ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವ ರೇಣುಕಾ ಜೀವಕ್ಕೆ ಎಲ್ ಟಿಟಿಇ ಭೀತಿ

By Mahesh
|
Google Oneindia Kannada News

Minister Renukacharya
ಶಿವಮೊಗ್ಗ, ಅ.11: ನಕ್ಸಲ್ ನಿಗ್ರಹ ದಳದ ಸಿಬ್ಬಂದಿ ಮಹಾದೇವ ಮಾನೆ ನಿಧನ ನಂತರ ರಾಜ್ಯದಲ್ಲಿ ಎಲ್ ಟಿಟಿಇ ಕಾರ್ಯಾಚರಣೆ ಆರಂಭಗೊಂಡಿರುವುದು ಬಹುತೇಕ ನಿಜವಾಗಿದೆ. ಇದರ ಬಿಸಿ ಅಬಕಾರ್ ಸಚಿವ ರೇಣುಕಾಚಾರ್ಯ ಅವರಿಗೆ ಮುಟ್ಟಿದೆ.

ಇತ್ತೀಚೆಗೆ ರೇಣುಕಾಚಾರ್ಯ ಅವರಿಗೆ ಬಂದಿದ್ದ ಜೀವ ಬೆದರಿಕೆ ಪತ್ರ, 10 ಲಕ್ಷ ರೂ ಡಿಮ್ಯಾಂಡ್ ಎಲ್ಲವೂ ಎಲ್ ಟಿಟಿಇ ಕೈವಾಡ ಎನ್ನಲಾಗಿದೆ. ಮಾವೋವಾದಿಗಳು ಹಾಗೂ ಎಲ್ ಟಿಟಿಇ ಜೊತೆಗೂಡಿ ಬೇಟೆಗೆ ಇಳಿದಿರುವ ಶಂಕೆ ವ್ಯಕ್ತವಾಗಿದೆ.

ಸುಮಾರು 10-15 ಜನ ತಮಿಳರು ನಕ್ಸಲ್ ಗುಂಪನ್ನು ಇತ್ತೀಚೆಗೆ ಸೇರಿದ್ದಾರೆ. ನೇತ್ರಾವತಿ ತಂಡಕ್ಕೆ ಶಾರ್ಪ್ ಶೂಟಿಂಗ್ ತರಬೇತಿ ನೀಡುವುದು ಇವರ ಕೆಲಸವಾಗಿದೆ. ಎಕೆ47, ಎಸ್ ಎಲ್ ಆರ್ ಸೇರಿದಂತೆ ವಿಶೇಷ ಆಯುಧಗಳು ನಕ್ಸಲರ ಕೈ ಸೇರುತ್ತಿದೆ.

ನಕ್ಸಲರಿಗೆ ಸ್ಥಳೀಯರಿಂದ ಸಿಗುತ್ತಿದ್ದ ಆರ್ಥಿಕ ಬೆಂಬಲ ನಿಂತಿರುವುದರಿಂದ ಸಚಿವರು, ಶ್ರೀಮಂತರಿಗೆ ಬೆದರಿಕೆ ಪತ್ರ ಕಳುಹಿಸಲಾಗುತ್ತಿದೆ. ಸ್ಥಳೀಯ ಮಲೆಕುಡಿಯರನ್ನು ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ನಕ್ಸಲರು, ಸಚಿವ ರೇಣುಕಾ ಅವರಿಗೆ ಬೆದರಿಕೆ ಒಡ್ಡಿರುವಲ್ಲಿ ಯಾವುದೇ ಸಂಶಯವಿಲ್ಲ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ನೆಲಬಾಂಬ್ ತಯಾರಿಕೆ, ಸ್ಫೋಟ, ಗೆರಿಲ್ಲಾ ಮಾದರಿ ಹೋರಾಟದಲ್ಲಿ ಪರಿಣತಿ ಪಡೆದಿರುವ ಎಲ್ ಟಿಟಿಇ ತಂಡ ನಕ್ಸಲರ ಕೈಜೋಡಿಸಿರುವುದು ನಿಜವಾದರೆ ರೇಣುಕಾ ಚಾರ್ಯ ಸೇರಿದಂತೆ ಶ್ರೀಮಂತ ಕುಳಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ.

English summary
Anti-Naxal force constable Mahadev S. Mane fired by a sharpshooter trained by the cadre of the banned outfit, Liberation Tigers of Tamil Eelam(LTTE) and A letter demanding a ransom from excise minister Renukacharya is sent by LTTE reports say.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X