Naxal Attack In Chhattisgarh: 2009 ರಿಂದ 2023ವರೆಗೆ ಹತ್ತಾರು ಭಾರಿ ನಕ್ಸಲ್ ಅಟ್ಟಹಾಸ, ಮೃತಪಟ್ಟವರೆಷ್ಟು?
ರಾಯಪುರ, ಏಪ್ರಿಲ್ 26: ನಕ್ಸಲರು ಸುಧಾರಿತ ಸ್ಪೋಟಕ ಬಳಸಿ ದಾಳಿ ಮಾಡುವ ಮೂಲಕ ಛತ್ತೀಸ್‌ಗಢ ರಾಜ್ಯದ ದಾಂತೇವಾಡ ಜಿಲ್ಲೆಯಲ್ಲಿ 10 ಯೋಧರನ್ನು ಬಲಿ ಪಡೆದುಕೊಂಡಿದ್ದಾರೆ. ಛತ್ತೀಸ್‌ಗಢದಲ್ಲಿ ಇದೇ ಮಾವೋವಾದಿ/ನಕ್ಸಲರ ದಾಳಿ ಇದೇ ಮೊದಲೇನಲ್ಲ.
ಕಳೆದ ಸುಮಾರು 10 ವರ್ಷಗಳಲ್ಲಿ ಸಾಕಷ್ಟು ಭಾರಿ ಈ ರೀತಿ ದಾಳಿ ನಡೆಸುವ ಮೂಲಕ ಅಟ್ಟಹಾಸ ಮೆರೆದಿದ್ದಾರೆ. ಈ ವೇಳೆ ಸಾಕಷ್ಟು ಯೋಧರು ಹುತಾತ್ಮರಾಗಿದ್ದಾರೆ. ರಾಜ್ಯದ ಸುಕ್ಮಾ ಜಿಲ್ಲೆ ಹಾಗೂ ದಾಂತೇವಾಡ ಜಿಲ್ಲೆಯ ವ್ಯಾಪ್ತಿಯಲ್ಲಿ ನಕ್ಸಲರು ಮೇಲಿಂದ ಮೇಲೆ ಗುಂಡಿನ ದಾಳಿ, ಬಾಂಬ್ ಸ್ಪೋಟ , ಹತ್ಯೆಯಂತಹ ಕೃತ್ಯ ನಡೆಸಿದ್ದಾರೆ. ಅದರಲ್ಲಿನ ಪ್ರಮುಖ ದಾಳಿಗಳ ಟೈಮ್‌ಲೈನ್ ಮಾಹಿತಿ ಇಲ್ಲಿ ತಿಳಿಯೋಣ.

ಛತ್ತೀಸ್‌ಗಢ: ನಕ್ಸಲ್ ದಾಳಿಗಳ ಸಂಪೂರ್ಣ ವಿವರ
* 2021 ಏಪ್ರಿಲ್ ನಲ್ಲಿ ರಾಜ್ಯದ ಸುಕ್ಮಾ ಮತ್ತು ಬಿಜಾಪುರ ಜಿಲ್ಲೆಗಳ ಗಡಿಯಲ್ಲಿರುವ ಟೆರಮ್ ಕಾಡಿನಲ್ಲಿ ನಕ್ಸಲರೊಂದಿಗಿನ ಗುಂಡಿನ ದಾಳಿ ನಡೆದಿತ್ತು. ಈ ವೇಳೆ 22 ಭದ್ರತಾ ಸಿಬ್ಬಂದಿ ಅಸನೀಗಿದ್ದರು.
* 2018ರ ಫೆಬ್ರವರಿ ತಿಂಗಳಲ್ಲಿ ರಾಜ್ಯದ ಸುಕ್ಮಾದ ಭೆಜ್ಜಿಯಲ್ಲಿ ನಕ್ಸಲರು ಮತ್ತು ಪೊಲೀಸರ ಮಧ್ಯೆ ಭಾರೀ ಗುಂಡಿನ ದಾಳಿ ನಡೆದಿತ್ತು. ಈ ಕಾಳಗದಲ್ಲಿ ಇಬ್ಬರು ಛತ್ತೀಸ್‌ಗಢ ಪೊಲೀಸ್ ಅಧಿಕಾರಿಗಳು ಮೃತಪಟ್ಟಿದ್ದರು.
* 2018ರ ಮಾರ್ಚ್‌ನಲ್ಲಿ ಸುಕ್ಮಾ ಜಿಲ್ಲೆಯಲ್ಲಿ ಮಾವೋವಾದಿಗಳು ಸುಧಾರಿತ ಐಇಡಿ ಸ್ಫೋಟಕದೊಂದಿಗೆ ದಾಳಿ ನಡೆಸಿದ್ದರು. ಈ ವೇಳೆ ಒಂಬತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಸಿಬ್ಬಂದಿ ಹತರಾದರು.

