಿಕವಾಗಿ ತನಿಖೆಗೆ ಆದೇಶಿಸಲು ಸಾಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ. ಆದ್ದರಿಂದ ಗಣಿ ಮತ್ತು ಖನಿಜಗಳ ಅಭಿವೃದ್ಧಿ ಮತ್ತು ನಿಯಮಾವಳಿ ಕಾಯ್ದೆ 1957ರ ಸೆಕ್ಷನ್ 21 ಮತ್ತು 23 ಮತ್ತು ಸೆಕ್ಷನ್ 4(1) ಮತ್ತು 4(1)(ಎ) ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. ಈ ಕುರಿತು ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+