ಮಹಾದೇವ ಮಾನೆ ಸಾವು ಇನ್ನೂ ನಿಗೂಢ!

NAf PSI
ಬೆಳ್ತಂಗಡಿ, ಅ.11: ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಮಂಜಲ ಎಂಬಲ್ಲಿ ನಕ್ಸಲ್ ಗುಂಡಿಗೆ ಬಲಿಯಾಗಿದ್ದಾರೆನ್ನಲಾದ ಎಎನ್‌ಎಫ್‌ನ ಪೇದೆ ಮಹಾದೇವ್ ಎಸ್.ಮಾನೆ ಅವರ ಸಾವು ಹಲವಾರು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

ನಕ್ಸಲ್ ಜೊತೆಗಿನ ಚಕಮಕಿಯಿಂದ ಮಹಾದೇವ್ ಮಾನೆ ಸತ್ತದ್ದು ಸುಳ್ಳು. ಶಾರ್ಪ್ ಶೂಟರ್ ಗಳು ನೇರವಾಗಿ ಬೆನ್ನಿಗೆ ಗುರಿಯಿಟ್ಟು ಕೊಂದಿದ್ದಾರೆ. ಕೊಂದವರು ನಕ್ಸಲರೇ ಅಲ್ಲ, ವಿಕ್ರಮ್ ಗೌಡ ನೇತೃತ್ವದ ನೇತ್ರಾವತಿ ತಂಡದಲ್ಲಿ ಅಂಥ ಶಾರ್ಪ್ ಶೂಟರ್ ಗಳಿಲ್ಲ ಎಂಬ ವಿಷಯ ಪೊಲೀಸರಿಗೂ ಗೊತ್ತಿದೆ.

ಮಹಾದೇವ್ ಮಾನೆ ಸಹದ್ಯೋಗಿಗಳೇ ಆತನನ್ನು ನಕ್ಸಲ್ ಎಂದು ತಪ್ಪು ತಿಳಿದು ಗುಂಡಿಟ್ಟು ಕೊಂದು ಕಥೆ ಕಟ್ಟುತ್ತಿದ್ದಾರೆಯೇ? ಅಸಲಿ ನಾರಾವಿ ಬಳಿ ಕಾಣಿಸಿಕೊಂಡವರು ನಕ್ಸಲರೇ ಅಥವಾ ಶಿಕಾರಿಗಳೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಪೊಲೀಸರಿಗೆ ಸಿಕ್ಕಿರುವ ವಸ್ತುಗಳಲ್ಲಿ ಟಾರ್ಚ್‌ ಲೈಟ್‌, ಕೋಲು, ಗೋಣಿಚೀಲ, ಹೆಡ್‌ಲೈಟ್‌ ಎಲ್ಲವೂ ಶಿಕಾರಿ ಜನರ ಸಾಮಾಗ್ರಿಗಳಾಗಿವೆ. ಶ್ವಾನದಳದ ಸೂಚನೆಯಂತೆ ಪರಾರಿಯಾದವರು ಮಂಜೊಟ್ಟಿ ಗ್ರಾಮದ ಕಡೆಗೆ ಓಡಿದ್ದಾರೆ. ನಕ್ಸಲರಾದರೆ, ಮರಳಿ ಕಾಡಿನ ಕಡೆಗೆ ಓಡುತ್ತಿದ್ದರು ಆದ್ದರಿಂದ ಅಂದು ಕಾಣಿಸಿಕೊಂಡವರು ಶಿಕಾರಿಗಳು ಎನ್ನಬಹುದು.

ಆದರೆ, ಮಾನೆ ದೇಹ ಹೊಕ್ಕಿರುವುದು ಎಸ್‌ಎಲ್‌ಆರ್‌ನಿಂದ ಸಿಡಿದ ಗುಂಡು. ಶಿಕಾರಿಗಳು ಸಾಮಾನ್ಯವಾಗಿ ಬಳಸುವುದು ನಾಡಕೋವಿ ಮಾತ್ರ. ಮಾನೆ ಸಾವಿಗೆ ಎಕೆ47 ಅಥವಾ self loading rifle ನಿಂದ ಗುಂಡು ಕಾರಣ ಎನ್ನಲಾಗಿದೆ. ಈ ರೀತಿ ಆಯುಧ ಬಳಸಿ ಗೊತ್ತಿರುವುದು ಎಲ್ ಟಿಟಿಇ ಸಂಘಟನೆಯವರಿಗೆ ಮಾತ್ರ. ಆದ್ದರಿಂದ ಇದು ಎಲ್ಟಿಟಿಇ ಅವರ ಕೃತ್ಯ ಎನ್ನಲಾಗಿದೆ

ಪೊಲೀಸ್‌ ಮಹಾನಿರ್ದೇಶಕ ಬಿಪಿನ್‌ ಗೋಪಾಲಕೃಷ್ಣ ಅವರ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ. ತನಿಖೆಯ ಬಳಿಕ ಹೆಚ್ಚಿನ ವಿವರ ತಿಳಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+