* 2017ನೇ ವರ್ಷ ಏಪ್ರಿಲ್ ನಲ್ಲಿ ಸುಕ್ಮಾದಲ್ಲಿ ಮಾವೋವಾದಿಗಳ ಜೊತೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ತೀವ್ರ ಹೋರಾಟ ನಡೆಸಿದ್ದರು ಅಂದು ಸಹ ಗುಂಡಿ ಕಾಳಗದಲ್ಲಿ ಭಾರತ 24 ಮಂದಿ ಯೋಧರನ್ನು ಕಳೆದುಕೊಂಡಿತ್ತು.
* 2017 ಮಾರ್ಚ್ ನಲ್ಲಿ ಛತ್ತಿಗಢದ ಸುಕ್ಮಾದಲ್ಲಿ ಮಾವೋವಾದಿಗಳ ದಾಳಿ ನಡೆಸಿದ್ದರು. ಪೂರ್ವನಿಯೋಜಿತ ಮಾವೋವಾದಿಗಳ ದಾಳಿಗೆ ಆಗ 12 ಮಂದಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಸಿಬ್ಬಂದಿ ಹುತಾತ್ಮರಾದರು.
* 2014 ಮಾರ್ಚ್ ನಲ್ಲಿ ಸುಕ್ಮಾ ಜಿಲ್ಲೆಯಲ್ಲಿ 5 ಭದ್ರತಾ ಸಿಬ್ಬಂದಿ ಮಾವೋವಾದಿಗಳ ದಾಳಿಯಿಂದ ಸಾವಿಗೀಡಾದರು.
* 2014 ಫೆಬ್ರುವರಿ 28ರಂದು ದಾಂತೇವಾಡ ಜಿಲ್ಲೆಯಲ್ಲಿ ನಕ್ಸಲುರ ನಡೆಸಿದ್ದ ದಾಳಿಯಲ್ಲಿ ಛತ್ತಿಸ್‌ಗಢದ ಆರು ಮಂದಿ ಪೊಲೀಸ್ ಸಿಬ್ಬಂದಿ ಅಸುನೀಗಿದ್ದರು.
* 2013 ಮೇ ತಿಂಗಳಿನಲ್ಲಿ ಸುಕ್ಮಾ ಜಿಲ್ಲೆ ಪಕ್ಕದ ದರ್ಭಾ ಕಣಿವೆಯಲ್ಲಿ ನಕ್ಸಲರ ದಾಳಿಯಲ್ಲಿ ಮಾಜಿ ರಾಜ್ಯ ಸಚಿವ ಮಹೇಂದ್ರ ಕರ್ಮಾ ಸೇರಿದಂತೆ ಕಾಂಗ್ರೆಸ್ ಪಕ್ಷದ 25 ನಾಯಕರು ಬರ್ಬರವಾಗಿ ಹತ್ಯೆಯಾಗಿದ್ದರು. ಅಂದು ಈ ಘಟನೆ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿತ್ತು.
* 2010ರಲ್ಲಿ ಜೂನ್ 29ರಂದು ಬೆಳಗ್ಗೆ ನಾರಾಯಣಪುರ ಜಿಲ್ಲೆಯಲ್ಲಿ ಮಾವೋವಾದಿಗಳ ಅಟ್ಟಹಾಸ ಮೆರೆದಿದ್ದರು. ಅವರ ಅಂದಿನ ದಾಳಿ ವೇಳೆ 26 ಸಿಆರ್‌ಪಿಎಫ್ ಯೋಧರನ್ನು ಹತ್ಯೆ ಮಾಡಿದ್ದರು.
* 2010 ಮೇ ತಿಂಗಳಲ್ಲಿ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ಬುಲೆಟ್ ಪ್ರೂಫ್ ವಾಹನವನ್ನು ಸ್ಫೋಟಿಸಿದ್ದರು. ಅಂದು ಎಂಟು ಮಂದಿ ಸಿಆರ್‌ಪಿಎಫ್ ಯೊಧರು ಹತರಾಗಿದ್ದರು.
* 2010ನೇ ವರ್ಷದಲ್ಲಿ ಏಪ್ರಿಲ್ 6 ರಂದು ರಾಯಪುರದ ದಾಂತೇವಾಡ ಜಿಲ್ಲೆಯಲ್ಲಿ ಮಾವೋವಾದಿಗಳು ಹೊಂಚು ಹಾಕಿ ನಡೆಸಿದ್ದ ದಾಳಿ 75 ಸಿಆರ್‌ಪಿಎಫ್ ಸಿಬ್ಬಂದಿ ಮಾವೋವಾದಿಗಳು ಕೊಂದಿದ್ದರು.
ಒಂದೇ ವರ್ಷದಲ್ಲಿ ಮೂರು ಭಾಗಿ ಅಟ್ಟಹಾಸ
* 2009ರಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಛತ್ತಿಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಗ್ರಾಮವೊಂದರ ನಾಲ್ಕು ಮಂದಿ ಗ್ರಾಮಸ್ಥರನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಅದೇ ವರ್ಷ (2009) ಜುಲೈ ತಿಂಗಳೊಂದರಲ್ಲೇ ಎರಡು ಪ್ರತ್ಯೇಕ ಕಡೆಗಳಲ್ಲಿ ಮಾವೋವಾದಿಗಳು ದಾಳಿ ನಡೆಸಿದರು. ದಾಂತೇವಾಡ ಜಿಲ್ಲೆಯಲ್ಲಿ ನೆಲದಡಿ ಬಾಂಬ್ ಇಟ್ಟ ನಕ್ಸಲರು ಕಾದು ಕುಳಿತು ಸ್ಪೋಟಿಸಿದ್ದರು. ಇದರಿಂದಾಗಿ ಕನಿಷ್ಟ ಆರು ಜನ ಜೀವ ಬಿಟ್ಟರು. ಮತ್ತೊಂದೆಡೆ ಬಸ್ತಾರ್ ಜಿಲ್ಲೆಯಲ್ಲಿ ನಕ್ಸಲರು ಗ್ರಾಮೀಣ ಜನರನ್ನು ಹತ್ಯೆ ಮಾಡಿ ದುಶ್ಕೃತ್ಯ ಮೆರೆದಿದ್ದರು.












Click it and Unblock the Notifications